Lokayukta Raid: 5 ಬಾರಿ ಸಸ್ಪೆಂಡ್ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ
Nelamangala News: ಈಗಾಗಲೇ 5 ಬಾರಿ ಅಮಾನತು ಆಗಿದ್ದ ಪಿಡಿಒ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೂ ಅಮಾನತು ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಮತ್ತೆ ಟಿ.ಬೇಗೂರು ಗ್ರಾಮ ಪಂಚಾಯಿತಿಯಲ್ಲಿಯೇ ಪಿಡಿಒ ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ನೆಲಮಂಗಲ: ಗ್ರಾಮ ಪಂಚಾಯಿತಿ ಕಚೇರಿಯಲ್ಲಿ 20 ಸಾವಿರ ಲಂಚ ಪಡೆಯುವಾಗ ಪಿಡಿಒ, ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುವ (Lokayukta Raid) ತಾಲೂಕಿನ ಘಟನೆ ಟಿ.ಬೇಗೂರಿನಲ್ಲಿ ನಡೆದಿದೆ. ಈಗಾಗಲೇ ಟಿ.ಬೇಗೂರಿನಲ್ಲಿ 3 ಬಾರಿ ಸೇರಿ ಒಟ್ಟು 5 ಬಾರಿ ಅಮಾನತು ಆಗಿ ಈ ಪಿಡಿಒ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಅಮಾನತು ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದು ಮತ್ತೆ ಟಿ.ಬೇಗೂರು ಗ್ರಾಮ ಪಂಚಾಯಿತಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ, ಇದೀಗ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಶೋಭರಾಣಿ ಲೋಕಾಯುಕ್ತರ ಬಲೆಗೆ ಬಿದ್ದ ಪಿಡಿಒ. ಶುಕ್ರವಾರ ಸಂಜೆ ಜಮೀನಿನ ಖಾತೆ ಸಂಬಂಧ ರಮೇಶ್ ಎಂಬುವವರ ಬಳಿ 20 ಸಾವಿರ ಲಂಚ ಪಡೆಯುವಾಗ ಪಿಡಿಒ ಶೋಭಾರಾಣಿ ನೇರವಾಗಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
ಮಧ್ಯವರ್ತಿ ಮೂಲಕ ಲಂಚ ಸ್ವೀಕಾರ
ಲಂಚದ ಬೇಡಿಕೆಯನ್ನು ಪಿಡಿಒ ಇಟ್ಟಿದ್ದರು. ಮಧ್ಯವರ್ತಿ ರುದ್ರಪ್ಪ ಪಂಚಾಯಿತಿ ಕಚೇರಿಗೆ ರಮೇಶ್‌ನನ್ನು ಕರೆತಂದು ಲಂಚದ ಹಣ ಪಡೆಯುವಾಗ, ಲೋಕಾಯುಕ ಬೆಂಗಳೂರು ಗ್ರಾಮಾಂತರ ಎಸಿ ಪವನ್ ನಲ್ಲೂರು ನೇತೃತ್ವದ ತಂಡ ಕಚೇರಿಗೆ ದಾಳಿ ಮಾಡಿದೆ. ತಕ್ಷಣ ಹಣ ಮತ್ತು ಪಿಡಿಒ ಶೋಭರಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಲೋಕಾಯುಕ್ತ ಬಲೆಗೆ ಬೀಳುತ್ತಿದಂತೆ ಪಿಡಿಒ ಹೈಡ್ರಾಮ ಮಾಡಿದ್ದು, ಅಧಿಕಾರಿಗಳು ಕರೆದುಕೊಂಡು ಹೋಗುವಾಗ ಆರೋಗ್ಯ ಸರಿಯಿಲ್ಲ ಎಂಬ ನಾಟಕವಾಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿ, ಅವರನ್ನು ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
30 ಸಾವಿರ ರೂ. ಸಾಲ ಮರುಪಾವತಿ ಮಾಡದ್ದಕ್ಕೆ ಯುವಕನ ಕೊಲೆ!
ಯಾದಗಿರಿ: ಕೊಟ್ಟ ಸಾಲ ಸಕಾಲಕ್ಕೆ ಮರು ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಯುವಕನ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ (Murder Case) ನಗರದಲ್ಲಿ ನಡೆದಿದೆ. ನಗರದ ಲಾಡಿಸ್ ಗಲ್ಲಿಯ ಯುವಕ ಖಾಸೀಂ (28) ಮೃತ ದುರ್ದೈವಿಯಾಗಿದ್ದು, ಯಾಸಿನ್ ಹತ್ಯೆಗೈದ ಆರೋಪಿಯಾಗಿದ್ದಾನೆ.
ಪ್ರಕರಣದ ವಿವರ
ಆರೋಪಿ ಯಾಸಿನ್ ಬಳಿ ಖಾಸೀಂ 30 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಹೀಗಾಗಿ ಕಳೆದ ಜ. 19ರಂದು 35 ಸಾವಿರ ರೂ. ಸಾಲ ಮರು ಪಾವತಿಸಬೇಕಿತ್ತು. ಆದರೆ, ದುಡ್ಡು ವಾಪಸ್ ಕೊಡಲು ಸಾಧ್ಯವಾಗದೆ, ಇನ್ನಷ್ಟು ದಿನ ಸಮಯ ಕೇಳಿದ್ದ. ಈ ಕಾರಣಕ್ಕೆ ಖಾಸೀಂ ಮೇಲೆ ಯಾಸಿನ್ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಾಯಗೊಂಡ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಖಾಸೀಂ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿ ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರತಿಕ್ರಿಯಿಸಿ, 'ಯಾಸೀನ್ ಬಳಿ ಖಾಸೀಂ 30 ಸಾವಿರ ಸಾಲ ಪಡೆದಿದ್ದ. ಆದರೆ, ಹಿಂತಿರುಗಿಸಿಲ್ಲ ಎನ್ನುವ ಕಾರಣಕ್ಕೆ ಹಲ್ಲೆ ನಡೆದಿದೆ. ನಾಲ್ಕು ದಿನಗಳ ನಂತರ ಖಾಸೀಂ ಸಾವನ್ನಪ್ಪಿದ್ದಾನೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.