Road Accident: ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಸರಣಿ ಅಪಘಾತ, ಲಾರಿ ಚಾಲಕ ಸಾವು
ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಈ ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.

ಹೆಬ್ಬಾಳ ಮೇಲ್ಸೇತುವೆ

ಬೆಂಗಳೂರು: ಹೆಬ್ಬಾಳದ ಕೊಡಿಗೇಹಳ್ಳಿ ಫ್ಲೈ ಓವರ್ (Hebbala Flyover) ಮೇಲೆ ಭೀಕರ ಅಪಘಾತ (Road Accident Case) ಸಂಭವಿಸಿದೆ. ಮೂರು ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಲಾರಿ ಚಾಲಕರೊಬ್ಬರು (Lorry driver death) ಸಾವಿಗೀಡಾಗಿದ್ದಾರೆ. ಕಸ ತುಂಬಿದ್ದ ಲಾರಿಯ ಮೇಲೆ ಕಲ್ಲು ತುಂಬಿದ್ದ ಟ್ರಕ್ ಪಲ್ಟಿಯಾಗಿದ್ದು, ಲಾರಿ ಚಾಲಕ ಮೃತಪಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಕಾರು ಡಿಕ್ಕಿಯಾಗಿದೆ.
ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಹೆಬ್ಬಾಳ ಫ್ಲೈ ಓವರ್ ಮೇಲೆ ಸರಣಿ ಅಪಘಾತ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಈ ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.
ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ ಸಾವನಪ್ಪಿದ್ದಾರೆ. ಕಸದ ಲಾರಿಗೆ ಕಲ್ಲಿನ ಬ್ಲಾಕ್ ತುಂಬಿಕೊಂಡಿದ್ದ 10 ವ್ಹೀಲರ್ ವಾಹನ ಹಿಂಬದಿಯಿಂದ ಡೆಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಲ್ಲು ತುಂಬಿದ್ದ ಟ್ರಕ್ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಈ ವೇಳೆ ಕಸದ ಲಾರಿ ಮತ್ತು ಟ್ರಕ್ ಮಧ್ಯೆ ಸಿಲುಕಿ ಚಾಲಕ ಸಾವನಪ್ಪಿದ್ದಾರೆ.
ಬಿಬಿಎಂಪಿ ಕಸದ ಲಾರಿ ಓಡಿಸುತ್ತಿದ್ದ ಬಿಹಾರ ಮೂಲದ ಫೈಜಲ್ ಸಾವನಪ್ಪಿದವರು. ಕೆಲ ವರ್ಷಗಳ ಹಿಂದೆ ಈ ಯುವಕ ಬೆಂಗಳೂರಿಗೆ ಬಂದಿದ್ದ. ಬೆಳಗಿನ ಜಾವ ಹೆಬ್ಬಾಳ ಕಡೆ ಬರುವಾಗ ವಾಹನ ಕೆಟ್ಟು ನಿಂತಿದೆ. ಈ ವೇಳೆ ಹಿಂಬದಿಯಿಂದ ಬಂದ ಕಲ್ಲು ತುಂಬಿದ ಟ್ರಕ್ ಡಿಕ್ಕಿಯಾಗಿದೆ. ಟ್ರಕ್ನಲ್ಲಿ ಭಾರಿ ಗಾತ್ರದ ಕಲ್ಲುಗಳು ಇದ್ದದ್ದರಿಂದ ನಿಯಂತ್ರಣ ತಪ್ಪಿ, ಡಿಕ್ಕಿ ರಭಸಕ್ಕೆ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಚಾಲಕನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಹೆಬ್ಬಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಭೀಕರ ಅಪಘಾತದಲ್ಲಿ ಒಟ್ಟು ಮೂರು ವಾಹನಕ್ಕೂ ಡ್ಯಾಮೇಜ್ ಆಗಿದೆ. ಹೆಬ್ಬಾಳ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿದ್ದಾರೆ.
ಈ ಭೀಕರ ಅಪಘಾತದ ಬಗ್ಗೆ ಮಾತನಾಡಿದ ಕಾರು ಚಾಲಕ ಸುನೀಲ್, "ಕಸದ ಲಾರಿ ರಸ್ತೆಯ ಬಲಗಡೆ ಕೆಟ್ಟು ನಿಂತಿತ್ತು. ಕಲ್ಲಿನ ಲಾರಿ ಚಾಲಕನಿಗೆ ಕೆಟ್ಟು ನಿಂತಿದ್ದ ಲಾರಿ ಕಾಣಿಸಿಲ್ಲ. ಹತ್ತಿರ ಬಂದು ಬ್ರೇಕ್ ಹಾಕಿದ್ದು, ಕಂಟ್ರೋಲ್ ಸಿಗದೇ ಲಾರಿಗೆ ಗುದ್ದಿದ್ದಾನೆ. ನಾನು ಹಿಂದೆ ಬರ್ತಿದ್ದೆ, ಲಾರಿ ಗುದ್ದಿದ ರಭಸಕ್ಕೆ ಲಾರಿಯ ಕಲ್ಲುಗಳು ರಸ್ತೆಗೆ ಬಿದ್ದಿತು. ಎಡಭಾಗದಲ್ಲಿದ್ದ ನನ್ನ ಕಾರಿಗೂ ಲಾರಿ ಗುದ್ದಿತ್ತು. ನನ್ನ ಕಾರಿನಲ್ಲಿ ಒಂದು ಫ್ಯಾಮಿಲಿ ಇತ್ತು. ಕಾರು ಡಿವೈಡರ್ ಮೇಲೆ ಹತ್ತಿ ನಿಂತಿತ್ತು. ನಾನು ಕಾರಿನಲ್ಲಿದ್ದವರನ್ನ ಡಿಕ್ಕಿ ಓಪನ್ ಮಾಡಿ ಕೆಳಕ್ಕೆ ಇಳಿಸಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: Road Accident: ಬಸವನ ಬಾಗೇವಾಡಿ ಸಮೀಪ ಭೀಕರ ಅಪಘಾತ, 6 ಮಂದಿ ದುರ್ಮರಣ