Theft case: ಎಂಎಲ್ಸಿ ಟಿ.ಎ. ಶರವಣ ಮಾಲೀಕತ್ವದ ಸಾಯಿ ಗೋಲ್ಡ್ ಪ್ಯಾಲೇಸ್ನ ಚಿನ್ನಾಭರಣ ಕಳವು; ಕೇಸ್ ದಾಖಲು
Theft case: ಹಾಲ್ ಮಾರ್ಕಿಂಗ್‌ಗೆ ನೀಡಲಾದ 1 ಕೆಜಿ 249 ಗ್ರಾಂ ಚಿನ್ನದ ಬಳೆಗಳು ಕಳವಾದ ಹಿನ್ನೆಲೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಮಾಲೀಕತ್ವದ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನ (Shree Sai Gold Palace) ಚಿನ್ನಾಭರಣ ಕಳವಾಗಿದ್ದು, ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಸಂಸ್ಥೆಯ ಮ್ಯಾನೇಜರ್ ಭೀಮರಾಜು, ನೌಕರ ಭರತ್ ಕುಮಾರ್ ರಾವಲ್ ಎಂಬುವವರಿಗೆ ಸಂಸ್ಥೆಯ ಪರವಾಗಿ ಚಿನ್ನಾಭರಣಗಳಿಗೆ ಹಾಲ್ ಮಾರ್ಕ್ ಮಾಡಿಸಿಕೊಂಡು ಬರಲು ಜ.14 ರಂದು ಸಂಜೆ 5:30 ಸುಮಾರಿಗೆ 1 ಕೆಜಿ 249 ಗ್ರಾಂ ಚಿನ್ನದ ಬಳೆಗಳು (22 ಕ್ಯಾರೇಟ್) ಕೊಟ್ಟು ನಗರತ್ ಪೇಟೆಯಲ್ಲಿನ ಭರತ್ ಚಟಡ್ರವರ ಮಾಲೀಕತ್ವದ ಕೋನಾರ್ಕ್ ಹಾಲ್ ಮಾರ್ಕಿಂಗ್ ಮತ್ತು ಅಸ್ಸೇ ಸೆಂಟರ್ಗೆ ಕಳುಹಿಸಿದ್ದರು.
ಭರತ್ ಕುಮಾರ್ ಬಂಗಾರದ ಬಳೆಗಳನ್ನು ಭರತ್ ಚಟಡ್ಗೆ ಕೊಟ್ಟಿದ್ದು, ಪ್ಯಾಕಿಂಗ್ ಲಿಸ್ಟ್ ಎಂಬ ಹೆಸರಿನಲ್ಲಿ ರಸೀದಿ ನೀಡಿದ್ದರು. ಮರುದಿನ ಜನವರಿ 15 ರಂದು ಭರತ್ ಚಾಟಡ್ ಬಳಿ ಹೋಗಿ ಹಾಲ್ ಮಾರ್ಕಿಂಗ್ಗಾಗಿ ಕೊಟ್ಟಿದ್ದ ಚಿನ್ನದ ಬಳೆಗಳನ್ನು ವಾಪಸ್ ನೀಡಿ ಎಂದು ಮ್ಯಾನೇಜರ್ ಭೀಮರಾಜು ಕೇಳಿದ್ದಾರೆ.
ಆಗ, ಭರತ್ ಚಟಡ್, ನೀವು ನೀಡಿದ್ದ ಎಲ್ಲ ಚಿನ್ನದ ಬಳೆಗಳನ್ನು ನಮ್ಮ ಅಂಗಡಿಯಲ್ಲಿ ಕೆಲಸ ಮಾಡುವ ಕೆಲಸಗಾರ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ” ಎಂದು ಹೇಳಿದ್ದಾರೆ. ಹೀಗಾಗಿ ಹಾಲ್ ಮಾರ್ಕ್ ಸೆಂಟರ್ ಮಾಲೀಕ ಭರತ್ ಚಟಡ್ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Naxalites encounter: ಮೋಸ್ಟ್ ವಾಂಟೆಡ್ ನಕ್ಸಲನ ಎನ್‌ಕೌಂಟರ್-ಈತನ ಪತ್ತೆಗೆ ಘೋಷಣೆ ಆಗಿತ್ತು ಬರೋಬ್ಬರಿ 1ಕೋಟಿ ರೂ. ರಿವಾರ್ಡ್
ಬೆಂಗಳೂರಿನ ಜನನಿಬಿಡ ಪ್ರದೇಶದಲ್ಲೇ ಮಹಿಳೆ ಮೇಲೆ ಅತ್ಯಾಚಾರ, ದರೋಡೆ
ಬೆಂಗಳೂರು: ಬೆಂಗಳೂರಿನಲ್ಲಿ (Bengaluru Crime News) ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಜನನಿಬಿಡ ಪ್ರದೇಶದಲ್ಲೇ ಮಹಿಳೆಯೊಬ್ಬರ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ (Physical Abuse) ಎಸಗಿದ್ದಾರೆ. ಬಸ್‌ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಇಬ್ಬರು ಕಾಮುಕರು ಎರಗಿದ್ದಲ್ಲದೆ, ಆಕೆಯನ್ನು ದರೋಡೆ (Robbery) ಕೂಡ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೆ.ಆರ್. ಮಾರ್ಕೆಟ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಮಹಿಳೆ ಮೇಲೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಸ್ ತೋರಿಸುವುದಾಗಿ ಕರೆದೊಯ್ದು ಅತ್ಯಾಚಾರ ಎಸಗಿ ಮೊಬೈಲ್, ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ ಎಂದು ಕೇಂದ್ರ ವಿಭಾಗದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಭಾನುವಾರ ರಾತ್ರಿ 11.30ಕ್ಕೆ ಕೆ.ಆರ್.ಮಾರ್ಕೆಟ್ ಬಳಿಯ ಗೋಡೌನ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಸಂಬಂಧ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.