Health Tips: ಹೃದಯಾಘಾತಕ್ಕೆ ಕಾರಣಗಳೇನು?ಇದನ್ನು ತಪ್ಪಿಸಲು ಈ ಆರೋಗ್ಯ ಕ್ರಮ ಅಳವಡಿಸಿ
Health Tips: ಆಧುನಿಕ ಜೀವನ ಶೈಲಿ, ವ್ಯಕ್ತಿಯ ಅನಾರೋಗ್ಯಕರ ಆಹಾರ, ಒತ್ತಡದ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗುತ್ತಾನೆ.ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆಯ ಕ್ರಮಗಳು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.
ನವದೆಹಲಿ: ಇಂದು ಅತೀ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಕೂಡ ಒಂದು. ಆಧುನಿಕ ಜೀವನ ಶೈಲಿ, ಅನಾರೋಗ್ಯಕರ ಆಹಾರ, ಒತ್ತಡದ ಜೀವನಶೈಲಿ, ಬೊಜ್ಜು, ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡದಿಂದ ಹೃದಯಾಘಾತಕ್ಕೆ ಸಂಭವಿಸುತ್ತದೆ. ಹಾಗಾಗಿ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುನ್ನೆಚ್ಚರಿಕೆಯ ಕ್ರಮಗಳು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಈ ಬಗ್ಗೆ ವಿವರ ಇಲ್ಲಿದೆ (Health Tips).
ಸರಿಯಾದ ಆಹಾರ ಕ್ರಮ ಮತ್ತು ಆರೋಗ್ಯದ ಕಾಳಜಿ
ಕೇವಲ ನಮ್ಮ ಜೀವನಶೈಲಿ ಮತ್ತು ಒತ್ತಡಗಳಿಂದ ಮಾತ್ರವಲ್ಲ ನಾವು ಸೇವಿಸುವ ಆಹಾರ ಕೂಡ ಹೃದಯಾಘಾತ ಪ್ರಮಾಣ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯಾಘಾತವನ್ನು ತಡೆಯಲು ನೀವು ಆರೋಗ್ಯಕರ ಆಹಾರವನ್ನು ಸೇವಿಸಿ. ಹಾಗೆಯೇ ಉಪ್ಪು, ಸಕ್ಕರೆ ಮತ್ತು ಎಣ್ಣೆಯುಕ್ತ ಆಹಾರದಿಂದ ಸಾಧ್ಯವಾದಷ್ಟು ದೂರ ಇರಿ.
ಅನುವಂಶಿಯವಾಗಿಯು ಹೃದಯಾಘಾತ ಉಂಟಾಗಬಹುದು
ಕೆಲವು ಜನರಿಗೆ ಹೃದ್ರೋಗಗಳು ಆನುವಂಶಿಕವಾಗಿ ಅಥವಾ ಕುಟುಂಬಗಳ ಮೂಲಕ ಬರಬಹುದು. CHD (Coronary heart disease) ಹೊಂದಿರುವ ವ್ಯಕ್ತಿ ಹೆಚ್ಚಾಗಿ ಅಕಾಲಿಕ CHDಯ ಕೌಟುಂಬಿಕ ಇತಿಹಾಸವನ್ನು ಹೊಂದಿರುತ್ತಾರೆ. ಇದರಿಂದಲೂ ಹೃದಯಾಘಾತ ಉಂಟಾಗಬಹುದು. ಇಂತಹ ಹೃದ್ರೋಗದ ಸಮಸ್ಯೆ ಹೊಂದಿದ್ದರೆ, ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಅಭ್ಯಾಸಗಳನ್ನು ತಪ್ಪಿಸುವುದನ್ನು ಖಚಿತಪಡಿಸಿಕೊಳ್ಳಿ.
ಊಟದ ನಂತರದ ಸಿಹಿತಿಂಡಿ ತಿನ್ನುವುದನ್ನು ತಪ್ಪಿಸಿ
ಊಟದ ನಂತರ ಸಿಹಿತಿಂಡಿ ತಿನ್ನುವುದನ್ನು ತಪ್ಪಿಸಿ. ಕೆಲವೊಮ್ಮೆ ಸಿಹಿ ತಿನಿಸುಗಳನ್ನು ಸೇವಿಸುವುದು ಸರಿ. ಆದರೆ ಅದನ್ನು ನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಡಿ. ತಜ್ಞರ ಪ್ರಕಾರ, ಊಟದ ನಂತರದ ಸಿಹಿತಿಂಡಿ ತಿಂದರೆ ಬೃಹತ್ ಇನ್ಸುಲಿನ್ ಸ್ಟ್ರೈಕ್, ತೂಕ ಹೆಚ್ಚಾಗುತ್ತದೆ ಮತ್ತು ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಉಂಟು ಮಾಡುತ್ತದೆ. ಇದು ಹೃದಯ ಸಮಸ್ಯೆಗೆ ಕಾರಣವಾಗಬಹುದು.
ರಾತ್ರಿ ತಡವಾಗಿ ಊಟ ಮಾಡುವ ಹವ್ಯಾಸ ಇಟ್ಟುಕೊಳ್ಳಬೇಡಿ
ರಾತ್ರಿ ತಡವಾಗಿ ಊಟ ಮಾಡುವುದನ್ನು ತಪ್ಪಿಸಿ ಬೇಗನೆ ಊಟ ಮಾಡುವ ಹವ್ಯಾಸ ಇಟ್ಟುಕೊಳ್ಳಿ. ತಡರಾತ್ರಿಯ ಭೋಜನ ಜೀರ್ಣಕ್ರಿಯೆಯನ್ನು ಅಸ್ತವ್ಯಸ್ತಗೊಳಿಸುತ್ತದೆ ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಹೆಚ್ಚು ಕೂತು ಕೆಲಸ ಮಾಡಬೇಡಿ
ಕೂತು ಕೆಲಸ ಮಾಡುವವರು ದೈಹಿಕ ವ್ಯಾಯಾಯ ಮಾಡಿ. ದಿನದಲ್ಲಿ ಅರ್ಧ ಗಂಟೆ ಕಡ್ಡಾಯವಾಗಿ ವ್ಯಾಯಾಮ ಮಾಡಬೇಕು. ದೈಹಿಕ ವ್ಯಾಯಾಮ ಮಾಡುವುದರಿಂದ ಬೊಜ್ಜು ಮೈ ಕರಗುವುದು, ಫಿಟ್ನೆಸ್ ಹಾಗೂ ಉತ್ತಮ ಆರೋಗ್ಯ ಪಡೆಯಬಹುದು.
ತೂಕ ಕಾಪಾಡಿಕೊಳ್ಳಿ
ತೂಕ ಹೆಚ್ಚಾಗುವುದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ, ಹಾಗಾಗಿ ತೂಕವನ್ನು ನಿಯಂತ್ರಿಸಿ ಕೊಳ್ಳಿ.ತಾವು ಸೇವಿಸಿದ ಆಹಾರ ಜೀರ್ಣವಾಗಲು ಯಾವುದಾದರೊಂದು ದೈಹಿಕ ಶ್ರಮದ ಕೆಲಸ ಮಾಡಬೇಕು.
ಧೂಮಪಾನ ನಿಯಂತ್ರಿಸಿ
ಧೂಮಪಾನ ದಿಂದ ಹೃದಯ ಸಂಬಂದಿಸಿದ ಆರೋಗ್ಯ ಸಮಸ್ಯೆ ಹೆಚ್ಚು ಆಗಲಿವೆ. ಇದು ಬಹಳ ಮುಖ್ಯವಾದ ಮತ್ತು ಅಪಾಯಕಾರಿ ಅಂಶವಾಗಿದ್ದು ಹೃದಯದ ಆರೋಗ್ಯದ ದೃಷ್ಟಿಯಿಂದ ಧೂಮಪಾನ ನಿಯಂತ್ರಣ ಮಾಡುವುದು ಅಗತ್ಯ.
ಇದನ್ನು ಓದಿ: Coconut Oil Side Effect: ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಿದ್ದಿರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ!