BBK 11: ಬಿಗ್ ಬಾಸ್ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?
ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿದ್ದ ಚೈತ್ರಾ ಅವರನ್ನು ಪದೇ ಪದೇ ಟಾರ್ಗೆಟ್ ಮಾಡಿದ್ರೂ ಕುಗ್ಗದೆ ಕೊನೆ ಹಂತದ ವರೆಗೂ ಬಂದಿದ್ದರು. ಇದೀಗ 15 ವಾರಗಳ ಕಾಲ ದೊಡ್ಮನೆಯಲ್ಲಿದ್ದು ಎಲಿಮಿನೇಟ್ ಆಗಿರುವ ಚೈತ್ರಾ ಕುಂದಾಪುರಗೆ ಭರ್ಜರಿ ಬಹುಮಾನಗಳು ಕೂಡ ಸಿಕ್ಕಿವೆ.
ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತದಲ್ಲಿದೆ. ಇನ್ನೇನು ಎರಡು ವಾರಗಳಲ್ಲಿ ಶೋಗೆ ತೆರೆಬೀಳಲಿದೆ. ಟಿಕೆಟ್ ಟು ಫಿನಾಲೆ ಟಾಸ್ಕ್ ಗೆದ್ದು ಹನುಮಂತ ಅವರು ಈಗಾಗಲೇ ಮೊದಲ ಸ್ಪರ್ಧಿಯಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಧನರಾಜ್ ಆಚಾರ್ ಅವರು ಮಿಡ್ ವೀಕ್ ಎಲಿಮಿನೇಷನ್ನಿಂದ ಪಾರಾಗಿದ್ದಾರೆ. ಇಂದು ಓರ್ವ ಸ್ಪರ್ಧಿ ದೊಡ್ಮನೆಯಿಂದ ಹೊರಬೀಳಲಿದ್ದಾರೆ. ಇದರ ನಡುವೆ ಮಹತ್ವದ ಘಟ್ಟದಲ್ಲಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ನಿಂದ ಎಲಿಮಿನೇಟ್ ಆಗಿ ಆಚೆ ಬಂದಿದ್ದಾರೆ. 105 ದಿನ ಕಾಲ ಕಳೆದು ದೊಡ್ಮನೆಯಿಂದ ಹೊರಬಂದಿದ್ದಾರೆ.
ಫೈರ್ ಬ್ರ್ಯಾಂಡ್ ಎಂದೇ ಫೇಮಸ್ ಆಗಿದ್ದ ಚೈತ್ರಾ ಅವರನ್ನು ಪದೇ ಪದೇ ಟಾರ್ಗೆಟ್ ಮಾಡಿದ್ರೂ ಕುಗ್ಗದೆ ಕೊನೆ ಹಂತದ ವರೆಗೂ ಬಂದಿದ್ದರು. ಅತಿ ಹೆಚ್ಚು ಕಳಪೆ ಬೋರ್ಡ್ ಪಡೆದು ಅನೇಕ ಬಾರಿ ಜೈಲು ಕೂಡ ಸೇರಿದರು. ನಾನು ಕಳಪೆ ಅಲ್ಲ ಅಂತ ಸಾಬೀತು ಪಡಿಸಿಕೊಳ್ಳಲು ಸ್ಟ್ರಾಂಗ್ ಆಗಿಯೇ ಆಡ್ತಿದ್ದ ಚೈತ್ರಾ, ಮನೆಯಿಂದ ಹೊರಬರುವುದಕ್ಕೂ ಮುನ್ನ ಉತ್ತಮ ಕೂಡ ಪಡೆದುಕೊಂಡರು. ಮನೆಯೊಳಗೆ ಆಟ ಹಾಗೂ ಆವೇಷದ ಮಾತುಗಳನ್ನು ಹೊರತುಪಡಿಸಿ ಮನರಂಜನೆಯನ್ನು ಸಹ ನೀಡಿ ಪ್ರೇಕ್ಷಕರ ಹೃದಯ ಗೆದ್ದಿದ್ದರು.
15 ವಾರಗಳ ಕಾಲ ದೊಡ್ಮನೆಯಲ್ಲಿದ್ದ ಚೈತ್ರಾ ಕುಂದಾಪುರಗೆ ಭರ್ಜರಿ ಬಹುಮಾನಗಳು ಕೂಡ ಸಿಕ್ಕಿವೆ. ಒಟ್ಟು 2 ಲಕ್ಷ ರೂಪಾಯಿಯಷ್ಟು ಬಹುಮಾನ ಪಡೆದಿದ್ದಾರೆ ಚೈತ್ರಾ. ಪ್ರಾಯೋಜಕರ ಕಡೆಯಿಂದ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್, ಮತ್ತೊಂದು ಪ್ರಾಯೋಜಕರ ಕಡೆಯಿಂದ 50 ಸಾವಿರ ರೂಪಾಯಿ ಗಿಫ್ಟ್ ವೌಚರ್, ಮಗದೊಂದು ಪ್ರಾಯೋಜಕರ ಕಡೆಯಿಂದ 50 ಸಾವಿರ ರೂಪಾಯಿ ನಗದು ಬಹುಮಾನವನ್ನು ಚೈತ್ರಾ ತಮ್ಮದಾಗಿಸಿದ್ದಾರೆ.
ಬಹುಮಾನಗಳ ಜೊತೆಗೆ 15 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದಕ್ಕೆ ಸಂಭಾವನೆ ಸಹ ಸಿಗಲಿದೆ. ಮನೆಯೊಳಗೆ ತೆರಳುವ ಮುನ್ನ ಅಗ್ರಿಮೆಂಟ್ನಲ್ಲಿ ವಾರಕ್ಕೆ ಇಷ್ಟು ಎಂದು ಸಂಭಾವನೆಯನ್ನು ಫಿಕ್ಸ್ ಮಾಡಲಾಗಿರುತ್ತದೆ. ಅದರಂತೆ ಸಂಭಾವನೆಯನ್ನ ಒಟ್ಟು 15 ವಾರಗಳಿಗೆ ಲೆಕ್ಕ ಹಾಕಿ ನೀಡಲಾಗುತ್ತದೆ.
ಇನ್ನು ಚೈತ್ರಾ ಕುಂದಾಪುರ ಅವರ ಮದುವೆ ನಿಶ್ಚಯ ಆಗಿದೆ. ಬಿಗ್ ಬಾಸ್ ಮನೆಯಿಂದ ಆಚೆ ಬಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ ಅವರು. ಮದುವೆ ಯಾವಾಗ ಎಂಬ ಬಗ್ಗೆ ಮನೆಯವರು ನಿರ್ಧಾರ ಮಾಡಬೇಕಿದೆ. ಮನೆಯವರ ಮಾತುಕಥೆ ನಡೆಯಬೇಕಿದೆ. ಯಾವಾಗಲೋ ಆಗಬೇಕಿತ್ತು. ಆದರೆ ಅದಕ್ಕೆ ಸಮಯ, ಸಂದರ್ಭ ಕೂಡಿ ಬರಬೇಕು ಎನ್ನುತ್ತಾರಲ್ಲ. ಒಂದು ಒಳ್ಳೆಯ ಮುಹೂರ್ತಕ್ಕಾಗಿ ಕಾಯುತ್ತಿದ್ದೇವೆ. ಸಾಂಪ್ರದಾಯಿಕವಾಗಿ ಏನೆಲ್ಲ ನಡೆಯಬೇಕೋ ಅದೆಲ್ಲ ನಡೆದ ನಂತರ ಮದುವೆ ಬಗ್ಗೆ ಇನ್ನಷ್ಟು ಹೇಳುತ್ತೇನೆ ಎಂದಿದ್ದಾರೆ.
BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ