Heart Attack: ನವಜಾತ ಶಿಶುವಿಗೇ ಹೃದಯಾಘಾತ, ಕೊಪ್ಪಳದಲ್ಲಿ 26ರ ಯುವತಿ ಬಲಿ
ರಾಜ್ಯದಲ್ಲಿ ಹೃದಯಾಘಾತದಿಂದ ನಿನ್ನೆ ಒಂದೇ ದಿನ 5 ಜನರು ಬಲಿಯಾಗಿದ್ದಾರೆ. ಕೊಪ್ಪಳದಲ್ಲಿ 26ರ ಯುವತಿ, ಸವಣೂರಲ್ಲಿ 25ರ ಯುವಕ ಸೇರಿ ನಿನ್ನೆ 5 ಜನ ಹೃದಯಾ ಘಾತಕ್ಕೆ ಬಲಿಯಾಗಿದ್ದಾರೆ. ಕೊಪ್ಪಳದ 26 ವರ್ಷದ ಮಹಿಳೆ ಮಂಜುಳಾ ಹೂಗಾರ (26) ಹೃದಯಾಘಾತದಿಂದ ಬುಧವಾರ ಮೃತಪಟ್ಟರು.


ಬೆಂಗಳೂರು: ಚಿಕ್ಕ ಮಕ್ಕಳಲ್ಲಿ ಹೃದಯಾಘಾತ (Heart Attack) ಪ್ರಕರಣಗಳನ್ನು ಕೇಳಿದ್ದೀರಿ. ಇದೀಗ ನವಜಾತ ಶಿಶುವಿಗೇ ಹೃದಯಾಘಾತವಾಗಿರುವುದು ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ನವಜಾತ ಶಿಶುವಿಗೇ ಹೃದಯಾಘಾತವಾಗಿದ್ದು, ಕೂಡಲೇ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮಯಕ್ಕೆ ದೊರಕಿದ ಚಿಕಿತ್ಸೆಯಿಂದ ಶಿಶುವಿನ ಆರೋಗ್ಯ ಸ್ಥಿರವಾಗಿದೆ.
ರಾಜ್ಯದಲ್ಲಿ ಹೃದಯಾಘಾತದಿಂದ ನಿನ್ನೆ ಒಂದೇ ದಿನ 5 ಜನರು ಬಲಿಯಾಗಿದ್ದಾರೆ. ಕೊಪ್ಪಳದಲ್ಲಿ 26ರ ಯುವತಿ, ಸವಣೂರಲ್ಲಿ 25ರ ಯುವಕ ಸೇರಿ ನಿನ್ನೆ 5 ಜನ ಹೃದಯಾ ಘಾತಕ್ಕೆ ಬಲಿಯಾಗಿದ್ದಾರೆ. ಕೊಪ್ಪಳದ 26 ವರ್ಷದ ಮಹಿಳೆ ಮಂಜುಳಾ ಹೂಗಾರ (26) ಹೃದಯಾಘಾತದಿಂದ ಬುಧವಾರ ಮೃತಪಟ್ಟರು. ವಿಜಯನಗರ ಜಿಲ್ಲೆ ಕೊಟ್ಟೂರಿನ ಎಚ್.ಕೆ.ರೇಖಾ (37), ಮಂಡ್ಯದ ಪಾಂಡವಪುರ ತಾಲೂಕಿನ ಗುಮ್ಮನಹಳ್ಳಿಯಲ್ಲಿ ಮಂಜುನಾಥ್ (44), ಬಾಗಲಕೋಟೆಯ ಜಮಖಂಡಿಯಲ್ಲಿ ಸಿದ್ದು ಮೀಸಿ (63) ಎಂಬವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಕರ್ತವ್ಯದಲ್ಲಿದ್ದ ಮುಖ್ಯ ಪೇದೆ ನೇಣಿಗೆ ಶರಣು
ಗೌರಿಬಿದನೂರು: ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜಶೇಖರ್(44) ಎಂಬ ವ್ಯಕ್ತಿ ನೇಣಿಗೆ ಶರಣಾಗಿ ಮೃತಪಟ್ಟಿದ್ದಾರೆ.
ಕರ್ತವ್ಯದಲ್ಲಿದ್ದ ಮುಖ್ಯಪೇದೆ ರಾಜಶೇಕರ್ ಮಂಚೇನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿ ನಡೆಯುತ್ತಿದ್ದ ದೀಪೋತ್ಸವದ ಬಂದೋಬಸ್ತಿಗೆ ಹೋಗಿದ್ದರು,ನಂತರ ಅಲ್ಲಿಂದ ಮಂಚೇನಹಳ್ಳಿ ಪೊಲೀಸ್ ಠಾಣೆಗೆ ಮರಳಿದ ಅವರು ಠಾಣೆಯ ಸಮೀಪವಿರುವ ಪೊಲೀಸ್ ಕ್ವಾಟರ್ಸನ ವಿಶ್ರಾಂತಿ ಕೋಣೆಗೆ ತೆರಳಿ,ಕೋಣೆಯಲ್ಲಿದ್ದ ಸೀಲಿಂಗ್ ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ: Mumbai Crime: 4 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ಸಮುದ್ರಕ್ಕೆ ಎಸೆದ ಪರಮಪಾಪಿ
ಘಟನೆ ಬೆಳಕಿಗೆ ಬರುತ್ತಿದ್ದಂತೆ, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ, ಸರ್ಕಲ್ ಇನ್ಸ್‌ಪೆಕ್ಟರ್ ಕೆಪಿ ಸತ್ಯನಾರಾಣ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಮೃತ ಪೇದೆ ರಾಜಶೇಕರ್ ಅವರು 2005 ರಲ್ಲಿ ಪೊಲೀಸ್ ಇಲಾಖೆಗ ಆಯ್ಕೆಯಾಗಿ ಇತ್ತೀಚಿಗೆ ಮುಖ್ಯ ಪೇದೆಯಾಗಿ ಮುಂಬಡ್ತಿಯನ್ನು ಹೊಂದಿದ್ದರು. ಎಲ್ಲರೊಡನೆ ಸ್ನೇಹಮಹಿಯಾಗಿದ್ದ ಮೃತ ರಾಜಶೇಖರ್ ಕೆಲ ದಿನಗಳಿಂದ ಮಾನಸಿಕ ಖಿನ್ನತೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ. ಪ್ರಕರಣವನ್ನು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.