ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mumbai Crime: 4 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದು ಸಮುದ್ರಕ್ಕೆ ಎಸೆದ ಪರಮಪಾಪಿ

40 ವರ್ಷದ ವ್ಯಕ್ತಿಯೊಬ್ಬ ತನ್ನ 4 ವರ್ಷದ ಮಲಮಗಳನ್ನು ಕೊಂದು ಆಕೆಯ ಶವವನ್ನು ಅರೇಬಿಯನ್ ಸಮುದ್ರಕ್ಕೆ ಎಸೆದ ಆರೋಪದ ಮೇಲೆ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಇಮ್ರಾನ್ ಶೇಖ್ ಎಂದು ಗುರುತಿಸಲಾಗಿದ್ದು, ದಕ್ಷಿಣ ಮುಂಬೈನ ಸಾಸೂನ್ ಡಾಕ್ ಬಳಿಯ ಸಮುದ್ರದಲ್ಲಿ ಚಿಕ್ಕ ಮಗುವಿನ ಶವವನ್ನು ಕೊಲಾಬಾ ಪೊಲೀಸರು ಮಂಗಳವಾರ ಪತ್ತೆ ಮಾಡಿದ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಗಳನ್ನು ಕತ್ತು ಹಿಸುಕಿ ಕೊಂದು ಸಮುದ್ರಕ್ಕೆ ಎಸೆದ ನೀಚ!

ಆರೋಪಿ ಇಮ್ರಾನ್ ಶೇಖ್

Profile Sushmitha Jain Jul 16, 2025 3:37 PM

ಮುಂಬೈ: 40 ವರ್ಷದ ವ್ಯಕ್ತಿಯೊಬ್ಬ ತನ್ನ 4 ವರ್ಷದ ಮಲಮಗಳನ್ನು (Stepdaughter) ಕೊಂದು ಆಕೆಯ ಶವವನ್ನು ಅರೇಬಿಯನ್ ಸಮುದ್ರಕ್ಕೆ (Arabian Sea) ಎಸೆದ ಆರೋಪದ ಮೇಲೆ ಮುಂಬೈ (Mumbai) ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯನ್ನು ಇಮ್ರಾನ್ ಶೇಖ್ ಎಂದು ಗುರುತಿಸಲಾಗಿದ್ದು, ದಕ್ಷಿಣ ಮುಂಬೈನ ಸಾಸೂನ್ ಡಾಕ್ ಬಳಿಯ ಸಮುದ್ರದಲ್ಲಿ ಚಿಕ್ಕ ಮಗುವಿನ ಶವವನ್ನು ಕೊಲಾಬಾ ಪೊಲೀಸರು ಮಂಗಳವಾರ ಪತ್ತೆ ಮಾಡಿದ ನಂತರ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಮಗುವಿನ ಕಾಣೆಯಾಗಿರು ಬಗ್ಗೆ ಕೇಂದ್ರ ಮುಂಬೈನ ಆಂಟೋಪ್ ಹಿಲ್ ಪ್ರದೇಶದಿಂದ ವರದಿ ಸ್ವೀಕರಿಸಲಾಗಿತ್ತು. ಶೇಖ್ ಮತ್ತು ಆತನ ಪತ್ನಿ ನಜಿಯಾ ಆಂಟೋಪ್ ಹಿಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಆರಂಭದಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು.

ಈ ಸುದ್ದಿಯನ್ನು ಓದಿ: Viral Video: ವಿದೇಶದ ಬೀದಿಯಲ್ಲಿ ಲಂಗು ಲಗಾಮಿಲ್ಲದೇ ಕುಣಿದ ಭೂಪ! ನೆಟ್ಟಿಗರು ಹೇಳಿದ್ದೇನು?

ತನಿಖಾಧಿಕಾರಿಗಳು ಆಂಟೋಪ್ ಹಿಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ CCTV ದೃಶ್ಯಗಳನ್ನು ಪರಿಶೀಲಿಸಿದಾಗ, ಮಗು ಕೊನೆಯ ಬಾರಿಗೆ ಶೇಖ್ ಜೊತೆ ಕಾಣಿಸಿಕೊಂಡಿತ್ತು. ಇದರಿಂದ ಆತನ ಚಲನವಲನಗಳ ಮೇಲೆ ಅನುಮಾನ ಬಂದು ತನಿಖೆ ತೀವ್ರಗೊಂಡಿತು. ಶವ ಪತ್ತೆಯಾದ ಬಳಿಕ ಶೇಖ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯಲ್ಲಿ ಆತ ಮಗುವನ್ನು ಉಸಿರುಗಟ್ಟಿಸಿ ಕೊಂದು ಶವವನ್ನು ಸಮುದ್ರಕ್ಕೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೇಖ್ ತನ್ನ ಪತ್ನಿಯೊಂದಿಗೆ ಸಮಯ ಕಳೆಯಲು ಮಗು ಅಡ್ಡಿಯಾಗುತ್ತಿತ್ತು ಎಂಬ ಕೋಪದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಗು ರಾತ್ರಿ ವೇಳೆ ಮೊಬೈಲ್‌ನಲ್ಲಿ ಆಟವಾಡುತ್ತಿದ್ದು ಆತನ ಕೋಪಕ್ಕೆ ಕಾರಣವಾಯಿತು ಎಂದು ತಿಳಿದುಬಂದಿದೆ. ಪೊಲೀಸರು ಘಟನೆಯ ಕುರಿತು ತನಿಖೆಯನ್ನು ಆರಂಭಿಸಿದ್ದಾರೆ.