Chikkanayakanalli News: ಕೋಟ್ಯಾಂತರ ಜನ ಸ್ನಾನ ಮಾಡಿರುವುದರಿಂದ ಗಂಗಾನದಿ ಮಲಿನವಾಗಿದೆ
ಕೋಟಿ ಕೋಟಿ ಜನ ಏಕಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪವಿತ್ರ ವಾದ ಗಂಗೆ ಮಲ ಮೂತ್ರಗಳಿಂದ ತುಂಬಿ ಘಟಾರವಾಗಿ ಅಪವಿತ್ರವಾಗಿದ್ದಾಳೆ ಇದನ್ನ ನಾವು ವಿಜ್ಞಾನ ಎನ್ನುತ್ತೇವೆ . ಧಾರ್ಮಿಕ ಚಿಂತನೆಗಳಿಗೆ ನಮ್ಮದು ಅಡ್ಡಿಇಲ್ಲ ಆದರೆ ನಾವು ವೈಚಾರಿ ಕತೆಯಲ್ಲಿ ಚಿಂತನೆ ಮಾಡವುದು ಅಗತ್ಯವಾಗಿದೆ ಎಂದರು. ಸೇವಾಲಾಲ್ ರವರ ಕಾಲದಲ್ಲಿ ವಿದ್ಯಾಭ್ಯಾಸ ಇರಲಿಲ್ಲ ಆದರೂ ಸಮಾಜದಲ್ಲಿ ಮನುಷ್ಯ ಸಮಾನತೆಯಲ್ಲಿ ಬದುಕ ಬೇಕು ಎಂದು ತತ್ವ ಮಾರ್ಗದರ್ಶನವನ್ನ ನೀಡಿದ್ದಾರೆ


ಚಿಕ್ಕನಾಯಕನಹಳ್ಳಿ: ಪವಿತ್ರ ಸ್ಥಳವಾದ ಗಯಾದ ಗಂಗೆಯಲ್ಲಿ ಕುಂಭಮೇಳಕ್ಕೆ ಏಕ ಕಾಲದಲ್ಲಿ ಕೋಟ್ಯಾಂತರ ಜನ ಸ್ನಾನ ಮಾಡಿರುವುದರಿಂದ ಗಂಗಾನದಿ ಮಲಿನವಾಗಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತನಾಯ್ಕ್ ಹೇಳಿದರು. ಪಟ್ಟಣದ ಕನ್ನಡ ಸಂಘ ವೇದಿಕೆಯಲ್ಲಿ ಸದ್ಗುರು ಶ್ರೀ ಸೇವಾಲಾಲ್ ಜಯಂತೋತ್ಸವ ಸಮಿತಿ ಹಾಗು ಶ್ರೀ ಸೇವಾ ಲಾಲ್ ಮರಿಯಮ್ಮದೇವಿ ತಾಂಡಾಭಿವೃದ್ಧಿ ಟ್ರಷ್ಟ್ ಸಂಯುಕ್ತಾ ಶ್ರಯದಲ್ಲಿ ಆಯೋಜಿ ಸಿದ್ದ 286ನೇ ಸಂತಸೇವಾಲಾಲ್ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಪ್ರಕೃತಿ ಯನ್ನ ನಾವು ಉಳಿಸಿದರೆ ಪ್ರಕೃತಿ ನಮ್ಮನ್ನ ಉಳಿಸುತ್ತದೆ ಇತ್ತೀಚಿಗೆ ಕುಂಭಮೇಳ ದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಹಲಾವಾರು ಜನ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Chikkaballapur News: ಮಂಚನಬಲೆ ಶ್ರೀನಿವಾಸ್ ಎತ್ತರ ಜಿಗಿತದ ತೀರ್ಪುಗಾರರಾಗಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ
ಕೋಟಿ ಕೋಟಿ ಜನ ಏಕಕಾಲದಲ್ಲಿ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಪವಿತ್ರ ವಾದ ಗಂಗೆ ಮಲ ಮೂತ್ರಗಳಿಂದ ತುಂಬಿ ಘಟಾರವಾಗಿ ಅಪವಿತ್ರವಾಗಿದ್ದಾಳೆ ಇದನ್ನ ನಾವು ವಿಜ್ಞಾನ ಎನ್ನುತ್ತೇವೆ . ಧಾರ್ಮಿಕ ಚಿಂತನೆಗಳಿಗೆ ನಮ್ಮದು ಅಡ್ಡಿಇಲ್ಲ ಆದರೆ ನಾವು ವೈಚಾರಿಕತೆಯಲ್ಲಿ ಚಿಂತನೆ ಮಾಡವುದು ಅಗತ್ಯವಾಗಿದೆ ಎಂದರು. ಸೇವಾಲಾಲ್ ರವರ ಕಾಲದಲ್ಲಿ ವಿದ್ಯಾಭ್ಯಾಸ ಇರಲಿಲ್ಲ ಆದರೂ ಸಮಾಜದಲ್ಲಿ ಮನುಷ್ಯ ಸಮಾನತೆಯಲ್ಲಿ ಬದುಕ ಬೇಕು ಎಂದು ತತ್ವ ಮಾರ್ಗದರ್ಶನವನ್ನ ನೀಡಿದ್ದಾರೆ. ಬಾಬಾ ಸಾಹೇಬ್ ಅಂಬೇ ಡ್ಕರ್ ವಿದ್ಯಾಭ್ಯಾಸದಲ್ಲಿ ಹಲವಾರು ಡಿಗ್ರಿಗಳನ್ನ ಪಡೆದಿದ್ದರು ಸಮಾಜದಲ್ಲಿ ಮನುಷ್ಯ ಸಮಾನತೆಯಲ್ಲಿ ಬದುಕ ಬೇಕೆಂದು ಸಂವಿಧಾನ ರಚಿಸಿದ್ದಾರೆ.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಒಗ್ಗಟ್ಟಿಗಾಗಿ, ಸಾಮಾಜಿಕ ಸಂಘಟಣೆಗಾಗಿ ಗಣೇಶ ನನ್ನ ಸಾರ್ವಜನಿಕ ಸ್ಥಳದಲ್ಲಿ ಪೂಜಿಸಲು ರೂಢಿ ಮಾಡಲಾಯಿತು. ಹಾಗೆಯೇ ಬಂಜಾರ ಸಮುದಾಯದ ಸಂಘಟನೆಗಾಗಿ ಸೇವಾಲಾಲ್ ರವರ ಜಯಂತಿಯನ್ನ ಸಾರ್ವಜನಿಕವಾಗಿ ಆಚರಣೆ ಮಾಡಬೇಕೆಂದರು . ಸಾನಿಧ್ಯ ವಹಿಸಿದ್ದ ಕೊಟ್ಟೂರಿನ ಬಂಜಾರಶಕ್ತಿ ಪೀಠದ ಶಿವಪ್ರಕಾಶ್ ಮಹಾರಾಜ್ ಮಾತನಾಡಿ ಸಂತ ಸೇವಾಲಾಲ್ ಸಾಧುಗಳಾಗಿದ್ದರು. ಅಹಿಂಸಾ ತತ್ವವನ್ನ ಪರಿಪಾಲನೆ ಮಾಡುತ್ತಿದ್ದ ಅವರು ಸಮಾಜದಲ್ಲಿ ಶಾಂತಿಯನ್ನ ಬಯಸು ತ್ತಿದ್ದರು.
ಬಂಜಾರ ಸಮಾಜದ ಪ್ರತಿಯೊಬ್ಬರು ಅವರ ಆದರ್ಶಗಳನ್ನ ಪಾಲನೆ ಮಾಡುವುದರ ಜೊತೆಗೆ ಸಮುದಾಯದ ಕೆಳವರ್ಗದ ಜನರನ್ನ ಉಳ್ಳವರು ಮೇಲೇತ್ತುವ ಕೆಲಸವನ್ನ ಮಾಡಬೇಕು ಸಮುದಾಯದ ಮಕ್ಕಳು ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದರು.
ಚಳ್ಳಕೆರೆ ರೇಖಲಗೆರೆ ಕಾವಲ್ ರಾಜಯೋಗ ವಿದ್ಯಾಶ್ರಮ ಧೇನ ಭಗವತ್ ಸ್ವಾಮೀಜೀ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣರವರು ಮಾನವನ ಮೌಲ್ಯವನ್ನ ಉಳಿಸಲು ವಚನ ಸಾಹಿತ್ಯ ರಚನೆ ಮಾಡಿದ್ದರು. ಸೇವಾಲಾಲ್ ರವರು ಕೂಡ ಸಕಲಜೀವರಾಶಿಗೆ ಲೇಸನ್ನ ಬಯಸಿದ್ದರು ಎಂದರು. ಶಾಸಕ ಬಿ.ಲಕ್ಕಪ್ಪˌ ಬಂಜಾರ ತಾಲ್ಲೂಕು ಅಧ್ಯಕ್ಷ ರಘುನಾಥ್ˌ ತಹಶೀಲ್ದಾರ್ ಕೆ.ಪುರಂದರ್ ಸಂಶೋಧಕ ಡಾ.ಬಿ.ಜಿ.ಅಶೋಕ್ ನಾಯ್ಕ್ ಜಯಂತೋತ್ಸವ ಸಮಿತಿ ಅಧ್ಯಕ್ಷ ಗಂಗಾಧರ ನಾಯ್ಕˌ ವೇದಮೂರ್ತಿ ನಾಯಕ್, ಜಾನ ಪದ ಪ್ರಶಸ್ತಿ ಪುರಸ್ಕೃತ ಉಮೇಶ್ ನಾಯ್ಕ. ಮಾಜಿ ಜಿ. ಪಂ ಸದಸ್ಯೆ ಲೋಹಿತಾ ಬಾಯಿ, ತಾ.ಪಂˌಮಾಜಿ ಅಧ್ಯಕ್ಷೆ ಚೇತನ ಗಂಗಾಧರ್ˌ ಪ್ರಸನ್ನˌವಿವಿಧ ಕ್ಷೇತ್ರದಲ್ಲಿ ಸಾಧನೆಕಾರರಿಗೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚುಅಂಕ ಪಡೆದ ಹಾಗು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿಗೆ ಪುರಸ್ಕಾರ ಮಾಡಲಾಯಿತು.
ಹುಳಿಯಾರು ಗೇಟ್ ಬಳಿ ಇರುವ ಡಾ.ಬಿಆರ್ ಅಂಭೇಡ್ಕರ್ ಪುತ್ಥಳಿ ಸ್ಥಳದಿಂದ ಸಂತ ಸೇವಾಲಾಲ್ ರವರ ಭಾವಚಿತ್ರದೊಂದಿಗೆ ಜನಪದ ಕಲಾತಂಡಗಳು ಹಾಗು ಬಂಜಾರ ಸಮುದಾಯದ ಉಡುಪುಗಳನ್ನ ಧರಿಸಿದ ಮಹಿಳೆಯರ ನೃತ್ಯದೊಂದಿಗೆ ಮೆರವಣಿಗೆ ಕನ್ನಡ ಸಂಘದ ವೇದಿಕೆವರೆಗೂ ನಡೆಯಿತು.