ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Chikkaballapur News: ಮಂಚನಬಲೆ ಶ್ರೀನಿವಾಸ್ ಎತ್ತರ ಜಿಗಿತದ ತೀರ್ಪುಗಾರರಾಗಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ

ಕ್ರೀಡಾಕೂಟವನ್ನು ತಮಿಳುನಾಡು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡು ಕ್ರೀಡಾ ಸಚಿವ ದಯಾನಿಧಿ, ಕೇಂದ್ರ ಪ್ಯಾರಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಪದ್ಮಭೂಷಣ, ಅರ್ಜುನ ಪ್ರಶಸ್ತಿ, ದ್ರೋಣಾಚಾರಿ ಹಾಗೂ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ದೀಪಾಮಲ್ಲಿಕ್, ಭಾರತ ಪ್ಯಾರಾ ಅಥ್ಲೆಟಿಕ್ ತಂಡದ ಮುಖ್ಯ ತರಬೇತುದಾರ ಕರ್ನಾಟಕ ರಾಜ್ಯದ ಸತ್ಯನಾರಾಯಣ್ ಉದ್ಘಾಟಿಸಿದರು

ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟ : ಮಂಚನಬಲೆ ಶ್ರೀನಿವಾಸ್ ಭಾಗಿ

ಪದಕ ಪ್ರದಾನ ಮಾಡುತ್ತಿರುವ ಮಂಚನಬಲೆ ಶ್ರೀನಿವಾಸ್ ಅವರ ಪೋಟೊ

Profile Ashok Nayak Feb 23, 2025 8:36 PM

ಚಿಕ್ಕಬಳ್ಳಾಪುರ: ಇತ್ತೀಚೆಗೆ ಚೆನೈ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ಎತ್ತರ ಜಿಗಿತದ ತೀರ್ಪುಗಾರರಾಗಿ ಭಾಗಿಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಸದರಿ ಕ್ರೀಡಾಕೂಟದಲ್ಲಿ ಭಾರತದ 30 ರಾಜ್ಯಗಳಿಂದ 1700ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಈ ಕ್ರೀಡಾಕೂಟವನ್ನು ತಮಿಳುನಾಡು ರಾಜ್ಯದ ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡು ಕ್ರೀಡಾ ಸಚಿವ ದಯಾನಿಧಿ, ಕೇಂದ್ರ ಪ್ಯಾರಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಪದ್ಮಭೂಷಣ, ಅರ್ಜುನ ಪ್ರಶಸ್ತಿ, ದ್ರೋಣಾಚಾರಿ ಹಾಗೂ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತ ದೀಪಾಮಲ್ಲಿಕ್, ಭಾರತ ಪ್ಯಾರಾ ಅಥ್ಲೆಟಿಕ್ ತಂಡದ ಮುಖ್ಯ ತರಬೇತುದಾರ ಕರ್ನಾಟಕ ರಾಜ್ಯದ ಸತ್ಯನಾರಾಯಣ್ ಉದ್ಘಾಟಿಸಿದರು.

ಇದನ್ನೂ ಓದಿ: Chikkaballapur News: ರೈತರಿಗೆ ಸದಸ್ಯತ್ವ ನೀಡದೆ ಏಕಪಕ್ಷ ಧೋರಣೆ

ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಮಂಚನಬಲೆ ಶ್ರೀನಿವಾಸ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಎತ್ತರ ಜಿಗಿತದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪದಕ ಪ್ರಧಾನ ಮಾಡಿದರು.