ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel Embassy Staff: ಇಬ್ಬರು ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗಳು ಶೂಟೌಟ್‌ಗೆ ಬಲಿ

Israel Embassy Staff Killed:ಅಮೆರಿಕದಲ್ಲಿರುವ ಇಬ್ಬರು ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ವಾಷಿಂಗ್ಟನ್‌ ಡಿಸಿಯಲ್ಲಿರುವ ಯದೂದಿ ವಸ್ತು ಸಂಗ್ರಹಾಲಯ ಬಳಿ ಈ ಘಟನೆ ನಡೆದಿದೆ. ಎಫ್‌ಬಿಐನ ವಾಷಿಂಗ್ಟನ್ ಫೀಲ್ಡ್ ಆಫೀಸ್‌ನಿಂದ ಕೆಲವೇ ಮೀಟರ್‌ ದೂರದಲ್ಲಿ ಗುಂಡಿನ ದಾಳಿ ನಡೆದಿದೆ.

ಇಬ್ಬರು ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗಳು ಶೂಟೌಟ್‌ಗೆ ಬಲಿ

Profile Rakshita Karkera May 22, 2025 10:08 AM

ವಾಷಿಂಗ್ಟನ್‌: ಅಮೆರಿಕದಲ್ಲಿರುವ ಇಬ್ಬರು ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗಳನ್ನು(Israel Embassy Staff) ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ವಾಷಿಂಗ್ಟನ್‌ ಡಿಸಿಯಲ್ಲಿರುವ ಯದೂದಿ ವಸ್ತು ಸಂಗ್ರಹಾಲಯ(Jewish Museum) ಬಳಿ ಈ ಘಟನೆ ನಡೆದಿದ್ದು,ಇದು ಭಯೋತ್ಪಾದಕರು ನಡೆಸಿರುವ ಕೃತ್ಯ ಎನ್ನಲಾಗಿದೆ. ವಾಯುವ್ಯ ಡಿಸಿಯಲ್ಲಿರುವ ಎಫ್‌ಬಿಐನ ವಾಷಿಂಗ್ಟನ್ ಫೀಲ್ಡ್ ಆಫೀಸ್‌ನಿಂದ ಕೆಲವೇ ಮೀಟರ್‌ ದೂರದಲ್ಲಿ ಗುಂಡಿನ ದಾಳಿ ನಡೆದಿದೆ. ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಯಹೂದಿ ವಸ್ತುಸಂಗ್ರಹಾಲಯದ ಬಳಿ ಇಂದು ರಾತ್ರಿ ಇಬ್ಬರು ಇಸ್ರೇಲಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸುತ್ತಿದ್ದೇವೆ. ದಯವಿಟ್ಟು ಮೃತ ದುರ್ದೈವಿಗಳ ಕುಟುಂಬಗಳಿಗಾಗಿ ಪ್ರಾರ್ಥಿಸಿ. ನಾವು ಈ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಿಯೇ ತೀರುತ್ತೇವೆ. ಇನ್ನು ಘಟನೆ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು X ನಲ್ಲಿ ತಿಳಿಸಿದ್ದಾರೆ.



ಇನ್ನು ಬಲಿಯಾದವರ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ, ಆದರೆ ಸ್ಥಳೀಯ ವರದಿಗಳು ಇಬ್ಬರೂ ವ್ಯಕ್ತಿಗಳು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಇಸ್ರೇಲಿ ರಾಜತಾಂತ್ರಿಕ ಅಧಿಕಾರಿಗಳು ಎನ್ನಲಾಗಿದೆ. ಇಸ್ರೇಲಿ ರಾಯಭಾರ ಕಚೇರಿ ಘಟನೆಯನ್ನು ಒಪ್ಪಿಕೊಂಡಿದೆ. ಆದರೆ ದಾಳಿಯ ಸಮಯದಲ್ಲಿ ಕಚೇರಿಯಲ್ಲಿ ರಾಯಭಾರಿ ಇರಲಿಲ್ಲ ಎಂದು ದೃಢಪಡಿಸಿದೆ. ಇನ್ನು ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.

ಈ ಸುದ್ದಿಯನ್ನೂ ಓದಿ: LIC ‘One Man Office’: ಎಲ್‌ಐಸಿ ಸಂಸ್ಥೆಗೆ ‘ ಡಿಜಿಟಲ್‌ ಟಚ್‌’- ಮೊಬೈಲ್‌ನಲ್ಲಿ ಪಡೆಯಬಹುದು ವಿಮೆ!