ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorists infiltration: ಸ್ಫೋಟಕ ಸಂಗತಿ ಬಯಲು!ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮೇ 8 ರಂದು ಸುಮಾರು 45 ರಿಂದ 50 ಭಯೋತ್ಪಾದಕರ ತಂಡ ಒಳನುಸುಳಲು ಪ್ರಯತ್ನಿಸಿದೆ. ಇದನ್ನು ಪಾಕಿಸ್ತಾನ ಬೆಂಬಲಿಸಿದ್ದು, ಗಡಿಯಾಚೆಗಿನ ಶೆಲ್ ದಾಳಿ ಎನ್ನಲಾಗಿದೆ. ಆದರೆ ಈ ಪ್ರಯತ್ನವನ್ನು ಗಡಿ ಭದ್ರತಾ ಪಡೆ (Border Security Force ) ಯಶಸ್ವಿಯಾಗಿ ತಡೆದಿದೆ.

ಮೇ 8ರಂದು 50 ಉಗ್ರರಿಂದ ಭಾರತಕ್ಕೆ ಒಳನುಸುಳಲು ಯತ್ನ

ಕಾಶ್ಮೀರ: ಪಹಲ್ಗಾಮ್ (Pahalgam) ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಏಪ್ರಿಲ್ 22ರಂದು ಉಗ್ರರು ನಡೆಸಿದ ದಾಳಿಗೆ (Terror Attack) ಪ್ರತಿಯಾಗಿ ಭಾರತೀಯ ಸೇನೆ ಮೇ 7ನಡೆಸಿದ ಆಪರೇಷನ್ ಸಿಂದೂರ್ (operation sindoor) ಕಾರ್ಯಾಚರಣೆ ನಡೆಸಿ ಉಗ್ರರ ಒಂಬತ್ತು ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಇದಾದ ಮರುದಿನ ಅಂದರೆ ಮೇ 8ರಂದು ಪಾಕಿಸ್ತಾನದ ಶೆಲ್ ದಾಳಿಯ (Pakistani shelling) ನೆಪದಲ್ಲಿ ಸುಮಾರು 50 ಭಯೋತ್ಪಾದಕರು ಭಾರತಕ್ಕೆ ನುಸುಳಲು ಪ್ರಯತ್ನಿಸಿದರು. ಇದನ್ನು ತಡೆಯುವಲ್ಲಿ ಗಡಿ ಭದ್ರತಾ ಪಡೆ ಯಶಸ್ವಿಯಾಗಿದೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮೇ 8 ರಂದು ಸುಮಾರು 45 ರಿಂದ 50 ಭಯೋತ್ಪಾದಕರ ತಂಡ ಒಳನುಸುಳಲು ಪ್ರಯತ್ನಿಸಿದೆ. ಇದನ್ನು ಪಾಕಿಸ್ತಾನ ಬೆಂಬಲಿಸಿದ್ದು, ಗಡಿಯಾಚೆಗಿನ ಶೆಲ್ ದಾಳಿ ಎನ್ನಲಾಗಿದೆ. ಆದರೆ ಈ ಪ್ರಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಯಶಸ್ವಿಯಾಗಿ ತಡೆದಿದೆ.ಈ ಕುರಿತು ಮಾಹಿತಿ ನೀಡಿರುವ ಬಿಎಸ್ಎಫ್ ಉಪ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಎಸ್ಎಸ್ ಮಾಂಡ್, ಕದನ ವಿರಾಮ ಘೋಷಣೆಯಾದ ಬಳಿಕ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದೆ. ಭಯೋತ್ಪಾದಕರು ಅಂತಾರಾಷ್ಟ್ರೀಯ ಗಡಿಯನ್ನು ದಾಟಲು ಸಹಾಯ ಮಾಡಿದ್ದು, ಭಾರೀ ಗುಂಡಿನ ದಾಳಿ ನಡೆಸಿದೆ ಎಂದು ತಿಳಿಸಿದ್ದಾರೆ.

ನಮ್ಮ ಧೈರ್ಯಶಾಲಿ ಸೈನಿಕರು ಅವರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಭಯೋತ್ಪಾದಕರ ದೊಡ್ಡ ಗುಂಪು ಒಳನುಸುಳಲು ಪ್ರಯತ್ನಿಸುತ್ತಿದೆ ಎನ್ನುವ ಗುಪ್ತಚರ ಮಾಹಿತಿ ಮೊದಲೇ ಬಂದಿದ್ದು, ನಾವು ಅವರಿಗಾಗಿ ಸಿದ್ಧರಾಗಿದ್ದೆವು. ಮೇ 8 ರಂದು ಅವರನ್ನು ಪತ್ತೆ ಮಾಡಿದ್ದೆವು. ಸುಮಾರು 45- 50 ಪುರುಷರ ತಂಡ ಒಳನುಸುಳಲು ಪ್ರಯತ್ನಿಸಿದ್ದು, ಯುದ್ಧ ಸನ್ನದ್ಧರಾಗಿದ್ದ ಸೈನಿಕರು ಅವರ ಮೇಲೆ ಭಾರೀ ಬಾಂಬ್ ದಾಳಿ ನಡೆಸಿ ತಡೆಯಲಾಗಿದೆ ಎಂದು ಅವರು ಹೇಳಿದರು.

ನಿರೀಕ್ಷೆಯಂತೆ ಅವರು ತಮ್ಮ ಪೋಸ್ಟ್‌ಗಳಿಂದ ಭಾರೀ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ನಾವು ಅವರ ಮೇಲೆ ಭಾರೀ ಮತ್ತು ನಿಖರವಾದ ಗುಂಡಿನ ದಾಳಿ ನಡೆಸಿದ್ದೇವೆ. ಇದಾದ ಬಳಿಕ ಅವರು ತಮ್ಮ ಪೋಸ್ಟ್‌ಗಳಿಂದ ಓಡಿಹೋಗುತ್ತಿರುವುದು ಕಂಡುಬಂದಿದೆ. ನಾವು ಕೇವಲ ಒಂದು ಗಂಟೆಗಳಲ್ಲಿ ಹಿಂದೆ ಸರಿಯುವಂತೆ ಮಾಡಿದ್ದೇವೆ ಎಂದು ಅವರು ವಿವರಿಸಿದರು.

ನಾವು ಅವರ ಬಂಕರ್‌ಗಳನ್ನು ನಾಶಮಾಡಿದ್ದೇವೆ. ಅವರ ದಾಳಿಯ ಸಾಮರ್ಥ್ಯವನ್ನು ಕುಗ್ಗಿಸಿದ್ದೇವೆ. ನಮ್ಮ ಜವಾನರು ಇನ್ನೂ ತುಂಬಾ ಶಕ್ತಿಯುತರಾಗಿದ್ದಾರೆ. ಶತ್ರುಗಳು ಮತ್ತೆ ಯಾವುದೇ ಕ್ರಮ ಕೈಗೊಂಡರೆ ನಾವು ಹತ್ತು ಪಟ್ಟು ಹೆಚ್ಚಿನ ಬಲದಿಂದ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಮಾಂಡ್ ಹೇಳಿದರು.

ಮಹಿಳಾ ಸೈನಿಕರನ್ನು ಶ್ಲಾಘಿಸಿದ ಅವರು, ನಮ್ಮ ಮಹಿಳಾ ಸೈನಿಕರು ಪುರುಷ ಸಹವರ್ತಿಗಳ ಹೆಗಲಿಗೆ ಹೆಗಲು ಕೊಟ್ಟು ಎಲ್ಲಾ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಾರೆ. ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: Viral Video: ಬೆಕ್ಕನ್ನು ಬಳಸಿಕೊಂಡು ಜೈಲಿಗೆ ಮಾದಕವಸ್ತುಗಳ ಕಳ್ಳಸಾಗಾಣಿಕೆ; ವಿಡಿಯೊ ವೈರಲ್

ಬೀಟಿಂಗ್ ರಿಟ್ರೀಟ್ ಪ್ರಾರಂಭ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಬುಧವಾರ ಪೂಂಚ್ ಬ್ರಿಗೇಡ್ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅಲ್ಲಿ ನಡೆದ ಸೈನಿಕರ ಕವಾಯತು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ನಡುವೆ ಪಂಜಾಬ್ ಗಡಿಯಲ್ಲಿರುವ ಮೂರು ಜಂಟಿ ಚೆಕ್ ಪೋಸ್ಟ್‌ಗಳಾದ ಅಟ್ಟಾರಿ-ವಾಘಾ, ಹುಸೇನಿವಾಲಾ ಮತ್ತು ಸದ್ಕಿಯಲ್ಲಿ ಬಿಎಸ್ಎಫ್ ಸೈನಿಕರ ಕವಾಯತು ಸಮಾರಂಭವನ್ನು ಪುನರಾರಂಭಿಸಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂದೂರ್ ಪ್ರಾರಂಭವಾದ ಅನಂತರ ಮೇ 9 ರಂದು ದೈನಂದಿನ ಧ್ವಜ ಇಳಿಸುವ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಅದು ಮತ್ತೆ ಆರಂಭವಾಗಿದೆ.