Vishweshwar Bhat Column: ಲ್ಯಾಂಡಿಂಗ್ ಮಾಡುವಾಗ ಕಾಣದಿದ್ದರೆ
ಒಮ್ಮೆ ನಾನು ಫ್ರಾನ್ಸಿನ ಟುಲೂಸ್‌ನಿಂದ ಪ್ಯಾರಿಸ್ಸಿಗೆ ವಿಮಾನದಲ್ಲಿ ಆಗಮಿಸುತ್ತಿದ್ದೆ. ವಿಮಾನ ಪ್ಯಾರಿಸ್ಸಿನ ಚಾರ್ಲ್ಸ್ ಡಿಗಾಲ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ವಿಮಾನ ಲ್ಯಾಂಡ್ ಆಗುವ ಸುಮಾರು 20 ನಿಮಿಷ ಮುನ್ನ ದಟ್ಟವಾದ ಕಪ್ಪು ಮೋಡದಲ್ಲಿ ಸುಮಾರು ಏಳೆಂಟು ನಿಮಿಷ ಹಾದು ಹೋಗುತ್ತಿದ್ದರೂ, ಶುಭ್ರ ಆಗಸ ಕಾಣುತ್ತಿರಲಿಲ್ಲ.


ಸಂಪಾದಕರ ಸದ್ಯಶೋಧನೆ
ಒಮ್ಮೆ ನಾನು ಫ್ರಾನ್ಸಿನ ಟುಲೂಸ್‌ನಿಂದ ಪ್ಯಾರಿಸ್ಸಿಗೆ ವಿಮಾನದಲ್ಲಿ ಆಗಮಿಸುತ್ತಿದ್ದೆ. ವಿಮಾನ ಪ್ಯಾರಿಸ್ಸಿನ ಚಾರ್ಲ್ಸ್ ಡಿಗಾಲ್ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ವಿಮಾನ ಲ್ಯಾಂಡ್ ಆಗುವ ಸುಮಾರು 20 ನಿಮಿಷ ಮುನ್ನ ದಟ್ಟವಾದ ಕಪ್ಪು ಮೋಡದಲ್ಲಿ ಸುಮಾರು ಏಳೆಂಟು ನಿಮಿಷ ಹಾದು ಹೋಗುತ್ತಿದ್ದರೂ, ಶುಭ್ರ ಆಗಸ ಕಾಣುತ್ತಿರಲಿಲ್ಲ. ಪೈಲಟ್ ವಿಮಾನವನ್ನು ಕೆಳಕ್ಕಿಳಿಸು ತ್ತಿದ್ದರೂ, ಭೂಮಿ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ಒಳಗಿದ್ದ ವಿಮಾನದ ಚಕ್ರಗಳು ತೆರೆದುಕೊಂಡವು. ಪೈಲಟ್ ಒಂದೇ ಸಮನೆ ವಿಮಾನವನ್ನು ಕೆಳಕ್ಕಿಳಿಸುತ್ತಿದ್ದ. ಆದರೂ ಭೂಮಿ ಗೋಚರಿಸುತ್ತಿರಲಿಲ್ಲ. ಇನ್ನೂ ವಿಮಾನ ದಟ್ಟ ಮೋಡದಿಂದ ಹೊರ ಬಂದಿರ ಲಿಲ್ಲ. ಪೈಲಟ್‌ಗೆ ಮುಂದೆ ಏನೂ ಕಾಣಿಸುತ್ತಿರಲಿಲ್ಲ.
ಆದರೂ ಆತ ವಿಮಾನವನ್ನು ಲ್ಯಾಂಡ್ ಮಾಡಲು ನಿರ್ಧರಿಸಿದ್ದ. ಇದು ಹೇಗೆ ಸಾಧ್ಯ? ಇಂಥ ಸಂದರ್ಭದಲ್ಲಿ ವಿಮಾನವನ್ನು ಇಳಿಸಲು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ( ILS) ಸಹಾಯಕ್ಕೆ ಬರುತ್ತದೆ. ಇದು ವಿಮಾನವನ್ನು ನಿಖರವಾಗಿ, ಸುರಕ್ಷಿತವಾಗಿ ಮತ್ತು ನಿಯಂತ್ರಿತವಾಗಿ ನಿಲ್ದಾಣದಲ್ಲಿ ಇಳಿಸಲು ಸಹಾಯ ಮಾಡುವ ತಂತ್ರಜ್ಞಾನ.
ಇದನ್ನೂ ಓದಿ: Vishweshwar Bhat Column: ಟೈಮ್ ಮ್ಯಾಗಜಿನ್ ಮುಖಪುಟ
ಇದು ಹವಾಮಾನ ಪರಿಸ್ಥಿತಿ ಅನನುಕೂಲಕರವಾಗಿದ್ದರೂ, ಪೈಲಟ್‌ಗಳಿಗೆ ಸ್ಪಷ್ಟ ಮಾರ್ಗ ಗೋಚರಿಸದಿದ್ದರೂ, ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಪೈಲಟ್‌ಗಳಿಗೆ ಮಾರ್ಗದರ್ಶನ ನೀಡುತ್ತದೆ. ಐಎಲ್‌ಎಸ್ ಸಿಸ್ಟಮ್ ಅನ್ನು ದೊಡ್ಡ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಗಳಲ್ಲಿ ಬಳಸಲಾಗುತ್ತದೆ.
ಈ ಸಿಸ್ಟಮ್‌ನಲ್ಲಿ ಲೋಕಲೈಜರ್ ಸಿಗ್ನಲ್ ಮತ್ತು ಗ್ಲೈಡ್ ಸ್ಲೋಪ್ ಸಿಗ್ನಲ್ ಎಂಬ 2 ಪ್ರಮುಖ ವ್ಯವಸ್ಥೆಗಳಿರುತ್ತವೆ. ಅವು ವಿಮಾನವು ಹಾರಾಟ ಮಾರ್ಗದಿಂದ ನಿಲ್ದಾಣದ ರನ್‌ವೇ ( Runway )ಗೆ ಸರಿಯಾದ ದಿಕ್ಕಿನಲ್ಲಿ ಇಳಿಯಲು ಗೈಡ್ ಮಾಡುತ್ತವೆ. ಲೋಕಲೈಜರ್ ಆಂಟೆನಾಗಳು ನಿಲ್ದಾಣದ ರನ್‌ವೇ ಮಧ್ಯದಲ್ಲಿ ಮುಂಭಾಗದಲ್ಲಿ ಸ್ಥಾಪಿತವಾಗಿರುತ್ತವೆ. ಇದು ವಿಮಾನದ ಡ್ಯಾಶ್‌ಬೋರ್ಡ್ ಮೇಲೆ ಡಿಜಿಟಲ್/ವಿಜುವಲ್ ಸೂಚನೆಗಳನ್ನು ನೀಡುತ್ತವೆ. ಇದು ಪೈಲಟ್‌ಗಳು ತಮ್ಮ ವಿಮಾನವು ರನ್‌ವೇನ ಮಧ್ಯ ಬಿಂದುದಲ್ಲಿ ಇಳಿಯಲು ಸಹಾಯಮಾಡುತ್ತವೆ.
ಐಎಲ್‌ಎಸ್ ಸಿಸ್ಟಮ್ ನಲ್ಲಿರುವ ಗ್ಲೈಡ್ ಪಾತ್ ( Glide Path ) ವಿಮಾನವು ಸರಿಯಾದ ಕೋನದಲ್ಲಿ ಇಳಿಯಲು ಸಹಾಯ ಮಾಡುತ್ತದೆ. ವಿಮಾನವು ರನ್‌ವೇಯಲ್ಲಿ ಇಳಿಯಲು ತಂತ್ರಜ್ಞಾನದ ಮೂಲಕ ನಿಖರವಾದ ಡೇಟಾವನ್ನು ಒದಗಿಸುತ್ತದೆ. ಐಎಲ್‌ಎಸ್ ಸಿಸ್ಟಮ್ ಬಳಸುವ ಸಂದರ್ಭ ದಲ್ಲಿ, ಪೈಲಟ್‌ಗಳು ತಮ್ಮ ಪ್ಯಾನಲ್‌ನಲ್ಲಿ ರೇಡಿಯೋ ಫ್ರೀಕ್ವೆನ್ಸಿಯನ್ನು ಸರಿ ಹೊಂದಿಸುತ್ತಾರೆ. ಈ ವ್ಯವಸ್ಥೆಯು ಪೈಲಟ್ ಗಳಿಗೆ ‘ಲ್ಯಾಟರಲ್’ ( Lateral ) ಮತ್ತು ‘ವರ್ಟಿಕಲ್’ ( Vertical) ಮಾರ್ಗ ದರ್ಶನ ನೀಡುತ್ತದೆ. ಐಎಲ್‌ಎಸ್ ಸಿಸ್ಟಮ್ ಬಳಸುವ ಪೈಲಟ್‌ಗಳು ತಮ್ಮ ವಿಮಾನವನ್ನು ‘ಆಟೋಮ್ಯಾಟಿಕ್ ಲ್ಯಾಂಡಿಂಗ್’ ಅಥವಾ ‘ಮ್ಯಾನ್ಯುಯಲ್ ಲ್ಯಾಂಡಿಂಗ್’ ಮೂಲಕವೂ ಇಳಿಸ ಬಹುದು. ಹವಾಮಾನ ಸಮಸ್ಯೆ ಅಥವಾ ಕಪ್ಪು ದಟ್ಟಮಂಜು ಇದ್ದಾಗ, ಈ ತಂತ್ರಜ್ಞಾನವು ದೋಷ ರಹಿತ ಸೂಚನೆಯನ್ನು ಪೈಲಟ್‌ಗಳಿಗೆ ನೀಡುವುದರಿಂದ ಅವರು ಸರಿಯಾಗಿ ವಿಮಾನವನ್ನು ಇಳಿಸಲು ಸಹಾಯಕವಾಗುತ್ತದೆ.
ಅತಿ ದಟ್ಟ ಮಂಜು ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಪೈಲಟ್‌ಗಳು ದೃಶ್ಯ ಸ್ಪಷ್ಟತೆ ಯ ಕೊರತೆಯಿಂದ ವಿಮಾನವನ್ನು ನಿಖರವಾಗಿ ನೋಡಲು ಸಾಧ್ಯವಾಗದಾಗ, ಐಎಲ್‌ಎಸ್ ಸಿಸ್ಟಮ್ ನೆರವಿಗೆ ಬರುತ್ತದೆ. ವಿಮಾನಗಳು ತ್ವರಿತವಾಗಿ ಇಳಿಯಲೂ ಈ ವ್ಯವಸ್ಥೆಯು ಅನುಕೂಲ ಮಾಡುತ್ತದೆ. ಇದರಿಂದ ವಿಮಾನಗಳು ಬೇಗನೆ ರನ್‌ವೇಯನ್ನು ಬಿಡಬಹುದು ಮತ್ತು ಇತರ ವಿಮಾನಗಳು ಸರಿಯಾಗಿ ಇಳಿಯಲು ಅನುವು ಮಾಡಿಕೊಡಬಹುದು.
ಇದು ವಿಮಾನಯಾನ ಕ್ಷೇತ್ರದಲ್ಲಿ ಪೈಲಟ್‌ಗಳಿಗೆ ಅನುಕೂಲ ಮತ್ತು ಸುರಕ್ಷಾ ಮಟ್ಟವನ್ನು ಹೆಚ್ಚಿಸುತ್ತದೆ. ಪ್ರತಿಕೂಲ ಹವಾಮಾನದಿಂದ ಪೈಲಟ್‌ಗೆ ಮುಂದೆ ಏನೇನೂ ಕಾಣದಿದ್ದಾಗ, ಒಂಥರಾ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿದಂಥ ಸ್ಥಿತಿ ಉದ್ಭವಿಸಿದಾಗ, ಇನ್ ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ ಅನ್ನು ಅನ್ವಯಿಸಲಾಗುತ್ತದೆ. ಮಳೆಗಾಲ ಅಥವಾ ಚಳಿಗಾಲದಲ್ಲಿ ರಾತ್ರಿ ವೇಳೆಯಲ್ಲಿ ದಟ್ಟ ಮೋಡದಿಂದ ಹತ್ತಿರ ಆಗಮಿಸಿದರೂ ಪೈಲಟ್‌ಗೆ ರನ್‌ವೇ ಕಾಣದಿದ್ದಾಗ ಈ ತಂತ್ರಜ್ಞಾನದ ಸಹಾಯ ಅಪೇಕ್ಷಿಸಲಾಗುತ್ತದೆ.