ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MI vs DC: ಬೌಲರ್‌ ತಪ್ಪಿಲ್ಲದಿದ್ದರೂ ಅಂಪೈರ್‌ ನೋ ಬಾಲ್‌ ನೀಡಿದ್ದೇಕೆ?

ಟಿ20 ಆಟದ ಯಾವುದೇ ಸಂದರ್ಭದಲ್ಲಿ, ಆನ್ ಸೈಡ್ ಫೀಲ್ಡರ್‌ಗಳ ಮಿತಿಗೆ ಸಂಬಂಧಿಸಿದ ನಿಯಮ 28.4 ರ ಪ್ರಕಾರ, ಫೀಲ್ಡಿಂಗ್ ತಂಡವು ಆನ್ ಸೈಡ್‌ನಲ್ಲಿ ಐದು ಕ್ಕಿಂತ ಹೆಚ್ಚು ಫೀಲ್ಡರ್‌ಗಳನ್ನು ಹೊಂದಿರಬಾರದು. ವಿಲ್‌ ಜಾಕ್ಸ್‌ ಬೌಲಿಂಗ್‌ ನಡೆಸುತ್ತಿದ್ದ ವೇಳೆ ಮುಂಬೈ ತಂಡದ ಆಫ್-ಸೈಡ್‌ನಲ್ಲಿ ಕೇವಲ ಮೂವರು ಫೀಲ್ಡರ್‌ಗಳು ಮತ್ತು ಆನ್ ಸೈಡ್‌ನಲ್ಲಿ 5 ಕ್ಕಿಂತ ಹೆಚ್ಚು ಫೀಲ್ಡರ್‌ಗಳು ಇದ್ದರು. ಹೀಗಾಗಿ ಅಂಪೈರ್‌ ನೋ ಬಾಲ್‌ ನೀಡಿದರು.

ಬೌಲರ್‌ ತಪ್ಪಿಲ್ಲದಿದ್ದರೂ ಅಂಪೈರ್‌ ನೋ ಬಾಲ್‌ ನೀಡಿದ್ದೇಕೆ?

Profile Abhilash BC May 22, 2025 11:38 AM

ಮುಂಬಯಿ: ಬುಧವಾರ ನಡೆದಿದ್ದ ಮುಂಬೈ ಇಂಡಿಯನ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಪಂದ್ಯದ ವೇಳೆ ಅಂಪೈರ್‌ ನೋ ಬಾಲ್‌ ನೀಡಿದ ಘಟನೆ ಬಗ್ಗೆ ಅನೇಕ ಕ್ರಿಕೆಟ್‌ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಬೌಲರ್‌ ನೋ ಬಾಲ್‌ ಎಸೆಯದಿದ್ದರೂ ಫೀಲ್ಡರ್‌ಗಳು ಮಾಡಿದ ತಪ್ಪಿಗೆ ಅದೇಗೆ ನೋ ಬಾಲ್‌(no-ball) ನೀಡಲಾಯಿತು ಎಂದು ಚಿಂತಿಸಲು ಆರಂಭಿಸಿದ್ದಾರೆ. ಇದಕ್ಕೆ ಉತ್ತರ ಇಲ್ಲಿದೆ.

ಡೆಲ್ಲಿ ಚೇಸಿಂಗ್‌ ನಡೆಸುತ್ತಿದ್ದ ವೇಳೆ ಐದನೇ ಓವರ್‌ನ ಮೂರನೇ ಎಸೆತದಲ್ಲಿ ವಿಲ್ ಜ್ಯಾಕ್ಸ್ ಅವರು ವಿಪ್ರಜ್ ನಿಗಮ್‌ಗೆ ಬೌಲಿಂಗ್ ಮಾಡುತ್ತಿದ್ದಾಗ ಅಂಪೈರ್ ನೋ-ಬಾಲ್ ಸಿಗ್ನಲ್ ನೀಡಿದರು. ಈ ವೇಳೆ ಮುಂಬೈ ಆಟಗಾರರು ಕೂಡ ಒಂದು ಕ್ಷಣ ಅಚ್ಚರಿಗೆ ಒಳಗಾದರು. ಯಾವುದೇ ಲೋಪವಿಲ್ಲದೆ ಬೌಲಿಂಗ್‌ ನಡೆಸಿದರೂ ಅಂಪೇರ್‌ ಏಕೆ ನೋ ಬಾಲ್‌ ನೀಡಿದರು ಎಂದು ಮುಂಬೈ ನಾಯಕ ಹಾರ್ದಿಕ್‌ ಕೂಡ ಫೀಲ್ಡ್‌ ಅಂಪೈರ್‌ ಬಳಿ ಪ್ರಶ್ನೆ ಮಾಡಿದರು.

ನೋ ಬಾಲ್‌ ನೀಡಿದ್ದೇಕೆ?

ಟಿ20 ಆಟದ ಯಾವುದೇ ಸಂದರ್ಭದಲ್ಲಿ, ಆನ್ ಸೈಡ್ ಫೀಲ್ಡರ್‌ಗಳ ಮಿತಿಗೆ ಸಂಬಂಧಿಸಿದ ನಿಯಮ 28.4 ರ ಪ್ರಕಾರ, ಫೀಲ್ಡಿಂಗ್ ತಂಡವು ಆನ್ ಸೈಡ್‌ನಲ್ಲಿ ಐದು ಕ್ಕಿಂತ ಹೆಚ್ಚು ಫೀಲ್ಡರ್‌ಗಳನ್ನು ಹೊಂದಿರಬಾರದು. ವಿಲ್‌ ಜಾಕ್ಸ್‌ ಬೌಲಿಂಗ್‌ ನಡೆಸುತ್ತಿದ್ದ ವೇಳೆ ಮುಂಬೈ ತಂಡದ ಆಫ್-ಸೈಡ್‌ನಲ್ಲಿ ಕೇವಲ ಮೂವರು ಫೀಲ್ಡರ್‌ಗಳು ಮತ್ತು ಆನ್ ಸೈಡ್‌ನಲ್ಲಿ 5 ಕ್ಕಿಂತ ಹೆಚ್ಚು ಫೀಲ್ಡರ್‌ಗಳು ಇದ್ದರು. ಹೀಗಾಗಿ ಅಂಪೈರ್‌ ನೋ ಬಾಲ್‌ ನೀಡಿದರು.

ಐಪಿಎಲ್ ಆಟದ ನಿಯಮಗಳು ಹಾಗೂ ಎಂಸಿಸಿ ನಿಯಮಗಳ ಪ್ರಕಾರ, ಯಾವುದೇ ಫೀಲ್ಡರ್ ಈ ಷರತ್ತನ್ನು ಉಲ್ಲಂಘಿಸಿದರೆ ಅಂಪೈರ್ ನೋ-ಬಾಲ್‌ಗೆ ಸೂಚನೆ ನೀಡಬಹುದು.

ಇದನ್ನೂ ಓದಿ IPL 2025: ರಾಜಸ್ಥಾನ್‌ ರಾಯಲ್ಸ್‌ ಪರ 4000 ರನ್ ಪೂರ್ಣಗೊಳಿಸಿದ ಸಂಜು ಸ್ಯಾಮ್ಸನ್‌!

ಫೀಲ್ಡಿಂಗ್‌ ನಿಯಮ ಹೇಗಿದೆ?

ಆಟದ ಯಾವುದೇ ಸಂದರ್ಭದಲ್ಲಿ ಆನ್ ಸೈಡ್ ಫೀಲ್ಡರ್‌ಗಳ ಮಿತಿಗೆ ಸಂಬಂಧಿಸಿದ ನಿಯಮ 28.4 ರ ಪ್ರಕಾರ, ಫೀಲ್ಡಿಂಗ್ ತಂಡವು ಆನ್ ಸೈಡ್‌ನಲ್ಲಿ ಐದು ಕ್ಕಿಂತ ಹೆಚ್ಚು ಫೀಲ್ಡರ್‌ಗಳನ್ನು ಹೊಂದಿರಬಾರದು.

ನಿಯಮ 28.4.1ರ ಪ್ರಕಾರ ಚೆಂಡು ಎಸೆತದ ಕ್ಷಣದಲ್ಲಿ, ಆನ್ ಸೈಡ್‌ನಲ್ಲಿ 5 ಕ್ಕಿಂತ ಹೆಚ್ಚು ಫೀಲ್ಡರ್‌ಗಳು ಇರಬಾರದು.

ನಿಯಮ 28.4.2ರ ಪ್ರಕಾರ ಬೌಲರ್ ಚೆಂಡು ಎಸೆತದ ಕ್ಷಣದಲ್ಲಿ ವಿಕೆಟ್-ಕೀಪರ್ ಹೊರತುಪಡಿಸಿ ಇಬ್ಬರಿಗಿಂತ ಹೆಚ್ಚು ಫೀಲ್ಡರ್‌ಗಳು ಆನ್ ಸೈಡ್‌ನಲ್ಲಿ ಪಾಪಿಂಗ್ ಕ್ರೀಸ್‌ನ ಹಿಂದೆ ಇರಬಾರದು.