Thursday, 21st November 2024

Salman Khan : ಸಲ್ಮಾನ್ ಖಾನ್‌ಗೆ ಬೆದರಿಕೆ; ನೊಯ್ಡಾದ ಮೂಲದ ಯುವಕ ಸೆರೆ

Salman Khan

ನವದೆಹಲಿ: ನಟ ಸಲ್ಮಾನ್ ಖಾನ್ (Salman Khan) ಮತ್ತು ಹತ್ಯೆಗೀಡಾದ ರಾಜಕಾರಣಿ ಬಾಬಾ ಸಿದ್ದಿಕಿ ಅವರ ಪುತ್ರ ಜೀಶಾನ್ ಸಿದ್ದಿಕಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ ಆರೋಪದ ಮೇಲೆ 20 ವರ್ಷದ ವ್ಯಕ್ತಿಯನ್ನು ನೋಯ್ಡಾದ ಸೆಕ್ಟರ್ 39 ರಿಂದ ಬಂಧಿಸಲಾಗಿದೆ. ಮುಂಬೈ ಪೊಲೀಸರು ಮೊಹಮ್ಮದ್ ತಯ್ಯಬ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಅವರನ್ನು ಟ್ರಾನ್ಸಿಟ್ ರಿಮಾಂಡ್ ಗೆ ಕರೆದೊಯ್ಯಲು ಪೊಲೀಸರು ವ್ಯವಸ್ಥೆ ಮಾಡುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಬಾಂದ್ರಾದಲ್ಲಿರುವ ಜೀಶಾನ್ ಸಿದ್ದಿಕಿ ಅವರ ಕಚೇರಿಗೆ ಶುಕ್ರವಾರ ಸಂಜೆ ಸಂದೇಶಗಳು ಬಂದಿದ್ದು, ಸಲ್ಮಾನ್ ಖಾನ್ ಮತ್ತು ಶಾಸಕರಿಗೆ ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಜೀಶಾನ್ ಸಿದ್ದಿಕಿ ಅವರ ಕಚೇರಿಯ ಸಿಬ್ಬಂದಿ ಪೊಲೀಸ್ ದೂರು ದಾಖಲಿಸಿದ್ದು, ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಮೊಹಮ್ಮದ್ ತಯ್ಯಬ್ ಅವರನ್ನು ಬೆದರಿಕೆಗಳ ಹಿಂದಿನ ವ್ಯಕ್ತಿ ಎಂದು ಗುರುತಿಸಿದರು ಮತ್ತು ಅವನನ್ನು ಬಂಧಿಸಿದರು.

ಬಿಷ್ಣೋಯ್‌ ಗ್ಯಾಂಗ್‌ನ ಭಯಕ್ಕೆ ಸಲ್ಮಾನ್‌ ನಿದ್ದೆಯೇ ಮಾಡುತ್ತಿಲ್ಲ; ಜಿಶಾನ್‌ ಸಿದ್ದಕಿ

ಮುಂಬೈ : ಮಹಾರಾಷ್ಟ್ರದ ಎನ್.ಸಿ.ಪಿ ನಾಯಕ ಬಾಬಾ ಸಿದ್ಧಿಕಿಯನ್ನು( Baba Siddique) ಇತ್ತೀಚೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌ನ ( Lawrence Bishnoi ) ಶೂಟರ್‌ಗಳು ಅಕ್ಟೋಬರ್ 12ರಂದು, ಅವರನ್ನು ಪುತ್ರ ಶಾಸಕ ಜಿಶಾನ್‌ ಸಿದ್ದಿಕಿ ಕಚೇರಿಯ ಎದುರೇ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಸಲ್ಮಾನ್‌ ಖಾನ್‌ ಹಾಗೂ ಬಾಬಾ ಸಿದ್ದಿಕಿ ಆತ್ಮೀಯ ಮಿತ್ರರಾಗಿದ್ದು ಸಿದ್ಧಿಕ್‌ ಸಾವು ಸಲ್ಮಾನ್‌ ಖಾನ್‌ಗೆ (Salman Khan) ಬಹಳ ನೋವು ಉಂಟು ಮಾಡಿದೆ ಎಂದು ಬಾಬಾ ಸಿದ್ದಿಕಿ ಮಗ ಜಿಶಾನ್‌ ಸಿದ್ದಕಿ ಹೇಳಿದ್ದಾರೆ.

ಇದನ್ನೂ ಓದಿ: Lawrence Bishnoi : ಸಲ್ಮಾನ್‌ ಖಾನ್‌ ಮುಟ್ಟಿದರೆ ತಲೆ ಹಾರಿಸುತ್ತೇನೆ; ವಿಡಿಯೊ ಮೂಲಕ ಗ್ಯಾಂಗ್‌ಸ್ಟರ್‌ ಬಿಷ್ಣೋಯ್‌ಗೇ ಬೆದರಿಕೆ!

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಘಟನೆಯ ನಂತರ ಸಲ್ಮಾನ್ ಭಾಯ್ ತುಂಬಾ ಬೇಸರಗೊಂಡಿದ್ದಾರೆ. ನನ್ನ ತಂದೆ ಮತ್ತು ಸಲ್ಮಾನ್ ಭಾಯ್ ನಿಜವಾದ ಸಹೋದರರಂತೆ ತುಂಬಾ ಆತ್ಮೀಯರಾಗಿದ್ದರು. ತಂದೆಯ ಮರಣದ ನಂತರ, ಭಾಯ್ ನಮಗೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಅವರು ಯಾವಾಗಲೂ ನನಗೆ ಕರೆ ಮಾಡುತ್ತಾರೆ ಮತ್ತು ರಾತ್ರಿಯಲ್ಲಿ ಅವರು ನನ್ನೊಂದಿಗೆ ಮಾತನಾಡುತ್ತಾರೆ. ಅವರ ಬೆಂಬಲ ಯಾವಾಗಲೂ ಇರುತ್ತದೆ ಮತ್ತು ಅದೇ ರೀತಿ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.

ಸಿದ್ದಿಕ್‌ ಹತ್ಯೆಯ ನಂತರ ಸಲ್ಮಾನ್‌ ಖಾನ್‌ಗೆ ಬೆದರಿಕೆ ಬಂದಿದ್ದು, ಬಿಷ್ಣೋಯ್‌ ಸಮಾಜದವರಿಗೆ ಸಲ್ಮಾನ್‌ ಕ್ಷಮೆ ಕೇಳಬೇಕು ಇಲ್ಲವಾದರೆ 5 ಕೋಟಿ ರೂಪಾಯಿ ನೀಡಬೇಕು ಎಂದು ಬೆದರಿಕೆ ಹಾಕಿದ್ದರು. ಸಿ