ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

AUS vs ENG: ಜಾಶ್‌ ಇಂಗ್ಲಿಸ್‌ ಶತಕ, ಇಂಗ್ಲೆಂಡ್‌ ವಿರುದ್ಧ ಹೈಸ್ಕೋರಿಂಗ್‌ ಪಂದ್ಯ ಗೆದ್ದ ಆಸ್ಟ್ರೇಲಿಯಾ!

Australia won by 5 Wickets against England: ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಶನಿವಾರ ನಡೆದಿದ್ದ ಹೈಸ್ಕೋರಿಂಗ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ದ ಆಸ್ಟ್ರೇಲಿಯಾ ತಂಡ 4 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಕಾಂಗರೂ ಪಡೆ ಶುಭಾರಂಭ ಕಂಡಿತು.

ಬೆನ್‌ ಡಕೆಟ್‌ ದಾಖಲೆಯ ಶತಕ ವ್ಯರ್ಥ, ಆಸ್ಟ್ರೇಲಿಯಾಗೆ ಶುಭಾರಂಭ!

ಶತಕ ಸಿಡಿಸಿ ಸಂಭ್ರಮಿಸಿದ ಬೆನ್‌ ಡಕೆಟ್‌ ಮತ್ತು ಜಾಶ್‌ ಇಂಗ್ಲಿಸ್‌.

Profile Ramesh Kote Feb 22, 2025 10:59 PM

ಲಾಹೋರ್‌: ಬೆನ್‌ ಡಕೆಟ್‌ (165 ರನ್‌) ಅವರ ದಾಖಲೆಯ ಶತಕದ ಹೊರತಾಗಿಯೂ ಬೌಲಿಂಗ್‌ ವೈಫಲ್ಯದಿಂದ ಇಂಗ್ಲೆಂಡ್‌ ತಂಡ 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 5 ವಿಕೆಟ್‌ ಸೋಲು ಅನುಭವಿಸಿದೆ. ಇಂಗ್ಲೆಂಡ್‌ ತಂಡ 352 ರನ್‌ಗಳ ಕಠಿಣ ಗುರಿ ಹಿಂಬಾಲಿಸಿದರೂ ಆಸ್ಟ್ರೇಲಿಯಾ ತಂಡ, ಜಾಶ್‌ ಇಂಗ್ಲಿಸ್‌ (120*) ಅಜೇಯ ಶತಕ ಮತ್ತು ಮ್ಯಾಥ್ಯೂ ಶಾರ್ಟ್‌ (63 ರನ್‌) ಹಾಗೂ ಅಲೆಕ್ಸ್‌ ಕೇರಿ (69 ರನ್)‌ ಅರ್ಧಶತಕಗಳ ಬಲದಿಂದ ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ಗೆದ್ದು ಸಂಭ್ರಮಿಸಿತು. ಆ ಮೂಲಕ ಸ್ಟೀವನ್‌ ಸ್ನಿತ್‌ ಪಡೆ 50 ಓವರ್‌ಗಳ ಮಹತ್ವದ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.

ಶನಿವಾರ ಇಲ್ಲಿನ ಗಡಾಫಿ ಕ್ರೀಡಾಂಗಣದಲ್ಲಿ ದಾಖಲೆಯ ಮೊತ್ತದ ಗುರಿಯನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ, ಟ್ರಾವಿಸ್‌ ಹೆಡ್‌ ಮತ್ತು ಸ್ಟೀವನ್‌ ಸ್ಮಿತ್‌ ಅವರ ವಿಕೆಟ್‌ಗಳನ್ನು ಬಹುಬೇಗ ಕಳೆದುಕೊಂಡಿತ್ತು. ಆ ಮೂಲಕ ಕೇವಲ 27 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ಮ್ಯಾಥ್ಯೂ ಶಾರ್ಟ್‌ ಮತ್ತು ಮಾರ್ನಸ್‌ ಲಾಬುಶೇನ್‌ 95 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. 47 ರನ್‌ ಗಳಿಸಿ ಮಾರ್ನಸ್‌ ಲಾಬುಶೇನ್‌ ಅರ್ಧಶತಕದಂಚಿನಲ್ಲಿ ಆದಿಲ್‌ ರಶೀದ್‌ಗೆ ವಿಕೆಟ್‌ ಒಪ್ಪಿಸಿದ್ದರು. ಸೊಗಸಾಗಿ ಬ್ಯಾಟ್‌ ಮಾಡುತ್ತಿದ್ದ ಮ್ಯಾಥ್ಯೂ ಶಾರ್ಟ್‌ 69 ಎಸೆತಗಳಲ್ಲಿ 63 ರನ್‌ ಗಳಿಸಿ ಲಿವಿಂಗ್‌ಸ್ಟೋನ್‌ಗೆ ಔಟ್‌ ಆಗಿದ್ದರು.

AUS vs ENG: ಆಸ್ಟ್ರೇಲಿಯಾ ವಿರುದ್ಧ 165 ರನ್‌ ಸಿಡಿಸಿ ಇತಿಹಾಸ ಸೃಷ್ಟಿಸಿದ ಬೆನ್‌ ಡಕೆಟ್‌!

ಜಾಶ್‌ ಇಂಗ್ಲಿಸ್‌ ಭರ್ಜರಿ ಶತಕ

ಆಸ್ಟ್ರೇಲಿಯಾ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಜಾಶ್‌ ಇಂಗ್ಲಿಸ್‌ ಬ್ಯಾಟಿಂಗ್‌. ಅವರು ತಮ್ಮ ವೃತ್ತಿ ಜೀವನದ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಅವರು 86 ಎಸೆತಗಳಲ್ಲಿ 6 ಸಿಕ್ಸರ್‌ ಹಾಗೂ 8 ಬೌಂಡರಿಗಳೊಂದಿಗೆ ಅಜೇಯ 120 ರನ್‌ ಗಳಿಸಿ ಆಸ್ಟ್ರೇಲಿಯಾ ತಂಡವನ್ನು ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. ಅಲ್ಲದೆ ಅಲ್ಲದೆ 63 ಎಸೆತಗಳಲ್ಲಿ 69 ರನ್‌ ಗಳಿಸಿ ಅಲೆಕ್ಸ್‌ ಕೇರಿ ಜೊತೆ 146 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಜಾಶ್‌ ಆಡಿದ್ದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಕೇವಲ 15 ಎಸೆತಗಳಲ್ಲಿ 32 ರನ್‌ಗಳನ್ನು ಚಚ್ಚಿದ್ದರು.



351 ರನ್‌ ಕಲೆ ಹಾಕಿದ ಇಂಗ್ಲೆಂಡ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಇಂಗ್ಲೆಂಡ್‌ ತಂಡ, ಬೆನ್‌ ಡಕೆಟ್‌ (165 ರನ್‌) ಶತಕ ಹಾಗೂ ಜೋ ರೂಟ್‌ (68 ರನ್)‌ ಅರ್ಧಶತಕದ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 351 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಆಸ್ಟ್ರೇಲಿಯಾ ತಂಡಕ್ಕೆ 352 ರನ್‌ಗಳ ಸವಾಲಿನ ಗುರಿಯನ್ನು ನೀಡುವನಲ್ಲಿ ಆಂಗ್ಲರು ಯಶಸ್ವಿಯಾದರು.

AUS vs ENG: ಅಪಾಯಕಾರಿ ಟ್ರಾವಿಸ್‌ ಹೆಡ್‌ರ ಸ್ಟನಿಂಗ್‌ ಕ್ಯಾಚ್‌ ಪಡೆದ ಜೋಫ್ರಾ ಆರ್ಚರ್‌! ವಿಡಿಯೊ

ಆರಂಭಿಕ ಆಘಾತ ಅನುಭವಿಸಿದ್ದ ಇಂಗ್ಲೆಂಡ್‌

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್‌ ಫಿಲ್‌ ಸಾಲ್ಟ್‌ ಕೇವಲ 10 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಜೇಮಿ ಸ್ಮಿತ್‌ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಅವರು ಕೇವಲ 15 ರನ್‌ ಗಳಿಸಿ ಔಟ್‌ ಆದರು. ಆ ಮೂಲಕ ಇಂಗ್ಲೆಂಡ್‌ 43 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಅಪಾಯಕ್ಕಿ ಸಿಲುಕಿತ್ತು.



ಡಕೆಟ್‌-ರೂಟ್‌ ಜುಗಲ್‌ಬಂದಿ

ಬಹುಬೇಗ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್‌ ತಂಡವನ್ನು ಬೆನ್‌ ಡಕೆಟ್‌ ಹಾಗೂ ಜೋ ರೂಟ್‌ ತಮ್ಮ ಸೊಗಸಾದ ಬ್ಯಾಟಿಂಗ್‌ ಮೂಲಕ ಮೇಲೆತ್ತಿದ್ದರು. ಆಸೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದ ಈ ಇಬ್ಬರೂ ಮುರಿಯದ ಮೂರನೇ ವಿಕೆಟ್‌ಗೆ 158 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಇಂಗ್ಲೆಂಡ್‌ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಅದ್ಭುತ ಬ್ಯಾಟ್‌ ಮಾಡಿದ ಜೋ ರೂಟ್‌, 78 ಎಸೆತಗಳಲ್ಲಿ ನಾಲ್ಕು ಬೌಂಡರಿಗಳೊಂದಿಗೆ 68 ರನ್‌ ಗಳಿಸಿ ಆಡಂ ಝಾಂಪ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.



ದಾಖಲೆಯ ಶತಕ ಸಿಡಿಸಿದ ಬೆನ್‌ ಡಕೆಟ್‌

ಇಂಗ್ಲೆಂಡ್‌ ಇನಿಂಗ್ಸ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ಆರಂಭಿಕ ಬೆನ್‌ ಡಕೆಟ್‌. ಜೋ ರೂಟ್‌ ಬಿಟ್ಟರೆ, ಒಂದು ಕಡೆ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದರೂ, ಮತ್ತೊಂದು ಕಡೆ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿದ ಬೆನ್‌ ಡಕೆಟ್‌, ಮನಮೋಹಕ ಶತಕವನ್ನು ಸಿಡಿಸಿದರು. ಆ ಮೂಲಕ ಇಂಗ್ಲೆಂಡ್‌ ತಂಡ 350ಕ್ಕೂ ಅಧಿಕ ರನ್‌ ಕಲೆ ಹಾಕುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಇವರು ಮಾರ್ನಸ್‌ ಲಾಬುಶೇನ್‌ಗೆ ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಆಡಿದ್ದ 143 ಎಸೆತಗಳಲ್ಲಿ ಮೂರು ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 165 ರನ್‌ಗಳನ್ನು ಸಿಡಿಸಿದ್ದರು. ಆ ಮೂಲಕ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ನೂತನ ಮೈಲುಗಲ್ಲು ಸ್ಥಾಪಿಸಿದ್ದರು.

IND vs PAK: ವರುಣ್‌ ಚಕ್ರವರ್ತಿ ಇನ್‌? ಭಾರತದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ನಿರೀಕ್ಷೆ!

ಸ್ಕೋರ್‌ ವಿವರ

ಇಂಗ್ಲೆಂಡ್‌: 50 ಓವರ್‌ಗಳಿಗೆ 351-8 (ಬೆನ್‌ ಡಕೆಟ್‌ 165, ಜೋ ರೂಟ್‌ 68, ಜೋಸ್‌ ಬಟ್ಲರ್‌ 23, ಜೋಫ್ರಾ ಆರ್ಚರ್‌ 21; ಬೆನ್ ದ್ವಾರ್ಶುಯಿಸ್ 66ಕ್ಕೆ 3, ಆಡಂ ಝಾಂಪ 64ಕ್ಕೆ 2)

ಆಸ್ಟ್ರೇಲಿಯಾ: 47.3 ಓವರ್‌ಗಳಲ್ಲಿ 356-5 (ಜಾಶ್‌ ಇಂಗ್ಲಿಸ್‌ 120*, ಅಲೆಕ್ಸ್‌ ಕೇರಿ 69, ಮ್ಯಾಥ್ಯೂ ಶಾರ್ಟ್‌ 63, ಗ್ಲೆನ್‌ ಮ್ಯಾಕ್ಸ್‌ವೆಲ್‌ 32*; ಆದಿಲ್‌ ರಶೀದ್‌ 47 ಕ್ಕೆ 1)

ಪಂದ್ಯ ಶ್ರೇಷ್ಠ ಪ್ರಶಸ್ತಿ: ಜಾಶ ಇಂಗ್ಲಿಸ್‌