ಐಎಪಿಎಂಒ ಇಂಡಿಯಾದಲ್ಲಿ ಪ್ರತಿದಿನ 10,000 ಲೀಟರ್ ನೀರು ಮರುಬಳಕೆ ಮಾಡುವ ಬೋಸಾನ್ ವೈಟ್ ವಾಟರ್ ವ್ಯವಸ್ಥೆ ಸ್ಥಾಪನೆ
ಬೋಸನ್ ವೈಟ್ವಾಟರ್, ಜಾಗತಿಕ ಮಟ್ಟದಲ್ಲಿ ಪ್ಲಂಬಿಂಗ್, ಮೆಕ್ಯಾನಿಕಲ್ ಮತ್ತು ನೀರಿನ ಗುಣ ಮಟ್ಟದ ಪ್ರಮಾಣೀಕರಣಕ್ಕೆ ಹೆಸರುವಾಸಿಯಾದ ಐಎಪಿಎಮ್ಒ ಇಂಡಿಯಾ ಜೊತೆ ಒಪ್ಪಂದದ ಒಡಂಬಡಿಕೆ (MoU) ಮಾಡಿಕೊಂಡಿತ್ತು. ಈ ಒಪ್ಪಂದದ ಮೂಲಕ ಮರುಬಳಕೆಯಾದ ನೀರಿನ ಪ್ರಮಾಣೀಕರಣ, ದೃಢೀಕರಣ ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿ ಸಹಯೋಗ ಮಾಡಲು ನಿರ್ಧರಿಸಲಾಗಿತ್ತು.


ಐಎಪಿಎಂಒ ಇಂಡಿಯಾದ ಬೆಂಗಳೂರು ಘಟಕವು ಶೂನ್ಯ ದ್ರವ ವಿಸರ್ಜನೆ ಆವರಣ ವಾಗಲಿದೆ ಮತ್ತು ವಾರ್ಷಿಕವಾಗಿ 32 ಲಕ್ಷ ಲೀಟರ್ ನೀರನ್ನು ಮರುಬಳಕೆ ಮಾಡುತ್ತದೆ
ಬೆಂಗಳೂರು: ಎಸ್ಟಿಪಿ ಸಂಸ್ಕರಿಸಿದ ನೀರನ್ನು ಉತ್ತಮ ಗುಣಮಟ್ಟದ ಕುಡಿಯುವ ನೀರಾಗಿ ಪರಿವರ್ತಿಸುವ ವಾಟರ್ ಯುಟಿಲಿಟಿ ಕಂಪನಿ ಬೋಸನ್ ವೈಟ್ ವಾಟರ್, ಬೆಂಗಳೂರಿನ ಎಲೆಕ್ಟ್ರಾ ನಿಕ್ ಸಿಟಿಯಲ್ಲಿರುವ ಐಎಪಿಎಂಒ (ದಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ಲಂಬಿಂಗ್ ಆ್ಯಂಡ್ ಮೆಕ್ಯಾನಿಕಲ್ ಆಫೀಸರ್ಸ್) ಆವರಣದಲ್ಲಿ, ತನ್ನ ಸುಧಾರಿತ ಮರುಬಳಕೆ ನೀರಿನ ವ್ಯವಸ್ಥೆ ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯು ಪ್ರತಿನಿತ್ಯ 10,000 ಲೀಟರ್ ಮತ್ತು ವಾರ್ಷಿಕವಾಗಿ 32 ಲಕ್ಷ ಲೀಟರ್ ನೀರನ್ನು ಮರುಬಳಕೆ ಮಾಡಬಲ್ಲದು. ಈ ಮೂಲಕ ಐಎಪಿಎಂಒ ಇಂಡಿಯಾ ಜೀರೊ ಲಿಕ್ವಿಡ್ ಡಿಸ್ಚಾರ್ಜ್ ಝಡ್ಎಲ್ಡಿ) ಆವರಣವಾಗಿ ಪರಿವರ್ತನೆಗೊಳ್ಳಲಿದೆ.
ರಿಯಲ್ ಟೈಮ್ ಮಾನಿಟರಿಂಗ್ ಮತ್ತು ಇರುವ ಜಾಗದಲ್ಲಿಯೇ ನಿಯಂತ್ರಿಸಬಹುದಾದ ಇಂಟರ್ನೆಟ್ ಆಫ್ ಥಿಂಗ್ಸ್ ಜತೆ ಸಂಯೋಜನೆ ಹೊಂದಿರುವ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಬೋಸಾನ್ ವೈಟ್ವಾಟ್ ಹೊಂದಿದ್ದು, ಇದು 11 ಹಂತದಲ್ಲಿ ನೀರನ್ನು ಶುದ್ಧೀಕರಿಸುತ್ತದೆ.
ಇದನ್ನೂ ಓದಿ: Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ಈ ವ್ಯವಸ್ಥೆ ಐಎಪಿಎಂಒ ಇಂಡಿಯಾ ಆವರಣದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಿಸಿ ಸಂಪೂರ್ಣವಾಗಿ ಮರುಬಳಕೆ ಮಾಡಲು ನೆರವಾಗುತ್ತದೆ. ಹೊಸ ಸಹಭಾಗಿತ್ವವು, ಸುಸ್ಥಿರ ಹಾಗೂ ಪರಿಣಾಮಕಾರಿ ನೀರು ಉಳಿಸುವ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮತ್ತು ಪ್ರತಿಪಾದಿಸುವ ಎರಡೂ ಸಂಸ್ಥೆಗಳ ಬದ್ಧತೆಗೆ ಪೂರಕವಾಗಿದೆ.
ಬೋಸನ್ ವೈಟ್ವಾಟರ್, ಜಾಗತಿಕ ಮಟ್ಟದಲ್ಲಿ ಪ್ಲಂಬಿಂಗ್, ಮೆಕ್ಯಾನಿಕಲ್ ಮತ್ತು ನೀರಿನ ಗುಣ ಮಟ್ಟದ ಪ್ರಮಾಣೀಕರಣಕ್ಕೆ ಹೆಸರುವಾಸಿಯಾದ ಐಎಪಿಎಮ್ಒ ಇಂಡಿಯಾ ಜೊತೆ ಒಪ್ಪಂದದ ಒಡಂಬಡಿಕೆ (MoU) ಮಾಡಿಕೊಂಡಿತ್ತು. ಈ ಒಪ್ಪಂದದ ಮೂಲಕ ಮರುಬಳಕೆಯಾದ ನೀರಿನ ಪ್ರಮಾಣೀಕರಣ, ದೃಢೀಕರಣ ಮತ್ತು ಸುರಕ್ಷತೆ ಕ್ಷೇತ್ರಗಳಲ್ಲಿ ಸಹಯೋಗ ಮಾಡಲು ನಿರ್ಧರಿಸ ಲಾಗಿತ್ತು.
ಐಎಮ್ಪಿಒ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಕೆ. ಚಂದ್ರಶೇಖರ್ ಮಾತನಾಡಿ, "ಬೋಸನ್ ವೈಟ್ವಾಟರ್ ಜೊತೆ ನಮ್ಮ ಸಹಯೋಗ ತಂತ್ರಜ್ಞಾನದ ಮಿತಿ ಮೀರಿದ್ದು, ಸುಸ್ಥಿರ ಜಲಬಳಕೆ ಮತ್ತು ಸಂಪನ್ಮೂಲಗಳ ಪುನರ್ಬಳಕೆಗೆ ಒಂದು ಮಾದರಿ ಎನಿಸಿಕೊಳ್ಳಲಿದೆ. ಬೋಸಾನ್ನ ಶುದ್ಧೀಕರಣ ವ್ಯವಸ್ಥೆಯನ್ನು ಸ್ಥಾಪಿಸುವ ಮೂಲಕ ನಾವು ಕೇವಲ ನಮ್ಮ ಪರಿಸರಕ್ಕೆ ಕೊಡುವುದಕ್ಕಿಂತ ಹೆಚ್ಚಾಗಿ, ಸುಸ್ಥಿರ ಮರುಬಳಕೆ ನೀರು ವ್ಯವಸ್ಥೆಗಳನ್ನು ಬಳಸಿ ಜೀರೊ ಲಿಕ್ವಿಡ್ ಡಿಸ್ಚಾರ್ಜ್ (ಶೂನ್ಯ ದ್ರವ ವಿಸಜರ್ನೆ) ಸಾಧ್ಯವಿದೆ ಎಂಬುದನ್ನು ಪ್ರಾಯೋಗಿಕವಾಗಿ ತೋರಿಸು ತ್ತಿದ್ದೇವೆ," ಎಂದು ಹೇಳಿದರು.
ಬೋಸಾನ್ ವೈಟ್ ವಾಟರ್ನ ಸಿಇಒ ಮತ್ತು ಸಹ- ಸಂಸ್ಥಾಪಕ ವಿಕಾಸ್ ಬ್ರಹ್ಮಾವರ್ ಮಾತನಾಡಿ, "ಐಎಪಿಎಂಒ ಇಂಡಿಯಾದೊಂದಿಗಿನ ನಮ್ಮ ಪಾಲುದಾರಿಕೆಯಲ್ಲಿ ಈ ಸ್ಥಾಪನೆಯು ಒಂದು ವಿಶೇಷ ಮೈಲುಗಲ್ಲಾಗಿದೆ. ಇದು ತಂತ್ರಜ್ಞಾನ ಚಾಲಿತ ನೀರಿನ ಮರುಬಳಕೆಯ ನೈಜ-ಪ್ರಪಂಚದ ಪರಿಣಾಮವನ್ನು ಪ್ರದರ್ಶಿಸುತ್ತದೆ. ನಮ್ಮ ಈ ಪರಿಹಾರವು ಗಮನಾರ್ಹ ವ್ಯತ್ಯಾಸವನ್ನು ಉಂಟುಮಾಡುವುದನ್ನು, ತ್ಯಾಜ್ಯ ನೀರನ್ನು ಆಸ್ತಿಯಾಗಿ ಪರಿವರ್ತಿಸುವುದನ್ನು ಮತ್ತು ಭಾರತದಲ್ಲಿ ತ್ಯಾಜ್ಯ ನೀರನ್ನು ಉಪಯುಕ್ತ ನೀರಾಗಿ ಪರಿವರ್ತಿಸುವ ವರ್ತುಲಕ್ಕೆ ಪಥ ನಿರ್ಮಿಸಿಕೊಡಲು ಉತ್ಸುಕರಾಗಿದ್ದೇವೆ,'' ಎಂದು ಹೇಳಿದರು. ಐಎಪಿಎಮ್ಒ ಇಂಡಿಯಾ ಬಗ್ಗೆ ಅಮೆರಿಕದ ಕ್ಯಾಲಿ ಫೋರ್ನಿಯಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಎಪಿಎಂಒ (ದಿ ಇಂಟರ್ನ್ಯಾಷನಲ್ ಅಸೋಸಿಯೇಷನ್ ಆಫ್ ಪ್ಲಂಬಿಂಗ್ ಅಂಡ್ ಮೆಕ್ಯಾನಿಕಲ್ ಆಫೀಸರ್ಸ್) ಸುಮಾರು 100 ವರ್ಷಗಳಷ್ಟು ಹಳೆಯ ಬಹುರಾಷ್ಟ್ರೀಯ ಲಾಭರಹಿತ ಸಂಸ್ಥೆಯಾಗಿದೆ.
ಪ್ರಮಾಣಿತ ಅಭಿವೃದ್ಧಿ, ಉತ್ಪನ್ನ ಪ್ರಮಾಣೀಕರಣ ಮತ್ತು ಕಾರ್ಯಪಡೆ ತರಬೇತಿಯ ಮೂಲಕ, ಐಎಪಿಎಂಒ ಜಾಗತಿಕವಾಗಿ ಆರೋಗ್ಯ ಮತ್ತು ಸುರಕ್ಷತೆಯನ್ನು ಉತ್ತೇಜಿಸುತ್ತದೆ. 2008ರಲ್ಲಿ ಸ್ಥಾಪನೆಯಾದ ಐಎಪಿಎಂಒ ಇಂಡಿಯಾ, ಸಂಸ್ಥೆಯ ಜಾಗತಿಕ ಧ್ಯೇಯಕ್ಕೆ ಪೂರಕವಾಗಿ. ಕೊಳಾಯಿ ಮತ್ತು ನೀರು ಸಂಸ್ಕರಣಾ ಉತ್ಪನ್ನಗಳ ಪರೀಕ್ಷೆ ಮತ್ತು ಪ್ರಮಾಣೀಕರಣ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತದೆ. https://iapmo.org ಬೋಸನ್ ವೈಟ್ ವಾಟರ್ ಬಗ್ಗೆ ಬೋಸನ್ ವೈಟ್ ವಾಟರ್ ಎಂಬುದು ಕೈಗಾರಿಕೆಗಳು, ಐಟಿ ಪಾರ್ಕ್ ಗಳು, ಮಾಲ್ಗಳು ಮತ್ತು ಅಪಾರ್ಟ್ ಮೆಂಟ್ ಸಮುದಾಯಗಳು ತಮ್ಮ ತ್ಯಾಜ್ಯ ನೀರನ್ನು ಮರುಬಳಕೆ ಮಾಡುವ ವಿಧಾನವನ್ನು ಬದಲಾಯಿಸುವ ಉದ್ದೇಶದಿಂದ ಸ್ಥಾಪಿಸಲಾದ ವಾಟರ್ ಯುಟಿಲಿಟಿ ಕಂಪನಿ.
ಬೋಸಾನ್ ವೈಟ್ ವಾಟರ್ ವ್ಯವಸ್ಥೆಯು 11 ಹಂತದ ಹಂತದ ಫಿಲ್ಟರಿಂಗ್ ವ್ಯವಸ್ಥೆ ಒದಗಿಸುತ್ತದೆ . ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಸೌಲಭ್ಯದೊಂದಿಗೆ ನೀರಿನ ಗುಣಮಟ್ಟ ಮತ್ತು ಪ್ರಮಾಣವನ್ನು ರಿಯಲ್-ಟೈಮ್‌ನಲ್ಲಿ ಮೇಲ್ವಿಚಾರಣೆ ಮಾಡಲು ಮತ್ತು ಮಾನವರಹಿತ ರಿಮೋಟ್ ಆಕ್ಸೆಸ್‌ಗೆ ಅವಕಾಶ ನೀಡುತ್ತದೆ.