Harassment: ಹೆಣ್ಣುಮಕ್ಕಳ ಪೀಡನೆ, ಬೀದಿ ಕಾಮುಕನಿಗೆ ಬೆಂಗಳೂರಿನಲ್ಲಿ ಧರ್ಮದೇಟು
Harassment: ಮಹಿಳೆಯರನ್ನು ಚುಡಾಯಿಸುತ್ತಾ, ಅವರ ಫೋಟೋಗಳನ್ನು ತೆಗೆಯುತ್ತಿದ್ದ ಬೀದಿ ಕಾಮುಕನನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆಯುತ್ತಿದ್ದಾಗ ಈತ ಸಿಕ್ಕಿಬಿದ್ದಿದ್ದಾನೆ. ಕಾಮುಕನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ನೂರಾರು ಅಶ್ಲೀಲ ಫೋಟೋಗಳು ಇರುವುದನ್ನು ಕಂಡು ಜನರು ಬೆಚ್ಚಿಬಿದ್ದರು.


ಬೆಂಗಳೂರು: ಬೆಂಗಳೂರಿನಲ್ಲಿ (Bengaluru news) ಹಾಡಹಗಲೇ ಮಹಿಳೆಯರಿಗೆ ಕಾಟ ನೀಡುವ (harassment) ಕಾಮುಕರ ಉಪಟಳ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳು ಕರಾಟೆ ಕಲಿಯಲೇಬೇಕಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಬೆಂಗಳೂರಿನ ಹೃದಯಭಾಗವಾದ ಟೌನ್ಹಾಲ್ (town hall) ಬಳಿಯೇ ಇಂತಹ ಘಟನೆ ನಡೆದಿದ್ದು, ಮಹಿಳೆಯ ಖಾಸಗಿ ಭಾಗದ ಫೋಟೋ ತೆಗೆಯಲು ಹೊಂಚು ಹಾಕುತ್ತಿದ್ದ ಪುಂಡನನ್ನು (harasser) ಸಾರ್ವಜನಿಕರು ರೆಡ್‌ಹ್ಯಾಂಡೆಡ್ ಆಗಿ ಹಿಡಿದು ಥಳಿಸಿದ್ದಾರೆ.
ಎಸ್ ಜೆ ಪಾಳ್ಯ ಹಾಗೂ ಮಾರತಹಳ್ಳಿಯಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗಿದ್ದವು. ಮಾರತಹಳ್ಳಿಯಲ್ಲಿ ಮಹಿಳೆಯ ಮೈತಡವಿ ಪರಾರಿಯಾಗಿದ್ದ ಕಾಮುಕನನ್ನು ತಮಿಳುನಾಡಿನಲ್ಲಿ ಪೊಲೀಸರು ಹೆಡೆಮುರಿ ಕಟ್ಟಿ ಎಳೆತಂದಿದ್ದರು. ಪೊಲೀಸರು ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದರೂ ಕಾಮುಕ ಪುಂಡರಿಗೆ ಭಯ ಮೂಡಿಲ್ಲ ಎಂದು ಹೊಸ ಪ್ರಕರಣಗಳು ರುಜುವಾತುಪಡಿಸುತ್ತಿವೆ.
ಮಹಿಳೆಯರನ್ನು ಚುಡಾಯಿಸುತ್ತಾ, ಅವರ ಫೋಟೋಗಳನ್ನು ತೆಗೆಯುತ್ತಿದ್ದ ಬೀದಿ ಕಾಮುಕನನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಹಿಳೆಯ ಖಾಸಗಿ ಫೋಟೋಗಳನ್ನು ತೆಗೆಯುತ್ತಿದ್ದಾಗ ಈತ ಸಿಕ್ಕಿಬಿದ್ದಿದ್ದಾನೆ. ಮಹಿಳಾ ಹೋಂಗಾರ್ಡ್ ಸೇರಿದಂತೆ ಸಾರ್ವಜನಿಕರು ಸೇರಿ ಕಾಮುಕನನ್ನು ರೆಡ್ ಹ್ಯಾಂಡ್ ಆಗಿ ಲಾಕ್ ಮಾಡಿದ್ದಾರೆ. ಕಾಮುಕನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ನೂರಾರು ಅಶ್ಲೀಲ ಫೋಟೋಗಳು ಇರುವುದನ್ನು ಕಂಡು ಜನರು ಬೆಚ್ಚಿಬಿದ್ದರು. ಟೌನ್ ಹಾಲ್‌ನಿಂದ ಕೆ.ಆರ್ ಮಾರ್ಕೆಟ್‌ಗೆ ಹೋಗುವ ರಸ್ತೆಯ ಅಂಡರ್ ಪಾಸ್ ಸಬ್ ವೇನಲ್ಲಿ ಕೂತು ಈತ ಹುಡುಗಿಯರ ಫೋಟೋಗಳನ್ನು ತೆಗೆಯುತ್ತಿದ್ದ ಎಂದು ತಿಳಿದುಬಂದಿದ್ದು, ಈತನನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ.
ಇದನ್ನೂ ಓದಿ: Viral Video: ಬೀದಿ ಶ್ವಾನಗಳ ಮೇಲೆ ಪೈಶಾಚಿಕ ಕೃತ್ಯ! ಕಿಡಿಗೇಡಿಗೆ ಬಿತ್ತು ಗೂಸಾ- ವಿಡಿಯೊ ವೈರಲ್