ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Vijay: ಇಸ್ಲಾಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾದ ನಟ ವಿಜಯ್- ಏನಿದು ವಿವಾದ?

ಪಕ್ಷದ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ನಟ ದಳಪತಿ ವಿಜಯ್(Actor Vijay) ಮುಂದಿನ ಚುನಾವಣೆಗೆ ಸಕಲ ಸಿದ್ಧತೆಯಲ್ಲಿಯೂ ತೊಡಗಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಗೆ ಸಜ್ಜಾಗಿರುವ ವಿಜಯ್‌ ಪಕ್ಷದ ವಿರುದ್ಧ ಮುಸ್ಲಿಂ ಧರ್ಮಗುರು ಒಬ್ಬರು ಫತ್ವಾ ಹೊರಡಿಸಿದ್ದಾರೆ. ನಟ ದಳಪತಿ ವಿಜಯ್‌ಗೆ ಮುಸ್ಲಿಮರು ಯಾವುದೇ ತರನಾಗಿ ಬೆಂಬಲ ನೀಡಬಾರದು ಎಂದು ಮೌಲಾನಾ ಶಹಾಬುದ್ದೀನ್ ತಮಿಳುನಾಡು ಮುಸ್ಲಿಮರಿಗೆ ಆದೇಶಿಸಿದ್ದಾರೆ.

ನಟ ವಿಜಯ್ ಇಫ್ತರ್ ಕೂಟಕ್ಕೆ ಆಗಮಿಸದಂತೆ ಧರ್ಮಗುರು ಫತ್ವಾ!

Fatwa Against Tamil Actor

Profile Pushpa Kumari Apr 18, 2025 5:03 PM

ನವದೆಹಲಿ: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್‌ (Actor Vijay) ಇತ್ತೀಚೆಗೆ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಯಲ್ಲಿರುತ್ತಾರೆ. ತಮಿಳುನಾಡಿನಲ್ಲಿ ವೆಟ್ರಿ ಕಳಗಂ ಪಕ್ಷ ಕಟ್ಟಿ ರಾಜಕೀಯ ಜೀವನ ಆರಂಭಿಸಿದ್ದ ಖ್ಯಾತ ನಟ ವಿಜಯ್‌ ಸಿನಿಮಾ ದೊಂದಿಗೆ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಪಕ್ಷ ಪ್ರಚಾರ ಕಾರ್ಯದಲ್ಲಿ ನಿರತರಾಗಿರುವ ನಟ ದಳಪತಿ ವಿಜಯ್ ಮುಂದಿನ ಚುನಾವಣೆಗೆ ಸಕಲ ಸಿದ್ಧತೆಯಲ್ಲಿಯೂ ತೊಡಗಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ವಿಜಯ್‌ ಪಕ್ಷದ  ವಿರುದ್ಧ ಮುಸ್ಲಿಂ ಧರ್ಮಗುರು ಒಬ್ಬರು ಫತ್ವಾ ಹೊರಡಿಸಿದ್ದಾರೆ. ನಟ ದಳಪತಿ ವಿಜಯ್‌ಗೆ ಮುಸ್ಲಿಮರು ಯಾವುದೇ ತರನಾಗಿ ಬೆಂಬಲ ನೀಡಬಾರದು, ಈ ಇಫ್ತಾರ್‌ ಕೂಟದಲ್ಲಿ ಯಾರು ಪಾಲ್ಗೊಳ್ಳಬಾರದು ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಧರ್ಮ ಗುರು ಶಹಾಬುದ್ದೀನ್ ತಮಿಳುನಾಡು ಮುಸ್ಲಿಮರಿಗೆ ಆದೇಶಿಸಿದ್ದಾರೆ

ನಟ ದಳಪತಿ ವಿಜಯ್ ಪಕ್ಷದ ಏಳ್ಗೆಗಾಗಿ ಮುಸ್ಲಿಮರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಇಟ್ಟುಕೊಂಡಿದ್ದು ಆಗಾಗ ಅನೇಕ ಕಾರ್ಯಕ್ರಮದಲ್ಲಿಯೂ ಭಾಗವಹಿಸುತ್ತಿರುತ್ತಾರೆ. ನಟ ವಿಜಯ್ ಇತ್ತೀಚೆಗಷ್ಟೇ ಚೆನ್ನೈನ ರಾಯ ಪೆಟ್ಟಾದ ವೈಎಂ ಸಿಎ ಕ್ರೀಡಾಂಗಣದಲ್ಲಿ ಪಕ್ಷದ ವತಿಯಿಂದ ಇಫ್ತಾರ್ ಕೂಟ ಆಯೋಜಿಸಿದ್ದರು. ದಳಪತಿ ವಿಜಯ್ ಮುಸ್ಲಿಂ ವಿರೋಧಿ ಭಾವನೆ ಹೊಂದಿದ್ದು ಈ  ಕಾರ್ಯಕ್ರಮಕ್ಕೆ ಮುಸ್ಲಿಂ ಬಾಂಧವರು ಹೋಗಬಾರದು ಮತ್ತು ನಟ ವಿಜಯ್ ನನ್ನು ಮುಸ್ಲಿಂ ಧಾರ್ಮಿಕ ಕಾರ್ಯ ಕ್ರಮಗಳಿಗೆ ಆಹ್ವಾನಿಸಬಾರದು ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಫತ್ವಾ ಹೊರಡಿಸಿದ್ದಾರೆ.

ಸಿನಿಮಾ ಹಿನ್ನೆಲೆ ಇದ್ದ ನಟ ವಿಜಯ್ ರಾಜಕೀಯ ಪಕ್ಷದ ಉದ್ದೇಶಕ್ಕೆ ಸರ್ವಧರ್ಮ ಪಾಲನೆ ಮಾಡುತ್ತಿರಬಹುದು. ಅವರು ಮುಸ್ಲಿಂ ಪರ ಇದ್ದಾರೆ ಎಂಬುದೇ ಸುಳ್ಳು. ವಿಜಯ್ ಅನೇಕ ಸಿನಿಮಾದಲ್ಲಿ  ಮುಸ್ಲಿಮರನ್ನು ಭಯೋತ್ಪಾದನೆ ಹರಡುವವ ರಂತೆ ನಕಾರಾತ್ಮಕ ರೀತಿಯಲ್ಲಿ ತೋರಿಸಲಾಗಿದೆ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್‌ನ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಸ್ಲಾಮಿಕ್ ಮೌಲ್ಯಗಳನ್ನು ನಂಬಿಕೊಂಡು ಬಂದ ಮುಸ್ಲಿಮರಿಗೆ ಇಫ್ತಾರ್‌ ಕೂಟ ಒಂದು ಪವಿತ್ರ ಆಚರಣೆಯಾಗಿದೆ. ಆದರೆ ನಟ, ರಾಜಕೀಯ ಪಕ್ಷದ ಅಧ್ಯಕ್ಷ ವಿಜಯ್ ಇಫ್ತರ್ ಕೂಟದಲ್ಲಿ ಮುಸ್ಲಿಂಮರ ಪವಿತ್ರ ಭಾವನೆಗೆ ಧಕ್ಕೆ ತರುವ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ. ಇವರ ಕೂಟಕ್ಕೆ ಪವಿತ್ರ ಉಪವಾಸ ಆಚರಿಸದೆ ಇರುವವರು, ಇಸ್ಲಾಮಿಕ್ ಪದ್ಧತಿಗಳನ್ನು ಅನುಸರಿಸದ ಇರುವವರು ಸಹ ಭಾಗವಹಿಸಲಿದ್ದಾರೆ. ರಾಜಕೀಯ ಉದ್ದೇಶಕ್ಕೆ ನಮ್ಮ ಧಾರ್ಮಿಕ ಆಚಾರ ವಿಚಾರ ಅನಾಚಾರ ಮಾಡಲು ಬಿಡಲಾರೆವು ಹಾಗಾಗಿ ಯಾರೂ ಕೂಡ ಈ ಕೂಟಕ್ಕೆ ಬೆಂಬಲಿಸಬಾರದು ಎಂದು ತಮಿಳುನಾಡು ಮುಸ್ಲಿಮರಿಗೆ ಆದೇಶಿಸಿದ್ದಾರೆ..

ಇದನ್ನು ಓದಿ: Edagaiye Apaghatakke Karana Movie: ದಿಗಂತ್ ಅಭಿನಯದ ʼಎಡಗೈಯೇ ಅಪಘಾತಕ್ಕೆ ಕಾರಣʼ ಚಿತ್ರ ಶೀಘ್ರ ತೆರೆಗೆ

ಕಾಲಿವುಡ್ ನಟ ದಳಪತಿ ವಿಜಯ್ ಅವರು ರಾಜಕೀಯ ಕೆಲಸಗಳಲ್ಲಿ ಸಕ್ರಿಯಾದ ಜೊತೆಗೆ ಸಿನಿಮಾದಲ್ಲೂ‌ ಬ್ಯುಸಿ ಇದ್ದಾರೆ. ಇವರ ಅಭಿನಯದ ಜನನಾಯಗನ್ ಸಿನಿಮಾದ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದೆ. ಫಸ್ಟ್ ಲುಕ್ ನೋಡಿದ ಅಭಿಮಾನಿಗಳಿಗೆ ಜನನಾಯಗನ್ ಸಿನೆಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಬಳಿಕ ನಟ ವಿಜಯ್ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ತಾರೆ ಎನ್ನುವ ಸುದ್ದಿ ಕೂಡ ಕೇಳಿಬರುತ್ತಿದೆ. ಆದರೆ ನಟ ವಿಜಯ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.