ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kavita Krishnamurthy: ಪಾಕಿಸ್ತಾನಿ ಕಲಾವಿದರ ಮೇಲೆ ಬ್ಯಾನ್‌- ಹಿರಿಯ ಗಾಯಕಿ ಕವಿತಾ ಕೃಷ್ಣಮೂರ್ತಿ ಅಚ್ಚರಿ ಹೇಳಿಕೆ

Pakistani Artists Ban In India: ಗಾಯಕಿ ಕವಿತಾ ಕೃಷ್ಣಮೂರ್ತಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಹೆಚ್ಚು ಸುದ್ದಿಯಲ್ಲಿದ್ದಾರೆ. ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಗೆ ಈಗಾಗಲೇ ನಿಷೇಧ ಹೇರಲಾಗುತ್ತಿದ್ದು ಸಂಗೀತ ಕ್ಷೇತ್ರದ ಮೇಲೂ ಈ ನಿಷೇಧ ಗಂಭೀರ ಪರಿಣಾಮ ಬೀರಲಿದೆ ಎಂದು ಗಾಯಕಿ ಕವಿತಾ ಕೃಷ್ಣಮೂರ್ತಿ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಸಂಗೀತಕ್ಕೆ ಧರ್ಮವಿಲ್ಲ ಎಂದ ಗಾಯಕಿ ಕವಿತಾ ಕೃಷ್ಣಮೂರ್ತಿ

Profile Pushpa Kumari May 1, 2025 3:09 PM

ನವದೆಹಲಿ: ಐದು ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್ ಸೇರಿದಂತೆ ಅನೇಕ ಭಾಷೆಗಳಲ್ಲಿ ಮಧುರವಾಗಿ ಹಾಡಿ ಅಭಿ ಮಾನಿಗಳ ಮನಗೆದ್ದ ಗಾಯಕಿ ಕವಿತಾ ಕೃಷ್ಣಮೂರ್ತಿ (Kavita Krishnamurthy) ಸಿನಿಮಾ ಹಾಡು, ಲೈವ್ ಶೋ ಮೂಲಕ ಪ್ರಸಿದ್ಧಿ ಪಡೆದವರು. ಗಾಯಕಿ ಕವಿತಾ ಕೃಷ್ಣಮೂರ್ತಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಹೆಚ್ಚು ಸುದ್ದಿ ಯಲ್ಲಿದ್ದಾರೆ. ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಗೆ ಈಗಾಗಲೇ ನಿಷೇಧ ಹೇರಲಾಗುತ್ತಿದ್ದು ಸಂಗೀತ ಕ್ಷೇತ್ರದ ಮೇಲೂ ಈ ನಿಷೇಧ ಗಂಭೀರ ಪರಿಣಾಮ ಬೀರಲಿದೆ ಎಂದು ಗಾಯಕಿ ಕವಿತಾ ಕೃಷ್ಣಮೂರ್ತಿ ಇತ್ತೀಚಿನ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹಿಂದಿ, ಬಂಗಾಳಿ, ಕನ್ನಡ, ಭೋಜ್ ಪುರಿ, ತೆಲುಗು ಸೇರಿದಂತೆ 45 ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುಗಳನ್ನು ಹಾಡಿದ್ದ ಗಾಯಕಿ ಇತ್ತೀಚೆಗಷ್ಟೆ ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು ಅನೇಕ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಸಂಗೀತಕ್ಕೆ ಯಾವುದೇ ಭಾಷೆ ಅಥವಾ ಅಡೆತಡೆಗಳಿಲ್ಲ. ಸಂಗೀತಕ್ಕೆ ಯಾವುದೇ ಧರ್ಮವಿಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಭಾರತದಲ್ಲಿಯೇ ಸಾಕಷ್ಟು ಪ್ರತಿಭೆಗಳಿದ್ದು ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಅಂತವರಿಗೆ ಅವಕಾಶ ನೀಡಿ ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಭಾರತದಲ್ಲಿ ಪಾಕಿಸ್ತಾನಿ ಕಲಾವಿದರಿಗೆ, ಗಾಯಕರಿಗೆ  ಈ ಹಿಂದಿನಿಂದಲೂ ಸಾಕಷ್ಟು ಅವಕಾಶ ನೀಡಲಾಗಿದೆ. ಆದರೆ ನಮ್ಮಲ್ಲಿ ಇದ್ದ ಸ್ಥಳೀಯ ಪ್ರತಿಭೆಗಳನ್ನು ಹುಡುಕಿ ತರುವ ಪ್ರಯತ್ನ ಬಹಳ ಕಡಿಮೆ ಇದೆ. ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಭಾರತೀಯ ಸಂಗೀತಗಾರರಲ್ಲಿಯೇ ಅದ್ಭುತ ಸ್ವರ ಉಳ್ಳ ಪ್ರತಿಭೆಗಳಿದ್ದು ಅಂತವರನ್ನು ಬೆಳೆಸಬೇಕು ಎಂದು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಬಗ್ಗೆ ಕೂಡ ಗಾಯಕಿ ಕೃಷ್ಣಮೂರ್ತಿ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ಬಳಿಕ  ನಾವೆಲ್ಲರೂ ತುಂಬಾ ದುಃಖಿತರಾಗಿದ್ದೇವೆ, ಖಿನ್ನತೆಗೆ ಒಳಗಾಗಿದ್ದೇವೆ, ಹೃದಯ ವಿದ್ರಾವಕರಾಗಿದ್ದೇವೆ, ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಪ್ರಾಮಾಣಿಕ ಸಂತಾಪಗಳು. ನಾನು ಸರ್ಕಾರವನ್ನು ಹಾಗೂ ಪ್ರಧಾನಿಯವರ ನಿರ್ಣಯ ಗೌರವಿಸುತ್ತೇನೆ. ಈ ಬಗ್ಗೆ ಸರ್ಕಾರ ತೆಗೆದುಕೊಳ್ಳುವ ಯಾವುದೇ ತರನಾದ ನಿರ್ಧಾರಗಳಿಗೆ ನಾನು ಬದ್ಧನಾಗಿರುವೆನು ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: Neha Kakkar: ಮೆಲ್ಬೋರ್ನ್‌ ಸಂಗೀತ ಕಛೇರಿ ವಿಳಂಬಕ್ಕೆ ಗಾಯಕಿ ನೇಹಾ ಕಕ್ಕರ್ ಕಾರಣ ಎಂದ ಆಯೋಜಕರು

ಹಿರಿಯ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರು  ಲತಾ ಮಂಗೇಶ್ಕರ್ ಮತ್ತು ಕಿಶೋರ್ ಕುಮಾರ್ ಅವರ ಬಳಿಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದರೂ ಒಂದು ಕಾಲದಲ್ಲಿ ಇಡೀ ಭಾರತದಲ್ಲಿ ಬೇಡಿಕೆ ಹೊಂದಿದ್ದ ಗಾಯಕಿ ಎಂಬ ಖ್ಯಾತಿ ಪಡೆ ದಿದ್ದಾರೆ. ಸೋನು ನಿಗಮ್, ಅನು ಮಲಿಕ್ , ನದೀಮ್-ಶ್ರವಣ್ ಕಾಲದಲ್ಲಿ ಇವರು ಬಹಳ ಜನಪ್ರಿಯರಾಗಿದ್ದರು. 35 ವರ್ಷ ಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೂ ಕೂಡ  ಹಾಡುವುದನ್ನು ಎಂದಿಗೂ ನಿಲ್ಲಿಸದೆ  53 ವರ್ಷದ ವೃತ್ತಿ ಜೀವನದಲ್ಲಿ 5 ಸಾವಿರಕ್ಕೂ ಅಧಿಕ ಹಾಡಿನ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.