ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kesari 2: ಅಕ್ಷಯ್-ಮಾಧವನ್ ಅಭಿನಯದ ʼಕೇಸರಿ 2ʼ ಚಿತ್ರ ಹೇಗಿದೆ? ಫ್ಯಾನ್ಸ್ ಹೇಳಿದ್ದೇನು?

ಜಲಿಯನ್ ವಾಲಾಭಾಗ್ ದುರಂತದ ಕಥೆ ಹೇಳುವ ʼಕೇಸರಿ ಚಾಪ್ಟರ್ 2ʼ ಚಿತ್ರ ರಿಲೀಸ್‌ ಆಗಿದ್ದು, ಎಲ್ಲೆಡೆ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಅಕ್ಷಯ್‌ ಕುಮಾರ್‌, ಮಾಧವನ್ ಹಾಗೂ ಅನನ್ಯಾ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಪ್ರಿಯರು ಸೋಶಿಯಲ್​ ಮೀಡಿಯಾಗಳಲ್ಲಿ ಚಿತ್ರದ ಬಗ್ಗೆ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ.

ʼಕೇಸರಿ 2’ ಚಿತ್ರ ಬಗ್ಗೆ ಸಿನಿಪ್ರಿಯರು ಹೇಳಿದ್ದೇನು?

Kesari 2 Chapter reviews

Profile Pushpa Kumari Apr 18, 2025 8:26 PM

ನವದೆಹಲಿ: ಬಾಲಿವುಡ್‌ ಸ್ಟಾರ್‌ ಅಕ್ಷಯ್ ಕುಮಾರ್ (Akshay Kumar) ಮತ್ತು ಆರ್. ಮಾಧವನ್ (R Madhavan) ಅಭಿನಯದ ಬಹುನಿರೀಕ್ಷಿತ ಹಿಸ್ಟಾರಿಕಲ್​​ ಸ್ಟೋರಿ ʼಕೇಸರಿ ಚಾಪ್ಟರ್​ 2' (Kesari Chapter 2) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಜಲಿಯನ್ ವಾಲಾಭಾಗ್‌ ದುರಂತದ ಕಥೆ ಹೇಳುವ ʼಕೇಸರಿ ಚಾಪ್ಟರ್ 2ʼ ಬಗ್ಗೆ ಇದೀಗ ಎಲ್ಲೆಡೆ ಸಕಾರಾತ್ಮಕ ಮಾತುಗಳು ಕೇಳಿ ಬರುತ್ತಿವೆ. ಅಕ್ಷಯ್‌, ಮಾಧವನ್ ಹಾಗೂ ಅನನ್ಯಾ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ʼಕೇಸರಿ ಚಾಪ್ಟರ್ 2' ಸಿನಿಮಾದಲ್ಲಿ ಶಂಕರನ್ ನಾಯರ್ ಪಾತ್ರವನ್ನು ಸೂಪರ್​ ಸ್ಟಾರ್ ಅಕ್ಷಯ್​ ಕುಮಾರ್​​ ನಿರ್ವಹಿಸಿದ್ದಾರೆ. ಇದೀಗ ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಸಿನಿಮಾದ ಬಗ್ಗೆ ಪಾಸಿಟಿವ್ ಟಾಕ್ ಶುರುವಾಗಿದೆ. ಸಿನಿಪ್ರಿಯರು ಸೋಶಿಯಲ್​ ಮೀಡಿಯಾಗಳಲ್ಲಿ  ಚಿತ್ರದ ಬಗ್ಗೆ ವಿಮರ್ಶೆ ಹಂಚಿಕೊಳ್ಳುತ್ತಿದ್ದಾರೆ. ಅನೇಕರು ನೋಡಲೇಬೇಕಾದ ಸಿನಿಮಾ ಎಂದು ಉಲ್ಲೇಖಿಸಿದ್ದಾರೆ.

ಜಲಿಯನ್ ವಾಲಾಭಾಗ್‌ ಹತ್ಯಾಕಾಂಡದ ಹಿಂದಿನ ನೈಜ ಘಟನೆಗಳನ್ನು ಆಧರಿಸಿದ್ದ ಕಥೆಯೇ ʼಕೇಸರಿ 2ʼ ಸಿನಿಮಾದ ಮುಖ್ಯ ಎಳೆ. ಕರಣ್ ಸಿಂಗ್ ತ್ಯಾಗಿ ನಿರ್ದೇಶನದ ಈ ಕಥೆಯಲ್ಲಿ ಅಕ್ಷಯ್ ಕುಮಾರ್, ಆರ್.ಮಾಧವನ್ ಮತ್ತು ಅನನ್ಯಾ ಪಾಂಡೆ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ನೋಡಿದ ಪ್ರೇಕ್ಷಕರು ಪಾಸಿಟಿವ್ ವಿಮರ್ಶೆ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರೊಬ್ಬರು ʼಕೇಸರಿ ಚಾಪ್ಟರ್‌ 2ʼ ಒಂದು ಶಕ್ತಿಶಾಲಿ ಮತ್ತು ಭಾವನಾತ್ಮಕ ಚಿತ್ರ. ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ದುರಂತ ಘಟನೆಗಳನ್ನು ಜೀವಂತಗೊಳಿಸಿದೆ ಎಂದು ಎಕ್ಸ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಮತ್ತೊ ಬ್ಬರು ʼಕೇಸರಿ 2ʼ ಅದ್ಭುತವಾದ ಚಿತ್ರ. ನಮ್ಮ ಇತಿಹಾಸದ ಪ್ರಮುಖ ಅಧ್ಯಾಯವನ್ನು ಅಷ್ಟೇ ಸೊಗಸಾಗಿ ತೆರೆ ಮೇಲೆ ತರಲಾಗಿದ್ದು, ಪ್ರತಿಯೊಬ್ಬರು ನೋಡಲೇ ಬೇಕಾದ ಚಿತ್ರ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಷಯ್‌ ಕುಮಾರ್ ಈಸ್ ಬ್ಯಾಕ್‌. ʼಕೇಸರಿ 2ʼ ಬ್ಲಾಕ್‌ ಬಸ್ಟರ್‌ ಚಿತ್ರ ಎಂದು ಬರೆದುಕೊಂಡಿದ್ದಾರೆ. ಕೇವಲ ಪ್ರೇಕ್ಷಕರು ಮಾತ್ರವಲ್ಲ ಬಾಲಿವುಡ್‌ನ ಅನೇಕ ವಿಮರ್ಷಕರು ಕೂಡ ʼಕೇಸರಿ 2ʼ ಚಿತ್ರಕ್ಕೆ ಮನ ಸೋತಿದ್ದಾರೆ. ಸೆಲೆಬ್ರಿಟಿ ಸಿನಿಮಾ ವಿಮರ್ಶಕ ತರಣ್ ಆದರ್ಶ್ ‘ಕೇಸರಿ 2’ ಸಿನಿಮಾವನ್ನು ಮೆಚ್ಚಿಕೊಂಡಿದ್ದು ʼಕೇಸರಿ 2’ ಪವರ್​ಫುಲ್, ಮನಸ್ಸಿಗೆ ನಾಟುವ ಮತ್ತು ಭಾವನಾತ್ಮಕ ಸನ್ನಿವೇಶವನ್ನು ಒಳಗೊಂಡಿರುವ ಸಿನಿಮಾ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Kesari Chapter 2 Movie: ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್‌ ಸರ್ಕಾರದ ವಿರುದ್ಧ ಶಂಕರನ್‌ ನಾಯರ್‌ ಹೋರಾಟ; ಯಾರಿವರು? ಹಿನ್ನೆಲೆ ಏನು?

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ʼಕೇಸರಿ 2ʼ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಉದ್ಯಮಿ ಮತ್ತು ಮಾಜಿ ನಟಿ ಆಸಿನ್ ಅವರ ಪತಿ ರಾಹುಲ್ ಶರ್ಮ ಕೂಡ ಈ ಚಿತ್ರವನ್ನು ಹೊಗಳಿದ್ದಾರೆ. ಐತಿಹಾಸಿಕ ಕಥೆಯುಳ್ಳ ಹಾಗೂ ನ್ಯಾಯಾಲಯ ಹಿನ್ನೆಲೆಯುಳ್ಳ ಈ ಚಿತ್ರಕ್ಕೆ ಸಿಂಗ್ ತ್ಯಾಗಿ ನಿರ್ದೇಶನವಿದೆ. ಧರ್ಮ ಪ್ರೊಡಕ್ಷನ್‌, ಲಿಯೊ ಮಿಡಿಯಾ ಕಲೆಕ್ಟಿವ್‌ ಮತ್ತು ಕೇಪ್ ಆಫ್ ಗುಡ್ ಫಿಲ್ಮಸ್‌ ಚಿತ್ರ ನಿರ್ಮಾಣ ಮಾಡಿದೆ. ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿದ ಚಿಟ್ಟೂರು ಶಂಕರ ನಾರಾಯಣ ಅವರ ಜೀವನ ಆಧರಿಸಿದ ಕತೆಯನ್ನು ʼಕೇಸರಿ 2’ ಸಿನಿಮಾ ಹೊಂದಿದೆ.  ಚಿತ್ರದಲ್ಲಿ ಅಡ್ವೊಕೇಟ್ ನೆವಿಲ್ಲೆ ಮೆಕಿನ್ಲೆ ಪಾತ್ರದಲ್ಲಿ ಆರ್. ಮಾಧವನ್, ದಿಲ್ರೀತ್ ಗಿಲ್ ಪಾತ್ರದಲ್ಲಿ ಅನನ್ಯಾ ಪಾಂಡೆ ನಟಿಸಿದ್ದಾರೆ. ವಿಶಾಕ್ ನಾಯರ್, ಅಮಿತ್ ಸಿಯಾಲ್ ಮತ್ತು ಮನೋಜ್ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.