Thursday, 12th December 2024

ಉದ್ಧವ ಆಗುತ್ತಾರೆ.?

ಎಂಸಿಪಿ ಕಾಂಗ್ರೆಸ್ ಸಹಮತ ||ಸರಣಿ ಸಭೆಗಳಲ್ಲಿ ಮೂಡಿದ ಒಮ್ಮತ

ಉದ್ಧವ್ ಠಾಕ್ರೆೆ ಸಿಎಂ ಆಗುವುದು ಬಹುತೇಕ ಖಚಿತ

* ಉದ್ಧವ್‌ಗೆ ಸರಕಾರದ ಸಾರಥ್ಯ ಸಾಧ್ಯತೆ
*ಶಿವಸೇನೆ ಸಭೆಯಲ್ಲಿ ಒಕ್ಕೊೊರಲ ಒತ್ತಾಾಯ
*ಎನ್‌ಸಿಪಿ-ಕಾಂಗ್ರೆೆಸ್ ಸಹಮತ
*ಸರಣಿ ಸಭೆಗಳಲ್ಲಿ ಮೂಡಿದ ಒಮ್ಮತ
*ನಾಳೆ ಅಂತಿಮ ನಿರ್ಧಾರ
*ಮಹಾರಾಷ್ಟ್ರ ವಿಕಾಸ್ ಆಗಾಡಿ ರಚನೆ

ಮುಂಬೈ: ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಿ ಆಗುವುದು ಬಹುತೇಕ ಖಚಿತವಾಗಿದೆ.
ಮಹಾರಾಷ್ಟ್ರವನ್ನು ಉದ್ಧವ್ ಠಾಕ್ರೆೆ ಅವರೇ ಮುನ್ನಡೆಸಬೇಕು ಎಂಬ ಬಗ್ಗೆೆ ಒಮ್ಮತದ ತೀರ್ಮಾನವಾಗಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ತಿಳಿಸಿದರು. ಕಾಂಗ್ರೆೆಸ್ ಮತ್ತು ಶಿವಸೇನಾ ಪಕ್ಷದ ನಾಯಕರ ಜತೆ ಎನ್‌ಸಿಪಿ ಮುಖಂಡರ ಮಾತುಕತೆ ಬಳಿಕ ಅವರು ಈ ಮಾತು ಹೇಳಿದರು.

ಉದ್ಧವ್ ಠಾಕ್ರೆೆ ಅವರೇ ಮುಖ್ಯಮಂತ್ರಿಿ ಆಗಬೇಕೆಂದು ಇದಕ್ಕೂ ಮೊದಲು ಶಿವಸೇನಾ ಮುಖ್ಯಸ್ಥರ ನಿವಾಸದಲ್ಲಿ ನಡೆದ ಸಭೆಯಲ್ಲಿ ಶಿವಸೇನೆಯ ಶಾಸಕರು ಒಕ್ಕೊೊರಲಿನಿಂದ ಆಗ್ರಹಪಡಿಸಿದರು. ಬಳಿಕ ಎನ್‌ಸಿಪಿಯೂ ಇದೇ ಮಾತನ್ನಾಾಡಿದೆ.
‘ಉದ್ಧವ್ ಠಾಕ್ರೆೆ ಅವರೇ ಮುಖ್ಯಮಂತ್ರಿಿ ಆಗಬೇಕು. ಬೇರೆಯವರು ಆಗುವುದಾದರೆ ಬೆಂಬಲ ನೀಡಬೇಕೋ, ಬೇಡವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ’ಎಂದು ಛಗನ್ ಭುಜಬಲ್ ಹೇಳಿರುವುದೂ ಗಮನಾರ್ಹ.

ಸಂಜಯ್ ರಾವತ್ ಇಲ್ಲವೇ ಅರವಿಂದ್ ಸಾವಂತ್ ಅವರು ಮುಖ್ಯಮಂತ್ರಿಿ ಹುದ್ದೆೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾಾರೆ ಎಂಬ ಮಾತುಗಳು ಈ ಮೊದಲು ಕೇಳಿಬಂದಿದ್ದವು. ಇದರ ಜತೆಗೆ ಏಕನಾಥ್ ಶಿಂದೆ ಹೆಸರೂ ಪ್ರಸ್ತಾಾಪವಾಗಿತ್ತಾಾದರೂ ಅವರು ಆಸಕ್ತಿಿ ತೋರಲಿಲ್ಲ ಎನ್ನಲಾಗಿದೆ. ‘ಮುಖ್ಯಮಂತ್ರಿಿಯಾಗಿ, ನಂತರ ಸೋನಿಯಾ ಗಾಂಧಿ ಹಾಗೂ ಶರದ್ ಪವಾರ್ ಅವರ ಆದೇಶ ಪಾಲಿಸುವುದಕ್ಕಿಿಂತ ಶಿವಸೇನೆಯ ಅಧ್ಯಕ್ಷರಾಗಿ ಸರಕಾರ ರಚನೆಯ ಉಸ್ತುವಾರಿ ನೋಡಿಕೊಳ್ಳುವುದು ಒಳ್ಳೆೆಯದು’ ಎಂಬ ಅಭಿಪ್ರಾಾಯ ಠಾಕ್ರೆೆ ಅವರದ್ದಾಾಗಿತ್ತು ಎನ್ನಲಾಗಿದ್ದು, ಈ ಹಿನ್ನೆೆಲೆಯಲ್ಲಿ ಇಬ್ಬರ ಹೆಸರು ಕೇಳಿಬಂದಿತ್ತು ಎಂದು ತಿಳಿದುಬಂದಿದೆ. ಆದರೆ ಇದಕ್ಕೆೆ ಶಿವಸೇನೆ ಶಾಸಕರೂ ಒಪ್ಪಿಿಲ್ಲ. ಕಾಂಗ್ರೆೆಸ್-ಎನ್‌ಸಿಪಿ ಕೂಡ ತಯಾರಿಲ್ಲ. ಆದರೆ ಸರಕಾರ ರಚನೆ ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಶುಕ್ರವಾರ ಅಥವಾ ಶನಿವಾರ ಮೂರೂ ಪಕ್ಷಗಳು ರಾಜ್ಯಪಾಲರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕು ಮಂಡಿಸುತ್ತವೆ ಎಂದು ಹೇಳಲಾಗಿತ್ತು. ಆದರೆ ಶನಿವಾರವೂ ಈ ಸಾಧ್ಯತೆ ಇಲ್ಲ ಎನ್ನಲಾಗುತ್ತಿಿದೆ.
‘ಇನ್ನೂ ಸಮಾಲೋಚನೆಗಳು ನಡೆಯುತ್ತಿಿವೆ. ರಾಜ್ಯಪಾಲರ ಭೇಟಿ ಯಾವಾಗ ಎಂಬುದನ್ನು ನಾಳೆ ನಿರ್ಧರಿಸುತ್ತೇವೆ. ನಾಳೆ ಮೂರೂ ಪಕ್ಷಗಳ ಜಂಟಿ ಪತ್ರಿಿಕಾಗೋಷ್ಠಿಿ ನಡೆಯಲಿದೆ ’ ಎಂದು ಶರದ್ ಪವಾರ್ ವಿವರಿಸಿದ್ದಾಾರೆ.
‘ನಾವು ಮಹಾರಾಷ್ಟ್ರದ ಭವಿಷ್ಯದ ಬಗ್ಗೆೆ ನಿರ್ಧಾರ ಕೈಗೊಂಡಿದ್ದೇವೆ. ಶಿವಸೇನಾ-ಎನ್‌ಸಿಪಿ-ಕಾಂಗ್ರೆೆಸ್ ಪಕ್ಷಗಳನ್ನೊೊಳಗೊಂಡ ‘ಮಹಾ ವಿಕಾಸ್ ಆಘಾಡಿ’ ಕೂಟ ರಚನೆಗೆ ನಿರ್ಧರಿಸಲಾಗಿದೆ’ ಎಂದು ಉದ್ಧವ್ ಠಾಕ್ರೆೆ ತಿಳಿಸಿದ್ದಾಾರೆ.
ಇದೆಲ್ಲದರ ನಡುವೆ ರಾಜ್ಯಪಾಲ ಭಗತ್‌ಸಿಂಗ್ ಕೋಸಿಯಾರಿ ಅವರು ತಮ್ಮ ದೆಹಲಿ ಯಾತ್ರೆೆಯನ್ನು ರದ್ದುಪಡಿಸಿ ಮುಂಬೈನಲ್ಲೇ ಉಳಿದುಕೊಂಡಿದ್ದಾಾರೆ.

ಪಾಲಿಕೆಯಲ್ಲಿ ಬಿಜೆಪಿಗೆ ಸೋಲು
ಶಿವಸೇನೆಯ ಜತೆ ಮೈತ್ರಿಿ ಮುರಿದ ಬಳಿಕ ಬಿಜೆಪಿ ಮೊದಲ ಸೋಲಿನ ರುಚಿ ಕಂಡಿದೆ. ಮುಂಬೈ ಹಾಗೂ ಠಾಣೆ ಮಹಾನಗರ ಪಾಲಿಕೆಗಳಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾಾನ ಗೆಲ್ಲುವಲ್ಲಿ ಶಿವಸೇನೆ ಯಶಸ್ವಿಿಯಾಗಿದೆ. ಲಾತೂರ್ ಹಾಗೂ ಉಲ್ಲಾಾಸ್‌ನಗರ್ ಮಹಾನಗರ ಪಾಲಿಕೆಯಲ್ಲಿ ಬಹುಮತ ಇದ್ದರೂ ಸಹ ಮೇಯರ್ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಆದರೆ, ನವನಿರ್ಮಾಣ್ ಸೇನೆಯ ಬೆಂಬಲದೊಂದಿಗೆ ನಾಶಿಕ್‌ನಲ್ಲಿ ಜಯ ಸಾಧಿಸಿದೆ.

ಮೈತ್ರಿಿ ಆರು ತಿಂಗಳೂ ಬಾಳದು
ಶಿವಸೇನಾ-ಕಾಂಗ್ರೆೆಸ್-ಎನ್‌ಸಿಪಿ ಮೈತ್ರಿಿಕೂಟವನ್ನು ಸಮಯಸಾಧಕತನ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಬಣ್ಣಿಿಸಿದ್ದಾಾರೆ. ‘ಒಂದೊಮ್ಮೆೆ ಅವರು ಸರಕಾರ ರಚಿಸಿದರೂ ಅದು 6ರಿಂದ 8ತಿಂಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ’ ಎಂದು ರಾಂಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ
‘ಜನಾದೇಶಕ್ಕೆೆ ವಿರುದ್ಧವಾಗಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆಗೆ ಪ್ರಯತ್ನ ನಡೆದಿದೆ. ಇದಕ್ಕೆೆ ರಾಜ್ಯಪಾಲರು ಅವಕಾಶ ನೀಡಕೂಡದು’ ಎಂದು ಕೋರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾಗಿದೆ. ‘ಇದು ಅಪವಿತ್ರ ಮೈತ್ರಿಿ. ಜನಾದೇಶಕ್ಕೆೆ ವಿರೋಧವಾದುದು. ಇಂಥ ಸರಕಾರವು ಅಸಾಂವಿಧಾನಿಕ’ ಎಂದು ಮಹಾರಾಷ್ಟ್ರದ ನಾಗರಿಕರೊಬ್ಬರು ಸಲ್ಲಿಸಿರುವ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾಾರೆ.