Medha Patkar: ಮಾನನಷ್ಟ ಪ್ರಕರಣದಲ್ಲಿ ಬಂಧನಕ್ಕೊಳಗಾದ ಎರಡು ಗಂಟೆಯಲ್ಲೇ ಮೇಧಾ ಪಾಟ್ಕರ್ ಬಿಡುಗಡೆ
2001 ರಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಬಿಡುಗಡೆ ಮಾಡಿದೆ. ನಗರ ರೈಲು ನಿಲ್ದಾಣದಲ್ಲಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಈ ಆದೇಶ ಹೊರಬಿದ್ದಿದೆ.


ನವದೆಹಲಿ: 2001 ರಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯಲ್ಲಿ, ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಬಿಡುಗಡೆ ಮಾಡಿದೆ. ನಗರ ರೈಲು ನಿಲ್ದಾಣದಲ್ಲಿ ಅವರನ್ನು ಬಂಧಿಸಿದ ಕೆಲವೇ ಗಂಟೆಗಳಲ್ಲಿ ಈ ಆದೇಶ ಹೊರಬಿದ್ದಿದೆ. ಬಂಧನವಾದ ಕೆಲವು ಗಂಟೆಗಳ ನಂತರ, ದೆಹಲಿ ನ್ಯಾಯಾಲಯವು ಶುಕ್ರವಾರ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ (Medha Patkar) ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ. ಪಾಟ್ಕರ್ ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ದೆಹಲಿ ಪೊಲೀಸರು ಶುಕ್ರವಾರ ಅವರನ್ನು ಬಂಧಿಸಿದ್ದರು.
ವಿ ಕೆ ಸಕ್ಸೇನಾ ಅವರು ರಾಷ್ಟ್ರೀಯ ನಾಗರಿಕ ಸ್ವಾತಂತ್ರ್ಯ ಮಂಡಳಿಯ ನೇತೃತ್ವ ವಹಿಸಿದ್ದಾಗ ಮೇಧಾ ಪಾಟ್ಕರ್ ಅವರು ನವೆಂಬರ್ 24, 2000 ರಂದು ಹೊರಡಿಸಿದ ಪತ್ರಿಕಾ ಪ್ರಕಟಣೆಯ ಕೇಸು ಇದಾಗಿದ್ದು, ಅದರಲ್ಲಿ, ಮೇಧಾ ಪಾಟ್ಕರ್ ವಿ ಕೆ ಸಕ್ಸೇನಾ ಅವರನ್ನು ಹೇಡಿ ಎಂದು ಕರೆದು ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿದ್ದಾರೆ. ಗುಜರಾತ್‌ನ ಜನರು ಮತ್ತು ಸಂಪನ್ಮೂಲಗಳನ್ನು ವಿದೇಶಿ ಹಿತಾಸಕ್ತಿಗಳಿಗೆ ಅಡಮಾನ ಇಡುತ್ತಿದ್ದಾರೆ ಎಂದು ಆರೋಪಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕಳೆದ ವರ್ಷ ಮ್ಯಾಜಿಸ್ಟರಿಯಲ್ ನ್ಯಾಯಾಲಯ, ಈ ಹೇಳಿಕೆಗಳು ಮಾನನಷ್ಟಕರ ಮತ್ತು ನಕಾರಾತ್ಮಕ ಸಾರ್ವಜನಿಕ ಭಾವನೆಯನ್ನು ಕೆರಳಿಸುವ ಉದ್ದೇಶವನ್ನು ಹೊಂದಿವೆ ಎಂದು ತೀರ್ಪು ನೀಡಿದೆ.
ಇದಾದ ಬಳಿಕ ಅವರನ್ನು ಸನ್ನಡತೆಯ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಪರಿಹಾರ ಮೊತ್ತವನ್ನು ಠೇವಣಿ ಹಾಗೂ ಬಾಂಡ್ ಸಲ್ಲಿಸಲು ಸೂಚಿಸಲಾಗಿತ್ತು. ಈ ಬಾಂಡ್ ಮೊತ್ತವನ್ನು ಸಲ್ಲಿಸುವಲ್ಲಿ ಪಾಟ್ಕರ್ ವಿಫಲವಾಗಿದ್ದರು . ಪಾಟ್ಕರ್ ಅವರು ವಿಚಾರಣೆಗೆ ಹಾಜರಾಗುವಲ್ಲಿ ವಿಫಲವಾಗಿದ್ದು, ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡದ ಹಿನ್ನೆಲೆ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ: Assam MLA: ಪುಲ್ವಾಮಾ, ಪಹಲ್ಗಾಮ್ ದಾಳಿ, "ಸರ್ಕಾರದ ಪಿತೂರಿ" ; ವಿವಾದಾತ್ಮಕ ಹೇಳಿಕೆ ನೀಡಿದ ಅಸ್ಸಾಂ ಶಾಸಕನ ಬಂಧನ
ಪಾಟ್ಕರ್ ಶಿಕ್ಷೆಯ ಆದೇಶವನ್ನು ಪಾಲಿಸುವ ಬದಲು, ಗೈರುಹಾಜರಾಗಿದ್ದಾರೆ. ಶಿಕ್ಷೆಯ ಆದೇಶವನ್ನು ಪಾಲಿಸಲು ಮತ್ತು ಪರಿಹಾರ ಮೊತ್ತವನ್ನು ನೀಡುವಲ್ಲಿ ಅವರು ಉದ್ದೇಶಪೂರ್ವಕವಾಗಿ ವಿಫಲರಾಗಿದ್ದಾರೆ ಎಂದು ಕೋರ್ಟ್ ತಿಳಿಸಿತು. ಮೇಧಾ ಪಾಟ್ಕರ್ ಗೈರನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಪಾಟ್ಕರ್ ಬಂಧನಕ್ಕೆ ಆದೇಶ ಹೊರಡಿಸಿತ್ತು. ವಿಚಾರಣೆ ಬಳಿಕ ಕೋರ್ಟ್, ಪೋಬೆಷನ್ ಬಾಂಡ್ ಮತ್ತು ಪರಿಹಾರ ಹಣ ಠೇವಣಿ ಇರಿಸಲು ಅನುಮತಿ ನೀಡಿತು. ಇದಾದ ಬಳಿಕ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡಿತು.