Urvashi Rautela: ದಬಿಡಿ ದಿಬಿಡಿ ಹಾಡಿನ ಲಿರಿಕ್ಸ್ ಮರೆತು ಟ್ರೋಲ್ ಆದ ನಟಿ ಊರ್ವಶಿ ರೌಟೇಲಾ!
ಟಾಲಿವುಡ್ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ ಡಾಕು ಮಹಾರಾಜ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಹಾಡೊಂದರಲ್ಲಿ ಸಖತ್ ಸ್ಟೆಪ್ ಹಾಕಿದ್ದರು.ಇದೀಗ ನಟಿ ಸಂದರ್ಶನವೊಂದರಲ್ಲಿ ದಬಿಡಿ ದಿಬಿಡಿ ಹಾಡನ್ನು ಹೇಳಲು ಹೋಗಿ ಈ ಹಾಡಿನ ಲಿರಿಕ್ಸ್ ಮರೆತು ಗೊಂದಲಕ್ಕೆ ಒಳಗಾಗಿದ್ದಾರೆ. ಸದ್ಯ ನಟಿಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನಟಿ ಟ್ರೋಲ್ ಗೆ ಗುರಿಯಾಗಿದ್ದಾರೆ..


ನವದೆಹಲಿ: ಬಾಲಿವುಡ್ ನಟಿ ಊರ್ವಶಿ ರೌಟೇಲಾ (Urvashi Rautela) ಸೌತ್ ಸಿನಿಮಾಗಳಲ್ಲಿ ಸ್ಪೆಷಲ್ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕುತ್ತಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.ನಾಯಕಿಯಾಗಿ ಸಿನಿಮಾಗಳಲ್ಲಿ ಬ್ಯುಸಿ ಇರುವಾಗಲೇ ಐಟಂ ಹಾಡಿಗೆ ಊರ್ವಶಿ ಡ್ಯಾನ್ಸ್ ಮಾಡಿದ್ದಾರೆ. ಸನ್ನಿ ಡಿಯೋಲ್ ನಟನೆಯ ‘ಜಟ್’ ಸಿನಿಮಾದಲ್ಲಿಯು ಸಖತ್ ಸೊಂಟ ಬಳುಕಿಸಿದ್ದಾರೆ. ಇನ್ನು ನಂದಮೂರಿ ಬಾಲಕೃಷ್ಣ ಜೊತೆ ಡಾಕು ಮಹಾರಾಜ್‌ನ ದಬಿಡಿ ದಿಬಿಡಿ ಸಾಂಗ್ ನಲ್ಲೂ ನಟಿ ಎನ ರ್ಜೆಟಿಕ್ ಆಗಿ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ಸಾಂಗ್ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಇದೀಗ ನಟಿ ಸಂದರ್ಶನ ವೊಂದ ರಲ್ಲಿ ದಬಿಡಿ ದಿಬಿಡಿ ಹಾಡನ್ನು ಹೇಳಲು ಹೋಗಿ ಈ ಹಾಡಿನ ಲಿರಿಕ್ಸ್ ಮರೆತು ಗೊಂದಲಕ್ಕೆ ಒಳಗಾಗಿದ್ದಾರೆ . ಸದ್ಯ ನಟಿಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ನಟಿ ಟ್ರೋಲ್ ಗೆ ಗುರಿಯಾಗಿದ್ದಾರೆ.
ಟಾಲಿವುಡ್ ಸ್ಟಾರ್ ನಟ ಬಾಲಕೃಷ್ಣ ನಟಿಸಿರುವ ಡಾಕು ಮಹಾರಾಜ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಊರ್ವಶಿ ರೌಟೇಲಾ ಈ ಸಿನಿಮಾದಲ್ಲಿ ಬಾಲಕೃಷ್ಣ ಜೊತೆ ಹಾಡೊಂದರಲ್ಲಿ ಸಖತ್ ಸ್ಟೆಪ್ ಹಾಕಿದ್ದರು. ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದಲ್ಲದೆ, ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಬಾಲಕೃಷ್ಣ ಹಾಗೂ ಊರ್ವಶಿ ರೌಟೇಲಾ ಹಾಕಿದ ಸ್ಟೆಪ್ಟ್ ಕೆಲವರ ಕೆಂಗಣ್ಣಿಗೂ ಗುರಿಯಾಗಿತ್ತು. ಹಾಡಿನ ಡ್ಯಾನ್ಸ್ ಸ್ಟೆಪ್ಸ್ ತೀರಾ ಅಶ್ಲೀಲ, ಅಸಭ್ಯ ಎನ್ನು ವಷ್ಟರ ಮಟ್ಟಿಗೆ ಇಂತಹ ಸ್ಟೆಪ್ಸ್‌ಗಳು ಅಗತ್ಯವಿತ್ತೇ? ತನಗಿಂತ ದುಪ್ಪಟ್ಟು ವಯಸ್ಸಾಗಿರುವ ನಟನೊಂದಿಗೆ ಊರ್ವಶಿ ಹೀಗೆ ಹೆಜ್ಜೆ ಹಾಕಬಹುದೇ? ಎಂದು ಪ್ರಶ್ನಿಸಿದ್ದರು.
ಇದೀಗ ನಟಿ ಉರ್ವಶಿ ರೌಟೆಲಾ ಸಂದರ್ಶನವೊಂದರಲ್ಲಿ ಡಾಕು ಮಹಾರಾಜ್ ಚಿತ್ರದ "ದಬಿಡಿ ದಿಬಿಡಿ" ಹಾಡನ್ನು ಹೇಳುವಾಗ ಹಾಡಿನ ಸಾಲುಗಳನ್ನೇ ಮರೆತಿದ್ದಾರೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ನಿರೂಪಕಿಯೊಬ್ಬರು ಹಾಡಲು ಹೇಳಿದಾಗ ನಟಿ ಹಾಡಿನ ಲಿರಿಕ್ಸ್ ಸರಿಯಾಗಿ ತಿಳಿಯದೇ ತಪ್ಪಾಗಿ ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿ ಕೊಂಡ ಈ ವಿಡಿಯೊದಲ್ಲಿ, ಉರ್ವಶಿ ರೌಟೆಲಾ "ದಬಿಡಿ ದಿಬಿಡಿ" ಹಾಡನ್ನು ಹಾಡುತ್ತಿರುವುದು ಕಾಣಿಸುತ್ತದೆ. ಆದರೆ, ಹಾಡಿನ ಸಾಲುಗಳನ್ನು ಮರೆತು ನಡುವೆ ಗೊಂದಲಕ್ಕೀಡಾಗಿದ್ದಾರೆ. ನಂತರ ಸಾಲುಗಳನ್ನು ಬದಲಾಯಿಸಿ ಹಾಡನ್ನು ಪೂರ್ಣಗೊಳಿಸಿದ್ದಾರೆ.
ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಕೆಲವು ಅಭಿಮಾನಿಗಳು ಊರ್ವಶಿಯ ವೀಡಿಯೊವನ್ನು ತಮಾಷೆಯಾಗಿ ಕಂಡರೆ ಹಲವು ನೆಟಿಜನ್‌ಗಳು ನಟಿಯನ್ನು ಟ್ರೋಲ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ತನಗೆ ಕನಸಿನಲ್ಲೂ ಈ ಹಾಡು ಕೇಳಿಸುತ್ತಿದೆ ಎಂದು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಹಾಡಿಗೆ ಸ್ಟೆಪ್ ಹಾಕಿದ್ದೇ ಬಂತು ನಟಿ ಹಾಡಿಗೆ ನ್ಯಾಯ ಒದಗಿಸಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Urvashi Rautela: ಊರ್ವಶಿ ರೌಟೇಲಾಗೂ ದೇವಾಲಯ ಇದ್ಯಾ? ಡೆಲ್ಲಿ ವಿವಿಯಲ್ಲೂ ನಟಿಗೆ ಪೂಜೆ ನಡೆಯುತ್ತಾ?
ʻಡಾಕು ಮಹಾರಾಜ್' ಚಿತ್ರದ ಈ 'ದಬಿಡಿ ದಿಬಿಡಿ' ಸಾಂಗ್ ಜನವರಿ 2ರಂದು ರಿಲೀಸ್ ಆಗಿದ್ದು, ಇದನ್ನು ಐಟಂ ಸಾಂಗ್ ರೀತಿಯಲ್ಲಿ ಶೂಟ್ ಮಾಡಲಾಗಿದೆ. ಎಸ್ ಥಮನ್ ಸಂಗೀತ ನೀಡಿರುವ ಈ ಹಾಡನ್ನು ಕಾಸರ್ಲ ಶ್ಯಾಮ್ ಬರೆದಿದ್ದಾರೆ. ಈ ಹಾಡಿನಲ್ಲಿ ಬಾಲಯ್ಯ ಜೊತೆಗೆ ಊರ್ವಶಿ ರೌಟೇಲಾ ಕಾಣಿಸಿಕೊಂಡಿದ್ದಾರೆ. ಡಾಕು ಮಹಾರಾಜ್ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ ಒಬ್ಬ ಶಕ್ತಿಶಾಲಿ ಅಧಿಕಾರಿಯಾಗಿ ನಟಿಸಿದ್ದಾರೆ. ತಮ್ಮ ಪತ್ನಿಯೊಂದಿಗೆ ಅನ್ಯಾಯದ ವಿರುದ್ಧ ನಿಲ್ಲುತ್ತಾರೆ. ನಂತರ, ಅವರು "ಡಾಕು ಮಹಾರಾಜ್" ಎಂಬ ನಿರ್ಭಯ ದರೋಡೆಕೋರನಾಗಿ ರೂಪಾಂತರ ಹೊಂದಿ, ಜನರಿಗೆ ನ್ಯಾಯ ನೀಡಲು ಶಕ್ತಿಶಾಲಿ ಕುಟುಂಬದ ವಿರುದ್ಧ ಹೋರಾಡುತ್ತಾರೆ. ಬಾಲಕೃಷ್ಣರ ಜೊತೆಗೆ, ಈ ಚಿತ್ರದಲ್ಲಿ ಬಾಬಿ ದೇವ್, ಪ್ರಾಗ್ಯಾ ಜೈಸ್ವಾಲ್, ಶ್ರದ್ಧಾ ಶ್ರೀನಾಥ್, ರಿಷಿ, ಚಂದನಿ ಚೌಧರಿ, ಪ್ರದೀಪ್ ರಾವತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದು ಪ್ರೇಕ್ಷಕರಿಂದ ಈ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.