India-Pakistan Ceasefire: ಕದನ ವಿರಾಮದ ಬಗ್ಗೆ ಇಂದು ಭಾರತ-ಪಾಕ್ ಸೇನಾಪಡೆ ಸಭೆ
ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ಪಾಕಿಸ್ತಾನ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್, ಶೆಲ್, ಗುಂಡಿನ ದಾಳಿ ನಡೆಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿಯೂ ಜೈಸಲ್ಮೇರ್, ಬಾಡಮೇರ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉರಿ ಪ್ರದೇಶದಲ್ಲಿ ಬ್ಲ್ಯಾಕ್‌ಔಟ್ ಮಾಡಲಾಗಿತ್ತು


ನವದೆಹಲಿ: ಭಾನುವಾರ ಪಾಕಿಸ್ತಾನದ ಡಿಜಿಎಂಒಗೆ (ಸೇನಾ ಕಾರ್ಯಾಚರಣೆಗೆ ಪ್ರಧಾನ ನಿರ್ದೇಶಕ) ಕರೆ ಮಾಡಿ ಕದನ ವಿರಾಮ(India-Pakistan Ceasefire) ಉಲ್ಲಂಘಿಸಿದರೆ ಸೂಕ್ತ ತಿರುಗೇಟು ನೀಡಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ ಬಳಿಕ ಪಾಕ್ ಸದ್ಯ ತೆಪ್ಪಗಾಗಿದೆ. ಸೋಮವಾರ ಭಾರತ ಮತ್ತು ಪಾಕಿಸ್ತಾನ(India-Pakistan)ದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMO) ನಡುವೆ ಕದನ ವಿರಾಮದ ಭವಿಷ್ಯದ ಕುರಿತು ಮಾತುಕತೆ ನಿಗದಿಯಾಗಿದೆ. ಮಧ್ಯಾಹ್ನ 12ರ ಸುಮಾರಿಗೆ ಹಾಟ್‌ಲೈನ್ ಮೂಲಕ ಈ ಸಭೆ(india-pakistan dgmo meeting) ನಡೆಯಲಿದೆ.
ಸಭೆಯಲ್ಲಿ ಕದನವಿರಾಮದ ಮರುಜಾರಿ, ಸದ್ಯದ ಪರಿಸ್ಥಿತಿ ಮತ್ತು ಗಡಿಯಲ್ಲಿನ ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ. 36 ತಾಸುಗಳ ಕಾಲ (ಸೋಮವಾರದ ಡಿಜಿಎಂಒ ಸಭೆಯ ವರೆಗೆ) ಕದನವಿರಾಮ ಪಾಲಿಸುವ ಒಪ್ಪಂದ ಆಗಿತ್ತು. ಸೋಮವಾರದ ಸಭೆಯಲ್ಲಿ ಪಾಕ್ ಮತ್ತೆ ಮೊಂಡು ವಾದ ನಡೆಸಲಿದೆಯೇ ಎಂದು ಕಾದು ನೋಡಬೇಕಿದೆ. ಕದನ ವಿರಾಮ ಘೋಷಣೆಯಾಗಿದ್ದರೂ ಸದ್ಯ ಉಭಯ ದೇಶಗಳ ಗಡಿಯುದ್ದಕ್ಕೂ ಮಿಲಿಟರಿ ನಿಯೋಜನೆ ಯಥಾ ಸ್ಥಿತಿಯಲ್ಲಿದೆ.
ಶನಿವಾರ ಸಂಜೆ ಕದನ ವಿರಾಮ ಘೋಷಣೆ ಬಳಿಕವೂ ಪಾಕಿಸ್ತಾನ ಭಾರತದ ಗಡಿಗಳ ಮೇಲೆ ಭಾರೀ ಪ್ರಮಾಣದ ಡ್ರೋನ್, ಶೆಲ್, ಗುಂಡಿನ ದಾಳಿ ನಡೆಸಿತ್ತು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ರಾತ್ರಿಯೂ ಜೈಸಲ್ಮೇರ್, ಬಾಡಮೇರ್, ಜಮ್ಮು ಮತ್ತು ಕಾಶ್ಮೀರ ಹಾಗೂ ಉರಿ ಪ್ರದೇಶದಲ್ಲಿ ಬ್ಲ್ಯಾಕ್‌ಔಟ್ ಮಾಡಲಾಗಿತ್ತು. ಸದ್ಯ ಗಡಿಯಲ್ಲಿ ಶಾಂತಿ ಪರಿಸ್ಥಿತಿ ನೆಲೆಸಿದ್ದ ಹಿನ್ನೆಲೆಯಲ್ಲಿ, ಸಂಘರ್ಷ ತೀವ್ರಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ಗಡಿಯ ಜನ ನೆಮ್ಮದಿಯಿಂದ ನಿದ್ದೆ ಮಾಡಿದ್ದಾರೆ.
ಇದನ್ನೂ ಓದಿ IPL 2025: ಆರ್‌ಸಿಬಿಗೆ ಆಘಾತ, ಇನ್ನುಳಿದ ಪ್ರಮುಖ ಪಂದ್ಯಗಳಿಗೆ ಜಾಶ್ ಹೇಝಲ್‌ವುಡ್ ಅನುಮಾನ!
'ಅಪರೇಷನ್ ಸಿಂದೂರ್' ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆ ಮತ್ತು ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಕೆಲವು ಹಿರಿಯ ಸೇನಾಧಿಕಾರಿಗಳೂ ಸೇರಿದಂತೆ ಸೇನೆಯ 40 ಯೋಧರು ಸಾವನ್ನಪ್ಪಿದ್ದಾರೆ. ಎಂದು ಭಾರತೀಯ ಸೇನಾ ಭಾನುವಾರ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆ 3 ಡಿಜಿಎಂಒಗಳು ಅಂಕಿ ಸಂಕಿ ಸಮೇತ ಮಾಹಿತಿ ನೀಡಿದ್ದರು.