ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚೀನಾ ನಿರ್ಮಿತ ಪಾಕ್‌ ಏರ್ ಡಿಫೆನ್ಸ್ ಧ್ವಂಸ; ವಿಡಿಯೋ ರಿಲೀಸ್‌ ಮಾಡಿದ ಸೇನೆ

ಮೇ 7 ರಂದು ಪಿಒಜೆಕೆ ಮತ್ತು ಇತರ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಯನ್ನು (Operation Sindoor) ಗುರಿಯಾಗಿಸಿಕೊಂಡು ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯನ್ನು ನಡೆಸಿತ್ತು. ನಂತರ ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಘರ್ಷದ ಸಮಯದಲ್ಲಿ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶವಾದ ಪಾಕಿಸ್ತಾನಿ ಮಿರಾಜ್ ಯುದ್ಧವಿಮಾನದ ಅವಶೇಷಗಳನ್ನು ಇಂದು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

ಚೀನಾ ನಿರ್ಮಿತ  ಪಾಕ್‌ ಏರ್ ಡಿಫೆನ್ಸ್ ಧ್ವಂಸ; ವಿಡಿಯೋ ರಿಲೀಸ್‌

Profile Vishakha Bhat May 12, 2025 4:57 PM

ನವದೆಹಲಿ: ಮೇ 7 ರಂದು ಪಿಒಜೆಕೆ ಮತ್ತು ಇತರ ಪ್ರದೇಶಗಳಲ್ಲಿನ ಭಯೋತ್ಪಾದಕ ನೆಲೆಯನ್ನು (Operation Sindoor) ಗುರಿಯಾಗಿಸಿಕೊಂಡು ಭಾರತ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆಯನ್ನು ನಡೆಸಿತ್ತು. ನಂತರ ಉಭಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಂಘರ್ಷದ ಸಮಯದಲ್ಲಿ ವಾಯು ರಕ್ಷಣಾ ವ್ಯವಸ್ಥೆಯಿಂದ ನಾಶವಾದ ಪಾಕಿಸ್ತಾನಿ ಮಿರಾಜ್ ಯುದ್ಧವಿಮಾನದ ಅವಶೇಷಗಳನ್ನು ಇಂದು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ DGMO ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾಹಿತಿ ನೀಡಿದರು.

ವೀಡಿಯೊದ ಆರಂಭದಲ್ಲಿಯೇ, ಪಾಕಿಸ್ತಾನ ವಾಯುಪಡೆಯ (ಪಿಎಎಫ್) ಮಿರಾಜ್ ಯುದ್ಧವಿಮಾನವು ತುಂಡು ತುಂಡಾಗಿರುವುದನ್ನು ಕಾಣಬಹುದು. ಏರ್ ಫೈನ್ಸ್ ಫೈಟರ್ ಮಿಸೈಲ್ ಬಳಸಿ ದಾಳಿ ಮಾಡಿದ್ದೇವೆ. ಸರ್ಫೇಸ್ ಟು ಸರ್ಫೇಸ್ ಟು ಮೂಲಕ ದಾಳಿ ಮಾಡಿದ್ದೇವೆ. ಪಾಕಿಸ್ತಾನ ಸೇನೆಯು ಉಗ್ರರಿಗೆ ಸಹಕಾರ ಮತ್ತು ನೆರವು ನೀಡುತ್ತಿದೆ, ಉಗ್ರರ ನೆಲೆಗಳನ್ನು ಹುಡುಕಿ ನಾವು ಹೊಡೆದಿದ್ದೇವೆ. ಭಾರತೀಯ ಸೇನೆಯ ಹೋರಾಟ ಉಗ್ರರ ವಿರುದ್ಧ ಮಾತ್ರ. ಚೀನಾದ ಪಿ ಎಲ್-15 ಮಿಸೆಲ್ ಬಳಸಿ ಪಾಕಿಸ್ತಾನ ದಾಳಿ ನಡೆಸಿತ್ತು. ಭಾರತದ ರೋಬೋಟ್ ಸಿಸ್ಟಮ್ ನಿಂದ ತಕ್ಕ ಪ್ರತ್ಯುತ್ತರ ನೀಡಿದ್ದು, ಚೀನಾ ನಿರ್ಮಿತ ಪಾಕಿಸ್ತಾನದ ಕ್ಷಿಪಣಿಯನ್ನು ಧ್ವಂಸಗೊಳಿಸಿದ್ದೇವೆ. ಚೀನಾ ನಿರ್ಮಿತ ಶಸ್ತ್ರ ರಹಿತ ಡ್ರೋನ್ ಗಳನ್ನು ಧ್ವಂಸಗೊಳಿಸಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಗಿದೆ.

ಏರ್ ಮಾರ್ಷಲ್ ಎ.ಕೆ. ಭಾರ್ತಿ ಅವರು ಭಾರತೀಯ ವಾಯುಪಡೆಯ ದಾಳಿಯಿಂದ ಧ್ವಂಸಗೊಂಡ ಎರಡು ಪಾಕಿಸ್ತಾನಿ ವಾಯುನೆಲೆಗಳ ದೃಶ್ಯಗಳನ್ನು ತೋರಿಸಿದರು. ಭಾರತೀಯ ಸೇನೆಯ ಹೋರಾಟ ಉಗ್ರರ ವಿರುದ್ಧ ಇದೆ.ಉಗ್ರರಿಗೆ ಪಾಕಿಸ್ತಾನ ಕುಮ್ಮಕ್ಕೂ ನೀಡುತ್ತಿದೆ. ಮೇ 7 ರಂದು ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ಹೋರಾಟ ಪಾಕಿಸ್ತಾನ ಸೇನೆಯ ವಿರುದ್ಧ ಅಲ್ಲ ಭಾರತೀಯ ಸೇನೆಯ ಹೋರಾಟ ಏನಿದ್ದರೂ ಉಗ್ರರ ವಿರುದ್ಧ ಮಾತ್ರ. ಆದರೆ ಪಾಕಿಸ್ತಾನ ಮಾತ್ರ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂದರು.

ಈ ಸುದ್ದಿಯನ್ನೂ: Fact Check: ಭಾರತದ ಮೇಲೆ ಕ್ಷಿಪಣಿ ದಾಳಿ ಮಾಡುವಾಗ ಪಾಕಿಸ್ತಾನಿಗಳು ವಿಡಿಯೋ ಮಾಡಿದ್ರಾ? ಅಸಲಿ ವಿಚಾರ ಬಯಲು

90 ನಿಮಿಷಗಳಲ್ಲಿ ಭಾರತವು ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಶೋರ್ಕೋಟ್‌ನ ರಫೀಕಿ ವಾಯುನೆಲೆ, ಪಂಜಾಬ್‌ನ ಮುರಿಯದ್ ವಾಯುನೆಲೆ, ಸಿಂಧ್‌ನ ಸುಕ್ಕೂರ್ ವಾಯುನೆಲೆ, ಸಿಯಾಲ್‌ಕೋಟ್ ವಾಯುನೆಲೆ, ಪಸ್ರೂರ್ ವಾಯುನೆಲೆ, ಸರ್ಗೋಧಾ ವಾಯುನೆಲೆ, ಸ್ಕಾರ್ಡು ವಾಯುನೆಲೆ, ಕರಾಚಿ ಬಳಿಯ ಭೋಲಾರಿ ವಾಯುನೆಲೆ ಮತ್ತು ಜಕೋಬಾಬಾದ್ ವಾಯುನೆಲೆಯ ಮೇಲೆ ದಾಳಿ ಮಾಡಿತು.