ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ತಪ್ಪು ಮಾಡದಿದ್ದರೂ 4 ದಿನ ಸೆರೆವಾಸ ಅನುಭವಿಸಿದ ಮಹಿಳೆ

ಹೆಸರಿನ ಗೊಂದಲದಿಂದ ಹಲವರು ಸಂಕಷ್ಟ ಅನುಭವಿಸಿರುವ ಘಟನೆ ಬಗ್ಗೆ ಆಗಾಗ್ಗೆ ಕೇಳುತ್ತಿರುತ್ತೇವೆ. ಈಗ ಇಂತಹ ಒಂದು ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಆರೋಪಿ ಮಹಿಳೆಯ ಬದಲಾಗಿ ಅಪರಾಧಕ್ಕೂ ತನಗೂ ಸಂಬಂಧವಿಲ್ಲದ ಮಹಿಳೆ ಬಂಧನಕ್ಕೆ ಒಳಗಾಗಿ ನಾಲ್ಕು ದಿನ ಜೈಲು ವಾಸ ಅನುಭವಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ಹೆಸರು ಗೊಂದಲ; ತಪ್ಪೇ ಮಾಡದ ಮಹಿಳೆಗೆ  ಜೈಲು ಶಿಕ್ಷೆ

ಲಖನೌ: ಹೆಸರಿನ (Name) ಗೊಂದಲದಿಂದ ಹಲವರು ಸಂಕಷ್ಟ ಅನುಭವಿಸಿರುವ ಘಟನೆ ಆಗಾಗ್ಗೆ ಕೇಳುತ್ತಿರುತ್ತೇವೆ. ಈಗ ಇಂತಹ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆರೋಪಿ ಮಹಿಳೆಯ ಬದಲಾಗಿ ಅಪರಾಧಕ್ಕೂ ತನಗೂ ಸಂಬಂಧವಿಲ್ಲದ ಮಹಿಳೆ ಬಂಧನಕ್ಕೆ ಒಳಗಾಗಿ 4 ದಿನ ಜೈಲು ವಾಸ ಅನುಭವಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly) ನಡೆದಿದೆ. ಇದು ಆಗಿದ್ದು ಹೆಸರಿನಿಂದ. ಪೊಲೀಸರು ಛೋಟೆಯ ಪತ್ನಿ ಮುನ್ನಿ (Munni) ಎಂಬವರನ್ನು ಬಂಧಿಸುವ ಬದಲಾಗಿ ಜಾನಕಿ ಪ್ರಸಾದ್ ಅವರ ಪತ್ನಿ ಮುನ್ನಿ ದೇವಿಯನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ಬರೇಲಿಯ ಬಂಡಿಯಾ ಗ್ರಾಮದಲ್ಲಿ ಪೊಲೀಸರು ಮುನ್ನಿ ಎಂಬ ಮಹಿಳೆಯನ್ನು ಹುಡುಕುತ್ತಿದ್ದರು. ತಮಗೆ ಸಿಕ್ಕಿದ ಮಾಹಿತಿ ಮೇರೆಗೆ ಮುನ್ನಿ ಎಂಬ ಮಹಿಳೆಯನ್ನು ಬಂಧಿಸಿ ಜೈಲಿಗೆ ಹಾಕಿದರು. ಆದರೆ ಇವರು ನಾವು ಹುಡುಕುತ್ತಿದ್ದ ಮುನ್ನಿ ಅಲ್ಲ ಎಂಬುದು ಅವರಿಗೆ ಬಳಿಕ ತಿಳಿಯಿತು. ಆದರೆ ಅಷ್ಟರಲ್ಲಿ ಮಹಿಳೆ ಯಾವುದೇ ಅಪರಾಧವನ್ನು ಮಾಡದೇ ಇದ್ದರೂ ನಾಲ್ಕು ದಿನ ಜೈಲು ವಾಸ ಅನುಭವಿಸಿದ್ದರು.

2020ರಲ್ಲಿ ವಿದ್ಯುತ್ ಕಳ್ಳತನದ ಪ್ರಕರಣದಲ್ಲಿ ಛೋಟೆಯ ಪತ್ನಿ ಮುನ್ನಿ ವಿರುದ್ಧ ಸ್ಥಳೀಯ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿತು. ಇದರ ಪ್ರಕಾರ ಏಪ್ರಿಲ್ 13ರಂದು, ಪೊಲೀಸರು ಮುನ್ನಿಯನ್ನು ಬಂಧಿಸಲು ಬಂಡಿಯಾ ಗ್ರಾಮಕ್ಕೆ ಬಂದಿದ್ದರು. ಆದರೆ ಆರೋಪಿಯ ಗುರುತು ದೃಢೀಕರಿಸದೆ ಅವರು ಬೇರೆ ಮಹಿಳೆಯನ್ನು ಬಂಧಿಸಿದ್ದಾರೆ. ಜಾನಕಿ ಪ್ರಸಾದ್ ಅವರ ಪತ್ನಿ ಮುನ್ನಿ ದೇವಿ ಬಂಧಿತರಾಗಿದ್ದಾರೆ. ಕಾರಣ ಆರೋಪಿಯ ಹೆಸರು ಮುನ್ನಿ ಆಗಿದ್ದು, ಇವರ ಹೆಸರು ಕೂಡ ಮುನ್ನಿ.

ಇದನ್ನೂ ಓದಿ: Anjana Arjun: ವಿದೇಶಿ ಹುಡುಗನ ಜತೆ ಸಪ್ತಪದಿ ತುಳಿಯಲು ಅರ್ಜುನ್ ಸರ್ಜಾ ಪುತ್ರಿ ಸಜ್ಜು; ಇಲ್ಲಿವೆ ಭಾವಿ ದಂಪತಿಯ ಫೋಟೋಸ್‌

ಆಕೆಯ ಪತಿಯ ಹೆಸರು, ಯಾವುದೇ ವೈಯಕ್ತಿಕ ಗುರುತನ್ನು ಪರಿಶೀಲಿಸದ ಪೊಲೀಸರು ನೇರವಾಗಿ ಮುನ್ನಿ ದೇವಿಯನ್ನು ಜೈಲಿಗೆ ಕಳುಹಿಸಿದ್ದರು. ತನಗೆ ಸಂಬಂಧವಿಲ್ಲದ ಅಪರಾಧಕ್ಕಾಗಿ ಅವರು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದರು. ಈ ವೇಳೆ ನಿಜವಾದ ಆರೋಪಿ ಛೋಟೆಯ ಪತ್ನಿ ಮುನ್ನಿ ನಾಪತ್ತೆಯಾಗಿದ್ದರು.

ನಾಲ್ಕು ದಿನಗಳ ಬಳಿಕ ತಪ್ಪಿನ ಅರಿವಾದ ಪೊಲೀಸರು ಕೂಡಲೇ ಮುನ್ನಿ ದೇವಿಯನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಯಾವುದೇ ರೀತಿಯಲ್ಲಿ ಔಪಚಾರಿಕವಾಗಿ ಅವರಲ್ಲಿ ಕ್ಷಮೆಯಾಚಿಸಿಲ್ಲ. ಬದಲಾಗಿ, ಆಕೆಯ ಕುಟುಂಬಕ್ಕೆ ಮೌನವಾಗಿರಲು ಮತ್ತು ಮಾಧ್ಯಮಗಳೊಂದಿಗೆ ಮಾತನಾಡದೇ ಇರಲು ಸೂಚಿಸಿದ್ದಾರೆ ಎನ್ನಲಾಗಿದೆ.