ಭಾರತೀಯತೆ ಮರೆಯುತ್ತಿರುವ ಯುವಕರು

ಭಾರತೀಯತೆ ಮರೆಯುತ್ತಿರುವ ಯುವಕರು

image-b254de1f-7fca-4f21-b8c6-fa23ca68546f.jpg
Profile Vishwavani News Dec 6, 2021 1:03 PM
image-0a2ab5a0-68d4-4871-8ad2-eaa502fc3835.jpg
ಈ ಹಿಂದೆ ಭಾರತೀಯರು ಎಂದರೆ ಇಡೀ ವಿಶ್ವವೇ ಕೈ ಮುಗಿಯುತಿತ್ತು. ಏಕೆಂದರೆ ಭಾರತ ಸಂಪೂರ್ಣ ಜಗತ್ತಿಗೆ ಒಂದು ಮಾದರಿ ದೇಶ. ಜಗತ್ತಿಗೆ ಒಡೆಯ ವಿಶ್ವ ವಿಜೇತವಾಗಿದ್ದ ಈ ಭರತ ಭೂಮಿ ಇಂದು ಬರುಡಾಗುತ್ತಿದೆ. ವಿವೇಕರಂತಹ ವೀರ ಸನ್ಯಾಸಿಗಳು ಜನಸಿದ ಈ ಪರಮ ಭೂಮಿ ಸಂಸ್ಕೃತಿಯನ್ನು ಮರೆತು ಮರಳಾಗುತ್ತಿದೆ. ಅಂದು ಪುಸ್ತಕ ಪ್ರೇಮ ಭಾರತದಲ್ಲಿ ಸಂಪೂರ್ಣ ಆವರಿಸಿತ್ತು. ಗ್ರಂಥಾಲಯಗಳು ಹೆಜ್ಜೆ ಹೆಜ್ಜೆಗೂ ಹುಟ್ಟಿಕೊಂಡು, ಜ್ಞಾನ ಭಂಡಾರವೇ ಹರಿ ದಾಡುತ್ತಿತ್ತು. ಇಂದು ಇದೇ ಭರತ ಭೂಮಿ ಯಲ್ಲಿ. ಪುಸ್ತಕ ಕ್ರಾಂತಿ ಆಗಬೇಕಿದೆ, ಏಕೆಂದರೆ ಅಂದು ಪುಸ್ತಕಗಳನ್ನು ಗ್ರಂಥಾಲಯ ಹಾಗೂ ಗಾಜಿನ ದರ್ಪಣಗಳಲ್ಲಿ ನಾವು ಕಾಣಬಹುದಿತ್ತು. ಇಂದು ಅದೇ ಪುಸ್ತಕಗಳನ್ನು ನಾವು ರಸ್ತೆ ಬದಿ ವ್ಯಾಪಾರಿಗಳಲ್ಲಿ ಕಾಣುತ್ತೇವೆ ಹಾಗೂ ದಿನದ ಬಳಕೆಯ ವಸ್ತುಗಳನ್ನು ಗಾಜಿನ ದರ್ಪಣನದ ಅಂಗಡಿಗಳಲ್ಲಿ ಕಾಣುತ್ತೇವೆ. ಯಾಕೆ ಪುಸ್ತಕಕ್ಕೆ ಬೆಲೆ ಇಲ್ಲವೇ ನೆನಪಿರಲಿ ಕಟ್ಟಲಾಗದ ಬೆಲೆ ಪುಸ್ತಕಕ್ಕೆ ಇದೆ. ವಿಶ್ವ ಗುರು ಬಸವಣ್ಣನವರ ನೆಲೆಸಿದ ನಾಡು ನಮ್ಮದು. ನಾವೆಲ್ಲ ಎಚ್ಚರ ವಹಿಸಬೇಕು ಪುಸ್ತಕ ಕ್ರಾಂತಿ ನಡೆಯಬೇಕು. ಪುಸ್ತಕ ಜೋಳಿಗೆ ಕಾರ್ಯ ಸಾಗಬೇಕು ಮೊದಲು ನಾವೆಲ್ಲ ನಮ್ಮ ಸಂಸ್ಕೃತಿಯೊಂದಿಗೆ ಒಂದಾಗಬೇಕು. - ದಾನೇಶ ತೆಲಸಂಗ ಕೊಡುವೆವು ನಮ್ಮ ಜೀವವ! ಮಣ್ಣಿನಿಂದಲೇ ತಿನ್ನುವ ಅನ್ನ, ಮಣ್ಣಿನಿಂದಲೇ ತೊಡುವ ಚಿನ್ನ ಮಣ್ಣಿನಿಂದಲೇ ಕುಡಿವ ಜಲ, ಮಣ್ಣಿನಿಂದಲೇ ನಿಲ್ಲುವ ನೆಲ ಕಡೆಗೆ ಮುಚ್ಚುವ ಕಣ್ಣಿಗೂ ಮಣ್ಣೇ ಮೂಲ!! ಅತಿಯಾದ ರಾಸಾಯನಿಕ ಮಿತಿಯಾದ ಸಾವಯವ ಮಿತಿಮೀರಿದ ಪ್ಲಾಸ್ಟಿಕ್ ಮಿತಿಯೇ ಇಲ್ಲದ ಪರಿಸರ ನಾಶ! ಇವೆಲ್ಲವುಗಳಿಂದ ದಿನೇ ದಿನೇ ಸತ್ವ ಕಳೆದುಕೊಳ್ಳುತ್ತಿರುವ ಮಣ್ಣು!! ಮಣ್ಣೇ ಸತ್ವ ಕಳೆದುಕೊಂಡರೆ ನಮ್ಮ ಸತ್ವ ಉಳಿದೀತೇ?? ಉಳಿಸೋಣ ಪರಿಸರವ, ಬಳಸೋಣ ಸಾವಯವ! ಮಾಡೋಣ ಅಭಿವೃದ್ಧಿಯ ಸುಸ್ಥಿರ ಪಾಲಿಸೋಣ ನಿಸರ್ಗದ ನಿಯಮವ!! ಮಣ್ಣಿನಲ್ಲಿ ಹುಟ್ಟಿ, ಮಣ್ಣಿನ ಬೆಳೆದು, ಮಣ್ಣಿ ನಲ್ಲಿಯೇ ಸಾಗಿಸುವೆವು ಜೀವನವ ಇದನುಳಿಸಲು ಕೊಡುವೆವು ನಮ್ಮ ಜೀವವ!! - ರಾಘವೇಂದ್ರ ಮಠದ್ ರಾಯಚೂರು. ಎನ್‌ಇಪಿ ಜಾರಿಯಿಂದಾದ ಪ್ರಯೋಜನವೇನು? ಕರ್ನಾಟಕ ರಾಜ್ಯ ಸರಕಾರ ದೇಶದಲ್ಲಿ ಮೊದಲ ಬಾರಿಗೆ ನೂತನ ರಾಷ್ಟ್ರೀಯ ಶಿಕ್ಷಣವನ್ನು ಜಾರಿಗೆ ತಂದು ಏನು ಸಾಧನೆ ಮಾಡಿತೋ ಗೊತ್ತಿಲ್ಲ. ಆದರೆ ಪದವಿ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ಮುಗಿಯುತ್ತಿದ್ದರೂ ಯಾವುದೇ ವಿಶ್ವ ವಿದ್ಯಾಲಯ ದಲ್ಲಿ ಪಠ್ಯ ಪುಸ್ತಕ ಲಭ್ಯವಿಲ್ಲದ ಕಾರಣ ವಿದ್ಯಾರ್ಥಿಗಳ ಪರದಾಟ ನಡೆದಿದೆ. ಅಷ್ಪೇ ಅಲ್ಲದೆ ಉಪನ್ಯಾಸಕರಿಗೂ ಪಠ್ಯಪುಸ್ತಕಗಳು ಸಿಗದೇ ವರ್ಗಗಳು ಸಹ ನಡೆಯದೆ ಇರುವ ಸಾಕಷ್ಟು ಉದಾಹರಣೆಗಳಿವೆ. ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕರೋನಾದಿಂದ ಶಾಲಾ ಕಾಲೇಜುಗಳು ಸ್ಥಗಿತಗೊಂಡು ವಿದ್ಯಾರ್ಥಿಗಳ ಭವಿಷ್ಯ ಮುಳುಗಿ ಹೋಗಿತ್ತು. ಆದರೆ ಈಗ ಶೈಕ್ಷಣಿಕ ಅವಧಿ ಆರಂಭವಾದರೂ ಸಹಿತ ಪಠ್ಯಪುಸ್ತಕಗಳ ಅನುಪಸ್ಥಿತಿಯ ಕೊರತೆಯಿಂದ ವಿಧ್ಯಾರ್ಥಿಗಳು ಅಂಗನವಾಡಿಗೆ ಹೊರಟಂತಿದೆ ಹಾಗೂ ಅವರ ಭವಿಷ್ಯ ಅಳಿವಿನಂಚಿನಲ್ಲಿರುವುದಂತೂ ಸುಳ್ಳಲ್ಲ. ಸರಕಾರವು ಪೂರ್ವ ಸಿದ್ಧತೆ ಇಲ್ಲದೆ ಜಾರಿಗೊಳಿಸಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ತಪ್ಪಿನಿಂದ ಅಧ್ಯಾಪಕರು ಹಾಗೂ ಅಧ್ಯಯನ ಮಾಡುವ ವಿಧ್ಯಾರ್ಥಿಗಳು ಗೊಂದಲದ ಅವಾಂತರಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯದ ಮೆಲ್ಮಟ್ಟ ದರ್ಜೆಯ ಶಿಕ್ಷಣ ಘಟ್ಟದ ಬೆಳವಣಿಗೆ ನಿಷ್ಕ್ರಿಯಗೊಳ್ಳುತ್ತಿದೆ. ಹೀಗಾಗಿ ಈ ದುರ್ದೈವದ ಸಂಗತಿ ಯನ್ನು ತಡೆಯಲು ರಾಜ್ಯ ಸರಕಾರ ಬೇಗನೆ ಎಚ್ಚೆತ್ತುಕೊಂಡು ಕೇವಲ ಪಠ್ಯಕ್ರಮ ಕೊಟ್ಟು ಬಿಡುವುದಲ್ಲದೆ, ಪಠ್ಯ ಪುಸ್ತಕಗಳನ್ನು ಬಿಡುಗಡೆ ಮಾಡಬೇಕು.  - ಮುತ್ತುರಾಜ ಹುಚ್ಚಟ್ಟಿ ಸಿಂಧೂರ ಭ್ರಷ್ಟಾಚಾರ ನಿರ್ಮೂಲನೆ, ಒಂದು ಭ್ರಮೆ! ರಾಜ್ಯದಲ್ಲಿ ಎಸಿಬಿ ಸ್ಥಾಪನೆಯಾಗಿ ಐದು ವರ್ಷಕ್ಕೂ ಹೆಚ್ಚು ಕಾಲವಾಗಿದೆ. ಇದುವರೆಗೂ ಅದು ನಡೆಸಿರುವ ೧೮೧೦ ದಾಳಿ ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದು ಕೇವಲ ೧೦ ಆರೋಪಿಗಳಿಗೆ. ಇದು ಆಡಳಿತ ವ್ಯವಸ್ಥೆ ಊಹಿಸಲಾರದಷ್ಟು ಜಾಳಾಗಿದೆ ಎನ್ನಲು ಹೇಳಲು ಸಾಕು. ಸರಕಾರವು ೧೩೩೫ ನೌಕರರನ್ನು ಅಮಾನತ್ತು ಮಾಡಿದ್ದರ ಹೊರತು ಇನ್ಯಾವ ಘನಂದಾರಿ ಕೆಲಸವನ್ನೂ ಮಾಡಿಲ್ಲ. ಇವರಲ್ಲೂ ಎಷ್ಟು ನೌಕರರು ಮತ್ತೆ ಕೆಲಸಕ್ಕೆ ವಕ್ಕರಿಸಿದ್ದಾರೋ, ಏಕೆಂದರೆ ಅಮಾನತ್ತಾದ ಒಂದು ನಿಗದಿತ ಅವಧಿ ಯೊಳಗೆ ನೌಕರನ ಮೇಲೆ ಸೇವಾ ಕಾಯಿದೆ ಪ್ರಕಾರ ಕ್ರಮ ಜರುಗಿಸದಿದ್ದಲ್ಲಿ, ಅಮಾನತ್ತು ರದ್ದಾಗುತ್ತದೆ. ಪತ್ರಿಕೆಯಲ್ಲಿ ಬಂದ ಮಾಹಿತಿಯಲ್ಲಿ ಎರಡನ್ನು ನಾವು ಗಮನಿಸಬಹುದಾಗಿದೆ. ಒಂದು: ೫೨೯ ಪ್ರಕರಣಗಳಲ್ಲಿ ವಿಚಾರಣೆ ನಡೆಸಲು ಇಲಾಖಾ ಮುಖ್ಯಸ್ಥರ ಪೂರ್ವಾನುಮತಿ ಇನ್ನೂ ಸಿಕ್ಕೇ ಇಲ್ಲ! ಯಾವ ಹಂತದಲ್ಲಿ ಯಾರೆಲ್ಲರ ಕೈಚಳಕವೋ! ಮುಖ್ಯಮಂತ್ರಿಗಳು ಸ್ವತಃ ಆಯಾ ಇಲಾಖಾ ಮುಖ್ಯಸ್ಥರನ್ನು ಯಾಕೆ ತರಾಟೆಗೆ ತೆಗೆದು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೋ? ಎರಡು: ಜನರಿಂದ ಆಯ್ಕೆಗೊಂಡ ಶಾಸಕರು, ಸಂಸದರುಗಳನ್ನೂ ಒಳಗೊಂಡು ಹಾಗೂ ಕ್ಲಾಸ್-೧ ಅಧಿಕಾರಿಗಳೂ ಸೇರಿ ಈ ಎಲ್ಲರ ವಿರುದ್ಧದ ಪ್ರಕರಣಗಳ ಸಂಖ್ಯೆ ೩೯೧. ವ್ಯಾಖ್ಯಾನ? ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆಯನ್ನು ಸ್ಥಾಪಿಸಿದುದರ ಉದ್ದೇಶ ಸಾರ್ಥಕವಾಗಲು ಅದೇ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸುವ ಅಧಿಕಾರ ಪಡೆದಿರಬೇಕು. ಎಲ್ಲಿಯವರೆಗೆ ಭ್ರಷ್ಟರ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಸರಕಾರದ ಮರ್ಜಿಗೆ ಸಲ್ಲುತ್ತದೋ, ಅಲ್ಲಿಯವರೆಗೂ ಭ್ರಷ್ಟಾಚಾರ ನಿರ್ಮೂಲನವೆನ್ನು ವುದು ಒಂದು ಭ್ರಮೆ ಅಷ್ಟೆ. - ಸಾಮಗ ದತ್ತಾತ್ರಿ ಬೆಂಗಳೂರು
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?