Thursday, 19th September 2024

ಆರ್‌ಸಿಇಪಿ ಜಾರಿ ಚೀನಾ ಪ್ರೇರಿತ ಕುತಂತ್ರ

ಅಭಿಮತ

ಶಶಿಕುಮಾರ್‌ ಕೆ

ಆರ್‌ಸಿಇಪಿ (ಮುಕ್ತ ವ್ಯಾಪಾರ ಒಪ್ಪಂದ)ವನ್ನು ಇಷ್ಟು ತರಾತುರಿಯಲ್ಲಿ ಕೈಗೊಳ್ಳಲು ಕಾರಣ ಎಂದರೆ ಚೀನಾದ ಒತ್ತಡ. ಏಕೆಂದರೆ ಕರೋನಾದ ನಂತರ ಭಾರತ, ಅಮೆರಿಕ ಮತ್ತು ಯುರೋಪ್ ಚೀನಾವನ್ನು ನಂಬುತ್ತಿಲ್ಲ.

ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಆತ್ಮನಿರ್ಭರ ಭಾರತ ಯೋಜನೆಯ ಪರಿಣಾಮ ಚೀನಾಕ್ಕೆ ೪೦೦೦೦ ಕೋಟಿ ವ್ಯಾಪಾರದ ನಷ್ಟವಾಗಿದೆ. ಅಲ್ಲದೆ ಚೀನಾದ ಬಹುರಾಷ್ಟ್ರೀಯ ಕಂಪನಿಗಳು ಹೊಸ ಮಾರುಕಟ್ಟೆ ಪ್ರವೇಶಿಸಲು ಕಾಯುತ್ತಿವೆ. 1998ರಲ್ಲಿ ಫಾರ್ಚುನ್ – 500 ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಮೆರಿಕದ 185, ಯುರೋಪ್‌ನ 156 ಕಂಪನಿಗಳಿದ್ದರೆ, ಚೀನಾದ ಕೇವಲ 7 ಕಂಪನಿಗಳಿದ್ದವು.

21 ವರ್ಷಗಳಲ್ಲಿ ಚಿತ್ರಣ ಸಂಪೂರ್ಣವಾಗಿ ಬದಲಾಗಿದ್ದು 2019ರ ಜುಲೈನಲ್ಲಿ ಚೀನಾ 129 ಕಂಪನಿಗಳೊಂದಿಗೆ ಅಗ್ರಸ್ಥಾನ ದಲ್ಲಿದ್ದರೆ, ಅಮೆರಿಕದ 121 ಮತ್ತು ಜಪಾನ್ 52 ಕಂಪನಿಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಚೀನಾದ ಬಹು ರಾಷ್ಟ್ರೀಯ ಕಂಪನಿಗಳು ಕಂಪ್ಯೂಟರ್, ಲ್ಯಾಪ್‌ಟಾಪ್, ಸ್ಮಾರ್ಟ್ ಫೋನ್, ಜೆಟ್ ವಿಮಾನ, ಕಾರುಗಳು, ಔಷಧ ಇತ್ಯಾದಿ ಅಮೆರಿಕ ಉತ್ಪಾದಿ ಸುವ ಎಲ್ಲಾ ವಸ್ತುಗಳನ್ನು ಆ ರಾಷ್ಟ್ರಗಳಿಗಿಂತ ಕಡಿಮೆ ದರದಲ್ಲಿ ಚೀನಾ ಕಂಪನಿಗಳು ತಯಾರಿಸಿ ವಿಶ್ವಕ್ಕೆ ರಪ್ತು ಮಾಡುತ್ತಿವೆ.

ಅನೂಹ್ಯ ಉತ್ಪಾದನೆಗೆ ಮಾರುಕಟ್ಟೆ ಕಲ್ಪಿಸುವ ಸಲುವಾಗಿ 100ಕ್ಕೂ ಹೆಚ್ಚು ದೇಶಗಳ ಜತೆ ಚೀನಾ ದ್ವಿಪಕ್ಷೀಯ ಹಂಚಿಕೆಯ ಒಪ್ಪಂದಗಳನ್ನು ಮಾಡಿಕೊಂಡಿದೆ. ಚೀನಾ ನಾನಾ ದೇಶಗಳೊಂದಿಗೆ 16 ಮುಕ್ತ ವ್ಯಾಪಾರ ಒಪ್ಪಂದಗಳನ್ನು(ಎಫ್.ಟಿಎ) ಏರ್ಪಡಿಸಿಕೊಂಡಿದೆ. ಜತೆಗೆ 8 ಎಫ್ ಟಿಎಗಳಿಗೆ ಮಾತುಕತೆ ನಡೆಯುತ್ತಿದೆ. ಆದ್ದರಿಂದ ಆರ್‌ಸಿಇಪಿ ಒಪ್ಪಂದವನ್ನು ಜಾರಿಗೆ ತರಲು ಚೀನಾ ತುದಿಗಾಲ ಮೇಲೆ ನಿಂತಿದೆ. ಅಮೆರಿಕ 2018ರಲ್ಲಿ 539 ಶತಕೋಟಿ ಡಾಲರ್ (8.40ಲಕ್ಷ ಕೋಟಿ) ಮೌಲ್ಯದ ಆಮದನ್ನು ಚೀನಾದಿಂದ ಮಾಡಿಕೊಂಡಿzರೆ. ಪ್ರತಿಯಾಗಿ ಚೀನಾ ಅಮೆರಿಕದಿಂದ ತರಿಸಿಕೊಂಡಿದ್ದು 120 ಶತಕೋಟಿ ಡಾಲರ್ (8.40ಲಕ್ಷ ಕೋಟಿ ) ಮೌಲ್ಯದ ಉತ್ಪನ್ನಗಳನ್ನು ಮಾತ್ರ. ಚೀನಾ ಹೀಗೆ ವಿಶ್ವದ ವರ್ಕ್ ಶಾಪ್ ಆಗಿ ಯಶಸ್ವಿಯಾಗಲು ಈ ಮುಕ್ತ ವ್ಯಾಪಾರ ಒಪ್ಪಂದಗಳು ಸಹಕಾರಿ ಭಾರತದ ೫೪ ರಾಷ್ಟ್ರಗಳ ಜತೆಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿದೆ.

ಎಪಿಟಿಎ, ಸಪ್ತಾ, ಆಸಿಯಾನ್, ಐಎನ್‌ಎಫ್‌ ಟಿಎ, ಸಿಇಪಿಎ ಇತ್ಯಾದಿ ಹಲವು ವ್ಯಾಪಾರ ಒಪ್ಪಂದಗಳು ಏರ್ಪಟ್ಟಿವೆ. ಜಗತ್ತಿನಾ ದ್ಯಂತ 420 ಪ್ರಾದೇಶಿಕ ವ್ಯಾಪಾರ ಒಪ್ಪಂದಗಳು ಚಾಲ್ತಿಯಲ್ಲಿವೆ. ಆಸಿಯಾನ್ ಎಫ್ ಟಿಎ ಇಂದ ಭಾರತಕ್ಕೆ ಅನುಕೂಲಗಳು ಸಹ ಇವೆ. ಇತರ ರಾಷ್ಟ್ರಗಳಿಂದ ಬಂಡವಾಳ ಸರಕುಗಳು (ಉತ್ಪನ್ನಗಳನ್ನು ತಯಾರಿಸಲು ಬಳಸುವ ಸರಕುಗಳು) ಮತ್ತು ಕೈಗಾರಿಕೆಗಳಿಗೆ ಬೇಕಾಗುವ ವಸ್ತುಗಳ ಪೂರೈಕೆಯ ಹರಿವು ಹೆಚ್ಚಾಗುತ್ತದೆ. ಇದು ಉದ್ದಿಮೆ ವಲಯಕ್ಕೆ ಸಹಕಾರಿಯಾಗಿದೆ.

ಪರೋಕ್ಷವಾಗಿ ಉತ್ಪಾದನೆ ಸುಧಾರಿಸಲು ನೆರವಾಗುತ್ತದೆ. ಭಾರತದ ಅತಿ ದೊಡ್ಡ ವಲಯವಾದ ಸೇವಾವಲಯ ಜಿಡಿಪಿಯಲ್ಲಿ ಅದರ ಪಾಲು 2018-19ರಲ್ಲಿ ಶೇಕಡ 54.40 ಇತ್ತು. ಅಂದಾಜು 93 ಲಕ್ಷ ಕೋಟಿಗೂ ಹೆಚ್ಚು ಮೌಲ್ಯವನ್ನು ಸೇವಾವಲಯ ನೀಡಿದೆ. ಭಾರತದ ಸೇವಾ ವಲಯದ ವೃತ್ತಿಪರರು (ಶಿಕ್ಷಕರು, ಟೆಕ್ಕಿಗಳು, ಎಂಜಿನಿಯರ್, ವಾಸ್ತುಶಿಲ್ಪಗಳು, ವೈದ್ಯರು) ಚೀನಾ ಸೇರಿ 15 ರಾಷ್ಟ್ರಗಳಲ್ಲಿ ಸರಾಗವಾಗಿ ತೆರಳಿ ವ್ಯವಹರಿಸಲು ಸಾಧ್ಯವಾಗುತ್ತಿತ್ತು. ಭಾರತದ ಉದ್ಯಮಗಳಿಗೆ ಅಗತ್ಯವಾದ ಕಚ್ಚಾ ಸರಕುಗಳು ಮತ್ತು ಸಾಮಗ್ರಿಗಳನ್ನು ಆಸಿಯಾನ್ ರಾಷ್ಟ್ರ ಗಳಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ಅವಕಾಶವಿತ್ತು. ಅಲ್ಲದೆ ಭಾರತ ವಿಶ್ವದ ಔಷಧ ತಯಾರಿಕೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದು ಚೀನಾದಿಂದ ನಾವು ಔಷಧ ತಯಾರಿಕೆಗೆ ಬಳಸುವ ಕಚ್ಚಾ ಸಾಮಗ್ರಿಗಳು (ಎಪಿಐ – ಆಕ್ಟಿವ್ ಫಾರ್ಮಸಿಟಿಕಲ್ ಇನ್‌ಗ್ರೇನ್ಟ್ ) ಕಡಿಮೆ ಬೆಲೆಗೆ ಸಿಗುತ್ತಿದ್ದವು.

ಇದರಿಂದ ನಮ್ಮ ಔಷಧ ಉದ್ಯಮ ಮತ್ತಷ್ಟು ಅಭಿವೃದ್ಧಿ ಆಗುತ್ತಿತ್ತು. ಆರ್‌ಸಿಇಪಿಯ ಇಂತಹ ಲಾಭಗಳನ್ನು ಮನಗಂಡಂತಹ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಆರ್‌ಸಿಇಪಿಯ ಕಡೆ ಒಲವು ತೋರಿದ್ದರು. ಆರ್‌ಇಪಿ ಒಪ್ಪಂದದ ಕುರಿತು ಚೀನಾ ಭಿನ್ನ ಹೇಳಿಕೆಗಳನ್ನು ನೀಡುತ್ತಿದೆ. ಭಾರತ ಈ ಒಪ್ಪಂದಕ್ಕೆ ಸಹಿ ಹಾಕದಿದ್ದರೆ 5 ಟ್ರಿಲಿಯನ್ ಡಾಲರ್ ಎಕಾನಮಿಯಾಗಲು ಸಾಧ್ಯವೇ ಎಂದು ಹೇಳಿದೆ. ಆದರೆ ಇದರಿಂದ ಇಲ್ಲಿನ ಸಣ್ಣ ಉದ್ಯಮ, ಕೃಷಿ, ಹೈನುಗಾರಿಕೆ ಇತ್ಯಾದಿ ವಲಯಗಳಿಗೆ ಉಂಟಾಗುವ ಭಾರಿ ಹೊಡೆತ. ಹೀಗಿರುವಾಗ ಪೂರ್ವ ಸಿದ್ಧತೆ ಇಲ್ಲದೆ ಆಮದು ತೆರಿಗೆಗಳನ್ನೆಲ್ಲ ರದ್ದುಗೊಳಿಸಿ ಭಾರತವನ್ನು ಚೀನಾ, ಅಮೆರಿಕ, ದಕ್ಷಿಣ ಕೊರಿಯಾ ದೇಶಗಳ ಡಂಪಿಂಗ್ ಯಾರ್ಡ್ ಆಗಿಸಲು ಹೇಗೆ ಸಾಧ್ಯ?

 

Leave a Reply

Your email address will not be published. Required fields are marked *