Tuesday, 22nd October 2024

ಸಂಕಷ್ಟದಲ್ಲಷ್ಟೇ ಅಲ್ಲ, ಎಲ್ಲ ಕಾಲದಲ್ಲೂ ವಾರಿಯರ್ಸ್‌

ಅಭಿಪ್ರಾಯ

ಲಕ್ಷ್ಮೀಕಾಂತ್‌ ಕುಲಕರ್ಣಿ, ಬಳೂಟಗಿ

ಪ್ರಸ್ತುತ ದೇಶದ ತುಂಬೆ ವ್ಯಾಪಕವಾಗಿ ಹರಡಿರುವ ಕರೋನಾ ಮಾರಿ ಸರಕಾರಗಳು ಕೈಗೊಂಡ ಕಠಿಣ ನಿರ್ಧಾರಗಳಿಂದ ತುಸು ಇಳಿಕೆಯಾಗುತ್ತಿರುವುದು ಸಮಾಧಾನಕರವಾದ ಸಂಗತಿಯಾಗಿದೆ. ಈ ಹಂತದಲ್ಲಿ ಇದಕ್ಕೆ ಕಾರಣರಾಗಿರುವ ಕರೋನಾ ವಾರಿಯರ‍್ಸ್ ಗಳಾದ ವೈದ್ಯರು.

ಪೋಲಿಸ್ ಇಲಾಖೆ. ಆಶಾ ಕಾರ್ಯಕರ್ತೆಯರು. ಅಂಗನವಾಡಿ ಕಾರ್ಯಕರ್ತೆಯರು ಇನ್ನಿತ್ಯಾದಿ ಈ ಕರೋನಾ ಮಾರಿ ಮಣಿಸಲು ತಮ್ಮ ಪ್ರಾಣ ಪಣಕ್ಕಿಟ್ಟು ಶ್ರಮಿಸುತ್ತಿರುವ ಇವರ ಕಾಳಜಿಗೆ ಒಂದು ಸಲಾಂ.. ಹಾಗೇ ಈ ಹಂತದಲ್ಲಿ ಇವರ ಕಾರ್ಯವೈಖರಿ
ಸರಕಾರ ಮತ್ತು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಇಂತಹ ಸಂಕಷ್ಟದ ಸಮಯ ಬಂದಾಗ ಮಾತ್ರ ಇವರಿಗೆ ರಾಜ ಮರ್ಯಾದೆ ಕೊಟ್ಟು ಗೌರವಿಸುವ ಸರಕಾರ ಸಹಜ ಸ್ಥಿತಿ ಇದ್ದಾಗ ಇವರಿಗೆ ಕೊಡುವ ಗೌರವ ಅಷ್ಟಕಷ್ಟೇ ಅದರ ಮೇಲೆ ಬೆಳಕು ಚೆಲ್ಲುವ ಒಂದು ಲೇಖನ.

ಮೊದಲಿಗೆ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ರಾಜ್ಯ ಕೇಂದ್ರ ಸರಕಾರಗಳ ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ರೂಪಿಸುವ ಪ್ರತಿಯೊಂದು ಕಾರ್ಯಕ್ರಮ ಜನಸಾಮಾನ್ಯರಿಗೆ ತಲುಪುವುದೇ ಈ
ಕಾರ್ಯಕರ್ತೆಯರಿಂದ ಸುಮಾರು ವರ್ಷಗಳಿಂದ ರಾಜ್ಯ ಕೇಂದ್ರ ಸರಕಾರ ನೀಡುವ ಗೌರವಧನ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಈ ಕಾರ್ಯಕರ್ತೆಯರಿಗೆ ಸಮಾನಕೆಲಸಕ್ಕೆ ಸಮಾನ ವೇತನ ಎಂಬುದು ಮರೀಚಿಕೆಯಾಗಿದೆ.

ಜತೆಗೆ ವೇತನ ಹೆಚ್ಚಳಕ್ಕಾಗಿ ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ನಮ್ಮನ್ನಾಳುವ ಸರಕಾರಗಳು ಕೇವಲ ತುಸು ವೇತನ ಹೆಚ್ಚಳ ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ.ಇನ್ನಾದರೂ ಸರಕಾರಗಳು ಕೇವಲ ಇಂತಹ ಸಂದರ್ಭದಲ್ಲಿ ಮಾತ್ರ ಮನ್ನಣೆ ಕೊಡದೇ ಯಾವಾಗಲೂ ಇಂತಹ ನೌಕರ ವರ್ಗಕ್ಕೆ ಸರಿಯಾಗಿ ವೇತನ ಹೆಚ್ಚಳ ಮಾಡಬೇಕು.

ಪೊಲೀಸ್ ಮತ್ತು ವೈದ್ಯರು ಒಬ್ಬರು ರಕ್ಷಕರು ಇನ್ನೊಬ್ಬರು ಜೀವ ರಕ್ಷಕರು ನಾಗರಿಕ ಸಮಾಜದ ಪ್ರಮುಖ ಆಧಾರ ಸ್ತಂಭಗಳು.
ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಲಾಕ್‌ಡೌನ್ ಘೋಷಿಸಿದ ಸಂದರ್ಭದಲ್ಲಿ ಹಗಲು ರಾತ್ರಿ ಎನ್ನದೇ ಜನರನ್ನು ಈ ಕೋವಿಡ್‌ ನಿಂದ ರಕ್ಷಿಸಲು ಸರಕಾರಕ್ಕೆ ಪ್ರಮುಖ ಸಾಥ್ ನೀಡುತ್ತಿರುವ ಜತೆಗೆ ಈ ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಪೋಲಿಸರು ಸಲ್ಲಿಸತ್ತಿರುವ ಸಹಾಯ ಸೇವೆ ನಿಜಕ್ಕೂ ಶ್ಲಾಘನೀಯವಾದುದು.

ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ಕೆಲವು ಪೋಲಿಸರು ತಪ್ಪಾಗಿ ನಡೆದುಕೊಂಡಿರಬಹುದು ಅದು ಸಹಜವೇ ಏಕಂದ್ರೆ ಅವರು ಕೂಡ ನಮ್ಮ ನಿಮ್ಮಂತೆ ಮನುಷ್ಯರಲ್ಲವೇ. ನಮ್ಮ ಪೋಲಿಸ್ ಇಲಾಖೆಯಲ್ಲಿ ಅಷ್ಟೇನು ಸಮಸ್ಯೆಗಳಿಲ್ಲ. ಆದರೂ ಕೂಡ ಇನ್ನಷ್ಟು ಬದಲಾವಣೆ ತರುವ ಮೂಲಕ ಪೊಲೀಸ್‌ರಿಗೆ ಸರಕಾರ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಹಾಗೇ ವೈದ್ಯೋ ನಾರಾಯಣ ಹರಿ ಎನ್ನುವಂತೆ ಈ ಕಠಿಣ ಸನ್ನಿವೇಶದಲ್ಲಿ ಜನರ ಜೀವ ಉಳಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರ ಸೇವೆ ಅಗಾಧವಾದದು. ಈ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುವ ಡಿ ಗ್ರೂಪ್ ನೌಕರರು ನರ್ಸ್‌ಗಳು ವೈದ್ಯರ ಪ್ರತಿಯೊಬ್ಬರ ಸೇವೆಯೂ ಕೂಡ ಶ್ಲಾಘನೀಯವಾದುದು.

ಈ ನೌಕರರ ವರ್ಗಕ್ಕೆ ಸರಕಾರ ಇನ್ನಷ್ಟು ಸವಲತ್ತುಗಳನ್ನು ಒದಗಿಸುವ ಮುಖಾಂತರ ಆರೋಗ್ಯ ಇಲಾಖೆಯಡಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ನೈತಿಕ ಸ್ಥೈರ್ಯ ತುಂಬಬೇಕು. ಜತೆಗೆ ಇಂತಹ ಕಠಿಣ ಸನ್ನಿವೇಶದಲ್ಲಿ ಮಾತ್ರ ಇವರ ನೆನಸದೆ ಜನ ಜೀವನ ಸಹಜ ಸ್ಥಿತಿಗೆ ಬಂದಾಗಲೂ ಕೂಡ ಈ ನೌಕರರ ವರ್ಗವನ್ನು ನೆನೆಯಬೇಕು.ಅಂದಾಗ ಮಾತ್ರ ಈ ಕರೋನಾ
ವಾರಿಯರ್ಸ್ ಪದಕ್ಕೆ ನಿಜವಾದ ಅರ್ಥ ಬರುತ್ತೆ.