Tuesday, 22nd October 2024

ಕರೋನಾ ಮತ್ತು ಬಾಯಿಯ ಆರೋಗ್ಯ

ಸಲಹೆ

ಡಾ.ತೇಜಸ್ವಿ ಎಸ್.ವಿ

ಕೋವಿಡ್-19 ಎಂದು ಕರೆಯಲ್ಪಡುತ್ತಿರುವ ಕರೋನಾ ವೈರಾಣುವಿನಿಂದ ಹರಡುತ್ತಿರುವ ಮಹಾಮಾರಿ ಜನಸಾಮಾನ್ಯರನ್ನು ಹೈರಾಣು ಮಾಡಿದೆ. ಈ ವೈರಾಣು ಹೊಸದಾಗಿರುವುದರಿಂದ ಇದರ ಮೇಲೆ ಪ್ರತಿದಿನ ಹೊಸ ಸಂಶೋಧನೆ ನಡೆಯುತ್ತಿದೆ. ಈ ರೋಗ ಹರಡುವ ಪ್ರಮುಖ ಅಂಗ ಎಂದರೆ ಬಾಯಿ ಮತ್ತು ಮೂಗು, ನಮ್ಮ ಸಮಾಜ ಬಾಯಿಯ ಆರೋಗ್ಯದ ಕಡೆ ತುಂಬಾ ಕಡಿಮೆ ಗಮನ ಕೊಡುತ್ತದೆ.

ಸಾಮಾನ್ಯವಾಗಿ covid-19 ರೋಗವು ತನ್ನ ತೀವ್ರತೆಯನ್ನು ತೋರಿಸುವುದು ಮಧುಮೇಹ, ರಕ್ತದೊತ್ತಡ ಹಾಗೂ ಇತರ ದೇಹ ಸಂಯೋಜನೆಯಲ್ಲಿ ಆಗುವ ತೊಂದರೆಗಳಲ್ಲಿ, ಇದಕ್ಕೂ ಬಾಯಿಯ ಆರೋಗ್ಯಕ್ಕೂ ಏನು ಸಂಬಂಧ? ಎಂದು ಹಲವರಿಗೆ ಪ್ರಶ್ನೆ
ಉದ್ಭವಿಸುತ್ತದೆ, ಅದಕ್ಕೆ ಉತ್ತರ ಈ ಮೇಲಿನ ರೋಗಗಳನ್ನು ನಮ್ಮ ಪೂರ್ಣ ಬಾಯಿಯ ಹಾಗೂ ಒಸಡಿನ ಆರೋಗ್ಯದಿಂದ ಕಂಡುಹಿಡಿಯಬಹುದು. ಏಕೆಂದರೆ ಒಸಡಿನ ತೊಂದರೆ ಶುರುವಾಗುವುದು ಈ ರೋಗಗಳಿಂದ.

ಕೋವಿಡ್-೧೯ ರೋಗಕ್ಕೆ ಮುನ್ನ ತೆಗೆದುಕೊಳ್ಳಬೇಕಾದ ಕ್ರಮಗಳು: ಲಾಕ್‌ಡೌನ್ ಮತ್ತು ಕಠಿಣ ಕ್ರಮಗಳಿಂದ ಜನ ದಂತ ವೈದ್ಯರ ಬಳಿ ಹೋಗುವ ಹಾಗೂ ದಂತ ಚಿಕಿತ್ಸೆ ಮಾಡಿಸುವ ಪ್ರಮೇಯ ಕಡಿಮೆಯಾಗುತ್ತಿದೆ ಹಾಗೂ ಜನರು ಬಾಯಿಯ ಆರೋಗ್ಯದ ಕಡೆ ಗಮನ ಕೊಡುವುದು ಕಡಿಮೆಯಾಗತೊಡಗಿದೆ. ಆದ್ದರಿಂದ ಮನೆಯಲ್ಲಿ ಸಾಮಾನ್ಯವಾದ ಕೆಲವು ಕ್ರಮಗಳನ್ನು ತೆಗೆದುಕೊಂಡರೆ ಕರೋನಾ ರೋಗವನ್ನು ಕೂಡ ಬಾರದಂತೆ ತಡೆಯಬಹುದು.

ಬಾಯಿಯಲ್ಲಿ ಮೂಗಿನ ಮತ್ತು ಗಂಟಲಿನ ದ್ರವಗಳು ಪ್ರಮುಖವಾಗಿ ಸ್ರವಿಸುತ್ತವೆ. ಈ ದ್ರವಗಳೇ ಈ ವೈರಾಣುವಿನ ವಾಸ ಹಾಗೂ ಪಸರಿಸುವ ಸ್ಥಳ . ಬಾಯನ್ನು ಹಾಗೂ ಬಾಯಿಯ ಆರೋಗ್ಯವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಕರೋನಾ ಪಸರಿಸುವ ಪ್ರಮಾಣ ಶೇ.60 ಕಡಿಮೆಯಾಗುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ. ಈ ಸಂದರ್ಭದಲ್ಲಿ ಪಾಲಿಸಬೇಕಾದ ಅಂಶ ಗಳೆಂದರೆ, ಬಾಯಿಯನ್ನು ದಿನಕ್ಕೆ ಎರಡು ಬಾರಿ ಮೌತ್ ವಾಷ್‌ನಿಂದ ಸ್ವಚ್ಛ ಪಡಿಸುವುದು. ಇದು ವೈರಾಣುವಿನ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

Chlorhexidine ಅಥವಾ povidone iodine ಮೌತ್ ವಾಷ್ ಬಳಸಿದರೆ ಉತ್ತಮ. ಫ್ಲೋರೈಡ್ ಸಹಿತ ಟೂಥ್ ಪೇಸ್ಟ್‌ನೊಂದಿಗೆ ಎರಡು ಬಾರಿ ಹಲ್ಲುಜ್ಜುವುದು. ಹಲ್ಲಿಗೆ ಕಡ್ಡಿ ಹಾಕುವ ಅಭ್ಯಾಸ ಇರುವವರು, ಹೊರಗೆ ಹೋಗುವ ಮೊದಲು ಬಾಯಿಯನ್ನು ಸ್ವಚ್ಛಗೊಳಿಸಿಕೊಂಡು ಹೋಗುವುದು ಉತ್ತಮ. ಏಕೆಂದರೆ ಬಾಯಲ್ಲಿ ಕೈ ಹಾಕುವ ತೀವ್ರತೆ ಹೆಚ್ಚಾದಾಗ ಅವರು ಸ್ವಚ್ಛಗೊಳಿಸದೆ ಇರುವ ಕೈ ಅನ್ನು ಬಾಯಲ್ಲಿ ಉಪಯೋಗಿಸಿದರೆ ಈ ಕೆಟ್ಟ ಅಭ್ಯಾಸದಿಂದ ಕೋವಿಡ್ 19 ರೋಗಕ್ಕೆ ತುತ್ತಾಗಬಹುದು.

ಬಾಯಿಯ ಆರೋಗ್ಯದ ಮೇಲೆ ಕೋವಿಡ್-19 ಹಲವು ಪರಿಣಾಮಗಳನ್ನು ತೋರುತ್ತದೆ. ಬಾಯಿಯ infection ಗಳು cytokine ಎನ್ನುವ ಕೆಮಿಕಲ್‌ಗಳ ಬಿಡುಗಡೆಗೆ ಕಾರಣವಾಗುತ್ತೆ ಈ cytokine ಗಳು. ಶ್ವಾಸಕೋಶದಲ್ಲಿ Viral infection ನ ಜೊತೆ ಬ್ಯಾಕ್ಟೀರಿಯ infection ಅಥವಾ virusನ infection ಕಡಿಮೆ ಆದ ಮೇಲೆ ಶುರು ವಾಗುವ ಬ್ಯಾಕ್ಟೀರಿಯ infection ge ಕಾರಣ ವಾಗುತ್ತದೆ (ಇದನ್ನು potential post viral bacterial complications  ಎಂದು ಸಂಶೋಧಕರು ಕರೆದಿದ್ದಾರೆ).

ಕರೋನಾ ರೋಗದ ನಂತರ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಗಳು ಪಾಲಿಸಬೇಕಾದ ನಿಯಮಗಗಳೆಂದರೆ ಕರೋನಾ ಪಾಸಿಟಿವ್ ಬಂದಿದ್ದ ಹಾಗೂ ಅದರಿಂದ ಚೇತರಿಸಿಕೊಳ್ಳುತ್ತಿರುವ ವ್ಯಕ್ತಿ ತಮ್ಮ ಬ್ರಷ್ ಹಾಗೂ ನಾಲಿಗೆ ಸ್ವಚ್ಛಪಡಿಸುವ ಸಾಧನವನ್ನು
ಬದಲಾಯಿಸಬೇಕು. ಏಕೆಂದರೆ ಅದನ್ನು ಮನೆಯ ಮತ್ತೊಬ್ಬ ಸದಸ್ಯ ಮುಟ್ಟಿದರೆ ಅವರಿಗೂ ಕೂಡ ಹರಡುವ ಸಾಧ್ಯತೆ ಇರುತ್ತದೆ. ಈ ರೋಗದ ತೀವ್ರತೆಯನ್ನು ಈ ಮೇಲಿನ ಕೆಲವು ಸುಲಭ ವಿಧಾನಗಳಿಂದ ತಡೆಯಬಹುದಾಗಿದೆ.

ದಂತ ಚಿಕಿತ್ಸೆಗೆ ವೈದ್ಯರು ಸಿಗುವ ಸಾಧ್ಯತೆ ಕಡಿಮೆ ಯಾಗಿರುವುದು ಹಾಗೂ ವೀಕ್ಷಣಾ ಸಮಯ ಜಾಸ್ತಿ ಆಗಿರುವುದರಿಂದ ಕೆಲವು ಸಣ್ಣ ದೈನಿಕ ಬದಲಾವಣೆಗಳನ್ನು ರೂಢಿಸಿಕೊಂಡರೆ ಉತ್ತಮ.