ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ರೈತರ ಜಮೀನನ್ನು ಯಾವುದೇ ಕಾರಣಕ್ಕೂ ಬಲವಂತವಾಗಿ ಪಡೆದುಕೊಳ್ಳುವ ಕೆಲಸ ಆಗುವುದಿಲ್ಲ, ಬಡಾವಣೆ ನಿರ್ಮಾಣದಿಂದ ರೈತರಿಗೂ ಕೂಡ ನೆಮ್ಮದಿ ಆಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಇಂಡ್ಲವಾಡಿ ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಕಾಡುಜಕ್ಕನಹಳ್ಳಿಿಯಲ್ಲಿ ಪ್ರಧಾನಮಂತ್ರಿ ವಸತಿ ನಿರ್ಮಾಣ ಯೋಜನೆ ಸೂರ್ಯನಗರದ ನಾಲ್ಕನೇ ಹಂತದ ಭೂಮಿ ವೀಕ್ಷಣೆಗೆ ಆಗಮಿಸಿ ರೈತರ ಜತೆ ಮಾತನಾಡಿದ ಅವರು, ನಮ್ಮ ಸರಕಾರ ರೈತರ ಹಿತಾಸಕ್ತಿ ಕಾಪಾಡಲು ಸದಾ ಸಿದ್ದ, ಸೂರ್ಯನಗರ 4ನೇ ಹಂತದ ಜಮೀನು ವಶಪಡಿಸಿಕೊಳ್ಳುವುದರಿಂದ ನನಗೆ ಯಾವುದೇ ಲಾಭ ಇಲ್ಲ. ರೈತರು ಭೂಮಿ ನೀಡಿದರೆ ಮಾತ್ರ ಬಡಾವಣೆ ನಿರ್ಮಾಣ ಮಾಡುತ್ತೇವೆ ಇಲ್ಲವಾದರೆ ನೀವು ಬೇಡ ಎಂದರೆ ನನ್ನದು ಯಾವುದೇ ಅಭ್ಯಂತರ ಇಲ್ಲ ಎಂದರು.
ಕೇವಲ ಹದಿನೈದು ದಿನದ ಕಾಲಾವಕಾಶ ಇರುತ್ತದೆ ಎಲ್ಲರೂ ಒಗ್ಗಟ್ತಿಿನಿಂದ ಬಂದರೆ ಯೋಜನೆಯನ್ನು ಕಾರ್ಯರೂಪಕ್ಕೆೆ ತರಲಾಗುವುದು ಇಲ್ಲವಾದರೆ ನೀವೆಲ್ಲ ಬಂದರೂ ಕೂಡ ಯೋಜನೆಗೆ ಒಪ್ಪಿಿಗೆ ನೀಡಲು ವಿ.ಸೋಮಣ್ಣ ಯಾವುದೇ ಕಾರಣಕ್ಕೂ ಒಪ್ಪುುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ರೈತರ ಭೂಮಿಯ ಮಾಹಿತಿ ಬಗ್ಗೆೆ ಸರಕಾರಕ್ಕೆೆ ವರದಿ ಸಲ್ಲಿಸಿದ ನಂತರ ಡಿ.ಪಿ.ಆರ್ ಇಲಾಖೆಯವರು ಸರಕಾರಕ್ಕೆೆ ನೀಲಿ ನಕ್ಷೆ ಸಲ್ಲಿಸುತ್ತಾರೆ.
ಭೂಮಾಲೀಕರ ಖಾತೆಗೆ ನೇರವಾಗಿ 20ಲಕ್ಷ ರು. ಜಮಾ ಮಾಡಲಾಗುವುದು. ಎಂಟರಿಂದ ಹತ್ತು ತಿಂಗಳ ಒಳಗಾಗಿ ರೈತರಿಗೆ ನೀಡಿದ ಭರವಸೆಗಳಂತೆ ಸಂಪೂರ್ಣ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಲಾಗುವುದು ಇದರಲ್ಲಿ ರೈತರಿಗೂ ಕೂಡ ಈ ಹಣ ಸರಕಾರದಿಂದ ಬರುವುದರಿಂದಾಗಿ ಯಾವುದೇ ತೊಂದರೆ ಮುಂದಿನ ದಿನಗಳಲ್ಲಿ ಆಗುವುದಿಲ್ಲ. ಸರಕಾರಗಳು ಬದಲಾಗುತ್ತವೆ ಆದರೆ ಅಧಿಕಾರಿಗಳ ಮನಸ್ಥಿಿತಿ ಬದಲಾಗಿ ಜನರ ಸೇವೆಗೆ ಅವರು ಸಿದ್ಧರಾಗಿರಬೇಕು. ಸರಕಾರಿ ಅಧಿಕಾರಿಗಳು ನೀವು ಬದಲಾಗಿ ಕೆಲಸ ಮಾಡಿ, ರೈತರನ್ನು ಅಲೆದಾಡಿಸಬೇಡಿ, ಅಧಿಕಾರಿಗಳು ಸರಿಯಾದ ಕೆಲಸ ಮಾಡಿ ಸಮಸ್ಯೆೆ ಬಗೆಹರಿಸಿ. ಮುಂದಿನ ತಿಂಗಳ ಮೂರನೇ ತಾರೀಖಿನ ಒಳಗಾಗಿ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸಮತಿ ರಚನೆ ಮಾಡಿ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೌಸಿಂಗ್ ಬೋರ್ಡ್ನಲ್ಲಿ ಮನೆ ಪಡೆಯಬೇಕು ಎನ್ನುವ ಆಸೆ ಬಹಳಷ್ಟು ಜನರಲ್ಲಿರುತ್ತದೆ.ಸೂರ್ಯನಗರ ನಾಲ್ಕನೇ ಹಂತ ಉತ್ತಮ ಬಡಾವಣೆ ಮಾಡೋಣ, ಒಂದೊಂದು ದಿನವನ್ನು ಒಂದೊಂದು ಘಂಟೆಯಂತೆ ಕೆಲಸ ಮಾಡಿ ಬಡವರ ಸೇವೆ ಮಾಡುತ್ತೇವೆ ಎಂದರು.
1040 ಎಕರೆ ಜಾಗವನ್ನು ಪಡೆದೊಕೊಂಡು ಒಂದು ವರ್ಷದಲ್ಲಿ ನಲವತ್ತು ಸಾವಿರ ಮನೆ ಹಂಚಲು ಸರಕಾರ ನಿರ್ದಾರ ಮಾಡಿದೆ. ಆನೇಕಲ್ ಭಾಗದಲ್ಲಿ 1900 ಎಕರೆ ಜಮೀನು ಪಡೆದು ಸುಸಜ್ಜಿಿತ ಬಡಾವಣೆ ನಿರ್ಮಾಣ ಮಾಡಲಾಗುವುದು. ಹತ್ತು ತಿಂಗಳಲ್ಲಿ ಒಂದು ಹಂತಕ್ಕೆೆ ಬಡಾವಣೆ ಬರಲಿದೆ. ಕಂದಾಯ ಮಂತ್ರಿಿಗಳಿಗೆ ಒತ್ತಡ ತಂದು ಕೆಲಸ ಮಾಡಲಾಗುವುದು. ಬಡಾವಣೆ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಿ ನಮ್ಮ ಜವಬ್ದಾಾರಿ, ಅಭಿವೃದ್ದಿ ಕಾಮಗಾರಿ ಉಳಿಸಿಕೊಂಡು ಹೋಗಬೇಕಾದ ಕೆಲಸ ಆಯಾ ಪಂಚಾಯತಿಯದ್ದು ಎಂದು ತಿಳಿಸಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ವಸತಿ ಸಚಿವ ವಿ ಸೋಮಣ್ಣ ಅವರು ಇಲಾಖೆಗೆ ಹೊಸ ಜೀವಕಳೆ ನೀಡಲು ಮುಂದಾಗಿದ್ದಾರೆ. ಸಚಿವರಾದ ಮೇಲೆ ಹೊಸ ಕಾಯಕಲ್ಪ ನೀಡಲು ಮುಂದಾಗಿದ್ದಾರೆ. ಬಿಡದಿಯಲ್ಲೂ ಕೂಡ ಇದೇ ರೀತಿ ಬಡಾವಣೆ ನಿರ್ಮಾಣ ಮಾಡಿ ಅದನ್ನ ಬಡವರಿಗೆ ನೀಡಬೇಕಿದೆ. ಅಧಿಕಾರಿಗಳು ಸಚಿವರು ಇದ್ದ ಸಮಯದಲ್ಲಿ ಒಂದು ರೀತಿ ವರ್ತಿಸಿದರೆ ಅವರು ಇಲ್ಲದೆ ಇರುವಾಗ ರೈತರ ಜತೆ ಕೆಟ್ಟದಾಗಿ ವರ್ತಿಸುತ್ತಾಾರೆ, ಇಲ್ಲಿ ರೈತರ ಜಮೀನನ್ನು ನೀಡಿದ ನಂತರ ಅವರ ಕಚೇರಿಗೆ ಹೋದರೆ ರೈತನನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಾಾರೆ. ರೈತರು ನಾಯಿಯಂತೆ ಅಲೆದಾಡಿದ್ದಾರೆ ಇನ್ನೂ ರೈತರಿಗೆ ನ್ಯಾಾಯ ನೀಡುತ್ತಾಾರೆ. ರೈತರು ಜಮೀನನ್ನು ಕಳೆದುಕೊಂಡು ನ್ಯಾಾಯ ಸಿಗದೆ ಅಧಿಕಾರಿಗಳ ಕಚೇರಿಗೆ ಅಲೆದಾಡುವಂತೆ ಆಗಬಾರದು. ರೈತ ಒಂದು ಪಾಣಿ ಪಡೆದುಕೊಳ್ಳಲು ರೈತರ ಕಚೇರಿಗೆ ಅಲೆದಾಡಬೇಕು ಅವರಿಗೆ ನ್ಯಾಾಯ ಸಿಗುವುದಿಲ್ಲ.
ಅಧಿಕಾರಿಗಳು ಒಳ್ಳೆೆಯವರೇ ಆಗಿರುತ್ತಾಾರೆ. ಆದರೆ ಅವರು ಅಧಿಕಾರಕ್ಕೆೆ ಬಂದ ನಂತರ ಬದಲಾಗುತ್ತಾಾರೆ ಎಂದರು. ಲ್ಯಾಾಂಡ್ ಸರ್ವೆ ಮಾಡುವ ಸಂದರ್ಭದಲ್ಲಿ ಪಾರಂ- 53,57, ಸಾಗುವಳಿ ಚೀಟಿ ಹಾಗೂ ಆರ್ಟಿಸಿ ಗುರುತಿಸಿ ಭೂಮಿ ವಶಕ್ಕೆೆ ಪಡೆಯಬೇಕು. ಹೊಸ ಭೂಸ್ವಾಾಧೀನ ಕಾಯ್ದೆೆ ಅನ್ವಯ ರೈತರು ರಸ್ತೆೆ ಹಾಗೂ ಸಾರ್ವಜನಿಕರ ಬಳಕೆಗೆ ಬೇಕಾಗುವ ಭೂಮಿಯನ್ನು ನೀಡುವುದಿಲ್ಲ ಎಂದು ಹೇಳುವ ಹಾಗಿಲ್ಲ ಆದರೆ ಸರಕಾರ ಅವರಿಗೆ ನೀಡಬೇಕಾದ ಹಣವನ್ನು ನೀಡುತ್ತದೆ ಎಂದರು.
ಶಾಸಕ ಬಿ. ಶಿವಣ್ಣ ಅವರು ಮಾತನಾಡಿ, ಎಲ್ಲಾ ಮೂಲಭೂತ ಸೌಕರ್ಯ ಸಿಗುತ್ತದೆ ಎಂದು ಬಡಾವಣೆಯಲ್ಲಿ ಸೈಟು ಖರೀದಿ ಮಾಡುತ್ತಾಾರೆ. ಆದರೆ ಸರಿಯಾದ ಮೂಲಭೂತ ಸೌಕರ್ಯ ಸಿಗದೆ ಜನ ತೊಂದರೆಗೆ ಸಿಲುಕಬಾರದು, ಸರಿಯಾದ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಿಸಲು ಸಚಿವರು ಕ್ರಮ ಕೈಗೊಳ್ಳಬೇಕು. ಬಡಾವಣೆ ನಿರ್ಮಾಣ ಆದ ನಂತರ ಕಾವೇರಿ ನೀರು ಕೂಡ ಸಿಗುತ್ತದೆ. ಆನೇಕಲ್ ನಗರಕ್ಕೆೆ ಈಗಾಗಲೇ ಕಾವೇರಿ ಕುಡಿಯುವ ನೀರನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ಇಂಡ್ಲವಾಡಿ ಭಾಗದ 27 ಗ್ರಾಾಮಗಳಿಗೂ ಕೂಡ ಕುಡಿಯುವ ನೀರು ಸಿಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮರಿಸ್ವಾಾಮಿ, ಗ್ರಾಾಮ ಪಂಚಾಯತಿ ಅದ್ಯಕ್ಷೆ ಮಂಜುಳ ವೆಂಕಟಮಾರೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ನಾಗರಾಜು, ಕುಣಿಗಲ್ ಶಾಸಕ ರಂಗನಾಥ್, ತಾ.ಪಂ ಸದಸ್ಯ ಮಹದೇವ, ಪುರಸಭಾ ಸದಸ್ಯ
ಪದ್ಮನಾಭ್, ಕೃಷ್ಣರಾಜು, ಹಿಂದುಳಿದ ವರ್ಗಗಳ ಅಧ್ಯಕ್ಷ ಅಚ್ಯುತ್ ರಾಜು, ಗ್ರಾಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಇದ್ದರು.