Saturday, 7th September 2024

ಖಾತೆಗಳ ಹಂಚಿಕೆ: 8 ಪ್ರಭಾವಿ ಸಚಿವರಿಗೆ ಅದೇ ಖಾತೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರನೇ ಇನ್ನಿಂಗ್ಸ್‌ ಆರಂಭವಾಗಿದ್ದು, ಸೋಮವಾರ ಖಾತೆಗಳ ಹಂಚಿಕೆ ಮಾಡಲಾಗಿದೆ. ಪ್ರಮುಖ ಖಾತೆಗಳು ಬಿಜೆಪಿ ಬಳಿಯೇ ಉಳಿದಿರುವುದು ವಿಶೇಷ. 8 ಪ್ರಭಾವಿ ಸಚಿವರಿಗೆ ಮತ್ತೆ ಅದೇ ಖಾತೆಗಳನ್ನು ನೀಡಲಾಗಿದೆ.

ಕೇಂದ್ರ ಗೃಹ ಸಚಿವರಾಗಿ ಅಮಿತ್‌ ಶಾ ಮುಂದುವರಿದಿದ್ದು, ರಕ್ಷಣ ಸಚಿವರಾಗಿ ರಾಜನಾಥ್‌ ಸಿಂಗ್‌, ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌, ವಿದೇಶಾಂಗ ಸಚಿವರಾಗಿ ಎಸ್‌. ಜೈಶಂಕರ್‌ ಮುಂದುವರಿಯಲಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ನಿತಿನ್‌ ಗಡ್ಕರಿ, ರೈಲ್ವೇ ಸಚಿವರಾಗಿ ಅಶ್ವಿ‌ನಿ ವೈಷ್ಣವ್‌, ಶಿಕ್ಷಣ ಸಚಿವರಾಗಿ ಧರ್ಮೇಂದ್ರ ಪ್ರಧಾನ್‌, ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವರಾಗಿ ವೀರೇಂದ್ರ ಕುಮಾರ್‌ ಅವರ ಸ್ಥಾನಗಳೂ ಬದಲಾಗದೆ ಉಳಿದಿವೆ. ಸಿಬಂದಿ-ಸಾರ್ವಜನಿಕ ಕುಂದುಕೊರತೆ, ಪಿಂಚಣಿ ಖಾತೆ, ಪರಮಾಣು ಶಕ್ತಿ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆ ಪ್ರಧಾನಿ ಮೋದಿ ಅವರ ಬಳಿ ಇವೆ.ಜೆ.ಪಿ. ನಡ್ಡಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ನೀಡಲಾಗಿದೆ. ಈ ಹಿಂದೆ ಅಂದರೆ 2014ರಲ್ಲಿ ಮೋದಿ ಸಚಿವ ಸಂಪುಟದಲ್ಲಿ ಅವರು ಇದೇ ಖಾತೆಯನ್ನು ನಿರ್ವಹಿಸಿದ್ದರು.

3 ಪ್ರಮುಖ ಖಾತೆ ಮೈತ್ರಿ ಪಾಲು
ಸಂಪುಟ ದರ್ಜೆಯ ದೊಡ್ಡ ದೊಡ್ಡ ಖಾತೆಗಳು ಮೈತ್ರಿ ಪಕ್ಷಗಳ ಪಾಲಾಗುತ್ತವೆ ಎಂದೇ ಹೇಳಲಾಗಿತ್ತು. 3 ಪ್ರಭಾವಿ ಖಾತೆಗಳು ಮೈತ್ರಿಕೂಟದ ನಾಯಕರ ಪಾಲಾಗಿದೆ. ಕರ್ನಾಟಕದ ಮೈತ್ರಿ ಪಕ್ಷವಾದ ಜೆಡಿಎಸ್‌ ನಾಯಕ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಇಲಾಖೆಯ ಹೊಣೆಯನ್ನು ನೀಡಲಾಗಿದೆ. ಜೆಡಿಯು ನಾಯಕ ಲಲನ್‌ ಸಿಂಗ್‌ ಅವರಿಗೆ ಪಂ. ರಾಜ್‌, ಮೀನುಗಾರಿಕೆ ಹಾಗೂ ಪಶುಸಂಗೋಪನೆ ಖಾತೆಯನ್ನು ವಹಿಸಲಾಗಿದ್ದು, ಟಿಡಿಪಿ ನಾಯಕ ಕಿಂಜರಪು ರಾಮಮೋಹನ ನಾಯ್ಡು ಅವರಿಗೆ ನಾಗರಿಕ ವಿಮಾನಯಾನ ಸಚಿವಾಲಯದ ಖಾತೆ ನೀಡಲಾಗಿದೆ.

ಯಾರಿಗೆ ಯಾವ ಖಾತೆ?

ನರೇಂದ್ರ ಮೋದಿ-ಪ್ರಧಾನಮಂತ್ರಿ, ಸಿಬಂದಿ, ಸಾರ್ವಜನಿಕ ಕುಂದು ಕೊರತೆ, ಪಿಂಚಣಿ, ಅಣು ಶಕ್ತಿ, ಬಾಹ್ಯಾಕಾಶ ಹಾಗೂ ಹಂಚಿಕೆಯಾಗದ ಖಾತೆಗಳು

ರಾಜನಾಥ್ ಸಿಂಗ್-ರಕ್ಷಣ

ಅಮಿತ್ ಶಾ-ಗೃಹ

ನಿತಿನ್ ಗಡ್ಕರಿ- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಜೆ ಪಿ ನಡ್ಡಾ-ಆರೋಗ್ಯ

ಶಿವರಾಜ್ ಸಿಂಗ್ ಚೌಹಾಣ್-ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

ನಿರ್ಮಲಾ ಸೀತಾರಾಮನ್-ಹಣಕಾಸು

ಡಾ. ಎಸ್ ಜೈಶಂಕರ್-ವಿದೇಶಾಂಗ

ಮನೋಹರ್ ಲಾಲ್ ಖಟ್ಟರ್-ಇಂಧನ,ವಸತಿ ಮತ್ತು ನಗರಾಭಿವೃದ್ದಿ ಸಚಿವಾಲಯ

ಎಚ್. ಡಿ. ಕುಮಾರಸ್ವಾಮಿ- ಉಕ್ಕು ಮತ್ತು ಬೃಹತ್ ಕೈಗಾರಿಕೆ

ಪಿಯೂಷ್ ಗೋಯಲ್-ವಾಣಿಜ್ಯ

ಧರ್ಮೇಂದ್ರ ಪ್ರಧಾನ್- ಶಿಕ್ಷಣ

ಜೀತನ್ ರಾಮ್ ಮಾಂಝಿ-ಸೂಕ್ಷ್ಮ, ಸಣ್ಣ ಮಧ್ಯಮ ಕೈಗಾರಿಕೆ

ರಾಜೀವ್ ರಂಜನ್ (ಲಾಲನ್) ಸಿಂಗ್- ಪಂಚಾಯತ್ ರಾಜ್ ಮತ್ತು ಮೀನುಗಾರಿಕೆ

ಸರ್ಬಾನಂದ ಸೋನೋವಾಲ್-ಬಂದರು ಮತ್ತು ಒಳನಾಡು ಸಾರಿಗೆ

ಕಿಂಜರಾಪು ರಾಮ್ ಮೋಹನ್ ನಾಯ್ಡು- ನಾಗರಿಕ ವಿಮಾನಯಾನ

ವೀರೇಂದ್ರ ಕುಮಾರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ

ಜುಯಲ್ ಓರಮ್- ಬುಡಕಟ್ಟು ವ್ಯವಹಾರ

ಪ್ರಹ್ಲಾದ್ ಜೋಶಿ- ಆಹಾರ ಮತ್ತು ನಾಗರಿಕ ವ್ಯವಹಾರಗಳು, ನವೀಕರಿಸಬಹುದಾದ ಇಂಧನ ಶಕ್ತಿ

ಅಶ್ವಿನಿ ವೈಷ್ಣವ್-ರೈಲ್ವೆ ,ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ

ಗಿರಿರಾಜ್ ಸಿಂಗ್- ಜವಳಿ

ಜ್ಯೋತಿರಾದಿತ್ಯ ಸಿಂಧಿಯಾ- ಟೆಲಿಕಾಂ,ಈಶಾನ್ಯ ರಾಜ್ಯಗಳ ವ್ಯವಹಾರ

ಭೂಪೇಂದ್ರ ಯಾದವ್-ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ

ಗಜೇಂದ್ರ ಸಿಂಗ್ ಶೇಖಾವತ್ -ಸಂಸ್ಕೃತಿ ಮತ್ತು ಪ್ರವಾಸೋದ್ಯಮ

ಅನ್ನಪೂರ್ಣ ದೇವಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ

ಕಿರಣ್ ರಿಜಿಜು- ಸಂಸದೀಯ ವ್ಯವಹಾರ ಖಾತೆ, ಅಲ್ಪಸಂಖ್ಯಾಕ

ಮನ್ಸುಖ್ ಮಾಂಡವಿಯಾ- ಕಾರ್ಮಿಕ ಮತ್ತು ಉದ್ಯೋಗ ಖಾತೆ /ಯುವಜನ ಮತ್ತು ಕ್ರೀಡೆ

ಹರ್ದೀಪ್ ಸಿಂಗ್ ಪುರಿ-ಪೆಟ್ರೋಲಿಯಂ

ಜಿ.ಕೆ. ರೆಡ್ಡಿ-ಕಲ್ಲಿದ್ದಲು ಮತ್ತು ಗಣಿ

ಚಿರಾಗ್ ಪಾಸ್ವಾನ್- ಆಹಾರ ಸಂಸ್ಕರಣಾ ಉದ್ಯಮಗಳು

ಸಿಆರ್ ಪಾಟೀಲ್- ಜಲಶಕ್ತಿ

ಸಹಾಯಕ ಸಚಿವರು (ಸ್ವತಂತ್ರ ಹೊಣೆಗಾರಿಕೆ)

ರಾವ್‌ ಇಂದ್ರಜಿತ್‌ ಸಿಂಗ್‌-ಯೋಜನೆ, ಅಂಕಿಅಂಶ ಹಾಗೂ ಯೋಜನಾ ಅನುಷ್ಠಾನ (ಸ್ವತಂತ್ರ), ಸಂಸ್ಕೃತಿ

ಡಾ| ಜಿತೇಂದ್ರ ಸಿಂಗ್‌-ವಿಜ್ಞಾನ, ತಂತ್ರಜ್ಞಾನ, ಭೂ ವಿಜ್ಞಾನ, (ಸ್ವತಂತ್ರ, ಪ್ರಧಾನಮಂತ್ರಿ ಸಚಿವಾಲಯ, ಸಿಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಅಣು ಶಕ್ತಿ, ಬಾಹ್ಯಾಕಾಶ

ಅರ್ಜುನ್‌ ರಾಮ್‌ ಮೆಘಾವಲ್‌-ಕಾನೂನು, ನ್ಯಾಯ (ಸ್ವತಂತ್ರ), ಸಂಸದೀಯ ವ್ಯವಹಾರ

ಪ್ರತಾಪ್‌ರಾವ್‌ ಜಾಧವ್‌-ಆಯುಷ್‌ (ಸ್ವತಂತ್ರ), ಕುಟುಂಬ ಕಲ್ಯಾಣ ಇಲಾಖೆ

ಜಯಂತ್‌ ಚೌಧರಿ-ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ (ಸ್ವತಂತ್ರ), ಶಿಕ್ಷಣ

ಸಹಾಯಕ ಸಚಿವರು

ಜಿತಿನ್‌ ಪ್ರಸಾದ್‌-ವಾಣಿಜ್ಯ, ಕೈಗರಿಕೆ, ಎಲೆಕ್ಟ್ರಾನಿಕ್ಸ್‌, ಐಟಿ

ಶ್ರೀಪಾದ್‌ ನಾಯಕ್‌-ಇಂಧನ, ಹೊಸ ಹಾಗೂ ನವೀಕರಣ ಇಂಧನ

ಪಂಕಜ್‌ ಚೌಧರಿ-ಹಣಕಾಸು

ಕೃಷ್ಣಪಾಲ್‌-ಸಹಕಾರ

ರಾಮದಾಸ ಅಟಾವಳೆ-ಸಾಮಾಜಿಕ ನ್ಯಾಯ, ಸಶಕ್ತೀಕರಣ

ರಾಮನಾಥ್‌ ಠಾಕೂರ್‌-ಕೃಷಿ, ರೈತರ ಕಲ್ಯಾಣ

ನಿತ್ಯಾನಂದ ರೈ-ಗೃಹ

ಅನುಪ್ರಿಯಾ ಪಟೇಲ್‌-ಆರೋಗ್ಯ, ಕುಟುಂಬ ಕಲ್ಯಾಣ, ರಾಸಾಯನಿಕ, ರಸಗೊಬ್ಬರ

ವಿ. ಸೋಮಣ್ಣ-ಜಲಶಕ್ತಿ, ರೈಲ್ವೇ

ಚಂದ್ರಶೇಖರ್‌ ಪೆಮ್ಮಸಾನಿ- ಗ್ರಾಮೀಣಾಭಿವೃದ್ಧಿ, ಸಂವಹನ

ಪ್ರೊ. ಎಸ್‌.ಪಿ. ಸಿಂಗ್‌ ಬಘೇಲಾ- ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಪಂಚಾಯತ್‌ ರಾಜ್‌

ಶೋಭಾ ಕರಂದ್ಲಾಜೆ-ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮ, ಕಾರ್ಮಿಕ, ಉದ್ಯೋಗ

ಕೀರ್ತಿವರ್ಧನ್‌ ಸಿಂಗ್‌-ಪರಿಸರ, ಅರಣ್ಯ, ಹವಾಮಾನ ಬದಲಾವಣೆ, ವಿದೇಶಾಂಗ ವ್ಯವಹಾರ

ಬಿ.ಎಲ್‌. ವರ್ಮಾ-ಗ್ರಾಹಕರ ವ್ಯವಹಾರ, ಆಹಾರ, ಸಾರ್ವಜನಿಕ ಹಂಚಿಕೆ, ಸಾಮಾಜಿಕ ನ್ಯಾಯ, ಸಶಕ್ತೀಕರಣ

ಶಾಂತನೂ ಠಾಕೂರ್‌-ಬಂದರು, ನೌಕಾ, ಜಲಸಂಚಾರ

ಸುರೇಶ ಗೋಪಿ-ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಪ್ರವಾಸೋದ್ಯಮ

ಡಾ| ಎಲ್‌. ಮುರುಗನ್‌-ಮಾಹಿತಿ, ಪ್ರಸಾರ, ಸಂಸದೀಯ ವ್ಯವಹಾರ

ಅಜಯ್‌ ತಮಟಾ-ರಸ್ತೆ ಸಾರಿಗೆ, ಹೆದ್ದಾರಿ

ಬಂಡಿ ಸಂಜಯ್‌ ಕುಮಾರ್‌-ಗೃಹ

ಕಮಲೇಶ್‌ ಪಾಸ್ವಾನ್‌-ಗ್ರಾಮೀಣಾಭಿವೃದ್ಧಿ

ಭಗೀರಥ್‌ ಚೌಧರಿ-ಕೃಷಿ, ರೈತರ ಕಲ್ಯಾಣ

ಸತೀಶ್‌ಚಂದ್ರ ದುಬೆ-ಕಲ್ಲಿದ್ದಲು, ಗಣಿ

ಸಂಜಯ್‌ ಸೇಠ್ -ರಕ್ಷಣ

ರವನೀತ್‌ ಸಿಂಗ್‌-ಆಹಾರ ಸಂಸ್ಕರಣೆ ಕೈಗಾರಿಕೆ, ರೈಲ್ವೇ

ದುರ್ಗಾದಾಸ್‌ -ಬುಡಕಟ್ಟು ವ್ಯವಹಾರ

ರಕ್ಷಾ ಖಡಸೆ-ಯುವ ಸಶಕ್ತೀಕರಣ, ಕ್ರೀಡೆ

ಸುಕಾಂತ್‌ ಮಜುಮಾªರ್‌-ಶಿಕ್ಷಣ, ಈಶಾನ್ಯ ಪ್ರದೇಶಾಭಿವೃದ್ಧಿ

ಸಾವಿತ್ರಿ ಠಾಕೂರ್‌-ಮಹಿಳಾ, ಮಕ್ಕಳ ಕಲ್ಯಾಣ

ತೋಖಾನ್‌ ಸಾಹು-ವಸತಿ, ನಗರೀಯ ವ್ಯವಹಾರ

ರಾಜ್‌ಭೂಷಣ್‌ ಚೌಧರಿ-ಜಲ ಶಕ್ತಿ

ಭೂಪತಿ ರಾಜು ವರ್ಮಾ-ಬೃಹತ್‌ ಕೈಗಾರಿಕೆ, ಸ್ಟೀಲ್‌

ಹರ್ಷ ಮಲ್ಹೊತ್ರಾ -ಕಾರ್ಪೊರೆಟ್‌ ವ್ಯವಹಾರ, ಸಾರಿಗೆ, ಹೆದ್ದಾರಿ

ನಿಮುಬೆನ್‌ ಬಂಭನಿಯಾ-ನಾಗರಿಕ ವ್ಯವಹಾರ, ಆಹಾರ, ಸಾರ್ವಜನಿಕ ಹಂಚಿಕೆ

ಮುರಳಿಧರ ಮೊಹೊಲ್‌-ಸಹಕಾರ, ನಾಗರಿಕ ವಿಮಾನಯಾನ

ಜಾರ್ಜ್‌ ಕುರಿಯನ್‌ -ಅಲ್ಪಸಂಖ್ಯಾಕ ವ್ಯವಹಾರ, ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ

ಪವಿತ್ರ ಮಾರ್ಗರಿಟಾ-ವಿದೇಶಾಂಗ ವ್ಯವಹಾರ, ಜವಳಿ

Leave a Reply

Your email address will not be published. Required fields are marked *

error: Content is protected !!