Sunday, 15th December 2024

ರಾಕುಲ್‌ ಪ್ರೀತ್‌ ಸಿಂಗ್’ಗೆ ಕೊರೋನಾ ಸೋಂಕು ದೃಢ

ಹೈದರಾಬಾದ್: ಬಹುಭಾಷಾ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ನಟಿ ಇತ್ತೀಚೆಗಷ್ಟೇ ಸ್ಯಾಮ್‌ ಜ್ಯಾಮ್‌ ಸಮಂತಾ ಎಂಬ ಟಾಕ್‌ ಶೋದಲ್ಲಿ ಕಾಣಿಸಿ ಕೊಂಡಿದ್ದರು.

ಕರೋನಾ ಸೋಂಕು ದೃಢಪಟ್ಟಿರುವ ಬಗ್ಗೆ ಸ್ವತಃ ನಟಿ ರಾಕುಲ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ತಾನು ಸ್ವಯಂ ಕ್ವಾರಂಟೈನ್‌ ಆಗಿದ್ದೇನೆ. ಆರೋಗ್ಯದಿಂದಿದ್ದೇನೆ. ವೃತ್ತಿಪರ ಸಿನೆಮಾ ಶೂಟಿಂಗಿಗೆ ಆದಷ್ಟೂ ಬೇಗನೆ ಮರಳುವೆ.

ನನ್ನೊಂದಿಗೆ ಇತ್ತೀಚಿನ ದಿನಗಳಲ್ಲಿ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಕೊಳ್ಳ ಬೇಕೆಂದು ಮನವಿ ಮಾಡಿಕೊಳ್ಳು ತ್ತಿದ್ದೇನೆ. ಎಲ್ಲರೂ ಆರೋಗ್ಯ ಕಾಪಾಡಿಕೊಳ್ಳಿ. ಸುರಕ್ಷಿತ ವಾಗಿರಿ ಎಂದು ಟ್ವೀಟ್‌ ಮಾಡಿದ್ದಾರೆ.

ರಾಕುಲ್‌ ಇತ್ತೀಚೆಗಷ್ಟೇ ನಟಿ ಸಮಂತಾಳ ಟಾಕ್‌ ಶೋನಲ್ಲಿ ಕಾಣಿಸಿಕೊಂಡು, ನಿರ್ದೇಶಕ ಕೃಷ್‌ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಮನ್ಮಡುಡು 2 ಚಿತ್ರದಲ್ಲಿ ನಟಿಸಿದ್ದರು. ಸದ್ಯ ಇವರ ಕೈಯಲ್ಲಿ ಕಮಲ್‌ ಹಾಸನ್‌ರ ಇಂಡಿಯನ್‌ 2, ಶಿವಕಾರ್ತಿಕೇಯನ್‌ ಅವರ ವೈಜ್ಞಾನಿಕ ಚಿತ್ರ ಅಯಾಲನ್‌, ನಿತಿನ್‌ ಅವರ ಚೆಕ್‌ ಹಾಗೂ ಬಾಲಿವುಡ್‌ ನಟ ಅಜಯ್‌ ದೇವಗನ್‌ರ ಮೇ ಡೇ ಚಿತ್ರಗಳಿವೆ.