Amazon.in ನಲ್ಲಿರುವ ಈ ಪ್ರತ್ಯೇಕ ಸ್ಟೋರ್ಫ್ರಂಟ್ ಅನ್ನು ಬ್ಯೂಟಿ ಶಾಪಿಂಗ್ ಅನುಭವದಲ್ಲಿ ಕ್ರಾಂತಿ ಉಂಟು ಮಾಡುವು ದಕ್ಕಾಗಿ ವಿನ್ಯಾಸಗೊಳಿಸಲಾಗಿದ್ದು, ಅಥೆಂಟಿಕ್ ಇಂಟರ್ ನ್ಯಾಷನಲ್ ಬ್ಯೂಟಿ ಬ್ರ್ಯಾಂಡ್ಗಳು ಇದರಲ್ಲಿವೆ
ಬೆಂಗಳೂರು: ಅಮೆಜಾನ್ ಬ್ಯೂಟಿ ಅತ್ಯಂತ ನಿರೀಕ್ಷಿತ ಗ್ಲೋಬಲ್ ಬ್ಯೂಟಿ ಸ್ಟೋರ್ ಬಿಡುಗಡೆಯನ್ನು ಘೋಷಿಸಿದ್ದು, 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಬ್ಯೂಟಿ ಬ್ರ್ಯಾಂಡ್ಗಳು ಮತ್ತು 5,000 ಕ್ಕೂ ಹೆಚ್ಚು ಕ್ಯುರೇಟೆಡ್ ಉತ್ಪನ್ನಗಳನ್ನು ಒಳಗೊಂಡಿ ರುವ ಹೊಸ ಸ್ಟೋರ್ಫ್ರಂಟ್ ಇದಾಗಿರಲಿದೆ.
ಅಂತಾರಾಷ್ಟ್ರೀಯ ಬ್ಯೂಟಿ ಬ್ರ್ಯಾಂಡ್ಗಳ ಸಮಗ್ರ ಕಲೆಕ್ಷನ್ ಅನ್ನು ಸ್ಟೋರ್ ಹೊಮದಿದೆ. ವಿಶ್ವದ ವಿವಿಧ ಭಾಗಗಳ ಉತ್ತಮ ಉತ್ಪನ್ನಗಳನ್ನು ತರುವುದಕ್ಕಾಗಿ ಗಮನವಿಟ್ಟು ಇದನ್ನು ರಚಿಸಲಾಗಿದೆ. ಜನಪ್ರಿಯ ಫ್ರೆಂಚ್ ಸ್ಕಿನ್ಕೇರ್ ಬ್ರ್ಯಾಂಡ್, ಜನಪ್ರಿಯ ಅಂತಾರಾಷ್ಟ್ರೀಯ ಕಾಸ್ಮೆಟಿಕ್ಸ್ ಬ್ರ್ಯಾಂಡ್ಗಳಾದ ಪೌಲಾಸ್ ಚಾಯ್ಸ್, ಫಾರ್ಮಸಿ, ಅನಾಮಲಿ, ಕೌಡಲೀ, ಲೊಸಿಟಾನೆ, ಕಾಸ್ಆರ್ಎಕ್ಸ್, ಲನೀಜಿ, ಇನ್ನಿಸ್ಫ್ರೀ, ಮೇಕಪ್ ರಿವೊಲ್ಯುಶನ್, ಚೊಪಾರ್ಡ್, ಪೌಲ್ ಮಿಚೆಲ್ ಇತರ ಬ್ರ್ಯಾಂಡ್ಗಳು ಸ್ಟೋರ್ನಲ್ಲಿವೆ. ಪ್ರತಿಯೊಬ್ಬರ ಅಗತ್ಯವನ್ನೂ ಪೂರೈಸುವುದಕ್ಕೆ ವಿವಿಧ ಆಯ್ಕೆಗಳು ಇದರಲ್ಲಿವೆ.
ವಿಶ್ವದ ಪ್ರತಿ ಮೂಲೆಯಿಂದಲೂ ಅಸಲಿ ಉತ್ಪನ್ನಗಳ ಶ್ರೇಣಿಯಿಂದ ಗ್ರಾಹಕರು ಉತ್ಪನ್ನಗಳನ್ನು ಪಡೆಯಬಹುದು. ಇವುಗಳ ಉತ್ತಮ ಗುಣಮಟ್ಟ ಮತ್ತು ಸುಧಾರಿತ ಫಾರ್ಮ್ಯುಲೇಶನ್ಗಳಿಗಾಗಿ ವಿಶೇಷವಾಗಿ ಆಯ್ಕೆ ಮಾಡಲಾಗಿದೆ. ಗ್ಲೋಬಲ್ ಬ್ಯೂಟಿ ಸ್ಟೋರ್ ಅದ್ಭುತ ಉತ್ಪನ್ನಗಳ ಸಂಚಯವನ್ನು ಹೊಂದಿದ್ದು, ವೈವಿಧ್ಯಮಯ ಬ್ಯೂಟಿ ಅಗತ್ಯಗಳು ಮತ್ತು ಆದ್ಯತೆಗಳಿಗೆ ಪೂರಕವಾಗಿದೆ.
“ಅಮೆಜಾನ್ ಬ್ಯೂಟಿಯಲ್ಲಿ ಗ್ಲೋಬಲ್ ಬ್ಯೂಟಿ ಸ್ಟೋರ್ ಅನ್ನು ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ” ಎಂದು ಅಮೆಜಾನ್ ಇಂಡಿಯಾ ಬ್ಯೂಟಿ, ಪರ್ಸನಲ್ ಕೇರ್ ಮತ್ತು ಲಕ್ಷುರಿ ಬ್ಯೂಟಿ ವಿಭಾಗದ ನಿರ್ದೇಶಕಿ ಝೆಬಾ ಖಾನ್ ಹೇಳಿದ್ದಾರೆ. “ಈ ವಿಶಿಷ್ಟ ಸನ್ನಿವೇಶವು ನಮ್ಮ ಮೌಲ್ಯಯುತ ಗ್ರಾಹಕರಿಗೆ ಉತ್ತಮವಾದ, ವಿಶೇಷ ಬ್ಯೂಟಿ ಅನುಭವಗಳನ್ನು ಒದಗಿಸುವ ನಮ್ಮ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಸಣ್ಣ ಅಂತಾರಾಷ್ಟ್ರೀಯ ಬ್ರ್ಯಾಂಡ್ನ ಉತ್ಪನ್ನವೊಂದು ತಮ್ಮ ಮನೆ ಬಾಗಿಲಿಗೆ ಸುಲಭವಾಗಿ ತಲುಪಲಿ ಎಂದು ಗ್ರಾಹಕರು ಎದುರು ನೋಡುತ್ತಿರುವ ಇಂತಹ ಕಾಲದಲ್ಲಿ, ಜಾಗತಿಕ ಬ್ರ್ಯಾಂಡ್ ಒಂದರ ಲಕ್ಷುರಿ ಬ್ಯೂಟಿ ಉತ್ಪನ್ನಗಳನ್ನು ನಾವು ಗ್ರಾಹಕ ರಿಗೆ ತಲುಪಿಸಬೇಕು ಎಂಬುದು ನಮ್ಮ ಬದ್ಧತೆಯಾಗಿದೆ. ಈ ಬಿಡುಗಡೆಯ ಮೂಲಕ, ವಿಶಾಲವಾದ ಪ್ರೀಮಿಯಂ ಮತ್ತು ಸುಂದರವಾದ ಬ್ಯೂಟಿ ಉತ್ಪನ್ನಗಳನ್ನು ನಾವು ನಮ್ಮ ಗ್ರಾಹಕರಿಗೆ ನೀಡುತ್ತಿದ್ದೇವೆ. ವಿಶ್ವದ ಅತ್ಯುತ್ತಮ ಬ್ಯೂಟಿ ಬ್ರ್ಯಾಂಡ್ ಗಳಿಂದ ಅದ್ಭುತ ಬ್ಯೂಟಿ ಮತ್ತು ಸ್ವಯಂ ಆರೈಕೆ ಅನುಭವಗಳನ್ನು ಅವರು ಪಡೆಯಲು ಅನುವು ಮಾಡುತ್ತಿದ್ದೇವೆ.”
ಅಮೆಜಾನ್ ಬ್ಯೂಟಿ ವಿಭಾಗದ ಅದ್ಭುತ ಕೊಡುಗೆಯು ಗ್ಲೋಬಲ್ ಬ್ಯೂಟಿ ಸ್ಟೋರ್ ಆಗಿದೆ. ಗ್ಲೋಬಲ್ ಬ್ಯೂಟಿ ಸ್ಟೋರ್ನ ಪ್ರತಿ ಉತ್ಪನ್ನ ಪುಟವೂ ವಿವರವಾದ ಉತ್ಪನ್ನ ವಿವರಗಳು, ಪದಾರ್ಥಗಳ ಪಟ್ಟಿ, ಬಳಕೆ ಸೂಚನೆಗಳು ಮತ್ತು ಗ್ರಾಹಕ ವಿಮರ್ಶೆ ಗಳನ್ನು ಒಳಗೊಂಡಿದೆ.
ಸ್ಟೋರ್ನ ತೆಳ್ಳನೆಯ ಮತ್ತು ಬಳಕೆದಾರ ಸ್ನೇಹಿ ಇಂಟರ್ಫೇಸ್ನಿಂದ ಶಾಪಿಂಗ್ ಅನುಭವ ಅತ್ಯುತ್ತಮ ಮತ್ತು ಆನಂದಿಸು ವಂತಾಗಿದೆ. ಲಕ್ಷುರಿ ಸ್ಕಿನ್ಕೇರ್ ಅನ್ನು ಹೊಂದುವುದು, ಅದ್ಭುತ ಕಾಸ್ಮೆಟಿಕ್ಸ್ ಅನ್ನು ಎಕ್ಸ್ಪ್ಲೋರ್ ಮಾಡುವುದು ಮತ್ತು ನಿಮ್ಮ ಬ್ಯೂಟಿ ರುಟೀನ್ ಅನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಬ್ಯೂಟಿ ಬ್ರ್ಯಾಂಡ್ಗಳನ್ನು ಅನ್ವೇಷಿಸಲು ಇದು ಒನ್ ಸ್ಟಾಪ್ ತಾಣವಾಗಿದೆ. ಬ್ಯೂಟಿ ಉತ್ಸಾಹಿಗಳ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅಮೆಜಾನ್ನ ಬದ್ಧತೆಯನ್ನು ಈ ಬಿಡುಗಡೆಯು ಇನ್ನಷ್ಟು ಬಲಗೊಳಿಸುತ್ತದೆ.
ಅಮೆಜಾನ್ ಬ್ಯೂಟಿಯಲ್ಲಿ ಹೊಸದಾಗಿ ಬಿಡುಗಡೆ ಮಾಡಿದ ಗ್ಲೋಬಲ್ ಬ್ಯೂಟಿ ಸ್ಟೋರ್ನ ಕೆಲವು ಶಿಫಾರಸು ಮಾಡಿದ ಉತ್ಪನ್ನಗಳು ಇಲ್ಲಿವೆ.
ಅನಾಮಲಿ ಹೇರ್ಕೇರ್ ಬೈ ಪ್ರಿಯಾಂಕಾ ಛೋಪ್ರಾ ಜೋನಸ್ – ಚಾರ್ಕೋಲ್ ಮತ್ತು ಯೂಕಲಿಪ್ಟಸ್ ಸಹಿತ ಆಳ ಸ್ವಚ್ಛತೆ ಗಾಗಿ ಕ್ಲಾರಿಫೈಯಿಂಗ್ ಶಾಂಪೂ: ಈ ಬೇಸಿಗೆಯಲ್ಲಿ, ಯೂಕಲಿಪ್ಟಸ್ ಮತ್ತು ಚಾರ್ಕೋಲ್ನ ಪರಿಪೂರ್ಣ ಮಿಶ್ರಣದಿಂದ ಸಾವಯವದ ಕಡೆಗೆ ತಿರುಗಿ. ಅನಾಮಲಿ ಕ್ಲಾರಿಫೈಯಿಂಗ್ ಶಾಂಪೂ ನಿಮ್ಮ ಮುಂದಲೆಯನ್ನು ಆಳವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ತಾಜಾಗೊಳಿಸುತ್ತದೆ. ಅನಾಮಲಿ ರೇಂಜ್ ಹೇರ್ಕೇರ್ ಉತ್ಪನ್ನಗಳಿಂದ ಕೂದಲು ಹೆಚ್ಚಿಸಿಕೊಳ್ಳಿ ಮತ್ತು ಆರೋಗ್ಯ ಕರವಾಗಿಸಿಕೊಳ್ಳಿ. ಬೆಲೆ ಆರಂಭಿಕ ರೂ. 675.
ಡರ್ಮಲಾಜಿಕಾ ಡೈಲಿ ಮೈಕ್ರೋಫಾಲಿಯಂಟ್ ಎಕ್ಸ್ಫಾಲಿಯಂಟ್, ಹೊಳೆಯುವ ಚರ್ಮಕ್ಕಾಗಿ ಫೇಸ್ ಸ್ಕ್ರಬ್: ನಿಮ್ಮ ಚರ್ಮವನ್ನು ಸ್ವಚ್ಚಗೊಳಿಸುತ್ತಲೇ ಅಸಮಾನ ಚರ್ಮವನ್ನು ಸಮತೋಲನಗೊಳಿಸಲು ನಿಮ್ಮ ಚರ್ಮಕ್ಕೆ ಎಕ್ಸ್ಫಾಲಿಯಂಟ್ ಅನ್ನು ಸೇರಿಸುವ ಮೂಲಕ ನಿಮ್ಮ ಚರ್ಮ ಆರೈಕೆಯನ್ನು ಇನ್ನಷ್ಟು ಉದ್ದೀಪಿಸಿ! ಈ ಅದ್ಭುತ ಎಕ್ಸ್ಫಾಲಿಯೇಟ್ ಮಾಡುವ ಪೌಡರ್ ಬಳಸಿ ಪ್ರಕಾಶಮಾನವಾದ, ಮೃದುವಾದ ಚರ್ಮವನ್ನು ಪ್ರತಿ ದಿನವೂ ಆನಂದಿಸಿ. ರೂ. 3900 ರಲ್ಲಿ ಲಭ್ಯ.
ಶಿಸೈಡೋ – ಮಾಡರ್ನ್ ಮ್ಯಾಟ್ ಪೌಡರ್ ಲಿಪ್ಸ್ಟಿಕ್, ಜಾಝ್ ಡೆನ್: ಸುಂದರವಾದ ಬಣ್ಣಗಳು ನಿಮ್ಮ ತುಟಿಯ ಮೇಲಿರಲಿ. ಇವು ನೀವು ಹೋದಲ್ಲೆಲ್ಲ ಸ್ಮರಿಸಬಹುದಾದ ಪ್ರಭಾವವನ್ನು ಬೀರುತ್ತವೆ! ಶಿಸೈಡೋ ಪೌಡರ್ ಲಿಪ್ಸ್ಟಿಕ್ ಅತ್ಯಂತ ಹಗುರ ವಾಗಿರುತ್ತವೆ ಮತ್ತು ಪೌಡರ್ನಷ್ಟು ಮೃದುವಾದ ಫಿನಿಶ್ ಅನ್ನು ನಿಮ್ಮ ತುಟಿಗಳಿಗೆ ನೀಡುತ್ತವೆ. ಚರ್ಮಶಾಸ್ತ್ರೀಯವಾಗಿ ಪರೀಕ್ಷಿಸಿದ ಮತ್ತು 24 ಶೇಡ್ಗಳಲ್ಲಿ ಲಭ್ಯವಿರುವ ಈ ರೇಂಜ್ನ ಲಿಪ್ಸ್ಟಿಕ್ ನಿಮ್ಮ ವ್ಯಾನಿಟಿಯಲ್ಲಿ ಇರಲೇಬೇಕಾದ ಸಾಮಗ್ರಿ ಯಾಗಿದೆ. ರೂ. 2700 ರಲ್ಲಿ ಲಭ್ಯವಿದೆ. ಶಿಸೈಡೋ ರೇಂಜ್ ಫೇಸ್ ಮೇಕಪ್ ಮತ್ತು ಸ್ಕಿನ್ಕೇರ್ ಉತ್ಪನ್ನಗಳನ್ನು ಎಕ್ಸ್ ಪ್ಲೋರ್ ಮಾಡಿ.
ಚೊಪಾರ್ಡ್ ಔಡ್ ಮಲಕಿ ಇಯು ಡೆ ಪರ್ಫ್ಯೂಮ್: ಈ ಸುಗಂಧವನ್ನು, ಅರೇಬಿಯನ್ ನೈಟ್ಸ್ ಪ್ರಭಾವವನ್ನು ಮೂಡಿಸುವು ದಕ್ಕಾಗಿ ಅತ್ಯಂತ ಎಚ್ಚರಿಕೆಯಿಂದ ರೂಪಿಸಲಾಗಿದೆ. ಚೊಪಾರ್ಡ್ ಔಡ್ ಮಲಕಿ ಇಯು ಡೆ ಪರ್ಫ್ಯೂಮ್ ಲೆದರ್, ಆಂಬರ್ ಮತ್ತು ಸ್ಮೋಕ್ನ ಶ್ರೀಮಂತ ಸುಗಂಧವನ್ನು ಹೊಂದಿದೆ. ಲ್ಯೂಮಿನಸ್ ಟಾಪ್ ನೋಟ್ಸ್ ಅನ್ನು ಪರ್ಫ್ಯೂಮ್ ಹೊಂದಿದೆ. ಅಲ್ಲದೆ, ದ್ರಾಕ್ಷಿ, ಲ್ಯಾವೆಂಡರ್ ಮತ್ತು ಹರ್ಬಲ್ ಅರ್ಟೆಮಿಸಿಯಾ ಅನ್ನು ಒಳಗೊಂಡಿದೆ. ಈ ಪರ್ಫ್ಯೂಮ್ ಬಳಸಿ ನಿಮ್ಮನ್ನು ಉದ್ದೀಪಿಸಿಕೊಳ್ಳಿ. ರೂ. 9775 ಕ್ಕೆ ಲಭ್ಯವಿದೆ.
ಮ್ಯಾಕ್ಸ್ ಫ್ಯಾಕ್ಟರ್ ಫೌಂಡೇಶನ್: ಪ್ರೈಮರ್, ಕನ್ಸೀಲರ್ ಮತ್ತು ಫೌಂಡೇಶನ್ನ ಉತ್ತಮ ಅಂಶಗಳನ್ನು ಒಳಗೊಂಡಿರುವ ಈ ಬಹು ಉದ್ದೇಶಿತ ಬ್ಯೂಟಿ ಎಸೆನ್ಷಿಯಲ್ನೊಂದಿಗೆ ನಿಮ್ಮ ಅಡಿಪಾಯ ಪರಿಪೂರ್ಣವಾಗಿರಲಿ. ಸ್ಮೂತ್, ಹೊಳೆಯುವ ಮತ್ತು ಸರಾಗವಾದ ಲುಕ್ ಅನ್ನು 30 ಗಂಟೆಗಳವರೆಗೆ ಪಡೆಯಿರಿ. ಲಭ್ಯವಿದೆ ರೂ. 756 ಕ್ಕೆ. ಪ್ರತಿ ಮೇಕಪ್ ಆರ್ಟಿಸ್ಟ್ ಮೆಚ್ಚಿನ ಬ್ರ್ಯಾಂಡ್ ಇದು. ಎಲ್ಲ ಸನ್ನಿವೇಶಗಳಿಗೂ ಸೂಕ್ತವಾದ ಶ್ರೇಣಿಯನ್ನು ಇದು ಹೊಂದಿದೆ. ಪರಿಪೂರ್ಣತೆಯ ಅನುಭವವನ್ನು ನೀಡುತ್ತದೆ!
ಇನ್ನಿಸ್ಫ್ರೀ ಗ್ರೀನ್ ಟೀ ಸೀಡ್ ಸೀರಮ್: ಇನ್ನಿಸ್ಫ್ರೀ ಗ್ರೀನ್ ಟೀ ಸೀಡ್ ಸೀರಮ್ ಬಳಸಿಕೊಂಡು ಈ ಸೀಸನ್ನಲ್ಲಿ ನಿಮ್ಮ ಚರ್ಮವನ್ನು ಪುನಃ ಹೈಡ್ರೇಟ್ ಮಾಡಿ, ಪುನಃಶ್ಚೇತನಗೊಳಿಸಿ ಮತ್ತು ಮರುಪೂರಣ ಮಾಡಿ. ದೈನಂದಿನ ಮಾಯಿಶ್ಚರ್ ತಡೆ ಇದಾಗಿದ್ದು, ಚರ್ಮಕ್ಕೆ ತೇವಾಂಶವನ್ನು ಆಳವಾಗಿ ಮತ್ತು ಸಾಂದ್ರವಾಗಿ ಒದಗಿಸುತ್ತದೆ. ಇದು 882 ರೂ. ಯಲ್ಲಿ ಲಭ್ಯವಿದೆ. ಅಲ್ಲದೆ, ಕ್ಲಿಯರ್ ಸ್ಕಿನ್ ಕೇರ್ ಉತ್ಪನ್ನಗಳನ್ನೂ ಎಕ್ಸ್ಪ್ಲೋರ್ ಮಾಡಿ. ಇದು ನಿಮ್ಮ ಎಲ್ಲ ಸ್ಕಿನ್ ಕೇರ್ ಕಳವಳಗಳಿಗೆ ಉತ್ತರಿ ಸುತ್ತದೆ. ಅಷ್ಟೇ ಅಲ್ಲ, ಉತ್ತಮ ಭಾವವನ್ನೂ ಇದು ಮೂಡಿಸುತ್ತದೆ.