Saturday, 14th December 2024

ಸ್ಮಾರ್ಟ್ ಫೋನ್ ಖರೀದಿಸಿದರೆ, ಬಿಯರ್ ಕ್ಯಾನ್ ಉಚಿತ..!

ಲಖನೌ: ತ್ತರ ಪ್ರದೇಶದ ಬದೋಹಿಯಲ್ಲಿ ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಯುವಜನ ಮುಗಿಬಿದ್ದಿದ್ದಾರೆ.

ರಾಜೇಶ್ ಮೌರ್ಯ ಎಂಬಾತ ಈ ಆಫರ್ ಘೋಷಿಸಿದ್ದು, ಮಾರ್ಚ್ 3 ರಿಂದ 7 ರವರೆಗೆ ಇದು ಲಭ್ಯವಿರ ಲಿದೆ ಎಂದು ತಿಳಿಸಲಾಗಿತ್ತು.

ಅಲ್ಲದೆ ನಗರದ ವಿವಿಧೆಡೆ ಪೋಸ್ಟರ್, ಪಾಂಪ್ಲೆಟ್ ಹಾಗೂ ಅನೌನ್ಸ್ಮೆಂಟ್ ಮೂಲಕ ಪ್ರಚಾರ ಮಾಡ ಲಾಗಿತ್ತು.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕೊಂಡವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ಸಿಗಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಂಗಡಿ ಮುಂದೆ ಜನದಟ್ಟಣೆ ನೆರೆದಿದೆ. ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದ್ದು ಸ್ಥಳಕ್ಕೆ ಬಂದ ಅವರು ಗುಂಪನ್ನು ಚದುರಿಸಿ ರಾಜೇಶ್ ಮೌರ್ಯನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಂಗಡಿ ಬಂದ್ ಮಾಡಿಸಿದ್ದು, ರಾಜೇಶ್ ಮೌರ್ಯ ವಿರುದ್ಧ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪವನ್ನು ಹೊರಿಸಲಾಗಿದೆ.