2024 ಕಳೆದು 2025 ಇನ್ನೇನು ಕೆಲವೇ ದಿನಗಳಲ್ಲಿ ನಮ್ಮನ್ನು ಎದುರುಗೊಳ್ಳಲಿದೆ. ಈ ಹೊತ್ತಿನಲ್ಲಿ 2023ರಲ್ಲಿ ಏನೇನಾಯ್ತು ಎಂಬುದು ಕುತೂಹಲ ಇದ್ದೇ ಇರುತ್ತದೆ. ಗೂಗಲ್ ಚಟುವಟಿಕೆಗಳು (Year in Search) ಹೆಚ್ಚು ಗಮನ ಸೆಳೆಯುತ್ತವೆ(Google Search). ಅದರಂತೆ 2024ರಲ್ಲಿ ಅತಿ ಹೆಚ್ಚು ಹುಡುಕಾಡಿದ ಸಿನಿಮಾಗಳು (Most Searched movies in 2024) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ನಿಮಾಗಳ ಪಟ್ಟಿಯಲ್ಲಿ ಸ್ತ್ರೀ 2 (Stree 2) ಮೊದಲನೇ ಸ್ಥಾನದಲ್ಲಿದೆ.
ಎರಡನೇ ಸ್ಥಾನದಲ್ಲಿ ತೆಲುಗಿನ ‘ಕಲ್ಕಿ 2898 ಎಡಿ’ ಸಿನಿಮಾ ಇದ್ದು, ಪ್ರಭಾಸ್, ಅಮಿತಾಭ್ ಬಚ್ಚನ್ ನಟನೆಯ ಈ ಸಿನಿಮಾಗೆ 2ನೇ ಸ್ಥಾನ ಸಿಕ್ಕಿದೆ. ಅಚ್ಚರಿ ಎಂದರೆ ಕನ್ನಡದ ಅತ್ಯಂತ ಜನಪ್ರಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರ ಸಿನಿಮಾ ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
‘ಸ್ತ್ರೀ 2’
ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮೊದಲಾದವರು ನಟಿಸಿರೋ ‘ಸ್ತ್ರೀ 2’ ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 850 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದ್ದು, ಶ್ರದ್ಧಾ ಕಪೂರ್ ಅಭಿನಯದ ಹಿಂದಿಯ ‘ಸ್ತ್ರೀ 2’ ಸಿನಿಮಾವು 2024ರ ಗೂಗಲ್ ಸರ್ಚ್‌ನಲ್ಲಿ ಟಾಪ್ 1ನೇ ಸ್ಥಾನದಲ್ಲಿದೆ. ‘ಸ್ತ್ರೀ 2’ ಚಿತ್ರವನ್ನು ದಿನೇಶ್ ವಿಜನ್, ಜ್ಯೋತಿ ದೇಶಪಾಂಡೆ ನಿರ್ಮಾಣ ಮಾಡಿದ್ದಾರೆ. ಅಮರ್ ಕೌಶಿಕ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಕ್ಷಯ್ ಕುಮಾರ್, ವರುಣ್ ಧವನ್ ಮೊದಲಾದವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ‘ಸ್ತ್ರೀ 3’ ಕೂಡ ಬರಲಿದ್ದು, ಇದಕ್ಕಾಗಿ ಈಗಾಗಲೇ ಸ್ಕ್ರಿಪ್ಟ್ ಕೂಡ ರೆಡಿ ಆಗಿದೆ.
‘ಕಲ್ಕಿ 2898 ಎಡಿ’
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮುಂತಾದವರು ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತ್ತು. ಪ್ರಭಾಸ್ ಮತ್ತು ದೀಪಿಕಾ ಅಭಿನಯದ ನಾಗ್ ಅಶ್ವಿನ್ ನಿರ್ದೇಶನದ ಈ ವೈಜ್ಞಾನಿಕ ಚಿತ್ರವು ವಿಶ್ವಾದ್ಯಂತ 1200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ಈ ಸಾಧನೆ ಮಾಡಿದ ಆರನೇ ಭಾರತೀಯ ಸಿನಿಮಾವಾಗಿ ಗುರುತಿಸಿಕೊಂಡಿತ್ತು. ಸದ್ಯ ‘ಕಲ್ಕಿ 2898 ಎಡಿ’ ಪಾರ್ಟ್ 1ಕ್ಕೆ ಭಾರಿ ರೆಸ್ಪಾನ್ಸ್ ಸಿಕ್ಕಿದ್ದು, ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈಗ ಪಾರ್ಟ್ 2 ಮೇಲೆ ಗಮನ ನೀಡಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ, ಪಾರ್ಟ್ 2ಕ್ಕೆ ಆಗಲೇ ಶೇ.60ರಷ್ಟು ಶೂಟಿಂಗ್ ಆಗಿದೆಯಂತೆ. ಉಳಿದಿರುವ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಮಾಡಿದ ನಂತರ ಕಲ್ಕಿ ಪಾರ್ಟ್ 2 ಅನ್ನು 2025ರ ಬೇಸಿಗೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದ್ದು, 2024ರ ಗೂಗಲ್ ಸರ್ಚ್‌ನಲ್ಲಿ ಟಾಪ್ 2ನೇ ಸ್ಥಾನದಲ್ಲಿದೆ
’12th ಫೇಲ್’
ವಿಧು ವಿನೋದ್ ಚೋಪ್ರಾ ನಿರ್ದೇಶನದ, ವಿಕ್ರಾಂತ್ ಮಾಸ್ಸೆ ನಟನೆಯ ’12th ಫೇಲ್’ ಹಿಂದಿ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದು, ಬ್ಲಾಕ್‌ಬಸ್ಟರ್ ಆಯಿತು. ಕಲಾವಿದರ ಅಭಿನಯ, ತಂತ್ರಜ್ಞರ ಶ್ರಮಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ಸಾಮಾನ್ಯ ಪ್ರೇಕ್ಷಕರಿಂದ ಬಹಳ ಮಂದಿ ಪ್ರಮುಖರು ಕೂಡ ಈ ಸಿನಿಮಾವನ್ನು ತುಂಬಾ ಮೆಚ್ಚಿಕೊಂಡರು. ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮ ಜೀವನವನ್ನು ಆಧರಿಸಿ ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಮನೋಜ್ ಕುಮಾರ್ ಶರ್ಮ ಪಾತ್ರದಲ್ಲಿ ವಿಕ್ರಾಂತ್ ಮಾಸ್ಸೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಗೆ 3ನೇ ಸ್ಥಾನ ಸಿಕ್ಕಿದೆ.
‘ಲಾಪತಾ ಲೇಡೀಸ್’
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ನಿರ್ಮಾಣದ, ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಸಿನಿಮಾ ಅದ್ಭುತ ವಿಮರ್ಶೆಯನ್ನು ಪಡೆದುಕೊಂಡಿತ್ತು. ಈ ಸಿನಿಮಾವು ಅಧಿಕೃತವಾಗಿ ಭಾರತದಿಂದ ಆಸ್ಕರ್ ಗೂ ಆಯ್ಕೆ ಆಗಿದೆ. ಸದ್ಯ ಈ ಸಿನಿಮಾಕ್ಕೆ ಗೂಗಲ್ ಸರ್ಚ್‌ನಲ್ಲಿ 4ನೇ ಸ್ಥಾನ ಸಿಕ್ಕಿದೆ.
ಹನುಮಾನ್
ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿರುವ ‘ಹನುಮಾನ್’ ಸಿನಿಮಾವು ಈ ವರ್ಷ ತೆಲುಗಿನಲ್ಲಿ ದೊಡ್ಡ ಹಿಟ್ ಆಗಿದೆ. ನಿರ್ಮಾಪಕರಿಗೆ ದೊಡ್ಡಮಟ್ಟದ ಗೆಲುವು ತಂದುಕೊಟ್ಟಿದೆ. ಈ ಚಿತ್ರಕ್ಕೆ 5ನೇ ಸ್ಥಾನ ಸಿಕ್ಕಿದೆ.
ಮಹಾರಾಜ
ವಿಜಯ್ ಸೇತುಪತಿ ಅಭಿನಯದ 50ನೇ ಸಿನಿಮಾ ‘ಮಹಾರಾಜ’ ತಮಿಳಿನಲ್ಲಿ ದೊಡ್ಡ ಯಶಸ್ಸು ಕಂಡು, ಈಗ ಚೀನೀ ಭಾಷೆಗೂ ಡಬ್ ಆಗಿ ತೆರೆಕಂಡಿದೆ. ಸದ್ಯ ಈ ಸಿನಿಮಾವು 2024ರ ಗೂಗಲ್ ಸರ್ಚ್‌ನಲ್ಲಿ ಟಾಪ್ 6ನೇ ಸ್ಥಾನದಲ್ಲಿದೆ.
ಮಂಜುಮ್ಮೆಲ್ ಬಾಯ್ಸ್
ಈ ವರ್ಷ ಮಲಯಾಳಂನಲ್ಲಿ ಬಂದ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ ಮಾಡಿದ ಮೋಡಿ ಸಾಮಾನ್ಯದ್ದಲ್ಲ. ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದ ಈ ಸಿನಿಮಾವು ಅತೀ ಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
ಗೋಟ್
‘ದಳಪತಿ’ ವಿಜಯ್ ನಟನೆಯ ‘ಗೋಟ್’ (The Greatest of All Time) ಸಿನಿಮಾವು ಈ ವರ್ಷ ಗೂಗಲ್‌ನಲ್ಲಿ ಅತೀ ಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
ಸಲಾರ್
ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದ ಬಹುನಿರೀಕ್ಷಿತ ಚಿತ್ರ ‘ಸಲಾರ್’ 2023ರ ಡಿಸೆಂಬರ್ 22ರಂದು ಅದ್ಧೂರಿಯಾಗಿ ತೆರೆಗಪ್ಪಳಿಸಿತ್ತು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಈ ಸಿನಿಮಾ ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿದೆ. ಟಾಪ್ 10 ಟ್ರೆಂಡಿಂಗ್ ಫಿಲ್ಮ್ಸ್ ಪಟ್ಟಿಯಲ್ಲಿ ಈ ಚಿತ್ರ ಒಂಭತ್ತನೇ ಸ್ಥಾನ ಪಡೆದುಕೊಂಡಿದೆ.
ಆವೇಶಂ
ಫಹಾದ್ ಫಾಸಿಲ್ ನಟನೆಯ ‘ಆವೇಶಂ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗೆಲುವು ಪಡೆದುಕೊಂಡಿತ್ತು. ಇದೀಗ 2024ರ ಗೂಗಲ್ ಸರ್ಚ್‌ನಲ್ಲಿ ಟಾಪ್ 10ನೇ ಸ್ಥಾನವನ್ನು ಈ ಸಿನಿಮಾ ಪಡೆದುಕೊಂಡಿದೆ.