ಮಾನವಿ : ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಬಹುಜನ ಸಮಾಜ ಪಕ್ಷದಿಂದ ಮನವಿ ಸಲ್ಲಿಸಲಾಯಿತು ಎಂದು ಮುಖಂಡ ಶ್ಯಾಮಸುಂದರ ಕುಬ್ದಾಳ್ ಹೇಳಿದರು.
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮೇ 14 ರಿಂದ ಸತತವಾಗಿ ಏರಿಕೆಯಾಗುತ್ತಿದೆ. ದರ ಏರಿಕೆಯಿಂದ ಜನರು ಹೈರಾಣಾಗಿ ದ್ದಾರೆ ನಮ್ಮ ಕರ್ನಾಟಕವು ಸೇರಿದಂತೆ ಹಲವು ರಾಜ್ಯಗಳಿಗೆ ನೀಟರ್ ಪೆಟ್ರೋಲ್ ದರವು 100/-ಗಳ ಗಡಿದಾಟಿದೆ, ತೈಲೋತ್ಪನ್ನ ಗಳ ಬೆಲೆ ಏರಿಕೆಯು ಜನ-ಜೀವನದ ಎಲ್ಲಾ ಚಟುವಟಿಕೆಗಳ ಮೇಲೆಯೂ ಪರಿಣಾಮ ಬೀರುತ್ತಿದೆ ಕೋವಿಡ್-19 ಸಾಂಕ್ರಾಮಿಕ ದಿಂದಾಗಿ ಆದಾಯನನ್ನು ಅಥವಾ ಕಡಿತವಾಗಿರುವ ಈ ಸಂದರ್ಭದಲ್ಲಿ ಬಿಟೋಲ್ ಬೆಲೆ ಏರಿಕೆಯೂ, ಸಮಂಜಸವಲ್ಲ ತೈಲೋತ್ಪನ್ನ ದರ ನಿಯಂತ್ರಣ ಸಿಗದ ಹಾಗೆ ಬರಿಕೆಯಾಗುತ್ತಿದ್ದರೆ, ಸರಕಾರದ ಬೊಕ್ಕಸವು ಭರ್ತಿಯಾಗುತ್ತಿದೆ. ಕಳೆದ 6 ವರ್ಷಗಳಿಂದ ಪೆಟ್ರೋಲ್-ಡಿಸೆಲ್ ಮೇಲಿನ ತೆರಿಗೆ ಸಂಗ್ರಹ ಶೇ. 100 ಏರಿಕೆಯಾಗಿದೆ.
ಅದೇರೀತಿಯಾಗಿ ನೈಸರ್ಗಿಕ ಅನಿಲದ ಮೇಲಿನ ತೆರಿಗೆಯಿಂದಲೂ ದೊಡ್ಡ ಮೊತ್ತದ ಸಂಪನ್ಮೂಲ ಸಂಗ್ರಹವಾಗುತ್ತಿದೆ. 2014 ರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.48 ರೂ. ಸುಂಕ ವಿಧಿಸಲಾಗುತ್ತಿತ್ತು, ಪ್ರಸ್ತುತ ಆದು 329) ಕ್ಕೆ ಏರಿಕೆಯಾಗಿದೆ. ಡೀಸೆಲ್ ಸಹ 3,53 ರಿಂದ 380ಕ್ಕೆ ಏರಿಕೆಯಾಗಿದೆ ಬಹುತೇಕ ಎಲ್ಲಾ ರಾಜ್ಯಗಳು ಕೇಂದ್ರದ ಮಾದರಿಯನ್ನು ಅನುಸರಿಸುತ್ತಿವೆ. ಕೇಂದ್ರ ವಿಧಿಸುವ ತೆರಿಗೆಯನ್ನು ರಾಜ್ಯ ಸರಕಾರಗಳು ವಿಧಿಸುವ ಮೂಲಕ ತಮ್ಮ ಬೊಕ್ಕಸವನ್ನು ತುಂಬಿಕೊಳ್ಳುತ್ತವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಪೆಟ್ರೋಲ್ ಹಾಗೂ ಡೀಸಲ್ ಮೇಲಿನ ತೆರಿಗೆ ಶೇ 40/- ರಷ್ಟು ಇರುತ್ತದೆ.
2020 ರಲ್ಲಿ ಆರಂಭವಾದ ಕೋಡ್ನಿಂದಾಗಿ ಲಾಕ್ಡೌನ್ ಹೇರುವ ಸ್ಥಿತಿ ನಿರ್ಮಾಣವಾಯಿತು. ವ್ಯಾಪಾರ, ಉದ್ಯಮಗಳು ಸ್ಥಗಿತಗೊಂಡಿದ್ದರಿಂದ ಸರಕಾರದ ವರಮಾನಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಸರಕಾರಗಳು ನೆಚ್ಚಿಕೊಂಡಿದ್ದು, ತೈಲೋತ್ಪನ್ನ ಮೇಲಿನ ಸುಂಕವನ್ನು ಇದರಿಂದಾಗಿ ಕೋವಿಡ್ ಹಾಗೂ ಲಾಕ್ಡೌನ್ನಿಂದ ಜನರು ತೊಂದರೆ ಅನುಭವಿಸುತ್ತಿದ್ದರೂ ಸರಕಾ ರಗಳು ತೈಲ ಬೆಲೆಯನ್ನು ವಿಸುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಭಾರೀ ಪ್ರಮಾಣದ ತೆರಿಗೆ ಸೆಸ್ ವಿಧಿಸುತ್ತಿವೆ. ತೈಲದರ ಹೆಚ್ಚಾದಷ್ಟು ಸರಕಾರಗಳಿಗೆ ಲಾಭ ಹೆಚ್ಚು, ಈಗಿನ ಮಾಹಿತಿಯ ಪ್ರಕಾರ ಪೆಟ್ರೋಲ್, ಮೂಲ ದರ ರೂ. 37/- ಇರುತ್ತದೆ. ಎಕ್ಸೆಸ್ ಸುಂಕ: 33 ವ್ಯಾಟ್, 24.5 ವಿತರಕರ ಕಮಿಷನ್ 3.6 ಆಗಿರುತ್ತದೆ. ಪೆಟ್ರೋಲ್ ದರಕ್ಕಿಂತ ಸರಕಾರಗಳು ವಿಧಿಸುವ ತೆರಿಗೆ ರೂ. 60/- ಗಳಷ್ಟು ಹೆಚ್ಚಾಗುತ್ತದೆ. ಇದೇರೀತಿಯಾಗಿ ಪ್ರದೇಶದಿಂದ ಪ್ರದೇಶಕ್ಕೆ ಸಾಗಾಣಿಕೆ ದರದಲ್ಲಿ ಕೂಡ ಏರಿಕೆಯಾಗುತ್ತಿದೆ.
ತೈಲ ದರವು ದಿನೇ-ದಿನೇ ಹೆಚ್ಚಾಗುವುದರಿಂದ ದೇಶದಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗಬಹುದು ಎಂಬ ಆತಂಕವನ್ನು ಇತ್ತೀಚಿಗೆ (ಆರ್.ಬಿ.ಐ) ಹಣಕಾಸು ನೀತಿ ಸಮಿತಿಯು ತಿಳಿಸಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗುತ್ತಿರುವುದು ಸಾಗಾಣಿಕೆ ವೆಚ್ಚ ಜಾಸ್ತಿ ಆಗಿರುವುದು ದೇಶದಲ್ಲಿ ಮುಂದೆ ಹಣದುಬ್ಬರಕ್ಕೆ ಆಸ್ಪದ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವಿಧಿಸುತ್ತಿರುವ ಎಕ್ಸಿಸ್ನಿಂದ ಸೆಸ್ ಮತ್ತು ತೆರಿಗೆಗಳನ್ನು ಪರಸರ ಸಹಕಾರದಿಂದ ಹೊಂದಾಣಿಕೆ ಮಾಡಿ ತೈಲ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಏರಿಕೆ ಉಂಟಾಗುವುದನ್ನು ನಿಯಂತ್ರಿಸಬೇಕು.
ಪೆಟ್ರೋಲ್ ಮತ್ತು ಡಿಸೇಲ್ ಮಾರುಕಟ್ಟೆ ಬೆಲೆಯೂ ಸರ್ವಕಾಲಿಕ ಗರಿಷ್ಠಮಟ್ಟ ತಲುಪಿದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ತಗ್ಗಿಸುವುದರಿಂದ ಬೆಲೆ ಹೆಚ್ಚಳದ ಒತ್ತಡ ಕಡಿಮೆ ಮಾಡಬಹುದು, 2020-ಮಾರ್ಚನಲ್ಲಿ ಕೋವಿಡ್ ಕಾರಣದಿಂದಾಗಿ ದೇಶದಾದ್ಯಂತ ಲಾಕ್ಡೌನ್’ ಜಾರಿಯಾಯಿತು. ಆರ್ಥಿಕತೆ ಬಹುತೇಕ ಸ್ಥಗಿತವಾದ ಕಾರಣ 2020 ರ ಮಾರ್ಚ-20 ರಂದು ಇದ್ದ ಇಂಧನ ಬೆಲೆಯನ್ನು ಮುಂದಿನ ಆದೇಶದ ವರೆಗೂ ನಿಗಧಿ ಮಾಡಲಾಯಿತು ಈ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹಲವು ಪಟ್ಟು ಇಳಿಕೆಯಾದರೂ ಪೆಟ್ರೋಪ್ ಮತ್ತು ಡೀಸೆಲ್ ಮಾರಾಟದ ಬೆಲೆಯನ್ನು ಇಳಿಸಲಿಲ್ಲ. ಅಬಕಾರಿ ಸುಂಕ ಮತ್ತು ಸೆಸ್ಗಳ ಪ್ರಮಾಣವನ್ನು ಈ ಸಂದರ್ಭದಲ್ಲಿ ಏರಿಕೆ ಮಾಡಿಕೊಂಡಿತ್ತು. ಸರಕಾರವು ಒಂದೇ ಬೆಲೆಯನ್ನು ಆಗ ಕಾಯ್ದುಕೊಂಡಿದ್ದು, ಕಚ್ಚಾ ತೈಲಬೆಲೆ ಒಂದು ಲಾಭ ಗ್ರಾಹಕರಿಗೆ ಆಗಲಿಲ್ಲ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪೆಟ್ರೋಲ್ ದರಗಳ ಮೇಲೆ ವಿಧಿಸುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲು ಕ್ರಮವನ್ನು ಕೈಗೊಳ್ಳುವುದಲ್ಲದೇ ರಾಜ್ಯಗಳು ತಮ್ಮ ತೆರಿಗೆಯನ್ನು ಕಡಿಮೆ ಮಾಡಲು ಏಕ ರೂಪದ ತೆರಿಗೆಯನ್ನು ವಿಧಿಸಿ ಅನಿಯಂತ್ರಿತ ದರ ಏರಿಕೆಯನ್ನು ತಪ್ಪಿಸಬೇಕೆಂದು ಬಹುಜನ ಸಮಾಜ ಪಕ್ಷ ಮಾನವಿ ವತಿಯಿಂದ ಮನವಿ ಮಾಡಿತ್ತು.
ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಉಸ್ತುವಾರಿಗಳಾದ ಶ್ಯಾಮಸುಂದರ್ ಕುಂಬದಾಳ,ಚನ್ನಬಸವ ಜಗ್ಲಿ, ಇಮಾಮ್ ಸಾಬ್, ಚಂದ್ರಶೇಖರ್ ಬಿ, ರಮೇಶ್ ನಾಯಕ್, ವಿರುಪನಗೌಡ ಕೋನಾಪುರಪೇಟೆ, ಜಗದೀಶ್ ಉಪಸ್ಥಿತರಿದ್ದರು.