Thursday, 28th November 2024

ಸ್ತ್ರೀಶಕ್ತಿಯ ಪ್ರತೀಕ ಡಾ.ಇಂದಿರಾ ಗೋಸ್ವಾಮಿ

(ನಿನ್ನೆಯ ಸಂಚಿಕೆಯಿಂದ ಮುಂದುವರಿದ ಭಾಗ)

ಸಾಧನೆ

ನಾಗೇಶ್‌ ಯು.ಸಿದ್ದೇಶ್ವರ

ಇಂದಿರಾ ಗೋಸ್ವಾಮಿ ಅವರು ವಾಸಿಸುತ್ತಿದ್ದ ಗುಹೆಯಂಥ ಚಿಕ್ಕ ರೂಮಿನ ಸಮೀಪದಲ್ಲಿಯೇ ನೂರಾರು ವಿಧವೆಯರು (ರಾಧೇ ಶ್ಶಾಮೀ) ವಾಸಿಸುತ್ತಿದ್ದರು. ಅವರೆಲ್ಲ ಮಂದಿರ ಗಳಲ್ಲಿ ಸೇವೆಯಲ್ಲಿ ತೊಡಗಿದ್ದವರು. ಇಂದಿರಾ ಗೋಸ್ವಾಮಿಯವರು ಅನೇಕ ವಿಧವೆಯರ ಸಂಪರ್ಕ ದಿಂದ ಅವರ ಅನುಭವಗಳ ಟಿಪ್ಪಣಿ ಮಾಡಿಕೊಂಡರು. ಆ ಎಲ್ಲ ದುಖಃ ಭರಿತ ಕತೆಗಳು ಮುಂದೆ
ಅವರು ಬರೆದ ಕಾದಂಬರಿಗಳಿಗೆ ಸಾಮಗ್ರಿ ಆಯಿತು.

ತಮ್ಮ ಸಂಶೋಧನಾ ಪ್ರಬಂಧಕ್ಕಾಗಿ ಅಭ್ಯಸಿಸಲು ಅವರು ಹಿಂದಿ ಕಲಿತರು. ಉಪೇಂದ್ರಲೇಖ ಅವರ ಮಾರ್ಗದರ್ಶನ ಮತ್ತು Institute of Oriental Philosophy ಯಲ್ಲಿದ್ದ ಅಪಾರ ಗ್ರಂಥಗಳ ಸಂಗ್ರಹ ಅವರಿಗೆ ತುಂಬಾ ಸಹಕಾರಿಯಾಯಿತು. ತುಳಸೀ ದಾಸರ ರಾಮಚರಿತ ಮಾನಸ ಸಾವಕಾಶವಾಗಿ ಅವರ ದುಖಃವನ್ನೂ ದೂರ ಮಾಡಿತು. ಹೊಸ ಹೊಸ ಮಾಹಿತಿ ಪಡೆಯಲು ಅನೇಕ ಸಾಧು ಸಂತರನ್ನು ಸಂಪರ್ಕಿಸಿ ಚರ್ಚೆ ಮಾಡಿದರು.

ಪತಿಯ ನಿಧನದ ನಂತರ ಆಸ್ಸಾಮಿಗೆ ಮರಳಿದ ಇಂದಿರಾ ಗೋಸ್ವಾಮಿಯವರ ಜೀವನದ ಏಳು ಬೀಳುಗಳನ್ನೂ, ಅವರ
ಬರವಣಿಗೆಯ ಪ್ರಖರತೆಯನ್ನು ಗುರುತಿಸಿದವರು, ನೀಲಾಚಲ (Nilachal) ಪತ್ರಿಕೆಯ, ಪ್ರತಿಭಾನ್ವಿತ ಯುವ ಸಂಪಾದಕ ಶ್ರೀಹೋಮೆನ್ ಬೋರೋಹೈನ್ (Homen Borgohain). ಇಂದಿರಾ ಅವರಿಗೆ ತಮ್ಮ ಆಟೋ ಬಯೋಗ್ರಫಿಯನ್ನು ಸರಣಿ ಲೇಖನಗಳ ಮೂಲಕ ಬರೆಯುವಂತೆ, ಆಹ್ವಾನಿಸಿದರು.

ADHA LEKHA DASTABEJ (An Unfinished Autobiography) ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾಗುತ್ತಿದ್ದ ಈ ಲೇಖನ ವನ್ನು ಆಸ್ಸಾಮಿನ ಜನ ಆಸಕ್ತಿಯಿಂದ ಓದಿದರು. ಅಸ್ಸಾಮಿನ ಸಾಮಾಜಿಕ, ವಿಶೇಷತಃ ಗ್ರಾಮೀಣ ಪರಿಸರ, ಹೆಣ್ಣಿನ ಬವಣೆ
ಗಳು, ಅಸ್ಸಾಮಿನ ಆಡು ಭಾಷೆಗಳಲ್ಲಿ ಪ್ರಕಟವಾಗಿದ್ದು, ಓದುಗರ ಮನ ಮುಟ್ಟಿತು. ಇಂದಿರಾ ಅವರು ತಮ್ಮ ಚಿಕ್ಕ ವಯಸ್ಸು (26)ನಲ್ಲಿ ಬರೆದ ಈ ಆತ್ಮಚರಿತ್ರೆ ಬಹುಶಃ ಒಂದು ದಾಖಲೆಯೇ ಸರಿ! ಇದೇ ಲೇಖನ ಅನೇಕ ಜನರ ಹುಬ್ಬೇರಿಸಿ ವಿರೋಧಿಸಿದ ಘಟನೆಗಳೂ ಜರುಗಿದವು. ಇಂದಿರಾ ಅವರು ಎಲ್ಲ ವಿರೋಧವನ್ನು ಎದುರಿಸಿ ತಮ್ಮ ಲೇಖನಿಗೆ ಎಂದೂ ವಿರಾಮ ಕೊಡಲೇ ಇಲ್ಲ.!!

ಚಿಕ್ಕಂದಿನಿಂದಲೂ ಇಂದಿರಾ ಅವರು ಸತತವಾಗಿ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದರು. ಈ ಬರವಣಿಗೆ ಎಂಬ ರಕ್ಷಾ ಕವಚವೇ ಅವರನ್ನು ಎಲ್ಲ ಕಷ್ಟಗಳಿಂದ ಕಾಪಾಡಿ ಸೃಜನಶೀಲರನ್ನಾಗಿ ಮಾಡಿತು. ಅವರು 18 ಕಾದಂಬರಿ ಗಳನ್ನೂ, ನೂರಾರು ಕತೆಗಳನ್ನು ಬರೆದಿದ್ದಾರೆ. ರಾಮಾಯಣದ ಆಳವಾದ ಅಭ್ಯಾಸ ಮಾಡಿದ್ದರಿಂದ ಅವರು ರಾಮಾಯಣದ ಬಗ್ಗೆ ಅಧಿಕಾರವಾಣಿ ಯಿಂದ ಮಾತನಾಡಿದ್ದಾರೆ ಮತ್ತು ಬರೆದಿದ್ದಾರೆ. ದೇಶ ವಿದೇಶಗಳಲ್ಲಿ, ಅಸಂಖ್ಯಾತ ಸೆಮಿನಾರ್‌ಗಳಲ್ಲಿ ಭಾಗವಹಿಸಿ ತಮ್ಮ ಭಾಷಣ, ಚರ್ಚೆಗಳ ಮೂಲಕ ರಾಮಾಯಣದ ಅಮೃತಸಿಂಚನ ಮಾಡಿದ್ದಾರೆ ಮತ್ತು ಮಾನವೀಯ ಮೌಲ್ಯ /ಸೀಪ್ರಜ್ಞೆ ಯ
ಅರಿವು ಮೂಡಿಸಿದ್ದಾರೆ.

ಅವರೇ ಬರೆದು ಕೊಂಡಂತೆ, ನಮ್ಮ ಸಮಾಜದಲ್ಲಿ, ವಿಶೇಷತಃ ಇಂದಿರಾ ಗೋಸ್ವಾಮಿಯವರೇ ಹು ಟ್ಟಿಬೆಳೆದ ಅಸ್ಸಾಮಿನ ಸಮಾಜದಲ್ಲಿ, ಹೆಣ್ಣು ಹುಟ್ಟು ವಾಗಲೇ ಅವಹೇಳನಕ್ಕೆ ತುತ್ತಾಗಿತ್ತು. ಹೆಣ್ಣಿನ ಹುಟ್ಟು ಅನಿಷ್ಠ ಎಂಬ ನಂಬಿಕೆಯೂ ಆಗ ಇತ್ತು. ಅಂತಹ ಪರಿಸರದ ಪರಿಣಾಮವೂ ಅವರ ವ್ಯಕ್ತಿತ್ವದ ಮೇಲೆ ಪರಿಣಾಮ ಬಿದ್ದಿರಬಹುದು. ಅನಿಷ್ಠ ಜಾತಿ ಪದ್ಧತಿ, ದೊಡ್ಡವರ
ಡಾಂಬಿಕತನ / ಸಣ್ಣತನ ಮತ್ತು ಬಡ ಕಾರ್ಮಿಕರ ಬಡತನದ ಪಾಡು ಇವೆಲ್ಲ ಅವರ ಕಾದಂಬರಿ/ ಕತೆಗಳ ಮುಖ್ಯ ವಸ್ತುಗಳು. ಅವರ ಸಾಹಿತ್ಯ ವೈವಿಧ್ಯಪೂರ್ಣ. ಇಂದಿರಾ ಗೋಸ್ವಾಮಿ ಯವರ ಹಲವಾರು ಕೃತಿಗಳು ಇಂಗ್ಲಿಷ್ , ಹಿಂದಿ ಮತ್ತು ನೇಪಾಳಿ ಭಾಷೆಗಳಲ್ಲಿ ಅನುವಾದವಾಗಿದೆ.

ಅವರು ಹುಟ್ಟಿ ಬೆಳೆದಿದ್ದು, ಬಾಲ್ಯ ಕಳೆದಿದ್ದು, ಹೆಚ್ಚಾಗಿ ಬ್ರಹ್ಮಪುತ್ರ ನದಿಯ ದಡದಲ್ಲಿ. ಹೀಗಾಗಿ, ಅವರ ಅನೇಕ ಕಾದಂಬರಿ
ಮತ್ತು ಕತೆಗಳು, ನದಿ ದಂಡೆಯ ಪರಿಸರ ದಿಂದಲೇ ಬಂದಿದೆ. ಕತೆ ಮತ್ತು ಭಾವನೆಗಳು ನದಿಯ ಗತಿಯ ಸಂಕೇತವಾಗಿದೆ. ಓಡುವ ನದಿಯ ರಭಸವೂ ಇದೆ! ಅವರ ಮೊದಲನೇ ಕಾದಂಬರಿ, Chinaavara Srota (As the Chenab flows) ಯು ಕಾಶ್ಮೀರದ ಚೆನಾಬ್
ನದಿಯಲ್ಲಿ ಹರಿದರೆ, ಆಹಿರಾನ್ ಎಂಬ ಕಾದಂಬರಿ ಮಧ್ಯಪ್ರದೇಶದ ಆಹಿರನ್ ನದಿಯಂತೆ ಓಡುತ್ತದೆ.

The rusted sward (ಜಂಗು ಹಿಡಿದ ಕತ್ತಿ) ಎಂಬ ಕಾದಂಬರಿಯಲ್ಲಿ ಸಾಯಿ ನದಿಯ ಪ್ರವಾಹ ಇದೆ. ಅಸ್ಸಾಮಿನ ಜಗಾಲಿಯ
ನದಿಯಲ್ಲಿ ಅವರ ಮತ್ತೊಂದು ಕಾದಂಬರಿ The moth eaten Howdah of the Tusker ಅರಳಿದೆ. ಅವರ ಒಂದು ಕಥಾ ಸಂಕಲನದ ಶೀರ್ಷಿಕೆ..The Heart is the name of a river ಎಂದಿದೆ!! ಇಂದಿರಾ ಗೋಸ್ವಾಮಿಯವರ ಎಲ್ಲ ಕಾದಂಬರಿ ಗಳ ಬಗ್ಗೆ
ತಿಳಿದು, ಬರೆಯುವುದು ಒಂದು ಲೇಖನದ ಪರಿಧಿಯಲ್ಲಿ ಕಷ್ಟ. ಅವರ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಅನುವಾದವಾದ
ಕಾದಂಬರಿಗಳನ್ನು ಓದಿ ಸಂಕ್ಷೀಪ್ತವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

THE MOTH EATEN HOWDAH OF THE TUSKER…… ಈ ಕಾದಂಬರಿ 1986ನೇ ವರ್ಷ ಪ್ರಕಟವಾಯಿತು. ಆಸ್ಸಾಮ ಪ್ರದೇಶದಲ್ಲಿ ತಲೆ ತಲಾಂತರದಿಂದ ಸತ್ರ ಎಂಬ ಧಾರ್ಮಿಕ ಕುಟುಂಬ ಗಳು ಆ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಈ ಸತ್ರಗಳ ಮುಖ್ಯಸ್ಥ.. ಗೋಸಾಯಿ ಮತ್ತು ಆತನ ಪತ್ನಿ…ಗೊಸಾನಿ. ಭಾವಾತ್ಮಕವಾಗಿ, ಗೋಸಾಯಿ ದೇವರಿಗೆ ಸಮಾನ. ಆದರೆ ೧೯ನೆ ಶತಮಾನ ತಲಪುವಾಗ, ಕೆಲವು ಸತ್ರಗಳು ತಮ್ಮ ಸತ್ವ ಕಳೆದುಕೊಂಡು, ದುಷ್ಟತೆ ಮತ್ತು ಶೋಷಣೆಗಳ ತವರೂರಾಯಿತು. ಅಲ್ಲಿರುವ ಹೆಣ್ಣುಮಕ್ಕಳ ಮತ್ತು ವಿಧವೆಯರ ದುಖಃದಾಯಕ ಬದುಕಿನ ಚಿತ್ರಣವನ್ನು ಈ ಕಾದಂಬರಿಯಲ್ಲಿ ಕಾಣಬಹುದು.

ಸಂಪೂರ್ಣ ಕಾದಂಬರಿಯು ಮೂವರು ವಿಧವೆಯರು…. ಗಿರಿಬಾಲಾ, ಸೋರು ಗೋಸಾನಿ ಮತ್ತು ದುರ್ಗಾ ಇವರ ಸುತ್ತಲೂ ತಿರುಗುತ್ತದೆ. ಗಿರಿಬಾಲಾಳ ಪ್ರೇಮ, ನಿರ್ಬಂಧಗಳ ಸಂಕೋಲೆಯಲ್ಲಿ ವಿಫಲವಾಗುತ್ತದೆ. ಧೈರ್ಯ ಇರುವ ಗೋಸಾನಿಯಗಿದ್ದರೂ ಸೋರು ಕಟ್ಟುಪಾಡಿನ ಅಡಕತ್ರಿಯಲ್ಲಿ ಸಿಕ್ಕಿ ಪ್ರೇಮಕ್ಕಾಗಿ ಹಾತೊರೆಯುವು ದರ ಜೀವನ ಕೊನೆಗೊಳ್ಳುತ್ತದೆ.

ದುರ್ಗಾಳ ಬದುಕಂತೂ ಶೋಷಣೆಗೊಳಗಾಗಿ ನರಕವಾಗಿ ಬಿಡುತ್ತದೆ. ಸತ್ರದ ಕುಸಿಯುತ್ತಿರುವ ನೈತಿಕತೆ ಮತ್ತು ಸ್ತ್ರೀಯರ ಶೋಷಣೆಯ ಚಿತ್ರಣವನ್ನು ವಾಸ್ತವಿಕವಾಗಿ ತೋರಿಸುವ ಈ ಕಾದಂಬರಿ ಓದುಗನ ಮನದಲ್ಲಿ ಉಳಿದುಬಿಡುತ್ತದೆ. ಪ್ರಸ್ತುತ ಕಾದಂಬರಿಯನ್ನು ಆಧರಿಸಿ 1996ರಲ್ಲಿ ಒಂದು ಫಿಲ್ಮ್.. ADAJYA (ಅಡಾಜ್ಯಾ) ನಿರ್ಮಾಣವಾಯಿತು. ಅಸ್ಸಾಮಿ ಭಾಷೆ ಯಲ್ಲಿ ತಯಾರಾದ ಈ ಚಿತ್ರಕ್ಕೆ ನ್ಯಾಷನಲ್ ಫಿಲ್ಮ್‌ಪ್ರಶಸ್ತಿ ದೊರಕಿದೆ.

THE MAN OF CHINNAMASTA..2005ರಲ್ಲಿ ಪ್ರಕಟವಾದ ಈ ಕಾದಂಬರಿ ಪ್ರಸಿದ್ಧ ಕಾಮಾಖ್ಯ ದೇವಸ್ಥಾನದ ಕುರಿತಾಗಿದೆ. ಅಲ್ಲಿ ಆಗ ಪರಂಪರಾಗತ ವಾಗಿ ನಡೆದು ಬಂದ ಪ್ರಾಣಿಗಳ ಬಲಿಯ ವಿರುದ್ಧ ಬಂಡಾಯದ ಕಹಳೆ ಊದಿದ ಕೃತಿ ಇದು!! ಆ ಸಮಯ ದಲ್ಲಿ, ಒಬ್ಬ ಮಹಿಳೆಯಾಗಿ ಇಂದಿರಾ ಗೋಸ್ವಾಮಿಯವರು ದನಿ ಎತ್ತಿದ ಸಾಹಸ ಗಮನಾರ್ಹ. ಚನ್ನಮಸ್ತಾ ಜಠಾಧಾರಿ ಎಂಬ ಸನ್ಯಾಸಿ ದೇವರ ಸಮಕ್ಷಮದಲ್ಲಿ ಪ್ರಾಣಿಗಳ ವಧೆಯಾಗುವನ್ನು ತಡೆಗಟ್ಟುವ ಪ್ರಯತ್ನ ಮಾಡುತ್ತಾನೆ ಮತ್ತು ರತ್ನಾಧರ ನಂಥ ಯುವಕರು ಈ ಕಾರ್ಯದಲ್ಲಿ ಕೈಗೂಡಿಸುತ್ತಾರೆ.

THE RUSTED SWORD… ಜಂಗು ಹಿಡಿದ ಕತ್ತಿ ಎಂಬ ಕಾದಂಬರಿ ಸಾಯಿ ನದಿಯ ಮೇಲೆ ಕಟ್ಟುತ್ತಿರುವ ಸೇತುವೆಯ
ಕಾರ್ಮಿಕರ ಸುಖ ದುಃಖಗಳ ಸರಮಾಲೆ. ಕೂಲಿ ಕಾರ್ಮಿಕರು ತಮ್ಮ ಬೇಡಿಕೆ ಗಾಗಿ ಪ್ರತಿಭಟನೆ ಮಾಡಿದಾಗ, ಸ್ಟ್ರೈಕ್ ಸಂಘಟಿಸಿದಾಗ ತೆರೆಮರೆಯಲ್ಲಿ ನಡೆಯುವ ಮೋಸ, ರಾಜಕಾರಣ ಗಳಿಗೆ ಹೇಗೆ ಬಲಿಯಾಗುತ್ತಾರೆ ಎಂಬ ವರ್ಣನೆ ಮನ ಕಲಕುತ್ತದೆ.

ಕಾರ್ಮಿಕರ ಮುಖಂಡರೇ ಮಾಲೀಕರ ಕೈಗೊಂಬೆ ಗಳಾಗುವಾ ಚಿತ್ರಣವಿದೆ. ಶ್ರಮಜೀವಿಗಳ ಬವಣೆ ಇದ್ದ ಇರುತ್ತದೆ!. ಈ ಕಾದಂಬರಿಯು ಶ್ರಮಜೀವಿಗಳ (Proletrain) ಕಾದಂಬರಿ. ಪ್ರತಿಭಟನೆಯಿಂದಾಗಿ ಕೆಲವರು ಉದ್ಯೋಗ ಕಳೆದುಕೊಂಡ ಕರುಣಾಜನಕ ಕತೆಯೂ ಇಲ್ಲಿದೆ. ಪಾತ್ರಗಳನ್ನ ಸೃಷ್ಟಿ ಮಾಡಿದಂತೆ ಅನಿಸುವುದಿಲ್ಲ. ಇಂದಿರಾ ಅವರು ಬಾಸುಮತಿ, ಜಸವಂತ, ಮುನಶಿ ಗುಂಜ ಶಾಸ್ತ್ರೀ ಮುಂತಾದ ಜೀವಂತ ಪಾತ್ರಗಳೊಂದಿಗೆ ಒಡನಾಡಿದ್ದಾರೆ ಅಂತ ಅನಿಸುತ್ತದೆ.

ಇಂದಿರಾ ಗೋಸ್ವಾಮಿಯವರು 18 ಕಾದಂಬರಿಗಳನ್ನು ಬರೆದಿದ್ದಾರೆ. ಈ ಮೇಲೆ ಹೇಳಿದ ಕೃತಿಗಳಲ್ಲದೆ, Ramayana from Ganga to Brahmaputra, Neelakanti Braja, Blue necked god, Pages sustained with blood ಮುಂತಾದ ಕಾದಂಬರಿಗಳು ಜನ ಮನ ಸೂರೆಗೊಂಡಿದೆ. ಅವರು ರಚಿಸಿದ ನೂರಾರು ಕತೆಗಳು, ಒಂದಕ್ಕಿಂತ ಒಂದು ಅಮೋಘ ಮತ್ತು ಭಿನ್ನವಾಗಿದೆ.

The Journey,The shadow of Kamakhya, Eashwaree,The empty box, A city of nakedness, In search of Martyrs, Purification sanskara. ಹೀಗೆ ಅನೇಕ ಕತೆಗಳು ಓದುಗರ ಮನ ಸೆಳೆಯುತ್ತದೆ. ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ!
In Search of Martyrs (ಹುತಾತ್ಮರ ಹುಡುಕಾಟ), ಕತೆಯು, ಶಿಲಾಂಗ ಮತ್ತು ಜೊಯ್ರಂಪೂರ್ ಪ್ರದೇಶಗಳಲ್ಲಿರುವ ಸಾವಿರಾರು ಅನಾಮಧೇಯ ಹುತಾತ್ಮರ ಸಮಾಧಿಗಳ ವಿವರಣೆ ಯಾಗಿದೆ. 2ನೇ ಮಹಾಯುದ್ಧದಲ್ಲಿ ಮಡಿದ ದೇಶ ವಿದೇಶಗಳ ಸೈನಿಕರನ್ನು ಆ ದಟ್ಟ ಅಡವಿಗಳಲ್ಲಿ ಸಮಾಧಿ ಮಾಡಲಾಗಿತ್ತು.

ಹುತಾತ್ಮ ಸೈನಿಕರ ಸಮಾಧಿಯ ಹುಡುಕುತ್ತ ಬರುವ ದೇಶವಿದೇಶಗಳ ಸಂಬಂಧೀಕರು ಏನೂಗೊತ್ತಾಗದೆ, ನಿರಾಶರಾಗಿ ತಿರುಗಿ
ಹೋಗುವ ಮನ ಮಿಡಿಯುವ ಕತೆ. Eeshwaree(ಈಶ್ವರೀ)…ಈ ಕತೆಯು ಬಹುಶಃ ಲೇಖಕಿಯ ಸ್ವ ಅನುಭವ ಆಗಿರಬಹುದು. ರಾಮಾಯಣದ ಕುರಿತುಅನೇಕ ಸಮಾವೇಶಗಳನ್ನು ಇಂದಿರಾ ಅವರು ಭಾಗವಹಿಸಿದ್ದಾರೆ. ದೊಡ್ಡವರ ದುಷ್ಟ ಗುಣಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ.

ಅ city of nakedness.ವಿಶೇಷತಃ. ದಿಲ್ಲಿಯಂಥ ಶಹರಗಳಲ್ಲಿ ಕುಸಿಯು ತ್ತಿರುವ ಮಾನವೀಯತೆ, ಮಾನವೀಯ ಮೌಲ್ಯಗಳ ಅನಾವರಣವೇ ಈ ಕತೆಯ ಮುಖ್ಯ ಅಂಶ. ಆ ನಗರದಲ್ಲಿ ವಾಸಿಸುವ ಒಂಟಿ ಮಹಿಳೆ, ಒಬ್ಬ ಅನಾಥ ಹುಡುಗನನ್ನು ಸಾಕಿ ಶಿಕ್ಷಣ
ಕೊಡಿಸುತ್ತಾಳೆ. ಆದರೆ ಆ ಹುಡುಗ ಶಹರದ ಜನರ ಅಮಾನವೀಯ ವರ್ತನೆ ಗಳಿಂದ ಪಡುವ ಬವಣೆಯ ವಿವರಣೆ ಓದುಗರ ಮನಸ್ಸನ್ನು ಚುಚ್ಚುತ್ತದೆ. ತಮ್ಮ ಅನೇಕ ಕತೆಗಳಲ್ಲಿ ಇಂದಿರಾ ಗೋಸ್ವಾಮಿಯವರು ಹೆಚ್ಚಿನದಾಗಿ, ಸಮಾಜದಲ್ಲಿ ಆಗುತ್ತಿರುವ ಶೋಷಣೆ, ವಿಧವೆಯರ ಸಮಸ್ಯೆಗಳು, ಬಡತನ, ಮತ್ತು ಕಂದಾಚಾರ ಪದ್ಧತಿ ಗಳಲ್ಲಿ ನಲುಗುತ್ತಿರುವ ವಿಧವೆಯರ ಬಾಳಿನ ಮನಮಿಡಿಯುವ ವಿಚಾರಗಳನ್ನೇ ಬರೆದಿದ್ದಾರೆ.

The Shadow of Kamakhya .. ಎಂಬ ಕಥಾ ಸಂಕಲನ ಇದಕ್ಕೆ ಸಾಕ್ಷಿ. ಇಂದಿರಾ ಗೋಸ್ವಾಮಿಯವರು ಕೇವಲ ಬರಹ ಗಳಲ್ಲಿ
ಮಾತ್ರ ತಮ್ಮ ಜೀವನ ಕಳೆಯಲಿಲ್ಲ. 2004ರಲ್ಲಿ ಕೇಂದ್ರ ಸರಕಾರ ಮತ್ತು ಉಲಾ ಸಂಘಟನೆಗಳ ಮಧ್ಯೆ ಶಾಂತಿದೂತ
ರಾಗಿ ದುಡಿದಿದ್ದಾರೆ. ಆ ಸಮಯದಲ್ಲಿ ULFAಗಳಿಂದ ಇಡೀ ಸಮಾಜಕ್ಕೆ ಮಾರಕವಾದ ಅಶಾಂತಿ ಮತ್ತು ಹಿಂಸೆಗಳಿಂದ
ಮನನೊಂದು,ಅವರು ಉಲಾ ಸಂಘಟಕರ ಜತೆ ಮಾತನಾಡಿ, people’s consultative group(PCG) ರಚಿತವಾಗಲೂ ಕಾರಣೀಕರ್ತರಾದರು. ಇದರಿಂದ ಅಂದಿನ ಕೇಂದ್ರ ಸರಕಾರ ಮತ್ತು ಉಲ್ಫಾ, ಜತೆ ಶಾಂತಿ ಮಾತುಕತೆಗೆ ಅನುಕೂಲವಾಯಿತು.

ಅವಿರತ ತಿರುಗಾಟ, ಬರಹ ಮತ್ತು ವೈಯಕ್ತಿಕ ಬದುಕಿನ ಏಳು ಬೀಳುಗಳಿಂದ ಜರ್ಜರಿತರಾದ ಇಂದಿರಾ ಗೋಸ್ವಾಮಿಯವರು ಕ್ಷೀಣಿಸಿ ಫೆಬ್ರವರಿ 2011ರ ಹೊತ್ತಿಗೆ, ಅನಾರೋಗ್ಯ ಪೀಡಿತರಾದರು. ತಾವು ಗಳಿಸಿದ ಹಣ ಮತ್ತು ಉಳಿದ ಸಮಯವನ್ನು ಸಮಾಜ ಸೇವೆಯಲ್ಲಿ ತೊಡಗಿಸಲು ನಿರ್ಧರಿಸಿದರು. ತಮಗೆ Principal Prince Clause Laureate ಎಂಬ ಪ್ರಶಸ್ತಿಯೊಂದಿಗೆ ಬಂದ 34ಲಕ್ಷ ರುಪಾಯಿಗಳನ್ನು ಹುಟ್ಟೂರಾದ ಅಮ್ರಾಂಗ್‌ನಲ್ಲಿ ಒಂದು ಆಸ್ಪತ್ರೆಯ ನಿರ್ಮಾಣಕ್ಕಾಗಿ ಕಾಣಿಕೆ ನೀಡಿದರು.

ತನ್ನಲ್ಲಿರುವ ಉಳಿದೆಲ್ಲ ಹಣದಿಂದ ಒಂದು ಟ್ರಸ್ಟ್ ನಿರ್ಮಿಸಿ ಅದರ ಮೂಲಕ ರಾಮಾಯಣ ಮತ್ತು ಇಂಡಿಯನ್ ಫಿಲಾಸಫಿ ಅಭ್ಯಸಿಸುವರಿಗೆ ಅನುಕೂಲ ಮಾಡಿದರು. ಕೊನೆಯದಾಗಿ, ತನ್ನ ಕಣ್ಣುಗಳನ್ನು ದಾನ ಮಾಡಿ, 29 ನವೆಂಬರ್ 2011ರಂದು ಕೊನೆಯುಸಿರೆಳೆದರು. ಅವರು ಹಾಸಿಗೆ ಹಿಡಿದ ಕೊನೆಯ ದಿನಗಳಲ್ಲಿ, ಸಾಹಿತ್ಯ ಪ್ರೇಮಿಗಳು, ವಿಶೇಷತಃ ಅಸ್ಸಾಮಿನ ಜನತೆ ತಮ್ಮ
ಮಾಮೋನಿ ಅಕ್ಕ ನಿಗಾಗಿ ಪರಿತಪಿಸಿ, ಕಣ್ಣೀರನ್ನೂ ಹಾಕಿದರು. ಅಕ್ಕನ ಉಳಿವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಒಬ್ಬ ಚಿಂತಕಿ, ಬರಹಗಾರ್ತಿಯ ಸಾರ್ಥಕ ಬದುಕಿಗೆ ಇದಕ್ಕಿಂತ ದೊಡ್ಡ ಪಾರಿತೋಷಕ ಇನ್ನೇನು ಬೇಕು? ಡಾ.ಇಂದಿರಾ ಗೋಸ್ವಾಮಿಯವರದ್ದು, ಸಾರ್ಥಕ ಬದುಕು! ಸಾರ್ಥಕ ಬರಹ! ಮಹಿಳೆಯರ, ಕಷ್ಟ, ಕಾರ್ಪಣ್ಯ ಮತ್ತು ಶೋಷಣೆಯ ವಾಸ್ತವಿಕ ಚಿತ್ರಣವನ್ನು ಧೈರ್ಯ ವಾಗಿ ತಮ್ಮ ಬರಹದ ಮೂಲಕ ತೋರಿಸಿದ್ದಾರೆ. ಗೊಡ್ಡು ಸಂಪ್ರದಾಯ ಗಳನ್ನೂ, ಖಂಡಿಸಿzರೆ. ತಾನು ಜನಿಸಿದ ಸಮಾಜ ಮತ್ತು ದೇಶದ ಸಂಸ್ಕೃತಿಯನ್ನು ಮೆರೆಸಿದ್ದಾರೆ.

ಬರೆದದ್ದು ಅಸ್ಸಾಮಿ ಭಾಷೆಯದರೂ, ದೇಶ ವಿದೇಶಗಳ ಸಾಹಿತ್ಯ ಪ್ರೇಮಿಗಳ ಹೃದಯ ಸ್ಪರ್ಶಿಸಿದ್ದಾರೆ. ಈ ಧೀಮಂತ ಮಹಿಳೆಯ ನೆನಪು ಮತ್ತು ಅನುಕರಣೆ ನಮ್ಮದಾಗಲಿ!.