Tuesday, 26th November 2024

*ಬರೀ ಆಚರಣೆಗೆ ಸೀಮಿತವಲ್ಲ; ಪ್ರತಿ ಮಗುವಿನ ಸುಪ್ತ ಸಾಮರ್ಥ್ಯ ಹೆಚ್ಚಿಸಲು ಬದ್ಧತೆ ತೋರಿದ ಎಂಬಸಿ ಗ್ರೂಪ್‌

ಮಕ್ಕಳ ದಿನಾಚರಣೆ 2023
ಬೆಂಗಳೂರು: ಈ ವರ್ಷ ನಾವು ಮಕ್ಕಳ ದಿನವನ್ನು ಬರೀ ಆಚರಣೆಗೆ ಸೀಮಿತವಾ ಗಿರಿಸದೆ ಪ್ರತಿ ಮಗುವಿನಲ್ಲಿ ಇರುವ ಸುಪ್ತ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಬದ್ಧರಾಗಿ ರೋಣ ಎನ್ನುವುದು ಎಂಬಸಿ ಗ್ರೂಪ್‌ನ ನಂಬಿಕೆಯಾಗಿದೆ.
ಅವಕಾಶ ವಂಚಿತ ಮಕ್ಕಳಿಗೆ ನಾವು ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣ  ಒದಗಿಸಿ, ಅವರ ಕೌಶಲ  ಹೆಚ್ಚಿಸಿ, ಸೂಕ್ತ ಮಾರ್ಗದರ್ಶನ ನೀಡುವುದರ  ಜೊತೆಗೆ   ಅವರ ವ್ಯಕ್ತಿತ್ವದ ಉನ್ನತೀಕರಣಕ್ಕೆ ನಮ್ಮಿಂದ ಸಾಧ್ಯವಿರುವಷ್ಟು ಮಟ್ಟಿಗೆ ಪ್ರಯತ್ನಿಸ ಬೇಕು. ಇಂತಹ ಧ್ಯೇಯೋದ್ದೇಶ ಗಳನ್ನು ಕಾರ್ಯಗತಗೊಳಿಸಲು ಮಕ್ಕಳ ದಿನಾಚರಣೆ ಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಮುಂದಾಗಿರುವ ಎಂಬಸಿ ಗ್ರೂಪ್‌, ಚಿಣ್ಣರ ಯಶಸ್ಸಿನ ಹಾದಿಗಳನ್ನು ಸೃಷ್ಟಿಸಲು ಮುಂದಾಗಿದೆ. ಇಂತಹ ಚಿಂತನೆ ಗಮನದಲ್ಲಿಟ್ಟು ಕೊಂಡು,  ಮಕ್ಕಳ ಶಾಲಾ ಪೂರ್ವ ವರ್ಷಗಳು, ಆರೋಗ್ಯ ಮತ್ತು ಯೋಗಕ್ಷೇಮ, ಪಠ್ಯೇತರ ಚಟುವಟಿಕೆಗಳು ಸೇರಿದಂತೆ ಅವರ ಜೀವನ ಚಕ್ರದ ಎಲ್ಲ ಹಂತಗಳಲ್ಲಿ ಅವರನ್ನು ಕೈಹಿಡಿದು ಮುನ್ನಡೆಸಬೇಕು ಎನ್ನುವಂತಹ ರಚನಾ ತ್ಮಕ ಪ್ರಯತ್ನಗಳನ್ನು ಕಾರ್ಯಗತಗೊಳಿಸಲು ಮುಂದಾಗಿದೆ.
ಚಿಣ್ಣರ ಬದುಕಿನಲ್ಲಿ ಸಂಘಟಿತ ಬದಲಾವಣೆ ತರಲು, ಪ್ರತಿಯೊಂದು ಮಗುವು ತನ್ನದೇ ಆದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಬೇಕು ಎನ್ನುವುದು ಎಂಬಿಸಿ ಗ್ರೂಪ್‌ನ ಉದ್ದೇಶವಾಗಿದೆ. ನಮ್ಮ ಸಂಪರ್ಕ ಕಾರ್ಯಕ್ರಮವು ಬರೀ ತೋರ್ಪಡಿಕೆಯಾಗದೆ ಅದೊಂದು ಅವಕಾಶಗಳ ಮೂಲವಾಗಿರ ಬೇಕು. ‌ ಇದು ಉಜ್ವಲ ನಾಳೆಯ ಭರವಸೆಯೊಂದಿಗೆ ಅನುರಣಿಸಲಿದೆ ಎನ್ನುವುದು ಎಂಬಸಿ ಗ್ರೂಪ್‌ನ ಆಶಯವಾಗಿದೆ.
ಮಕ್ಕಳಲ್ಲಿ ಹುದುಗಿರುವ ವಿಶಿಷ್ಟ ಸಾಮರ್ಥ್ಯವನ್ನು ಬೆಳೆಸುವುದು ಮಾತ್ರವಲ್ಲದೆ  ಭವಿಷ್ಯದಲ್ಲಿ ಅವರಿಗೆ ಸೂಕ್ತ‌ ಉದ್ಯೋಗಾವಕಾಶಗಳನ್ನು ಒದಗಿಸು ವುದು ಅಗತ್ಯವಾಗಿದೆ. ನಮ್ಮ ಗುರಿಗಳಲ್ಲಿ  ಉದ್ಯೋಗಾವಕಾಶಗಳನ್ನು ಒದಗಿಸುವುದರ ಮೂಲಕ, ನಾವು ಮುಂದಿನ ಪೀಳಿಗೆಯ ಭವ್ಯ ಭವಿಷ್ಯವನ್ನು ಪರಿವರ್ತಿಸಬಹುದಾಗಿದೆ.