Friday, 22nd November 2024

ನಮ್ಮ ಸಂಸ್ಕೃತಿ ಪಾಲನೆಯೇ ಕೋವಿಡ್ ತಡೆಗೆ ಮದ್ದು

ಆಹ್ವಾನಿತ ಲೇಖನ: ಪ್ರಣೀತಾ ಸುಭಾಷ್ ನಟಿ

ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಭಾರತೀಯ ಜೀವನಶೈಲಿ, ನಡವಳಿಕೆ ಮತ್ತು ಪದ್ಧತಿಗಳು ಹೇಗೆ ರಾಮಬಾಣ ಗಳಾಗಿದ್ದವು? ಅಲ್ಲದೆ, ಪಾಶ್ಚಾತ್ಯ ದೇಶಗಳು ಇಂದು ನಮ್ಮ ಸಂಸ್ಕೃತಿಯನ್ನು ಏಕೆ ಅನುಸರಿಸುತ್ತಿವೆ? ಎಂಬುದರ ಕುರಿತು ವಿಶ್ವವಾಣಿಗಾಗಿ ಬರೆದಿರುವ ಬರಹ.

ಸ್ವಾತಂತ್ರ್ಯದ ಬಳಿಕ ಭಾರತದಲ್ಲಿ ಬಹುಸಂಖ್ಯಾತರು ತೃತೀಯ ಸ್ಥಾನದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜಾತ್ಯತೀತತೆ ಮತ್ತು ಸಹಿಷ್ಣುತೆ ಎಂಬ ಹೆಸರಿನಡಿಯಲ್ಲಿ ಅನೇಕ ವಿಷಯಗಳ ಕುರಿತಾಗಿ ಹಿಂದೂಗಳನ್ನು ಟೀಕಿಸಿ ಅವರು ಧ್ವನಿ ಎತ್ತದಂತೆ ಪಳಗಿಸಿ ರುವ ಪರಿಸ್ಥಿತಿ ಕಂಡುಬಂದಿದೆ. ಹಿಂದೂ ಧರ್ಮದ ಗುರುತಿನ ಬಿಕ್ಕಟ್ಟಿಗೆ ಈ ಎಲ್ಲ ಅಂಶಗಳು ಮುಖ್ಯ ಕಾರಣಗಳಾಗಿವೆ. ಕೆಲವು ವರ್ಷಗಳ ಹಿಂದೆ ಸನಾತನ ಧರ್ಮವನ್ನು ಬೋಧಿಸುವ ಪರಿಕಲ್ಪನೆಯೂ ಇರಲಿಲ್ಲ.

ಆದರೆ ಇಂದು ಹೆಮ್ಮೆಯಿಂದ ಈ ವಿಷಯದ ಕುರಿತಾಗಿ ಭಾರತೀಯರು ತಮ್ಮ ಸನಾತನ ಸಂಸ್ಕೃತಿಯ ಬೇರುಗಳನ್ನು ಸ್ವೀಕರಿಸುವ ಸೂಕ್ತ ಸಮಯ ಇದಾಗಿದೆಯೇ? ಎಂದು ಪ್ರಶ್ನಿಸುವ ಕ್ಷಣ ಬಂದಿದೆ. ಸನಾತನ ಧರ್ಮವು ಸಾವಿರಾರು ವರ್ಷಗಳಿಂದ ಯಶಸ್ವಿ ಯಾಗಿ ರೂಢಿಯಲ್ಲಿದೆ.

ಸಮಯದೊಂದಿಗೆ ವಿಕಸನಗೊಳ್ಳುವುದರ ಜತೆಗೆ ಹೆಚ್ಚು ಸ್ಥಳಾವಕಾಶ ನೀಡುವ ಮೂಲಕ ಬೆಳವಣಿಗೆಯ ವ್ಯಾಪ್ತಿಯನ್ನು ವಿಸ್ತರಿಸಿದೆ. ಅನೇಕ ವರ್ಷಗಳ ಆಕ್ರಮಣ ಮತ್ತು ವಸಾಹತುಶಾಹಿ ಪದ್ಧತಿಯನ್ನು ವಿರೋಧಿಸುತ್ತಾ, ಇಂದು ಸನಾತನ ಧರ್ಮದ
ಉಳಿಕೆಯು ಸಾಧ್ಯವಾಗಿರುವುದು, ನಾವು ರಾಷ್ಟ್ರವಾಗಿ ಮತ್ತು ಮುಖ್ಯವಾಗಿ ನಾಗರಿಕರಾಗಿ ಎಷ್ಟು ಬದ್ಧರಾಗಿದ್ದೇವೆ ಎಂಬುದರ ಬಗ್ಗೆ ಸಾರಿ ಹೇಳುತ್ತದೆ.

ಯಾವುದೇ ನಿರ್ದಿಷ್ಟ ಪುಸ್ತಕ, ಪಠ್ಯ ಅಥವಾ ವ್ಯಕ್ತಿಯನ್ನು ಅನುಸರಿಸಬೇಕೆಂಬ ನಿಯಮಗಳಿಗೆ ನಾವು ಬಂಧಿಯಾಗಿಲ್ಲ. ನಮ್ಮ ಒಲವುಗಳ ಆಧಾರದ ಮೇಲೆ, ನಮ್ಮದೇ ನಂಬಿಕೆ ಮತ್ತು ಮೌಲ್ಯಗಳನ್ನು ಅನುಸರಿಸುವ ಆಯ್ಕೆಯ ಸ್ವಾತಂತ್ರ್ಯವು ನಮಗೆ
ಇದೆ. ಇದನ್ನು ಸರಿಯಾಗಿ ಅರ್ಥೈಸುವುದು ಅತ್ಯಗತ್ಯ.

ಇದು ನನ್ನ ನಂಬಿಕೆ: ಸನಾತನ ಧರ್ಮವು ನೀಡುವ ಈ ಸ್ವಾತಂತ್ರ್ಯಕ್ಕಾಗಿಯೇ ಹೆಮ್ಮೆಯಿಂದ ’ನಾನು ಹಿಂದೂ’ ಎಂದು ಕೂಗಿ ಹೇಳುತ್ತೇನೆ. ಇದು ನನ್ನ ನಂಬಿಕೆಗಳನ್ನು ಅಥವಾ ನನ್ನ ಸ್ವಾತಂತ್ರ್ಯಗಳನ್ನು ಯಾವುದೇ ರೀತಿಯಲ್ಲಿ ಬಂಧಿಸುವುದಿಲ್ಲ. ಧರ್ಮದ
ಈ ರೀತಿಯ ವಿಮರ್ಶೆಯು ಸನಾತನ ಧರ್ಮಕ್ಕೆ ಸ್ವೀಕಾರಾರ್ಹವಲ್ಲ. ಭಾರತೀಯರು, ಇತರ ಸಮುದಾಯ ಅಥವಾ ಸಂಸ್ಕೃತಿ ಗಳೊಂದಿಗೆ ಸಂವಹನ ನಡೆಸುವಾಗ ರಾಯಭಾರಿ ಪಾತ್ರವನ್ನು ವಹಿಸಬೇಕು.

ಕೆಲವು ವರ್ಷಗಳ ಹಿಂದೆ ಒಂದು ವಿಡಿಯೊ ಜನಪ್ರಿಯವಾಗಿತ್ತು. ಅದರಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬ ಸಮಾವೇಶ ಸಮಾ ರಂಭವೊಂದರಲ್ಲಿ ತನ್ನ ಅಮೆರಿಕದ ಪ್ರಾಧ್ಯಾಪಕರಿಂದ ಆಶೀರ್ವಾದ ಪಡೆದನು. ಇದಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿ ದರು. ಆದರೆ ಅದು ವಿದೇಶಗಳಲ್ಲಿರುವ ಭಾರತೀಯರ, ಸಾಂಸ್ಕೃತಿಕ ತಿಳಿವಳಿಕೆಯ ಕೊರತೆಯ ಬಗ್ಗೆ ತಿಳಿಹೇಳುತ್ತದೆ. ಆ ಅಂತರ ವನ್ನು ನಿವಾರಿಸಲು ನಾವೆಲ್ಲರೂ ರಾಯಭಾರಿ ಪಾತ್ರವನ್ನು ವಹಿಸಬೇಕಾಗಿದೆ. ಇಂದು ಎಷ್ಟು ಮಂದಿ ಭಾರತೀಯರು, ಸೂಕ್ತ ಕಾರಣ ಗಳಿಗಾಗಿ ಬಾಲಿ ದೇಶಕ್ಕೆ ಭೇಟಿ ನೀಡುತ್ತಾರೆ? ಅಥವಾ ಸೌತ್‌ಈ ಏಷ್ಯಾದ ಬೇರೆ ಯಾವುದೇ ರಾಷ್ಟ್ರಕ್ಕೆ, ಭಾರತದೊಂದಿಗಿನ ಸಾಂಸ್ಕೃತಿಕ ಮತ್ತು ನಾಗರಿಕ ಬೇರುಗಳ ವಿಷಯವನ್ನು ದೃಢಪಡಿಸುವ ವಿಚಾರವಾಗಿ ಎಷ್ಟು ಮಂದಿ ಭೇಟಿ ನೀಡುತ್ತಾರೆ?
ನಮ್ಮ ಹಿಂದೂ ಸಹೋದರರು ಮತ್ತು ಸಹೋದರಿಯರು, ನಮ್ಮ ನೆರೆಹೊರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಪಾಕಿಸ್ತಾನ, ಅಫನಿಸ್ತಾನದಲ್ಲಿ ನಿರಂತರವಾಗಿ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬುದು ದುಃಖಕರ ಸಂಗತಿ.

ಈ ಎಲ್ಲ ವಿಷಯಗಳ ಹೊರತಾಗಿಯೂ ಹಿಂದೂಗಳು ಸಮುದಾಯವಾಗಿ ವಿವಿಧ ದೇಶಗಳಲ್ಲಿನ ಪ್ರಾಥಮಿಕ ನಾಗರಿಕರ ಪಟ್ಟ ವನ್ನು ಗಳಿಸಿದ್ದಾರೆ. ಧಾರ್ಮಿಕ ಬಹುತ್ವದ ದೃಷ್ಟಿಯಿಂದ ಮಾತ್ರವಲ್ಲ, ಭೌಗೋಳಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬಹುತ್ವ ದಲ್ಲೂ ನಾವು ವೈವಿಧ್ಯಮಯ ಜನರು. ಐ.ಟಿ ವಲಯವಾಗಲಿ, ಬಾಲಿವುಡ್ ಆಗಿರಲಿ, ಯೋಗ ಅಥವಾ ಆಧ್ಯಾತ್ಮಿಕತೆ ಯಾಗಲಿ, ಭಾರತವು ಹಾವು-ಮೋಡಿ ಮಾಡುವವರ ನೆಲ ಎಂಬ ಗ್ರಹಿಕೆ ಬಹಳ ಹಿಂದೆಯೇ ಹೋಗಿದೆ.

ನಮ್ಮ ಮಿಲಿಟರಿ ಮತ್ತು ಆರ್ಥಿಕ ಪರಾಕ್ರಮ, ಜಾಗತಿಕ ಮಹತ್ವಾಕಾಂಕ್ಷೆಗಾಗಿ ಜನರು ನಮ್ಮನ್ನು ಅಂಗೀಕರಿಸುತ್ತಾರೆ. ಸಾಂಕ್ರಾ ಮಿಕ ರೋಗದಿಂದಾಗಿ ಪಾಶ್ಚಿಮಾತ್ಯರು ಸಹ ಕೈಜೋಡಿಸಿ ನಮಸ್ತೆ ಹೇಳಲು ಕಲಿತಿzರೆ. ಕಾಲ ಕಳೆದಂತೆ ನಮ್ಮ ಆಚರಣೆ,
ಪರಂಪರೆ ಮತ್ತು ಸಂಪ್ರದಾಯಗಳು ದೃಢಮೌಲ್ಯಗಳಾದ ’ಕಾರಣ ಮತ್ತು ವಿಜ್ಞಾನ’ವನ್ನು ಸಾರುತ್ತದೆ.

ಅರ್ಧಪದ್ಮಾಸನದಲ್ಲಿ ಕುಳಿತು: ನಮ್ಮ ಆಚರಣೆಗಳನ್ನು ಅವೈಜ್ಞಾನಿಕವೆಂದು ತಳ್ಳಿ ಹಾಕುವುದು ಸುಲಭ. ಆದರೆ ವಾಸ್ತವವು ಇದಕ್ಕೆ ವಿರುದ್ಧವಾಗಿದೆ ಎಂಬುದೇ ಸತ್ಯ. ಉದಾಹರಣೆಗೆ, ಊಟ ಮಾಡುವಾಗ, ನಾವು ಏಕೆ ಎರಡು ಕಾಲುಗಳನ್ನು ಮಡಚಿ ಕೂರುತ್ತೇವೆ? ಸಾಂಪ್ರದಾಯಕವಾಗಿ, ಇದು ಕೇವಲ ನೆಲದ ಮೇಲೆ ಕುಳಿತು ಊಟ ಮಾಡುವುದು ಅಷ್ಟೇ ಅಲ್ಲ. ಅದು ಸುಖಾಸನ  ದಲ್ಲಿ ಕುಳಿತು ನಂತರ ತಿನ್ನುವುದರ ಬಗ್ಗೆ.

ನಾವು ಸಾಮಾನ್ಯವಾಗಿ ಯೋಗದಲ್ಲಿ ಬಳಸುವ ಆಸನವೇ ಸುಖಾಸನ. ನೀವು ನೆಲದ ಮೇಲೆ ಕುಳಿತಾಗ, ಸಾಮಾನ್ಯವಾಗಿ ಕಾಲು ಗಳನ್ನು ಮಡಚಿ ಸುಖಾಸನ ಅಥವಾ ಅರ್ಧಪದ್ಮಾಸನದಲ್ಲಿ ಕುಳಿತುಕೊಳ್ಳುತ್ತೀರಿ. ಇದು ತಕ್ಷಣವೇ ಶಾಂತಪ್ರಜ್ಞೆಯನ್ನು ತರುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮಿದುಳಿಗೆ ಸ್ವಯಂಚಾಲಿತವಾಗಿ ಜೀರ್ಣಕ್ರಿಯೆಗೆ ಹೊಟ್ಟೆಯನ್ನು ತಯಾರಿಸುವ ಸಂಕೇತಗಳನ್ನು ಪ್ರಚೋದಿಸುತ್ತದೆ ಎಂಬುದು ವಿಶೇಷ ಸಂಗತಿ.

ವೈಜ್ಞಾನಿಕ ಮನೋಭಾವ ಅಗತ್ಯ: ನಮ್ಮ ಅಭ್ಯಾಸಗಳನ್ನು ಅಪಹಾಸ್ಯ ಮಾಡುವುದು ಮತ್ತು ದುರ್ಬಲಗೊಳಿಸುವುದು ಸುಲಭ. ಆದರೆ ಯುವಪೀಳಿಗೆಯ ಭಾರತೀಯರು, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮತ್ತು ಶತಮಾನ ಗಳಿಂದ ನಡೆಯುತ್ತಿರುವ ನಮ್ಮ ಪದ್ಧತಿಗಳನ್ನು ಮನದಟ್ಟು ಮಾಡಿಕೊಂಡು, ವಿವರಣೆಯನ್ನು ಅರ್ಥೈಸಿಕೊಳ್ಳುವುದು ಸಹ ಮುಖ್ಯವಾಗಿದೆ.

ಇಂದಿಗೂ ಅವಕಾಶ ಸಿಕ್ಕಿದೊಡನೆ ನೆಲದ ಮೇಲೆ ಸುಖಾಸನದಲ್ಲಿ ಕುಳಿತು, ಬಾಳೆಎಲೆಯ ಮೇಲೆ ಊಟ ಮಾಡಲು ಬಯಸುತ್ತೇನೆ. ಸನಾತನ ಸಂಸ್ಕೃತಿಯ ತತ್ವಗಳು ಹಿಂದೂ ಧರ್ಮಕ್ಕೆ ಕೇಂದ್ರವಾಗಿವೆ. ಸನಾತನ ಸಂಸ್ಕೃತಿ, ಯೋಗ ಮತ್ತು ಆಯುರ್ವೇದವು, ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಉಡುಗೊರೆಗಳಾಗಿವೆ.

ಸನಾತನ ಸಂಸ್ಕೃತಿಯು, ಜೀವನವನ್ನು ಹೇಗೆ ನಡೆಸಬೇಕೆಂದನ್ನು ವ್ಯಾಖ್ಯಾನಿಸುತ್ತದೆ. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯವನ್ನು ಸಾಧಿಸುವುದಕ್ಕಾಗಿ ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುತ್ತದೆ. ಆಯುರ್ವೇದವು ರೋಗಗಳನ್ನು ತಡೆಗಟ್ಟುವುದರ ಜತೆಗೆ, ಸಕಾರಾತ್ಮಕ ಆರೋಗ್ಯವನ್ನು ಉತ್ತೇಜಿಸುತ್ತದೆ.

ಇವೆಲ್ಲವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕೋವಿಡ್-೧೯ ಸೇರಿದಂತೆ ಎಲ್ಲ ರೋಗಗಳ ವಿರುದ್ಧ ಹೋರಾಡಲು ಶಕ್ತಿ ಯನ್ನು ವೃದ್ಧಿಸುತ್ತದೆ. ನಮ್ಮ ಜೀವನಶೈಲಿ, ನಡವಳಿಕೆ ಮತ್ತು ಪೋಷಣೆಯು, ರೋಗಗಳಿಂದ ಹೋರಾಡಬಲ್ಲ ಪ್ರಮುಖ
ಅಂಶಗಳಾಗಿವೆ. ಅದು ಯೋಗವಾಗಲಿ, ಆಯುರ್ವೇದವಾಗಲಿ, ಸಾತ್ವಿಕ ಭೋಜನವಾಗಲಿ ಅಥವಾ ಸತ್ತವರನ್ನು ನಾವು ದಹನ ಮಾಡುವ ವಿಧಾನವಾಗಲಿ, ಎಲ್ಲವನ್ನೂ ಪಾಶ್ಚಿಮಾತ್ಯ ಜಗತ್ತಿಗೆ ವಿಭಿನ್ನವಾಗಿರುವ ರೀತಿಯಲ್ಲಿ ಮಾಡಲಾಗುತ್ತದೆ.

ಕಮಲಾ ಹ್ಯಾರಿಸ್‌ನಿಂದ ಏಂಜೆಲಾ ಮಾರ್ಕೆಲ್‌ವರೆಗಿನ ಜಾಗತಿಕ ನಾಯಕರು, ಪರಸ್ಪರ ಸ್ವಾಗತಿಸಲು ’ನಮಸ್ತೆ’ ಬಳಸುವುದನ್ನು ನಾವು ನೋಡುವುದರಲ್ಲಿ ಆಶ್ಚರ್ಯವಿಲ್ಲ. ನಾವು ಭಾರತೀಯರು ನಮ್ಮ ಸಾಂಸ್ಕೃತಿಕ ಬೇರುಗಳನ್ನು ಪುನಃ ಭೇಟಿ ಮಾಡುವ ಮತ್ತು ಹಲವಾರು ಕಾರಣಗಳಿಗಾಗಿ ದೀರ್ಘಕಾಲ ಕಳೆದುಹೋದ ಗುರುತನ್ನು ಸ್ವೀಕರಿಸುವ ಸಮಯ ಇದಾಗಿದೆ. ನಾವು ಸನಾತನ ಧರ್ಮವನ್ನು ಸ್ವೀಕರಿಸುವ ಸಮಯ ಬಂದಿದೆ. ಬಹುಮತದ ಗುರುತಿನ ಬಿಕ್ಕಟ್ಟಿಗೆ ಸನಾತನ ಧರ್ಮವೇ ಪರಿಹಾರ.

*ಯಾವುದೇ ನಿರ್ದಿಷ್ಟ ಪುಸ್ತಕ, ಪಠ್ಯಅಥವಾ ವ್ಯಕ್ತಿಯನ್ನು ಅನುಸರಿಸಬೇಕೆಂಬ ನಿಯಮಗಳಿಗೆ ನಾವು ಬಂಧಿಯಾಗಿಲ್ಲ. ನಮ್ಮ ಒಲವುಗಳ ಆಧಾರದ ಮೇಲೆ, ನಮ್ಮದೇ ನಂಬಿಕೆ ಮತ್ತು ಮೌಲ್ಯಗಳನ್ನು ಅನುಸರಿಸುವ ಆಯ್ಕೆಯ ಸ್ವಾತಂತ್ರ್ಯವು ನಮಗೆ ಇದೆ.

*ನಮ್ಮ ಆಚರಣೆ, ಪರಂಪರೆ ಮತ್ತು ಸಂಪ್ರದಾಯಗಳು ದೃಢಮೌಲ್ಯಗಳಾದ ’ಕಾರಣ ಮತ್ತು ವಿಜ್ಞಾನ’ವನ್ನು ಸಾರುತ್ತದೆ. ನಮ್ಮ ಆಚರಣೆಗಳನ್ನು ಅವೈeನಿಕವೆಂದು ತಳ್ಳಿ ಹಾಕುವುದು ಸುಲಭ. ಆದರೆ ವಾಸ್ತವವು ಇದಕ್ಕೆ ವಿರುದ್ಧವಾಗಿದೆ ಎಂಬುದೇ ಸತ್ಯ.