ಮೂಡಲಗಿ : ಲಾಕ್‍ಡೌನ್ ಪರಿಣಾಮ ಕೆಲ ಉದ್ಯಮ, ವ್ಯಾಪಾರಗಳಿಗೆ ತೊಂದರೆ ಆಗಿದೆ. ಅಂತಹವರಿಗೆ ಅನುಕೂಲವಾಗಲೆಂದು ಶ್ರೀಕ್ಷೇತ್ರ ಧರ್ಮಸ್ಥಳ ವತಿಯಿಂದ ಆಹಾರದ ಕಿಟ್ ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದು ಹಳ್ಳೂರ ಗ್ರಾಪಂ ಅಭಿವೃದ್ಧಿಕಾರಿ ಎಚ್ ವೈ ತಾಳಿಕೋಟಿ ಹೇಳಿದರು.
ತಾಲೂಕಿನ ಹಳ್ಳೂರ ಗ್ರಾಮದ ಸಿದ್ದಾರೋಡ ದೇವಸ್ಥಾನದ ಮಂಟಪದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಗ್ರಾಮದ ವಿವಿಧ ವರ್ಗದವರಿಗೆ ಉಚಿತ ಆಹಾರ ಕಿಟ್‍ಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿ, ಲಾಕ್‍ಡೌನ್‍ನಿಂದ ಅನೇಕ ವರ್ಗದ ಕಾರ್ಮಿಕರು, ದಿನಗೂಲಿ ನೌಕರರು ಕೆಲಸವಿಲ್ಲದೇ ಮನೆಯಲ್ಲಿ ಉಳಿಯುವಂತಾಗಿದೆ. ಕುಟುಂಬದ ನಿರ್ವಹಣೆ ಮಾಡಲು ಅಶಕ್ತರಾಗಿರುವ ಸ್ಥಿತಿಯಲ್ಲಿದ್ದಾರೆ. ಅಂತಹ ವರ್ಗದ ಜನರಿಗೆ ಅನುಕೂಲವಾಗಲೆಂದು ಆಹಾರದ ಕಿಟ್ ನೀಡವ ಯೋಜನೆ ಶ್ಲಾಘನಿಯವಾಗಿದೆ ಎಂದರು.
ಮೂಡಲಗಿ ತಾಲೂಕಿನ ಯೋಜನಾಧಿಕಾರಿ ದೇವರಾಜ ಮಾತನಾಡಿ, ಈ ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟುವುದು ಕೇವಲ ಅಧಿಕಾರಿಗಳ ಕರ್ತವ್ಯವಲ್ಲ. ನಾಗರಿಕರು ಕೂಡ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಳ್ಳೂರ ಗ್ರಾಮದ ಪಿಕೆಪಿಎಸ್ ಮಾಜಿ ಅಧ್ಯಕ್ಷ ಹಣಮಂತ ತೇರದಾಳ, ರಾಣಿ ಚೆನ್ನಮ್ಮ ಬ್ಯಾಂಕ್ ಅಧ್ಯಕ್ಷ ಸುರೇಶ ಡಬ್ಬನ್ನವರ, ಮೂಡಲಗಿ ವಲಯದ ಮೇಲ್ವಿಚಾರಕಿ ಮಾನಸಿ ಪಾಟೀಲ್, ರುಕ್ಮಿಣಿ, ಸಿದ್ದು ದುರದುಂಡಿ ಹಾಗೂ ಅನೇಕ ಉಪಸ್ಥಿತರಿದ್ದರು.