ಅಭಿವ್ಯಕ್ತಿ
ಎಲ್.ಪಿ.ಕುಲಕರ್ಣಿ
ಕರೋನಾ ಕಾಡಿದರೇನಾಯಿತು, ಭಾರತ ಬದಲಾಗಿದೆ. ಸಂಪೂರ್ಣ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿ ಸೇರಲು ಬಹಳ ದೂರವೇನಿಲ್ಲ. ಉತ್ತಮ ರಾಜತಾಂತ್ರಿಕ ಪ್ರಗತಿಪರ ಆಡಳಿತ, ಅಣ್ವಸ್ತ್ರ ನಿರ್ವಹಣೆ, ಸೇನಾ ಶಕ್ತಿ ಪ್ರದರ್ಶನ, ವಿಜ್ಞಾನ – ತಂತ್ರಜ್ಞಾನ ಈ ಎಲ್ಲ ಕ್ಷೇತ್ರಗಳಲ್ಲಿ ಭಾರತ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದೇ ಹೇಳಬೇಕು. ಪಾಕಿಸ್ತಾನ, ಚೀನಾದಂಥ
ನಮ್ಮ ಏಳ್ಗೆ ಕಂಡು ಹೊಟ್ಟೆೆ ಉರಿದುಕೊಳ್ಳುವ ವೈರಿ ರಾಷ್ಟ್ರಗಳನ್ನು ಬಿಟ್ಟರೆ ಜಗತ್ತಿನ ಉಳಿದೆಲ್ಲ ರಾಷ್ಟ್ರಗಳೂ ಸಹ ನಮ್ಮನ್ನು ಗೌರವಿಸುತ್ತವೆ. ಜತೆಗೆ ನಮ್ಮ ನಡೆಯನ್ನು ಒಂದಿಂಚೂ ಬಿಡದೇ ಚಾಚೂತಪ್ಪದೇ ಪಾಲಿಸುತ್ತಿವೆ. ಈ ರೀತಿಯಾಗಿ ಭಾರತ ಜಗತ್ತಿಗೆ ಗುರು ಆಗುವ ಮಟ್ಟಕ್ಕೆ ನಿಲ್ಲಲು ಹೊರಟಿರುವುದು ಮಾತ್ರ ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.
ಇದುವರೆಗೂ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ಮಹತ್ವದ ಸಾಧನೆಗಳನ್ನು ಮಾಡಿದೆ. ಮೊಟ್ಟ ಮೊದಲ ಉಪಗ್ರಹವಾದ ಆರ್ಯಭಟವನ್ನು ನಭಕ್ಕೆ ಹಾರಿಬಿಟ್ಟಾಗಿನಿಂದ ಬಾಹ್ಯಾಕಾಶ ಪ್ರಯೋಗಗಳು ಅವಿರತವಾಗಿ ನಡೆಯುತ್ತಲೇ ಇವೆ. ಈ ಹಿಂದೆ ದೇಶ ಕಂಡ ಹೆಮ್ಮೆಯ ವಿಜ್ಞಾನಿ ಕ್ಷಿಪಣಿ ತಜ್ಞ ಡಾ.ಎ. ಪಿ.ಜೆ ಅಬ್ದುಲ್ ಕಲಾಂರ ಮಾರ್ಗದರ್ಶನದಲ್ಲಿ ‘ಆಕಾಶ’, ‘ನಾಗ್’,‘ತ್ರಿಶೂಲ್’,‘
ಪೃಥ್ವಿ’,‘ಬ್ರಹ್ಮೋಸ್’, ‘ಅಗ್ನಿ’ ಯಂಥ ಹಲವಾರು ಕ್ಷಿಪಣಿಗಳನ್ನು ಹಲವು ಆಯಾಮದಲ್ಲಿ ಪರೀಕ್ಷೆಗೊಳಪಟ್ಟು, ಸೇನಾ ಸೇನಾಪಡೆಯ ಬತ್ತಳಿಕೆಯಲ್ಲಿ ಸೇರಿಸಿದ್ದಾಗಿದೆ.
ಸಹಸ್ರಾರು ಸ್ಯಾಟಲೈಟ್‌ಗಳನ್ನು ನಭಕ್ಕೆ ಹಾರಿಸಿದೆ. 2018ರಲ್ಲಿ ಒಂದೇ ರಾಕೆಟ್‌ನ ಮೂಲಕ 102 ಸ್ಯಾಟಲೈಟ್‌ಗಳನ್ನು ಸೂಕ್ತ
ಕಕ್ಷೆಗೆ ಕಳಿಸಿ, ಇದುವರೆಗೂ ಜಗತ್ತಿನ ಅಣ್ಣ ಅಮೆರಿಕವೂ ಸಹ ಮಾಡಿರದ ಇಂಥ ಕಾರ್ಯವನ್ನು ಮಾಡಿ ಯಶಸ್ವಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು. ಚಂದ್ರಯಾನ, ಮಂಗಳಯಾನ, ಸೂರ್ಯನ ಅನ್ವೇಷಣೆಗೆ ಆದಿತ್ಯಾ ಪ್ರಾಜೆಕ್‌ಟ್ ಎಂಬಿತ್ಯಾದಿ ಮಹತ್ತರ ಯೋಜನೆಗಳೂ ಸಹ ಭಾರತೀಯ ವಿಜ್ಞಾನಿಗಳ ಯಶಸ್ಸಿನ ಮುಷ್ಟಿಯಲ್ಲಿವೆ ಎಂಬುದು ನಮ್ಮವರ ಮೇಲೆ ನಮಗಿರುವ ಹೆಮ್ಮೆಯ ಪ್ರತೀಕ. ಸದ್ಯದಲ್ಲೇ ಮಾನವನನ್ನೂ ಭಾರತವು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಯಲ್ಲಿದೆ. ಈ ಯೋಜನೆ ಒಂದು ವೇಳೆ ಯಶಸ್ವಿಯಾದರೆ ಭಾರತೀಯನೂ ಕೂಡ ಬಾಹ್ಯಾಕಾಶದಲ್ಲಿ ಸೆಲ್ಫಿ ತೆಗೆದುಕೊಳ್ಳುವ ಕಾಲ ದೂರವೇನಿಲ್ಲ!
2019ರ ಮಾರ್ಚ್ – 27ರ ಬೆಳಗ್ಗೆೆ 11:16 ಸಮಯಕ್ಕೆ ಸರಿಯಾಗಿ ಒಡಿಶಾದ ಬಾಲಾಸೋರ್‌ನ ಡಾ.ಅಬ್ದುಲ್ ಕಲಾಂ ಉಡಾಯನ ಕೇಂದ್ರದಿಂದ ಮಿಷನ್ ಶಕ್ತಿ ಕ್ಷಿಪಣಿಯನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು. ಈ ಪ್ರಯೋಗದಲ್ಲಿ ಭಾರತದ್ದೇ ಆದ ಹಳೆಯ ಹಾಗೂ ನಿಷ್ಕ್ರೀಯಗೊಂಡು ಚಲಿಸುತಿದ್ದ ಉಪಗ್ರಹವೊಂದನ್ನು ಧ್ವಂಸಗೊಳಿಸಲಾಯಿತು. ನಭದಲ್ಲಿ ಸಾವಿರಾರು ಕಿ.ಮೀ ವೇಗದಲ್ಲಿ ಸಂಚರಿಸುವ ಉಪಗ್ರಹವನ್ನು ಗುರಿಯಾಗಿಸಿ ಅದರ ಮೇಲೆ ಹಟಾತ್ ದಾಳಿಮಾಡಿ, ಹೊಡೆದುರುಳಿಸುವುದು ಅಷ್ಟೊೊಂದು ಸುಲಭದ ಕೆಲಸವೇನಲ್ಲ. ಎ-ಸ್ಯಾಟ್ ಕ್ಷಿಪಣಿಯಿಂದ ಈ ಪ್ರಯೋಗ ಕೈಗೊಳ್ಳಲಾಯಿತು. ಎ-ಸ್ಯಾಟ್ ಎಂದರೆ ಆ್ಯಂಟಿ – ಸ್ಯಾಟಲೈಟ್ ಅಥವಾ ಉಪಗ್ರಹ ವಿರೋಧಿ ಕ್ಷಿಪಣಿ ಪ್ರಯೋಗ ಎಂದರ್ಥ. ಈ ಸಾಲಿನಲ್ಲಿ ಮತ್ತೊೊಂದು ಸಾಧನೆ
ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ನಡೆದು ಹೋಯಿತು. ಅದೇ ‘ಹೈಪರ್ ಸಾನಿಕ್ ಟೆಸ್‌ಟ್
ಡೆಮಾನ್‌ಸ್‌ಟೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಪರೀಕ್ಷೆ.
ಸದ್ಯ, ಶಬ್ದದ ವೇಗಕ್ಕಿಿಂತ ಆರುಪಟ್ಟು ವೇಗದಲ್ಲಿ ಕ್ಷಿಪಣಿಯನ್ನು ಹಾರಿಸಬಲ್ಲ ತಂತ್ರಜ್ಞಾನವನ್ನು ಭಾರತ ಇದೇ ಸೋಮವಾರ 07-09-2020ರಂದು ಯಶಸ್ವಿಯಾಗಿ ಪರೀಕ್ಷಿಸಿದೆ. ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್‌ಸ್‌ಟೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಎಂದು ಕರೆಯಲಾಗುತ್ತಿದೆ. ಈ ತಂತ್ರಜ್ಞಾನವನ್ನು. ಅಂದು ಬೆಳಗ್ಗೆ 11.03ಕ್ಕೆೆ ಈ ಪರೀಕ್ಷೆಯನ್ನು 5 ನಿಮಿಷಗಳ ಕಾಲ ಕೈಗೊಳ್ಳ ಲಾಯಿತು. ಒಡಿಶಾದ ಬಾಲಸೋರ್‌ನಲ್ಲಿನ ಎಪಿಜೆ ಅಬ್ದುಲ್ ಕಲಾಂ ಪರೀಕ್ಷಾ ಶ್ರೇಣಿಯಿಂದ ಹೈಪರ್ ಸಾನಿಕ್ ತಂತ್ರಜ್ಞಾನ ಪರೀಕ್ಷಕ ವಾಹನ (ಎಚ್‌ಎಸ್‌ಟಿಡಿವಿ) ಪರೀಕ್ಷೆ ಯಶಸ್ವಿಯಾಗಿ ಪೂರೈಸುವ ಮೂಲಕ ಭಾರತ, ಸೋಮವಾರ ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ಹೈಪರ್ ಸಾನಿಕ್ ಕ್ಷಿಪಣಿ ರಾಷ್ಟ್ರಗಳ ಪಟ್ಟಿಯಲ್ಲಿ 4ನೇ ಸ್ಥಾಾನ ಅಲಂಕರಿಸಿದಂತಾಗಿದೆ.
ಶಬ್ದಕ್ಕಿಿಂತಲೂ 6 ಪಟ್ಟು ವೇಗವಾಗಿ ಚಲಿಸಲು ಕ್ಷಿಪಣಿಗಳ ಅಭಿವೃದ್ಧಿಗೆ ಈ ದೇಶೀಯ ತಂತ್ರಜ್ಞಾನವು ನೆರವಾಗಲಿದೆ. ಇಂತಹ ಪರೀಕ್ಷೆ ಮಾಡುವ ಮೂಲಕ ನಮ್ಮ ಹೆಮ್ಮೆಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತೊಮ್ಮೆ ಜಗತ್ತಿಗೆ ಭಾರತದ ಶಕ್ತಿ ಎಂಥದ್ದು ಎಂದು ತೋರಿಸಿದೆ.
21ನೇ ಶತಮಾನದ ಶಸ್ತ್ರಾಸ್ತ್ರಗಳ ಸಾಲಿನಲ್ಲಿ ಹೈಪರ್ ಸಾನಿಕ್ ಶಸ್ತ್ರಾಸ್ತ್ರಗಳು ಸೇರಿವೆ. ಸದ್ಯ ಜಗತ್ತಿನ ಬಹುತೇಕ ರಾಷ್ಟ್ರಗಳು ದೇಶೀಯವಾಗಿ ಹೈಪರ್ ಸಾನಿಕ್ ತಂತ್ರಜ್ಞಾನವುಳ್ಳ ಶಸ್ತ್ರಾಸ್ತ್ರಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿವೆ. ಶಬ್ದಕ್ಕಿಿಂತ 6ಪಟ್ಟು ಹೆಚ್ಚು ರಭಸದಲ್ಲಿ ಚಲಿಸುವ ವಿಮಾನ, ಕ್ಷಿಪಣಿ, ರಾಕೆಟ್ ಹಾಗೂ ಬಾಹ್ಯಾಕಾಶ ನೌಕೆಗಳಿಗೆ ಹೈಪರ್ ಸಾನಿಕ್ ಶಸ್ತ್ರಾಸ್ತ್ರ ಗಳೆನ್ನಲಾಗುತ್ತಿದೆ. ಈ ಶಸ್ತ್ರಾಸ್ತ್ರಗಳ ಬಹುದೊಡ್ಡ ಶಕ್ತಿ ಹಾಗೂ ಲಾಭವೇ ವೇಗ. ಶಬ್ದಕ್ಕಿಿಂತ 6 ಪಟ್ಟು ವೇಗ ಅಂದರೆ ಪ್ರತಿ ಗಂಟೆಗೆ 4,000 ಮೈಲಿ ಕ್ರಮಿಸುವಷ್ಟು ವೇಗದಲ್ಲಿ ವಿಮಾನ, ಬಾಹ್ಯಾಕಾಶ ನೌಕೆ ಹಾಗೂ ಕ್ಷಿಪಣಿಗಳು ಚಲಿಸುತ್ತವೆ. ಈಗಾಗಲೇ ರಷ್ಯಾ, ಚೀನಾ, ಅಮೆರಿಕ ಇಂಥ ಹೈಪರ್ ಸಾನಿಕ್ ಶಸ್ತ್ರಾಸ್ತ್ರಗಳನ್ನು ಬಳಸುತ್ತಿವೆ. ಆ ಪಟ್ಟಿಗೆ ಈಗ ಭಾರತವೂ ಸೇರಿದಂತಾಗಿದೆ.
ಅಲ್ಲದೇ ಇಸ್ರೆೆಲ್, ಜಪಾನ್ ಹಾಗೂ ಇರಾನ್‌ಗಳು ಈ ಹೈಪರ್ ಸಾನಿಕ್ ತಂತ್ರಜ್ಞಾನವನ್ನು ಹೊಂದಲು ಯತ್ನಿಸುತ್ತಿವೆ.
ಸ್ಕ್ರ್ಯೊಮ್ ಜೆಟ್ ತಂತ್ರಜ್ಞಾನದಲ್ಲಿ, ಇಂಧನದ ದಹನ ಕ್ಷಿಪಣಿ ಚೇಂಬರ್‌ನಲ್ಲಿ ಅತ್ಯಂತ ವೇಗದಲ್ಲಿ ನಡೆಯುತ್ತದೆ. ಈ ತಂತ್ರ ಜ್ಞಾನದ ಅಳವಡಿಕೆಯಿಂದ ಕಡಿಮೆ ದರದಲ್ಲಿ ಅಂತರಿಕ್ಷಕ್ಕೆ ಬಾಹ್ಯಾಕಾಶ ನೌಕೆಗಳನ್ನು ತಲುಪಿಸಲು ಅನುಕೂಲವಾಗಲಿದೆ. ಜೊತೆಗೆ ಈ ಎಂಜಿನ್ ನಲ್ಲಿ ಯಾವುದೇ ಬೇರ್ಪಡಿಸಬಹುದಾದ ಭಾಗಗಳಿರುವುದಿಲ್ಲ. ಆ ಕಾರಣ ಇಡೀ ಎಂಜಿನ್ ಒಂದು ಶಕ್ತಿಯಾಗಿ ಕಾರ್ಯ ನಿರ್ವಹಿಸುವುದರಿಂದ ಕ್ಷಿಪಣಿ, ವಿಮಾನಗಳಿಗೆ ಹೆಚ್ಚು ವೇಗ ಪಡೆದುಕೊಳ್ಳಲು ಸಹಾಯಕವಾಗಲಿದೆ. ಸದ್ಯ ಡಿಆರ್‌ಡಿಒ ನಡೆಸಿದ ಪ್ರಯೋಗದಲ್ಲಿ ಇದನ್ನು ಬಳಸಲಾಗಿದೆ. ಎಚ್‌ಎಸ್ ಡಿಟಿವಿ ಅಭಿವೃದ್ಧಿಯಿಂದ ಮರುಬಳಸ ಬಹುದಾದ ಉಡಾವಣಾ ವಾಹನ ತಯಾರಿಕೆಗೂ ಉತ್ತೇಜನ ದೊರೆತಂತಾಗಿದೆ. ಸ್ಕ್ರ್ಯೊಮ್ ಜೆಟ್ ಎಂಜಿನ್ ಬಳಸಿ ಎಚ್ ಎಸ್‌ಡಿಟಿವಿ ನಿರ್ಮಾಣ ಮಾಡಲಾಗಿದೆ.
ಇದೊಂದು ಬಹುಪಯೋಗಿ ವಾಹನವಾಗಿದ್ದು, ಕಡಿಮೆ ವೆಚ್ಚದಲ್ಲಿ ಸ್ಯಾಟಲೈಟ್ ಉಡಾವಣಾ ವಾಹನವಾಗಿಯೂ ಬಳಸ
ಬಹುದು. ಅಲ್ಲದೇ ದೂರ ವ್ಯಾಪ್ತಿಯ ವಿಹಾರ ಕ್ಷಿಪಣಿಗಳಿಗೂ ಎಚ್‌ಎಸ್‌ಟಿಡಿವಿ ಉಪಯುಕ್ತವಾಗಲಿದೆ. ಎಚ್ ಎಸ್‌ಟಿಡಿವಿ ಒಂದು ವಿಹಾರ ವಾಹನವಾಗಿದ್ದು, ಇದನ್ನು ರಾಕೆಟ್ ಮೋಟಾರ್ ಮೇಲೆ ಇರಿಸಿ ಹಾರಾಟ ನಡೆಸಲಾಗುವುದು. ಒಮ್ಮೆ ಇದರ ಹಾರಾಟ ಯಶಸ್ವಿಯಾದರೆ, ವಾಹನದ ವೇಗ ನಿರ್ದಿಷ್ಟ ಮಟ್ಟಕ್ಕೆ ತಲುಪಿದ ನಂತರ, ಉಡಾವಣಾ ವಾಹನದಿಂದ ಇದನ್ನು ಬೇರ್ಪಡಿಸ
ಲಾಗುವುದು. ಆ ನಂತರ ಸ್ಕ್ರ್ಯೊಮ್ ಜೆಟ್ ಎಂಜಿನ್ ತಾನಾಗೇ ಚಾಲನೆ ಪಡೆದುಕೊಳ್ಳುವುದು. ಇದರ ಉಪಯೋಗ ಗಳನ್ನೊಮ್ಮೆ ನೋಡಲಾಗಿ – ಸಮಾನ್ಯ ಇಲ್ಲವೇ ಪರಮಾಣು ಲೋಡ್ ಅನ್ನು ಕ್ಷಣಾರ್ಧದಲ್ಲಿ ಅನ್ ಲೋಡ್ ಮಾಡುವ ಸಾಮರ್ಥ್ಯ ಇದಕ್ಕಿದೆ.
ಹೆಚ್ಚಿನ ತಾಪಮಾನದಲ್ಲೂ ನಿಖರ ಕಾರ್ಯ ನಿರ್ವಹಿಸುವ ತಾಕತ್ತಿದೆ. ಉಡಾಯನ ವಾಹನದ ಮಾರ್ಗಮಧ್ಯದಲ್ಲೇ ಚಲನೆ
ಬದಲಾಯಿಸುವ ಸಾಮರ್ಥ್ಯ ಇದಕ್ಕಿದೆ. ಎದುರಾಳಿಗೆ ವಾಹನ ಪತ್ತೆಹಚ್ಚಲು ಬಹುತೇಕ ಅಸಾಧ್ಯವೆಂದೇ ತಿಳಿಯಬೇಕು. ಮುಖ್ಯವಾಗಿ ನಾವಿಲ್ಲಿ ಸಬ್ ಸಾನಿಕ್, ಸುಪರ್ ಸಾನಿಕ್ ಹಾಗೂ ಹೈಪರ್ ಸಾನಿಕ್ ಎಂಬ ತಂತ್ರಜ್ಞಾನಾಧಾರಿತ ಪದಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು.
ಸಬ್ಸಾನಿಕ್: ಇವು ಶಬ್ದದ ವೇಗಕ್ಕಿಿಂತ ಕಡಿಮೆ ಗತಿಯಲ್ಲಿ ಹಾರಬಲ್ಲ, ಸಾಂಪ್ರದಾಯಿಕ ತಂತ್ರಜ್ಞಾನದ ಕ್ಷಿಪಣಿಗಳು.
ಈಗಲೂ ಹೆಚ್ಚಿನ ಯುದ್ಧರಂಗಗಳಲ್ಲಿ ಇಂತಹುಗಳನ್ನೇ ಬಳಸಲಾಗುತ್ತಿದೆ. ಕಡಿಮೆ ಭಾರ ಹಾಗೂ ಕಡಿಮೆ ವೇಗದ ಇವನ್ನು ಹಾರಿಬಿಟ್ಟ ನಂತರವೂ ಗುರಿಯನ್ನು ಬದಲಾಯಿಸ ಬಹುದು.
ಸೂಪರ್ಸಾನಿಕ್: ಶಬ್ದದ ವೇಗವನ್ನು ‘ಮ್ಯಾಚ್ 1’ ಎನ್ನುತ್ತಾರೆ. ಸೂಪರ್ಸಾನಿಕ್ ಕ್ಷಿಪಣಿಗಳು ಮ್ಯಾಚ್ 1ಗಿಂತ ವೇಗದಲ್ಲಿ ಹಾರಾಡುತ್ತವೆ; ಆದರೆ ಮ್ಯಾಚ್ 3ಗಿಂತ ಕಡಿಮೆ ವೇಗದಲ್ಲಿರುತ್ತವೆ. ಅಂದರೆ ಗಂಟೆಗೆ ಸರಾಸರಿ 2.3 ಕಿಲೋ ಮೀಟರ್ ವೇಗದಲ್ಲಿಹಾರಬಲ್ಲವು. ಭಾರತದ ಬ್ರಹ್ಮೊಸ್ ಕ್ಷಿಪಣಿ ಈ ತಂತ್ರಜ್ಞಾನದ್ದು.
ಹೈಪರ್ಸಾನಿಕ್: ಇವು ಮ್ಯಾಚ್ 5 ಮತ್ತು ಅದಕ್ಕಿಿಂತ ಹೆಚ್ಚಿನ ವೇಗದಲ್ಲಿಹಾರಬಲ್ಲಂಥವು. ಅಂದರೆ ಸರಾಸರಿ ಗಂಟೆಗೆ 3.8 ಕಿಲೋಮೀಟರ್‌ಗಿಂತ ಅಧಿಕ ವೇಗ. ಈ ಸಬ್ ಸಾನಿಕ್, ಸುಪರ್ ಸಾನಿಕ್, ಹಾಗೂ ಹೈಪರ್ ಸಾನಿಕ್ ತಂತ್ರಜ್ಞಾನಗಳಲ್ಲೆಲ್ಲಾ ‘ಮ್ಯಾಕ್’ ಎಂಬ ಪದವನ್ನು ಪದೇ ಪದೆ ಬಳಸುತ್ತಿದ್ದೇವೆ. ಏನಿದು ಮ್ಯಾಕ್ ಸಂಖ್ಯೆೆ? ಎಂದು ನೋಡುವುದಾದರೆ, ಶಬ್ದದ ವೇಗವನ್ನು ಮ್ಯಾಕ್ ಸಂಖ್ಯೆಯ ಮೂಲಕ ಅಳೆಯಲಾಗುತ್ತಿದೆ.
ಒಂದು ನೌಕೆಯ/ ಉಡಾಯನ ವಾಹನ, ಇಲ್ಲವೇ ಕ್ಷಿಪಣಿಯ ವೇಗಕ್ಕೂ ಮತ್ತು ಸುತ್ತಮುತ್ತಲಿನ ವಾತಾವರಣದ ಶಬ್ದದ ವೇಗಕ್ಕೂ ಇರುವ ಅನುಪಾತವನ್ನು ಮ್ಯಾಕ್ ಸಂಖ್ಯೆ ಎಂದು ಕರೆಯುತ್ತಾರೆ. ನಿರ್ದಿಷ್ಟ ಸಮುದ್ರಮಟ್ಟದಲ್ಲಿ 1ಮ್ಯಾಕ್ ಅಂದರೆ ಶಬ್ದದ ವೇಗವಾದ ಗಂಟೆಗೆ 1225 ಕಿ.ಮೀ, ಶಬ್ದದ ವೇಗ ಅಥವಾ ಮ್ಯಾಕ್ ಸಂಖ್ಯೆ ಸುತ್ತಲಿನ ವಾತಾವರಣ, ಶಾಖ ಮತ್ತು ಒತ್ತಡ ಮೇಲೆ ಬದಲಾಗುತ್ತಿರುತ್ತದೆ. 1.2 – 5 ಮ್ಯಾಕ್ (1470 ರಿಂದ 6125 ಕಿ. ಮೀ) ಸಂಖ್ಯೆೆವರೆಗಿನ ವೇಗವನ್ನು ಸೂಪರ್ಸಾನಿಕ್, 5 – 10 ಮ್ಯಾಕ್ (6125 ರಿಂದ 12,250 ಕಿ.ಮೀ) ಸಂಖ್ಯೆೆವರೆಗಿನ ವೇಗವನ್ನು ಹೈಪರ್‌ಸಾನಿಕ್, 10-25 ಮ್ಯಾಕ್ (12,250 ರಿಂದ 30,625 ಕಿ.ಮೀ)
ಸಂಖ್ಯೆೆವರೆಗಿನ ವೇಗವನ್ನು ಹೈಹೈಪರ್ ಸಾನಿಕ್ ಎಂದು ಕರೆಯುತ್ತಾರೆ. ವಿಮಾನಗಳ ವೇಗವನ್ನು ಮುಖ್ಯವಾಗಿ ಸೂಪರ್‌ಸಾನಿಕ್ ಮತ್ತು ಹೈಪರ್‌ಸಾನಿಕ್ ಎಂದು ಎರಡು ವರ್ಗಗಳಾಗಿ ವಿಂಗಡಿಸಿ ಹೇಳಲಾಗುತ್ತಿದೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸುವುದಾದರೆ, ಸದ್ಯ ಯಾವ ದೇಶದ ಹತ್ತಿರವೂ ಈ ಸೂಪರ್‌ಸಾನಿಕ್ ಹಾಗೂ ಹೈಪರ್‌ಸಾನಿಕ್ ವೇಗದಲ್ಲಿ ಗುರಿಯತ್ತ ಧಾವಿಸಿ ಬರುವ ಕ್ಷಿಪಣಿಗಳನ್ನು ತಡೆಗಟ್ಟಿ ನಾಶ ಮಾಡುವ ಸುಧಾರಿತ ತಂತ್ರಜ್ಞಾನ ಇಲ್ಲವೆಂದೇ ಹೇಳಬೇಕಾಗುತ್ತದೆ. ಏಕೆಂದರೆ ಇವು ಉಡಾವಣೆಗೊಂಡ ಬಳಿಕ, ಇವುಗಳ ಗುರಿ ಹಾಗೂ ದಾರಿಯನ್ನು ರೇಡಾರ್‌ಗಳು ಗುರುತಿಸಿ ಮಾಹಿತಿ ನೀಡಬೇಕು; ನಂತರ ಕ್ಷಿಪಣಿ ತಡೆ ತಂತ್ರಜ್ಞಾನದ ಕ್ಷಿಪಣಿಗಳನ್ನು ಉಡಾಯಿಸಬೇಕು. ಭಾರತವೂ ಸೇರಿದಂತೆ ಮುಂದುವರಿದ ಪ್ರತಿಯೊಂದು ದೇಶವೂ ಸೂಪರ್ ಸಾನಿಕ್, ಹೈಪರ್ ಸಾನಿಕ್ ಕ್ಷಿಪಣಿಗಳನ್ನು ತಡೆಯುವ ತಂತ್ರಜ್ಞಾನವನ್ನು ಹೊಂದಲು ಇಚ್ಛಿಸುತ್ತಿವೆ.
ಏಕೆಂದರೆ ಪ್ರತೀ ದೇಶಕ್ಕೂ ಶತ್ರು ಪಡೆಯಿಂದ ಆಕ್ರಮಣವಾದರೆ, ಅದರಲ್ಲೂ ಶತ್ರುಪಡೆ ಇಂಥ ಸುಧಾರಿತ ಕ್ಷಿಪಣಿಗಳನ್ನು
ಪ್ರಯೋಗಿಸಿದರೆ ಎಂಥ ಅನಾಹುತ ಸಂಭವಿಸಬಹುದು ಎಂಬ ಭಯ ಕಾಡುತ್ತಾನೇ ಇದೆ. 2008 ರಿಂದಲೂ ಈ ತಂತ್ರಜ್ಞಾನದ ಬೆಳವಣಿಗೆಯ ಕೆಲಸವನ್ನು ಡಿಆರ್‌ಡಿಒ ಮಾಡುತ್ತ ಬಂದಿದೆ. ಸದ್ಯ ಅದು ಅಂತಿಮಗೊಂಡಂತಾಗಿದೆ. ಅತೀ ವೇಗಗತಿಯಲ್ಲಿ
ಅದನ್ನು ಪರೀಕ್ಷಿಸುತ್ತಿರುವುದರ ಉದ್ದೆಶಗಳಲ್ಲಿ ಒಂದು, ಗಡಿಯಲ್ಲಿ ಹೆಚ್ಚುತ್ತಿರುವ ಚೀನಾದ ಆಕ್ರಮಣದ ಆತಂಕವನ್ನು ಸ್ವಲ್ಪ ತಣ್ಣಗಾಗಿಸುವುದು. ಈ ತಂತ್ರಜ್ಞಾನದ ಮೂಲಕ, ಕ್ಷಿಪಣಿ ಆಕ್ರಮಣ ವ್ಯವಸ್ಥೆಯಲ್ಲಿ ನಾವೂ ನಿಮ್ಮನ್ನು ಸರಿಗಟ್ಟಬಲ್ಲೆವು ಎಂದು ತೋರಿಸಿದಂತಾಗಿದೆ.
ಈ ತಂತ್ರಜ್ಞಾನದ ಮೂಲಕ ಭಾರತ ಕೇವಲ ಒಂದು ಗಂಟೆಯಲ್ಲಿ, ಯಾವುದೇ ಕ್ಷಿಪಣಿ ನಿರೋಧ ವ್ಯವಸ್ಥೆೆಯ ಭಯವಿಲ್ಲದೆ, ಚೀನಾದ ರಾಜಧಾನಿ ಬೀಜಿಂಗ್ ಮೇಲೆ ಬಾಂಬ್ ಹಾಕಬಹುದು. ಅರ್ಧ ಗಂಟೆಯಲ್ಲಿ ಪಾಕಿಸ್ತಾನದ ಕರಾಚಿಯನ್ನು ತಲುಪ ಬಲ್ಲದು. ಅಲ್ಲದೇ ಅದೇ ಸಮಯ ದಲ್ಲಿ ಬಾಂಗ್ಲಾ, ಶ್ರೀಲಂಕಾ ಇನ್ನಿತರೆ ನೆರೆಹೊರೆಯ ದೇಶಗಳ ಮೇಲೂ ಸಹ ಆಕ್ರಮಣ ಮಾಡಬಹುದು.