Saturday, 14th December 2024

ಲವ್ ಜಿಹಾದಿಗೆ ಕಾಯ್ದೆ; ಸುಗ್ರೀವಾಜ್ಞೆಯಲ್ಲಿ ತಪ್ಪೇನಿದೆ ?

ಅಭಿಮತ

ವಿನುತಾ ಗೌಡ

ಸುಮಾರು ಹತ್ತು ವರ್ಷಗಳ ಹಿಂದೆ ಕೇರಳದಲ್ಲಿ ಮಾತ್ರ ಕೇಳುತ್ತಿದ್ದ ‘ಲವ್ ಜಿಹಾದ್’ ಎಂಬ ಶಬ್ದ ಈಗ ದೇಶಾದ್ಯಂತ ಚರ್ಚೆಯ ಲ್ಲಿದೆ. ಅಷ್ಟೇ ಅಲ್ಲ, ನ್ಯಾಯಾಲಯಗಳೂ ಕೂಡಾ ಈಗ ಲವ್ ಜಿಹಾದ್ ಶಬ್ದವನ್ನು ಲೀಲಾಜಾಲವಾಗಿ ಬಳಸುತ್ತಿವೆ!

ಆರಂಭದಲ್ಲಿ ವಿಚಿತ್ರ ಸಾಮಾಜಿಕ ವಾತಾವರಣದ ಕೇರಳದಲ್ಲಿ ಹಿಂದು ಮತ್ತು ಕ್ರಿಶ್ಚಿಯನ್ ಹೆಣ್ಣು ಮಕ್ಕಳನ್ನು ಮುಸಲ್ಮಾನ ಯುವಕರು ಮದುವೆಯ ನೆಪದಲ್ಲಿ ಮತಾಂತರಿಸುತ್ತಿzರೆ ಎಂಬ ಕೂಗು ಕೇಳಿಬಂದಾಗ, ಎಂದಿನಂತೆ ಅದು ಸಂಘಪರಿವಾರದ ಹುಸಿ ಆಲಾಪ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಕೇರಳಕ್ಕೆ ಕ್ರಮೇಣ ಅದರ ಬಿಸಿಯ ಅನುಭವ ಆಗಲಾರಂಭಿಸಿತು.

೨೦೧೪ರಲ್ಲಿ ಕೇರಳದ ಅಂದಿನ ಮುಖ್ಯಮಂತ್ರಿ ಒಮನ್ ಚಾಂಡಿ ವಿಧಾನಸಭೆಯಲ್ಲಿ, ‘೨೦೦೬ರ ನಂತರ ಕೇರಳದಲ್ಲಿ ೨೬೬೭ ಮಹಿಳೆಯರನ್ನು ಇಸ್ಲಾಮಿಗೆ ಮತಾಂತರಿಸಲಾಗಿದೆ’ ಎಂದು ಹೇಳಿಕೆ ನೀಡಿದ್ದರು. ಅವರ ಪ್ರಕಾರ ಈ ಮತಾಂತರಗಳಿಗೆ
ಯಾವುದೇ ಒತ್ತಡಗಳಿರಲಿಲ್ಲ!

ಎಲ್ಲಾ ಮತಾಂತರಗಳು ಒಂದೇ ರೀತಿಯದ್ದಾಗಿದ್ದರೂ ಮುಖ್ಯಮಂತ್ರಿಗಳ ಪ್ರಕಾರ ಅದಕ್ಕೆ ಒತ್ತಡಗಳಿಲ್ಲ! ಹಾಗಾಗಿ ಸರಕಾರದಿಂದ
ಯಾವುದೇ ತನಿಖೆ ನಡೆಯಲಿಲ್ಲ. ೨೦೧೦ರಲ್ಲಿ ಕೇರಳದ ಮತ್ತೋರ್ವ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ‘ಮದುವೆಯ ನೆಪದಲ್ಲಿ ಮುಸ್ಲಿಮೇತರ ಯುವತಿಯರನ್ನು ಮತಾಂತರ ಮಾಡಿ ಕೇರಳವನ್ನು ಮುಸ್ಲಿಂ ಬಹುಸಂಖ್ಯಾತ ರಾಜ್ಯ ವನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ’ ಎಂದು ಅಪಾದಿಸಿದ್ದರು. ಈ ಹೇಳಿಕೆಗಳನ್ನು ಪುಷ್ಟೀಕರಿಸು ವಂತೆ ಸರಿಯಾಗಿ ಅದೇ ಹೊತ್ತಿ ನಲ್ಲಿ ಕೇರಳದ ಮತಾಂಧರು ಮತ್ತು ಜಾಗತಿಕ ಭಯೋತ್ಪಾದನೆಯ ನಂಟು ಬಹಿರಂಗವಾಗತೊಡಗಿತ್ತು. ಪಿಎಫ್ಐನಂಥ ಮೂಲಭೂತವಾದಿ ಸಂಘಟನೆಗಳ ಅಬ್ಬರಕ್ಕೆ ಇಡೀ ದೇಶ ಕೇರಳದತ್ತ ಬೊಟ್ಟು ಮಾಡಲಾರಂಭಿಸಿತ್ತು.

೨೦೦೯ರಲ್ಲಿ ಕೇರಳ ಕ್ಯಾಥೊಲಿಕ್ ಬಿಷಪ್ಸ್ ಕೌನ್ಸಿಲ್ ಕೂಡಾ ಸುಮಾರು ೪೫೦೦ ಕ್ರಿಶ್ಚಿಯನ್ ಯುವತಿಯರು ಮತಾಂತರ
ವಾಗಿzರೆ ಎಂದು ಹೇಳಿತು. ಇವುಗಳ ಜೊತೆಗೆ ಮತಾಂತರಗೊಂಡ ಹಿಂದೂ ಯುವತಿಯರು ಭಯೋತ್ಪಾದನಾ ಜಾಲದಲ್ಲಿ ಸಿಲುಕಿದ ಘಟನೆಗಳೂ ಬಹಿರಂಗವಾದವು. ಹೀಗೆ ಹಲವು ಪ್ರಕರಣಗಳಲ್ಲಿ ಮುಸಲ್ಮಾನ ಯುವಕರ ಪ್ರೀತಿ ಮತ್ತು ಮದುವೆ
ಒಂದು ಮಹಾ ಮೋಸ ಎಂಬುದಕ್ಕೆ ಹಲವು ಸಾಕ್ಷಿಗಳು ಇದ್ದವು. ಹಿಂದೂ ಯುವತಿಯನ್ನು ಮದುವೆಯಾದ ಮುಸಲ್ಮಾನ ಯುವಕ ದೇಶಕ್ಕೆ ಹಾರಿದ್ದು, ದೇಶದಲ್ಲಿ ಆತನಿಗೆ ಮತ್ತೊಂದು ಸಂಸಾರ ಇದ್ದಿದ್ದು, ಆತ ಸಾವಿರ ಸುಳ್ಳುಗಳನ್ನು ಹೇಳಿ ಮರಳು ಮಾಡಿ‌ದ್ದೆಲ್ಲವೂ ಒಂದೊಂದಾಗಿ ವರದಿಯಾದಾಗ ಪ್ರಪ್ರಥಮ ಬಾರಿಗೆ ಲವ್ ಜಿಹಾದ್ ಎಂಬ ಪದದ ಬಗ್ಗೆ ಅದೇ ಕೇರಳದ
ಪ್ರಜ್ಞಾವಂತ ವರ್ಗ ಮಾತನಾಡಲು ಪ್ರಾರಂಭಿಸಿತು.

ಕ್ರಮೇಣ ಕಾನೂನು ಪರಿಣತರು ಅದರ ಬಗ್ಗೆ ಧ್ವನಿ ಎತ್ತತೊಡಗಿದರು. ಲವ್ ಜಿಹಾದ್, ಪ್ರೇಮ ಮತ್ತು ಹಕ್ಕಿನ ಸೋಗು ಹಾಕಿ ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳುತ್ತಿದ್ದರೆ ಕಾನೂನು ಪರಿಣತರಿಗೆ ಮಾತ್ರ ಇದರನೋ ಮೋಸವಿದೆ ಎಂಬುದು ಅರಿವಿಗೆ
ಬಂತು. ಜೊತೆಗೆ ಮುಸಲ್ಮಾನ ಯುವಕನನ್ನು ಮದುವೆಯಾದ ಯುವತಿಯರ ಆತ್ಮಹತ್ಯೆ ಪ್ರಕರಣಗಳು ಕೇರಳ ಸೇರಿದಂತೆ ಉಳಿದ ಎಲ್ಲಾ ರಾಜ್ಯಗಳಲ್ಲಿ ಹೆಚ್ಚುತ್ತಿವೆ ಎಂದು ವರದಿಗಳು ಹೇಳಲಾರಂಭಿಸಿದವು.

ಇಷ್ಟೆಲ್ಲಾ ಇದ್ದರೂ ಅವು ಕೇವಲ ಹಿಂದೂ ಸಂಘಟನೆಗಳ ಧ್ವನಿ ಮಾತ್ರವಾಗಿ ಉಳಿಯಿತೇ ಹೊರತು ಸಮಾಜದ ಪ್ರಶ್ನೆಯಾಗಿ ಕಾಣಲೇ ಇಲ್ಲ. ಆದರೆ ಇಂದು ಲವ್ ಜಿಹಾದ್ ದೇಶದ ಪಿಡುಗು ಎಂಬಂತೆ ಕಾಣಲಾರಂಭಿಸಿದೆ. ಮತ್ತು ಅದಿಂದು ಕೇವಲ ಕೇರಳದ ಸಮಸ್ಯೆಯಾಗಿಯೂ ಉಳಿದಿಲ್ಲ. ಉದಾಹರಣೆಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಟಾಪರ್ ಮತ್ತು ಎರಡನೆಯ ಸ್ಥಾನ ಪಡೆದ ಜೋಡಿ ಮದುವೆಯಾದಾಗ ಕೆಲವು ಹಿಂದೂ ಸಂಘಟನೆಗಳು ಅದನ್ನು ಲವ್ ಜಿಹಾದ್ ಎಂದು ಎಚ್ಚರಿಸಿತ್ತು. ಅದಕ್ಕೆ ಪ್ರಗತಿಪರರು ಮತ್ತು ಬುದ್ಧಿಜೀವಿಗಳು ಕಟುವಾಗಿ ವಿರೋಧಿಸಿದ್ದವು. ಆದರೆ ಲವ್ ಜಿಹಾದ್ ಎಷ್ಟು ಜೀವಂತವಾಗಿತ್ತೆಂದರೆ ಎರಡು ವರ್ಷದ ನಂತರ ಅದೇ ಜೋಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದೆ.

ಯುಪಿಎಸ್‌ಸಿ ರ‍್ಯಾಂಕ್ ಬಂದವರೆನ್ನುವ ಕಾರಣಕ್ಕೆ ಅದು ವಿಚ್ಚೇದನದವರೆಗೆ ಬಂದಿದೆಯೆಂಬುದು ಬಿಟ್ಟರೆ ಸಾಮಾನ್ಯ ಪ್ರಕರಣ ವಾಗಿದ್ದರೆ ಅದರ ಅಂತ್ಯ ಇನ್ನೇನೋ ಆಗಿರುತ್ತಿತ್ತೆಂಬುದಕ್ಕೆ ಎಷ್ಟೋ ಉದಾಹರಣೆಗಳನ್ನು, ಕಾರಣಗಳನ್ನು ಕೊಡಬಹುದು.
ಆದರೂ ಲವ್ ಜಿಹಾದ್ ಕೇವಲ ಹಿಂದೂ ಸಂಘಟನೆಗಳ ಧ್ವನಿ ಅಥವಾ ಆಲಾಪ ಎಂದು ಬಿಂಬಿಸುವ ಜಾಯಮಾನ ಇನ್ನೂ ನಮ್ಮ ಸಮಾಜದಲ್ಲಿದೆ. ಅದನ್ನು ಭಯೋತ್ಪಾದನೆಯ ಒಂದು ತಂತ್ರ ಎಂದು ಒಪ್ಪುವುದಕ್ಕೆ ಸಮಾಜದ ಒಂದು ವರ್ಗಕ್ಕೆ
ಇಂದಿಗೂ ಸಾಧ್ಯವಾಗುತ್ತಿಲ್ಲ. ಆದಕ್ಕೆ ಕಾರಣ ನಮ್ಮ ಕಾನೂನು ಮತ್ತು ನಮ್ಮ ಸಮಾಜ ಸಂವಿಧಾನದ ಮೇಲೆ ಇರಿಸಿರುವ ಅಪಾರವಾದ ನಂಬಿಕೆ.

ಭಾರತೀಯ ಕಾನೂನು ನಿಯಮಗಳ ಅನ್ವಯ ಮತ್ತು ಸಾಂವಿಧಾನಿಕವಾಗಿ ನೋಡಿದರೆ ಅಂತರ್ ಮತೀಯ ಮದುವೆ ಅಂತರ್ಜಾತೀಯ ಮದುವೆಗಿಂತ ಯಾವ ರೀತಿಯಿಂದಲೂ ಭಿನ್ನವಲ್ಲ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಸಮಾನ ಎನ್ನುವ ಧೋರಣೆ ಹಿಂದೂ ಯುವತಿ ಮತ್ತು ಮುಸಲ್ಮಾನ ಯುವಕನ ವಿವಾಹವನ್ನು ಸಂಶಯದಿಂದ ನೋಡುತ್ತಿಲ್ಲ. ಬದುಕುವ
ಹಕ್ಕಿನಷ್ಟೇ ವಿವಾಹದ ಹಕ್ಕನ್ನು ಕೂಡಾ ಸಂವಿಧಾನ ಗೌರವಿಸುತ್ತದೆ. ಮೊನ್ನೆ ತಾನೇ ಅಲಹಾಬಾದ್ ನ್ಯಾಯಾಲಯ ಉತ್ತರ ಪ್ರದೇಶ ಸರಕಾರ ತರಲು ಮುಂದಾಗಿರುವ ಕಾಯ್ದೆ ಸರಿಯಲ್ಲ ಎಂದು ಹೇಳಿರುವುದರ ಹಿಂದೆ ಇರು ವುದು ಕೂಡ ಇಂಥದ್ದೇ
ನಿಲುವುಗಳು. ಘನ ನ್ಯಾಯಾಲಯವೇ ಹೀಗೆ ಹೇಳಬೇಕಾದರೆ ಪ್ರಗತಿಪರ ಎನ್ನುವ ವರ್ಗಕ್ಕೆ ಅದರ ಗಂಭೀರತೆ ಅರ್ಥವಾಗುತ್ತದೆ ಎನ್ನಲು ಸಾಧ್ಯವಿಲ್ಲ.

ಲವ್ ಜಿಹಾದನ್ನು ಕಾನೂನು ಮತ್ತು ವಿವಾಹವಾಗುತ್ತಿರುವವರ ಮಾನಸಿಕತೆಯನ್ನು ಅರಿಯದೆ ಅರ್ಥೈಸಿಕೊಳ್ಳಲು ಹೊರಡು ವುದು ಮೂರ್ಖತನವೂ ಹೌದು. ಒಮನ್ ಚಾಂಡಿ ಮತ್ತು ಅಚ್ಯುತಾನಂದನ್ ಮುಂತಾದ ಕಮ್ಯುನಿಸ್ಟರಿಗೆ ಅದು ಅರ್ಥವಾಗಿತ್ತು.
ಆದರೆ ಅದರ ಪರಿಹಾರಕ್ಕೆ ಕಮ್ಯುನಿಸಂ ಬಿಟ್ಟಿರಲಿಲ್ಲ. ನಿಜ, ಮದುವೆ ವ್ಯಕ್ತಿಯ ವೈಯಕ್ತಿಕ ಹಕ್ಕು. ಯಾರನ್ನು ಯಾರೂ ಮದುವೆಯಾಗುವ ಸ್ವಾತಂತ್ರ್ಯವಿದೆ. ಆದರೆ ಮದುವೆಯ ನಂತರದ ಬದುಕು? ಇದು ಕೂಡಾ ಸಂವಿಧಾನದ ಬದುಕುವ ಹಕ್ಕಿನ ವ್ಯಾಪ್ತಿಯ ಬರುತ್ತದೆಯಲ್ಲವೇ? ಪ್ರಗತಿಪರರಿಗೆ, ಸೆಕ್ಯುಲರಿಸ್ಟರಿಗೆ ಇದು ಅರ್ಥವಾಗಿಲ್ಲವೋ ಅಥವಾ ಓಲೈಕೆಯಿಂದ ಈ
ಅಂಶವನ್ನು ಸ್ಪರ್ಶಿಸುತ್ತಿಲ್ಲವೋ ಗೊತ್ತಿಲ್ಲ.

ಲವ್ ಜಿಹಾದನ್ನು ನೋಡಬೇಕಾದುದು ಈ ದೃಷ್ಟಿಯಲ್ಲಿ. ಅಂತಿಮವಾಗಿ ಮದುವೆಗೆ ಮನಸ್ಸು ಒಂದನ್ನು ಬಿಟ್ಟು ಬೇರೆ ಯಾವುದೂ ಮುಖ್ಯವಲ್ಲ ಎಂದು ಪ್ರತಿಪಾದಿಸಬಹುದು. ಆದರೆ ಮದುವೆಯ ನಂತರ ಹಿಂದೂ ಯುವತಿ ಕಡ್ಡಾಯವಾಗಿ ತನ್ನ ಆಚರಣಾ ಪದ್ಧತಿಯನ್ನು ತ್ಯಜಿಸುವುದು, ಕಡ್ಡಾಯ ಮತಾಂತರವಾಗಬೇಕಾವುದು ಕಾನೂನಿಗೆ ವಿರುದ್ಧವಲ್ಲವೇ? ಸಂವಿಧಾನದ ಬದುಕುವ ಹಕ್ಕಿಗೆ ವ್ಯತಿರಿಕ್ತವಲ್ಲವೇ? ತನ್ನ ಪತ್ನಿಯ ಧಾರ್ಮಿಕ ಭಾವನೆಯನ್ನು ಗೌರವಿಸದ ಮದುವೆ ಮಧುರ ಹೇಗಾದೀತು? ಮುಸಲ್ಮಾನ ಯುವಕರು ವಿವಾಹವಾದ ಹಿಂದೂ – ಕ್ರಿಶ್ಚಿಯನ್ ಯುವತಿಯರು ಮುಸ್ಲಿಮರಾದರೇಕೆ ಎಂಬುದನ್ನು ಈಗ ಕಾನೂನುಗಳು ತಡವಾಗಿಯಾದರೂ ಅರ್ಥ ಮಾಡಿಕೊಳ್ಳುತ್ತಿವೆ. ಆದರೆ ನ್ಯಾಯಾಲಯಗಳು ಕಾನೂನಿನಡಿಯಲ್ಲಿ ಅದಕ್ಕೆ ಪರಿಹಾರವನ್ನು ಹುಡುಕುವಲ್ಲಿ ಎಡವುತ್ತಿದೆ.

೨೦೦೯ರಲ್ಲಿ ಹರ್ಯಾಣದ ಮಾಜಿ ಉಪಮುಖ್ಯಮಂತ್ರಿ ಚಾಂದರ್ ಮೆಹಾನ್ ಅಧಿಕಾರಕ್ಕಾಗಿ ಚಾಂದ್ ಮಹಮದ್ ಆಗಿ ಬದಲಾದ. ಇದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಕಾನೂನು ಕೂಡಾ ಬಿಟ್ಟ ಕಣ್ಣುಗಳಿಂದ
ಅದನ್ನು ನೋಡಿತು. ಹಾಗಾದರೆ ೨೦೨೦ರಲ್ಲಿ ಉತ್ತರ ಪ್ರದೇಶದ ಪ್ರಿಯಾಂಶು ಮತಾಂತರಗೊಂಡು ಮದುವೆಯಾದದ್ದನ್ನು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದ್ದರಲ್ಲಿ ತಪ್ಪೇನಿದೆ? ನಿಖಿತಾ ತೋಮರ್ ಪ್ರಕರಣವನ್ನೇ ತೆಗೆದುಕೊಳ್ಳಿ. ಮುಸಲ್ಮಾನ ಯುವಕನೊಬ್ಬ ಆಕೆಯನ್ನು ಬಯಸಿ ಸಿಗಲಿಲ್ಲವೆಂಬ ಕಾರಣಕ್ಕೆ ಗುಂಡುಹಾರಿಸಿ ಕೊಂದ. ಈ ಪ್ರಕರಣವನ್ನು ಸಾಮಾನ್ಯ ನಾಗರಿಕ ವಿಶ್ಲೇಷಣೆ ಮಾಡುವುದಕ್ಕೂ, ನ್ಯಾಯಾಲಯ ವಿಶ್ಲೇಷಣೆ ಮಾಡುವುದಕ್ಕೂ ವ್ಯತ್ಯಾಸವಿದೆ. ಏಕೆಂದರೆ ನಿಖಿತಾ ತೋಮರ್‌ನನ್ನು
ಆತ ಕೊಂದಿದ್ದು ಮತಾಂತರಕ್ಕೆ ಒಪ್ಪದ ಕಾರಣಕ್ಕೆ!

ಅಂದರೆ ಮದುವೆ/ಪ್ರೀತಿಯ ಕಾರಣಕ್ಕೆ. ಲವ್ ಜಿಹಾದಿನ ಎಲ್ಲಾ ಪ್ರಕರಣಗಳಲ್ಲಿ ಮತಾಂತರ ಮತ್ತು ಮದುವೆ/ಪ್ರೇಮ ಎನ್ನುವುದು ಒಂದೇ ನಾಣ್ಯದ ಎರಡು ಬದಿಗಳು. ಉಳಿದ ಮತಾಂತರ ಪ್ರಕರಣಗಳಲ್ಲಿ ಕಾನೂನು ಗೊಂದಲಗೊಳ್ಳುವುದಿಲ್ಲ. ಆದರೆ ಪ್ರೇಮ ಮತ್ತು ವಿವಾಹದ ಗುರಾಣಿಯ ಮುಂದೆ ಕಾನೂನು ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇದು ನ್ಯಾಯಾಲಯದ ಮುಂದಿರುವ ಅತೀ ಸೂಕ್ಷ್ಮ ವಿಷಯ. ಅಲಹಾಬಾದ್ ನ್ಯಾಯಾಲಯದ ಹೇಳಿಕೆ ಅದಕ್ಕೆ ತಾಜಾ ಉದಾಹರಣೆ. ಜೊತೆಗೆ ಯಾವ ಮತಾಂತರವನ್ನೂ ನ್ಯಾಯಾಲಯಗಳು ಒರೆಗೆ ಹಚ್ಚಿಯೋ ಅಥವಾ ತೂಕ ಮಾಡಿಯೋ ಪ್ರಮಾಣೀಕರಿಸುವು ದಕ್ಕಾಗದು.

ವಿವಾಹದಂಥ ಪ್ರಕರಣಗಳಲ್ಲಂತೂ ಮತಾಂತರ ಪ್ರಕರಣ ಮತ್ತಷ್ಟು ಗೋಜಲಿನ ಸಂಗತಿ. ಒಂದೋ ಹಿಂದೂ ಯುವತಿಯ ಹೆಸರು ಬದಲಾವಣೆಯಾಗಬಹುದು, ಆದರೆ ಅದನ್ನು ಆಕೆಯ ಪತಿ ವೈಯಕ್ತಿಕ ಹಕ್ಕು ಎಂದು ಸಮರ್ಥಿಸಿಕೊಳ್ಳುತ್ತಾನೆ. ಇನ್ನೊಂದು, ಆಕೆಯ ಹಿಂದಿನ ಆಚರಣೆಗಳೆಲ್ಲವೂ ಬದಲಾಗಿ, ಆಕೆ ಬಹಿರಂಗವಾಗಿ ಮುಸಲ್ಮಾನಳಾಗಬಹುದು. ಅದನ್ನೂ ಆಕೆ ನ್ಯಾಯಾಲಯದ ಮುಂದೆ ಅಲ್ಲಗಳೆಯಬಹುದು ಅಥವಾ ಅದು ತನ್ನ ಸ್ವಂತ ಇಚ್ಛೆಯಿಂದ ಎಂದು ಹೇಳಿಕೆ ನೀಡಬಹುದು. ಹಾಗೆ
ಹೇಳಲು ಆಕೆಗೆ ಒತ್ತಡಗಳೂ ಇರಬಹುದು. ಇವೆಲ್ಲದರ ತಾತ್ಪರ್ಯವೆಂದರೆ ಮತಾಂತರಕ್ಕೆ ಮದುವೆ ಎಂಬುದು ಅತ್ಯಂತ ಸುಲಭ ಮತ್ತು ಸರಳ ಮಾರ್ಗ. ಮದುವೆಯ ಮೂಲಕ ಮತಾಂತರ ನಡೆಸಿ ನ್ಯಾಯಾಲಯದ ಕಣ್ಣಿಗೆ ಮಣ್ಣೆರಚುವುದು ಅತ್ಯಂತ ಸುಲಭ. ಕಾನೂನಿಗೆ ಇವೆಲ್ಲವೂ ತಿಳಿದಿದ್ದರೂ ಅದನ್ನು ಗೊಂದಲಗೊಳಿಸುವ ತಂತ್ರವನ್ನು ಜಿಹಾದಿಗಳು ಅನುಸರಿಸುತ್ತಿದ್ದಾರೆ.

ಉತ್ತರ ಪ್ರದೇಶದ ಫರಿದಾಬಾದ್‌ನ ನಿಖಿತಾ ತೋಮರ್ ಪ್ರಕರಣ ಲವ್ ಜಿಹಾದಿನ ಬಗ್ಗೆ ಅತೀ ಹೆಚ್ಚು ಚರ್ಚೆಯಾದ ಪ್ರಕರಣ. ಆರಂಭದಲ್ಲಿ ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದ ಅಲಹಾಬಾದ್ ಹೈಕೋರ್ಟ್, ಯಾವಾಗ ಉತ್ತರ ಪ್ರದೇಶ ಸರಕಾರ ಇದರ ವಿರುದ್ಧ ಕಾಯ್ದೆ ತರಬೇಕೆಂದು ನಿರ್ಧರಿಸಿದಾಗ ‘ಇದು ಬದುಕುವ ಹಕ್ಕಿನ ಉಲ್ಲಂಘನೆ’ ಎಂದು ಘೋಷಿಸಿದೆ! ಆದರೆ ಯೋಗಿ
ಸರಕಾರ ಸುಗ್ರಿವಾಜ್ಞೆ ಯ ಮೂಲಕ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ.

ನ್ಯಾಯಾಲಯ ಮತ್ತು ಸರಕಾರದ ಈ ಎರಡು ಭಿನ್ನ ನಡೆಗಳ ವಿಶ್ಲೇಷಣೆಯ ಲವ್ ಮತ್ತು ಜಿಹಾದ್ ಎಂಬ ಎರಡು ಪದಗಳ
ಒಳನೋಟ ಅಡಗಿದೆ. ಸರಕಾರ ನಾಣ್ಯದ ಎರಡೂ ಬದಿಗಳನ್ನು ನೋಡಿ ಎಚ್ಚರಿಕೆಯ ಹೆಜ್ಜೆಯಿಟ್ಟಿದೆ. ನ್ಯಾಯಾಲಯ ಪ್ರಕರಣವನ್ನು ಕಾನೂನಿನ ಕಣ್ಣಲ್ಲಿ ನೋಡಿದರೆ ಯೋಗಿ ಸರಕಾರ ಸಮಸ್ಯೆಯನ್ನು ಮತಾಂಧತೆಯ ಕಣ್ಣಲ್ಲಿ ನೋಡುತ್ತದೆ. ಮುಖ್ಯವಾಗಿ ಅದನ್ನು ನೋಡಬೇಕಾದ ದೃಷ್ಟಿ ಅದೆ. ಉ.ಪ್ರದೇಶ ಸರಕಾರ ಈ ಕಾಯ್ದೆಯನ್ನು ಜಾರಿಗೆ ತಂದಿದ್ದೇ ಆದರೆ
ಇದು ಭಾರತೀಯ ಕಾರ್ಯಾಂಗ ಮತ್ತು ನ್ಯಾಯಾಂಗದ ಮಹತ್ವದ ಹೆಜ್ಜೆಯಾಗಲಿದೆ.

ಜೊತೆಗೆ ಎಂದಿನಂತೆ ಸೆಕ್ಯುಲರಿಸ್ಟರ ಆಲಾಪವೂ ಹೆಚ್ಚಾಗಲಿದೆ. ಆದರೆ ಇದರಲ್ಲೇನೂ ವಾಮಮಾರ್ಗ ಇಲ್ಲ. ಏಕೆಂದರೆ
ಶಾ ಬಾನೋ ಪ್ರಕರಣವನ್ನು ದೇಶ ಇನ್ನೂ ಮರೆತಿಲ್ಲ. ಶಾ ಬಾನೋ ಪ್ರಕರಣದಲ್ಲಿ ನಡೆಯಬಹುದಾದರೆ ಲವ್ ಜಿಹಾದ್ ಪ್ರಕರಣದಲ್ಲೂ ಸುಗ್ರಿವಾಜ್ಞೆಯ ಮೂಲಕ ಕಾಯ್ದೆ ಜಾರಿಯಾಗಬಹುದು. ಉತ್ತರ ಪ್ರದೇಶ ಸರಕಾರದ ಈ ನಡೆ ಉಳಿದ ರಾಜ್ಯ ಸರಕಾರಗಳಿಗೂ
ದಾರಿದೀಪವಾಗಲಿ.