Tuesday, 26th November 2024

ಎನ್‌ಎಬಿಎಚ್ ಮಾನ್ಯತೆ ಪಡೆದ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ

ತುಮಕೂರು: ಕಳೆದ 2 ವರ್ಷದಿಂದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ಸುರಕ್ಷಿತ ಚಿಕಿತ್ಸೆ ಹಾಗೂ ಉನ್ನತ ದರ್ಜೆಯ ಸೇವೆಯಲ್ಲಿ ಎನ್‌ಎಬಿಎಚ್ ಮಾನದಂಡವನ್ನು ಪೂರೈಸಿ ರಾಷ್ಟಿçÃಯ ಮಾನ್ಯತೆ ಪಡೆದಿರುವುದು ಸಂತಸವನ್ನು0ಟು ಮಾಡಿದೆ. ಮಾನ್ಯತೆ ಹೊಂದಲು ಶ್ರಮಿಸಿದ ಆಸ್ಪತ್ರೆ ವೃಂದ ಹಾಗೂ ಚಿಕಿತ್ಸೆ ಪಡೆದು ಗುಣಮುಖರಾಗಿ ಉತ್ತಮ ಅಭಿಪ್ರಾಯ ನೀಡಿದ ಪ್ರತಿಯೊಬ್ಬರಿಗೂ ಅಭಿನಂದನೆಗಳು, ಎನ್‌ಎಬಿಎಚ್ ಮಾನ್ಯತೆ ಪಡೆದಿರುವುದರಿಂದ ಚಿಕಿತ್ಸೆ ಮತ್ತು ಸುರಕ್ಷಿತೆ ಇನ್ನುಷ್ಟು ಉತ್ತಮವಾಗಲಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್‌ ರವರು ತಿಳಿಸಿದರು.
ನಗರದ ಶಿರಾರಸ್ತೆಯ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆ ವತಿಯಿಂದ ಎನ್‌ಎಬಿಹೆಚ್ ಮಾನ್ಯತೆಯ ಪ್ರತಿಕಾಗೋಷ್ಠಿಯನ್ನು ಶ್ರೀದೇವಿ ಆಸ್ಪತ್ರೆಯ ಅಡಿಟೋರಿಯಂ ಸಭಾಂಗಣದಲ್ಲಿ ಮೇ.16 ರಂದು ಮಂಗಳವಾರ ಬೆಳಿಗ್ಗೆ 11:30 ಕ್ಕೆ ಪ್ರತಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀದೇವಿ ವೈದ್ಯಕೀಯ ನಿರ್ದೇಶಕರಾದ ಡಾ.ರಮಣ್ ಎಂ ಹುಲಿನಾಯ್ಕರ್‌ರವರು ಮಾತ ನಾಡುತ್ತಾ ಆಸ್ಪತ್ರೆ ಆರಂಭವಾದಾ ಗಿನಿ0ದಲೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ರೋಗಿಗಳಿಗೆ ನೀಡುತ್ತಾ ಬಂದಿದ್ದು, ಪ್ರಾಥಮಿಕ ಹಂತದ ಮಾನ್ಯತೆ ಪಡೆದಿದೆ. ಎನ್‌ಎಬಿ ಎಚ್ ಮಾನ್ಯತೆ ಪಡೆದ ಜಿಲ್ಲೆಯ ಮೊದಲ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ನಮ್ಮದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರೀದೇವಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕರಾದ ಎಂ.ಎಸ್.ಪಾಟೀಲ್‌ರವರು ಮಾತನಾಡುತ್ತಾ ಕಳೆದ ವರ್ಷ ಡಿಸೆಂಬರ್ 15 ರಂದು ಎನ್.ಎ.ಬಿ.ಹೆಚ್. ಮಾನ್ಯತೆಗಾಗಿ ದೆಹಲಿಯಿಂದ ತಂಡ ಬಂದು ಆಸ್ಪತ್ರೆಯಲ್ಲಿ ಪಲಿಶೀಲನೆ ಮಾಡಿ ವರದಿಯನ್ನು ಸಿದ್ದಪಡಿಸಿತ್ತು. ಅದರ ಫಲವಾಗಿ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಉತ್ತಮ ಗುಣಮಟ್ಟ ಮತ್ತು ಸುರಕ್ಷಿತ ಚಿಕಿತ್ಸೆಗಾಗಿ (ಎನ್‌ಎಬಿಎಚ್) ಮಾನ್ಯತೆ ಪಡೆಯಲಾಗಿದೆ ಎಂದು ಸಂತೋಷದಿಂದ ಸಿಬ್ಬಂದಿ ವರ್ಗದವರಿಗೆ ಅಭಿನಂದಿಸಿದರು.
ಈ ಪ್ರತಿಕಾಗೋಷ್ಠಿಯಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ.ಆರ್. ಹುಲಿನಾಯ್ಕರ್, ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕರಾದ ಡಾ.ರಮಣ್ ಹುಲಿನಾಯ್ಕರ್, ಮಾನವ ಸಂಪನ್ಮೂಲ ಮತ್ತು ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಎಂ.ಎಸ್.ಪಾಟೀಲ್, ಟ್ರಸ್ಟಿಯಾದ ಅಂಬಿಕಾ ಎಂ ಹುಲಿನಾಯ್ಕರ್, ನೇತ್ರತಜ್ಞರಾದ ಡಾ.ಲಾವಣ್ಯ, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎಂ.ಎಲ್.ಹರೇ0ದ್ರಕುಮಾರ್, ಶ್ರೀದೇವಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಕೆ.ಮೋಹನ್‌ಕುಮಾರ್, ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಂಶುಪಾಲರಾದ ಡಾ.ರೇಖಾಗುರುಮೂರ್ತಿ, ಶ್ರೀದೇವಿ ಸಂಸ್ಥೆಯ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ಶ್ರೀದೇವಿ ಆಸ್ಪತ್ರೆಯ ಉಪಅಧೀಕ್ಷಕರಾದ ಡಾ.ಚೆನ್ನಮಲ್ಲಯ್ಯ ಮುಂತಾದವರು ಉಪಸ್ಥಿತರಿದ್ದರು.