ತುಮಕೂರು : ಮೂರು ಬಿಟ್ಟವರು ರಾಜ್ಯವನ್ನು ಆಳುತ್ತಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಕಿಡಿಕಾರಿದರು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ನಾವು ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದೇವೆ. ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಹೊಣೆ ನಮ್ಮದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ನಾವು ಅಧಿಕಾರಕ್ಕೆ ಬಂದರೆ ಮದ್ಯ ನಿಷೇಧವಾಗುತ್ತದೆ. ಪೊಲೀಸರು, ಸರಕಾರಿ ನೌಕರರು ನೆಮ್ಮದಿಯಿಂದ ಕೆಲಸ ಮಾಡುವ ವ್ಯವಸ್ಥೆ ತರುತ್ತೇವೆ. ಭ್ರಷ್ಟರು ಪ್ರಾಯಶ್ಚಿತ್ತ ಮಾಡಿಕೊಂಡರೆ ಉಳಿದುಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ರಾಜಕಾರಣ ಎಂದರೆ ಕೆಆರ್‌ಎಸ್ ಎನ್ನುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾವು ಪ್ರವಾಹದ ಎದುರು ಈಜುತ್ತಿದ್ದೇವೆ. ಇಂದು ಆಮಿಷಗಳನ್ನು ನೀಡಿ ರಾಜಕಾರಣ ಮಾಡುತ್ತಿರುವವರ ಮಧ್ಯೆ ನಾವು ಜನರನ್ನು ಪ್ರಾಮಣಿಕವಾಗಿ ಕರೆದುಕೊಂಡು ಬಂದು ರಾಜಕಾರಣ ಮಾಡುತ್ತಿದ್ದೇವೆ. ನನ್ನ ಮೇಲೆ ಹತ್ತು ಕೇಸುಗಳಿವೆ. ದಂಡಿಗೂ ದಾಳಿಗೂ ಎದುರಲಿಲ್ಲ. ಇನ್ಯಾವುದಕ್ಕೆ ಎದುರು ತ್ತೇವೆ. ಧರ್ಮದಿಂದ ನಡೆದುಕೊಂಡಿ ದ್ದೇವೆ. ವಿರೋಧಿಗಳು ನಮ್ಮನ್ನು ಅಣಿಯಲು ಪ್ರಯಸುತ್ತಿದ್ದಾರೆ. ಅವರ ವಿರುದ್ಧ ಚುನಾವಣೆಯಲ್ಲಿ ಯೋಗ್ಯರನ್ನು ನಿಲ್ಲಿಸುತ್ತೇವೆ ಎಂದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ ಮಾತನಾಡಿ, ಪ್ರತಿಯೊಬ್ಬರಿಗೂ ಉದ್ಯೋಗ ಖಾತ್ರಿಯನ್ನು ಕೆಆರ್‌ಎಸ್ ಪಕ್ಷ ಘೋಸಿದೆ. ಕನ್ನಡ ನಾಡಿನಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾಗರೀಕತೆ ಬೆಳೆಯುತ್ತಾ ಉಳ್ಳವರು ಸುಳ್ಳು ಮೋಸ ಗಳನ್ನು ಕಲಿತಿದ್ದದು, ಭ್ರಷ್ಟ ಜೆಸಿಬಿ ಪಕ್ಷಗಳು ಲೂಟಿ ಮಾಡುತ್ತಿವೆ ಎಂದರು.
ರಾಷ್ಟ ಸಮಿತಿ ಪಕ್ಷದ ಉಪಾಧ್ಯಕ್ಷ ಲಿಂಗೇಗೌಡ ಮಾತನಾಡಿ, ಜೆಸಿಬಿ ಪಕ್ಷಗಳು ಸಂಪೂರ್ಣವಾಗಿ ಸಮಾಜವನ್ನು ಒಡೆದು, ರಾಜ್ಯವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿವೆ ಮತ್ತು ಅವರು ಪ್ರತಿನಿತ್ಯವೂ ಹಣ, ಹೆಂಡ, ಸೀರೆ ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ಪಕ್ಷಗಳಿಗೆ ರಾಜ್ಯವನ್ನು ಸಮಗ್ರವಾಗಿ ಕಟ್ಟುವ, ಜನರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಮುನ್ನೆಡೆಸುವ ಯೋಜನೆಯಾಗಲಿ ಅಥವಾ ಬದ್ಧತೆಯಾಗಲಿ ಇಲ್ಲವೇ ಇಲ್ಲ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ದೀಪಕ್ ಸಿಎನ್, ಮಲ್ಲಿಕರ್ಜುನ್ ಭಟ್ಟರಹಳ್ಳಿ, ಪ್ರಸನ್ನ ಬಿ.ಕೆ, ವಿಜಯ್ ಕುಮಾರ್, ಮೂರ್ತಿ, ಮಂಜುನಾಥ್ ರಾಜ್ಯಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಜಿಲ್ಲೆಯ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ
ತುಮಕುರು ನಗರ-ಗಜೇಂದ್ರ ಕುಮಾರ್ ಗೌಡ,
ತಮಕೂರು ಗ್ರಾಂ – ಆನಂದ್ ವಿ.ಎ
ತುರುವೇಕೆರೆ- ರಾಮ್ ಪ್ರಸಾದ್
ತಿಪಟೂರು- ಗಂಗಾಧರ ಕರಿಕೆರೆ
ಚಿ.ನಾಹಳ್ಳಿ- ಮಲ್ಲಿಕಾರ್ಜುನ್ ಭಟ್ಟರಹಳ್ಳಿ
ಕುಣಿಗಲ್- ರಘು ಜಾಣಗೆರೆ
ಶಿರಾ- ಪ್ರದೀಪ್ ಕುಮಾರ್
ಪಾವಗಡ – ಗೋವಿಂದಪ್ಪ
ಕೊರಟಗೆರೆ- ರವಿಕುಮಾರ್
ಮಧುಗಿರಿ- ಜಯಂತ್
ಗುಬ್ಬಿ- ಪ್ರವೀಣ್ ಕುಮಾರ್