ಪ್ರಚಲಿತ
ಸಿದ್ದಾರ್ಥ ವಾಡೆನ್ನವರ, ಲೇಖಕರು
ಬಿಕ್ಕಟ್ಟು ಹೇಗೆ ಸೃಷ್ಠಿಯಾಗುತ್ತದೆ? ಅದು ಪೂರ್ವ ನಿದರ್ಶನವಿಲ್ಲದೆ ಸೃಷ್ಟಿಯಾಗುತ್ತದೆ. ಅದು ಯಾವ ರೀತಿಯಲ್ಲಿ ಸೃಷ್ಟಿ ಯಾಗುತ್ತದೆ? ಅಸಾಧಾರಣ ರೀತಿಯಲ್ಲಿ ಸೃಷ್ಟಿಯಾಗುತ್ತದೆ. ಆ ಬಿಕ್ಕಟ್ಟಿನ ಪರಿಹಾರಕ್ಕೆ ಸಲಹೆಗಳು ಇಲ್ಲವೇ? ಜಗತ್ತಿನಲ್ಲಿ ಏನೇನೋ ಆಗುತ್ತಿದೆ, ಮನುಷ್ಯ ತನ್ನ ಹುಟ್ಟಿನ ಉದ್ದೇಶ ಮರೆತಿದ್ದಾನೆ. ಪ್ರಪಂಚದಾದ್ಯಂತ ಪೂರ್ವ ನಿದರ್ಶನವಿಲ್ಲದೆ ಬಿಕ್ಕಟ್ಟು ಅಲ್ಲಲ್ಲಿ ಸೃಷ್ಟಿಯಾಗುತ್ತಲೇ ಇದೆ.
ಅದು ಮನುಕುಲದ ಉದ್ಧಾರ ಮಾಡುವುದಿಲ್ಲ. ಆ ನಂಬಿಕೆ ನನ್ನಲ್ಲಿದೆ. ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ರಾಜಕೀಯ, ನೈಸರ್ಗಿಕ ಬಿಕ್ಕಟ್ಟುಗಳು ಸಂಭವಿಸುತ್ತಲೇ ಇವೆ. ವಿವಿಧ ಅವಽಗಳಲ್ಲಿ ವಿವಿಧ ರೀತಿಯ ಬಿಕ್ಕಟ್ಟುಗಳು ಸಂಭವಿಸಿವೆ ಮತ್ತು ಸಂಭವಿಸುತ್ತಲಿವೆ. ಹಿಂದೂಗಳಿಗೆ ಇಸ್ಲಾಮಿಕ್ ದೇಶಗಳಲ್ಲಿ ನೆಲೆ ಇಲ್ಲ. ಮುಸ್ಲಿಮರಿಗೆ ಕಮ್ಯೂನಿಸ್ಟ್ ದೇಶಗಳಲ್ಲಿ ನೆಲೆ ಇಲ್ಲ.
ಕರಿಯರಿಗೆ ಬಿಳಿಯರ ಮಧ್ಯೆ ಬದುಕಲು ಆಗುತ್ತಿಲ್ಲ.
ಈ ಬಿಕ್ಕಟ್ಟುಗಳಿಗೆ ಏನು ಕಾರಣ? ಅದೇ ‘ಬಲವಾದ ನಂಬಿಕೆ’ ಈ ಬಲವಾದ ನಂಬಿಕೆಗಳು ಶಾಂತಿಯ ಜತೆ ಜನಗಳ ಮಧ್ಯೆ ಬೇಧವನ್ನು ತಂದಿವೆ ಮತ್ತು ತರುತ್ತಿವೆ. ಕೆಲವು ಬಿಕ್ಕಟ್ಟುಗಳು ಬಂದು ಹೋಗುತ್ತವೆ. ಆರ್ಥಿಕ ಹಿಂಜರಿತಗಳು, ರಾಜಕೀಯ ಏರಿಳಿತ, ನೈಸರ್ಗಿಕ ಅವಘಡ ಇವು ಬರುತ್ತವೆ ಮತ್ತು ಹೋಗುತ್ತವೆ. ಆದರೆ ಧಾರ್ಮಿಕ ಮತ್ತು ಸಾಮಾಜಿಕ ಬಿಕ್ಕಟ್ಟುಗಳು ಬಂದರೆ ಅವು ಹೋಗುವುದಿಲ್ಲ. ಹಲವು ಶತಮಾನಗಳಿಂದ ಜನಗಳ ಮಧ್ಯೆ ಬೇಧ ತಂದಿವೆ, ಮುಂದೆಯೂ ಹಲವು ಶತಮಾನಗಳವರೆಗೆ ಬೇಧ ತರಲಿವೆ. ಬಲವಾದ ನಂಬಿಕೆಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ, ಅವುಗಳನ್ನೇ ಬೇರೆ ರೂಪದಲ್ಲಿ ಮುಂದುವರೆಸಿ ಕೊಂಡು ಹೋಗುತ್ತಿದ್ದೇವೆ.
ಅದರಲ್ಲಿಯೇ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದೇವೆ. ಆದರೂ ಅದರ ಮೂಲರೂಪ ಬದಲಾಗುತ್ತಿಲ್ಲ. ನಾವೆಲ್ಲಾ ಧರ್ಮಾ
ಧಾರಿತ ಜೀವನದ ಬದಲಾಗಿ ಆಧ್ಯಾತ್ಮ ಆಧಾರಿತ ಜೀವನ ಶೈಲಿಯಲ್ಲಿ ಬದುಕಿದರೆ ಸೃಷ್ಟಿಯಾಗುವ ಎಲ್ಲಾ ಬಿಕ್ಕಟ್ಟುಗಳಿಗೆ ಪರಿಹಾರ ಸಿಗುತ್ತದೆ. ಇದು ನನಗೆ ತಿಳಿದಿದೆ, ಈ ಪ್ರಕ್ರಿಯೆಯ ಪರಿಚಯ ನಿಮಗೂ ತಿಳಿಯಬೇಕಾಗಿದೆ. ನೀವು ಇಂದೇ ನಿರ್ಧರಿಸ ಕು,
ನಾನು ಬದಲಾಗಬೇಕು ಅದು ನನ್ನ ಅಂತರಂಗದ ಮನಸ್ಸಿನಿಂದಲೇ! ಇದನ್ನು ಪ್ರಮಾಣ ಮಾಡಬೇಕು.
ಹೀಗಾದಲ್ಲಿ ಶತ-ಶತಮಾನಗಳಿಂದ ಸೃಷ್ಟಿಯಾದ ಕೆಲವು ಬಿಕ್ಕಟ್ಟುಗಳಿಗೆ ಪರಿಹಾರ ಸಿಗುತ್ತದೆ. ಖಂಡಿತವಾಗಿಯೂ ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಇದೆ. ಅದು ನಿಮ್ಮಿಂದ ಮಾತ್ರ! ಸಮಾಜದಿಂದ ಮತ್ತು ಸಂಘಟನೆಗಳಿಂದ ಅದು ಸಾಧ್ಯವಿಲ್ಲ. ಮೊದಲು ವಿಭಿನ್ನವಾಗಿತ್ತು, ಇಂದು ಸ್ವಲ್ಪ ಮಟ್ಟಿಗೆ ಬದಲಾವಣೆ ಪಡೆದುಕೊಂಡಿದೆ. ನಾವು ಕೆಲವು ವಿಚಾರಗಳಲ್ಲಿ ಜಗಳವಾಡುತ್ತೇವೆ,
ಕೆಲವರು ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಕೆಲವರು ಕೊಲೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ.
ಪ್ರಪಂಚದ ಕೆಲವು ಕಡೆ ಧರ್ಮಾದಾರಿತ ಕೊಲೆ ನಡೆಯುತ್ತಿದೆ. ಅಲ್ಲಿ ಕೊಲೆಯನ್ನು ನ್ಯಾಯಯುತ ಎಂದೂ ಮತ್ತು ಪ್ರಗತಿಯ ಸಾಧನವೆಂದು ಸಮರ್ಥಿಸಿಕೊಳ್ಳುತ್ತಾರೆ. ಮನುಷ್ಯರ ಮನಸ್ಸುಗಳನ್ನು ಬದಲಾಯಿಸಲು ಖಡ್ಗ ಬೇಕಾಗಿಲ್ಲ, ಪ್ರೀತಿ ಇದ್ದರೆ ಸಾಕು.
ಬಿಕ್ಕಟ್ಟುಗಳಿಗೆ ಪ್ರೀತಿಯಿಂದ ಪರಿಹಾರ ಕಂಡುಕೊಳ್ಳಬೇಕು, ಇದು ಸಂತರ ಉತ್ತರ. ಈ ಉತ್ತರವೇ ಸರಿಯಾದ ಉತ್ತರ. ಇದೇ ಕಾರಣಕ್ಕಾಗಿ ಹೆಚ್ಚು ಹೆಚ್ಚು ಶಾಂತಿಯ ಸಭೆಗಳು ಜಗತ್ತಿನಾದ್ಯಂತ ನಡೆಯುತ್ತಿವೆ.
ಮೊದಮೊದಲು ಕೆಟ್ಟದ್ದನ್ನು ದುಷ್ಟ ಎಂದು ಗುರುತಿಸಲಾಯಿತು, ಕೊಲೆಯನ್ನು ದುಷ್ಟ ಎಂದು ಗುರುತಿಸಲಾಯಿತು. ನಂತರ ಅದೇ ಕೊಲೆಯನ್ನು ಒಂದು ಉದಾತ್ತ ಫಲಿತಾಂಶವನ್ನು ಸಾಧಿಸುವ ಸಾಧನ ಎಂದು ಗುರುತಿಸಲಾಯಿತು. ಮುಂದೆ ಅದು ಆಗ ಬಾರದೆಂದು ಶಾಂತಿ ಸಭೆಗಳು ಪ್ರಾರಂಭವಾದವು. ಅದರ ಪರಿಣಾಮವೇ ಇಂದು ೧೯೫ ದೇಶಗಳು ಅಸ್ಥಿತ್ವಕ್ಕೆ ಬಂದಿವೆ. ಬಹುತೇಕ ರಾಷ್ಟ್ರಗಳು ಪ್ರಜಾಪ್ರಭುತ್ವ ಸಿದ್ಧಾಂತವನ್ನು ಹೊಂದಿವೆ. ಇನ್ನೂ ಕೆಲವು ಬದಲಾವಣೆ ಆಗಬೇಕಿದೆ.
ಧರ್ಮಾಧಾರಿತ ಸಿದ್ಧಾಂತವನ್ನು ಯಾವ ದೇಶವೂ ಹೊಂದಬಾರದು. ಹಾಗೊಂದು ವೇಳೆ ಹೊಂದಿದರೆ ಮತ್ತೊಂದು ಬಿಕ್ಕಟ್ಟು ಸೃಷ್ಟಿಯಾಗುತ್ತದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಇದೇ ಆಗಿದೆ. ಕೆಲವು ಜಿಹಾದಿಗಳು ತಮ್ಮ ಮುಂದಿನ ಜನ್ಮದ ಭವಿಷ್ಯ ಕ್ಕಾಗಿ ಮತ್ತು ತಾವು ನಂಬಿರುವ ಧರ್ಮದ ಭವಿಷ್ಯಕ್ಕಾಗಿ ತಮ್ಮ ವರ್ತಮಾನವನ್ನು ತ್ಯಾಗ ಮಾಡುತ್ತಿದ್ದಾರೆ. ಅವರ ಘೋಷಿತ ಉದ್ದೇಶವು ಮನುಷ್ಯನಿಗೆ ಪ್ರಯೋಜನಕಾರಿ ಆಗುತ್ತಿಲ್ಲ. ಅವರು ಹೇಳುತ್ತಾರೆ, ಫಲಿತಾಂಶವನ್ನು ಪಡೆಯಲು ನಮ್ಮ ಸಾಮರ್ಥ್ಯ ವನ್ನು ನಾವು ಬಳಸಿಕೊಳ್ಳುತ್ತಿದ್ದೇವೆ. ಅದೇ ಅವರಿಗೆ ಮುಖ್ಯವಾಗಿದೆ.
ಇದರ ಅರ್ಥವೇನೆಂದರೆ, ತಪ್ಪು ವಿಧಾನವು ಸರಿಯಾದ ಅಂತ್ಯವನ್ನು ನೀಡುತ್ತದೆ ಎಂಬುದೇ ಅವರ ಸಿದ್ಧಾಂತ. ಇಲ್ಲಿ ಮಾನವೀ ಯತೆಗೆ ಬೆಲೆ ಇಲ್ಲ. ತಮ್ಮದೇ ಆದ ಸಿದ್ಧಾಂತ ರೂಪಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಆದರ್ಶವಲ್ಲದ ತಪ್ಪು ವಿಧಾನಗಳನ್ನು ಅವರು ಪ್ರದರ್ಶಿಸುವುದು ಸರಿಯಲ್ಲ. ಈ ಮೊದಲು ಸಂಭವಿಸಿದ ವಿವಿಧ ಬಿಕ್ಕಟ್ಟುಗಳಲ್ಲಿ ವಸ್ತುಗಳು ಅಥವಾ ಮನುಷ್ಯರ
ಶೋಷಣೆಯಾಗಿದೆ. ಈಗ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ಹೆಚ್ಚು ವಿನಾಶಕಾರಿ, ಹೆಚ್ಚು ಅಪಾಯಕಾರಿ ಮೂಲಭೂತವಾದಗಳ ಚಿಂತನೆ ತುಂಬಾ ಅಪಾಯ.
ನಾನು ಹೇಳುತ್ತೇನೆ ವಿನಾಶಕಾರಿಯತ್ತ ನಾವು ಮತ್ತೆ ಮತ್ತೆ ಸಾಗುವುದು ಬೇಡಾ. ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳ ಬೇಕಾಗಿದೆ. ಜಗತ್ತಿನ ಇನ್ನೂ ಕೆಲ ಭಾಗಗಳಲ್ಲಿ ಬದಲಾವಣೆ ಆಗಬೇಕಿದೆ. ನಾವೆಲ್ಲಾ ಈಗ ಪ್ರಚಾರದ ಶಕ್ತಿಯನ್ನು ಕಲಿತಿದ್ದೇವೆ.
ಸಂಭವಿಸಬಹುದಾದ ದೊಡ್ಡ ವಿಪತ್ತುಗಳಲ್ಲಿ ಒಂದಾಗುತ್ತಿದ್ದೇವೆ. ಮನುಷ್ಯನನ್ನು ಪರಿವರ್ತಿಸಲು ಹಲವು ವಿಚಾರಗಳು ಅಸ್ಥಿತ್ವಕ್ಕೆ ಬರುತ್ತಿವೆ. ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಜಗತ್ತಿನಲ್ಲಿ ಅದು ಹೆಚ್ಚಿನ ಪ್ರಮಾಣದಲ್ಲಿ ನಡೆಯಬೇಕಿದೆ. ಇಲ್ಲಿ ಮನುಷ್ಯ ಮುಖ್ಯವಲ್ಲ, ಆತನ ಚಿಂತನೆಗಳು, ವ್ಯವಸ್ಥೆಗಳು, ಆಲೋಚನೆಗಳು ಮುಖ್ಯವಾಗಿವೆ.
ಅವು ಧನಾತ್ಮಕವಾಗಿರಬೇಕು ಅಷ್ಟೆ, ಅವು ಮಾನವೀಯತೆಯನ್ನು ಪ್ರದರ್ಶಿಸುತ್ತಿರಬೇಕು ಅಷ್ಟೇ, ಅವು ಆಧ್ಯಾತ್ಮ ಪ್ರೇರಿತ
ಆಗಿರಬೇಕು. ಇದು ನನ್ನ ಬಲವಾದ ನಂಬಿಕೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ! ಮನುಷ್ಯನಿಗೆ ಇನ್ನು ಮುಂದೆ ಯಾವುದೇ ಮಹತ್ವವಿಲ್ಲ ಎಂದು ಪರಿಗಣಿಸಬೇಡಿ. ಬರುವ ಜನಾಂಗ ಉತ್ತಮ ಮಾರ್ಗ ಕಂಡುಕೊಳ್ಳಬೇಕಾಗಿದೆ.
ಆಧ್ಯಾತ್ಮಿಕ ಚಿಂತನೆಗಳ ಮೇಲೆ ರೂಪಿತವಾದರೆ, ನಾವು ಸ್ವರ್ಗದತ್ತ ಹೆಜ್ಜೆ ಇಡುತ್ತಿದ್ದೇವೆ ಎಂದರ್ಥ.
ಸಿದ್ಧಾಂತ ಮತ್ತು ಚಿಂತನೆಗಳಿಂದ ನಾವು ಲಕ್ಷಾಂತರ ಜನರನ್ನು ನಾಶಪಡಿಸಬಹುದು ಮತ್ತು ಅದೇ ಸಿದ್ದಾಂತ ಚಿಂತನೆಗಳಿಂದ ನಾವು ಲಕ್ಷಾಂತರ ಜನರಿಗೆ ಸ್ವರ್ಗವನ್ನು ಸೃಷ್ಟಿಸಿಕೊಡಬಹುದು. ಆಲೋಚನೆಗಳಿಂದ ನಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳ ಬಹುದು. ಆ ಕಾರ್ಯ ಮಾನವೀಯತೆಯನ್ನು ಪ್ರದರ್ಶಿಸುತ್ತದೆಯೇ ಎಂಬುದನ್ನು ಗುರುತಿಸುವ ಕೆಲಸ ಆಗಬೇಕು.
ಮೊದಲಿನಿಂದಲೂ ಆಗುತ್ತಿದೆ ಆದರೆ ಅವುಗಳಿಗೆ ಪ್ರಚಾರ ಸಿಗುತ್ತಿಲ್ಲ. ಇನ್ನು ಮುಂದೆಯೂ ಮಾನವೀಯತೆ ಕಾರ್ಯಗಳಿಗೆ ಪ್ರಚಾರ ಸಿಗಲಿ. ಅಂತಹ ಒಂದು ವ್ಯವಸ್ಥೆಯನ್ನು ನಾವೆಲ್ಲಾ ನಿರ್ಮಿಸಿಕೊಳ್ಳಬೇಕಿದೆ. ಯುದ್ಧವು ಶಾಂತಿಯ ಸಾಧನವಲ್ಲ. ಅದು
ಬೇಧವನ್ನು ಉಂಟು ಮಾಡುತ್ತದೆ. ಯುದ್ಧವು ಹೆಚ್ಚು ಪರಿಣಾಮಕಾರಿ ಅಲ್ಲದ ವಿಧಾನ. ಈ ವಿಷಯ ಎಲ್ಲರಿಗೂ ಗೊತ್ತಾದ ಮೇಲೆ ಜಗತ್ತು ಶಾಂತಿಯ ಮಾರ್ಗ ಹಿಡಿಯಿತು. ಎರಡು ಮಹಾಯುದ್ದಗಳನ್ನು ಅನುಭವಿಸಿದ ತರುವಾಯ ಅದರ ಬಗ್ಗೆ ಚಿಂತಿಸಿ ಶಾಂತಿ
ಸಭೆಗಳು ಪ್ರಾರಂಭ ಆದವು. ಆದರೂ ಇನ್ನೂ ಪರಿಪೂರ್ಣವಾಗಿ ಯಶಸ್ವಿಯಾಗಿಲ್ಲ. ಬಿಕ್ಕಟ್ಟಿಗೆ ಪರಿಹಾರ ಹುಡುಕಲು ಪ್ರಯತ್ನಿಸಿ ದಾಗ ನಮಗೆ ಪ್ರಯೋಜನಗಳು ಖಂಡಿತ ಸಿಗುತ್ತವೆ. ಈ ಮಧ್ಯೆ ಐಸಿಸ್ ನಂತಹ ಗುಂಪುಗಳು ರೂಪಗೊಳ್ಳುತ್ತಿವೆ.
ಜಗತ್ತಿನ ನಾಯಕರು ಈ ವಿಷಯದಲ್ಲಿ ಒಂದಾಗಬೇಕಿದೆ. ಇಲ್ಲದೇ ಹೋದರೆ ಈ ಭೂಮಿಯ ಮೇಲೆ ಮನುಷ್ಯನಿಗೆ ಶಾಂತಿ ಸಿಗುವು
ದಿಲ್ಲ. ಐಸಿಸ್ನ ಕೆಟ್ಟ ಗಾಳಿ ನಮ್ಮ ದೇಶದ ಮೇಲೆಯೂ ಬೀಳುತ್ತದೆ. ಕೆಲವೊಮ್ಮೆ ಶಾಂತಿಯನ್ನು ಅಸ್ಥಿತ್ವಕ್ಕೆ ತರಲು ಯುದ್ಧವನ್ನು ಭೌದ್ದಿಕವಾಗಿ ಸಮರ್ಥಿಸಲಾಗುತ್ತದೆ. ಆದರೂ ಅದರ ಬದಲಾಗಿ ಯುದ್ಧವೇ ಆಗದಂತೆ ಸಂದರ್ಭ ನಿರ್ಮಿಸಬೇಕಿದೆ. ವಾಸ್ತವ ಚಿಂತನೆಗಳು ಅಸ್ಥಿತ್ವಕ್ಕೆ ಬರಬೇಕಿದೆ. ಮಾನವನ ಜೀವನದಲ್ಲಿ ಬುದ್ಧಿಶಕ್ತಿ ಮೇಲುಗೈ ಸಾಽಸಿದಾಗ, ನಾವೆಲ್ಲಾ ಅಭೂತಪೂರ್ವ ಯಶಸನ್ನು ಕಂಡುಕೊಳ್ಳುತ್ತೇವೆ.
ಬಹುತೇಕ ಬಿಕ್ಕಟ್ಟುಗಳನ್ನು ಈ ಮನುಷ್ಯ ತನ್ನ ಮನಸ್ಸಿನಿಂದ ಅಥವಾ ತನ್ನ ಕೈಯಿಂದ ಮಾಡುತ್ತಿದ್ದಾನೆ. ಇದರ ಅರ್ಥ ನಮ್ಮದು ಸ್ವಯಂಕೃತ ಅಪರಾಧ! ಇದರ ಬಗ್ಗೆ ಒಂದು ಚಿಂತನೆಯನ್ನು ನಾನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ. ನೂರು ವರ್ಷಗಳ ಹಿಂದೆ ಇಬ್ಬರು ಸಹೋದರರು ಇದ್ದರು. ಅವರು ಬೇಳೆ-ಕಾಳುಗಳ ವ್ಯಾಪಾರ ಮಾಡುತ್ತಿದ್ದರು. ಪ್ರತಿದಿನ ಊರೂರಿಗೆ ಹೋಗಿ ಮಾರಾಟ ಮಾಡುತ್ತಿದ್ದರು. ಆಯಾ ಊರಿನ ಸಂತೆಗಳಿಗೆ ಹೋಗಿ ಕಾಳು ವ್ಯಾಪಾರ ಮಾಡುತ್ತಿದ್ದರು.
ವ್ಯಾಪಾರದ ಉದ್ದೇಶದಿಂದ ಒಂದು ದಿನ ಒಂದು ಊರಿಗೆ ಹೋಗುತ್ತಾರೆ. ತಮ್ಮ ಎಲ್ಲಾ ವಸ್ತುಗಳನ್ನು ಕತ್ತೆಗಳ ಮೇಲೆ ಹೊರಸಿ ಆ ಊರಿನ ಸಂತೆಗೆ ಹೋಗುತ್ತಾರೆ. ಅವರ ಅದೃಷ್ಟವೋ ಏನೋ ವ್ಯಾಪಾರ ಚೆನ್ನಾಗಿ ಆಗುತ್ತದೆ. ತಮ್ಮಲ್ಲಿರುವ ಎಲ್ಲಾ ಬೇಳೆ-ಕಾಳು ಗಳನ್ನು ವ್ಯಾಪಾರ ಮಾಡುತ್ತಾರೆ. ಅವರಿಗೆ ತುಂಬಾ ಸಂತೋಷವಾಗುತ್ತದೆ. ಆ ವಸ್ತುಗಳ ಮಾರಾಟದಿಂದ ತುಂಬಾ ಲಾಭ ಬರುತ್ತದೆ. ಇಂದಿನ ಹಾಗೆ ಅಂದು ಗರಿಗರಿ ನೋಟುಗಳು ಇರಲಿಲ್ಲ, ಅಂದು ಮಾರುಕಟ್ಟೆಗಳಲ್ಲಿ ನಾಣ್ಯಗಳು ಮಾತ್ರ ಚಲಾವಣೆ
ಯಲ್ಲಿ ಇದ್ದವು.
ಎಲ್ಲಾ ಲಾಭವನ್ನು ಎರಡು ಭಾಗ ಮಾಡಿ ಸಹೋದರರು ಹಂಚಿಕೊಳ್ಳುತ್ತಾರೆ. ಮನೆಗೆ ಹೋಗುವ ತಯಾರಿ ಮಾಡಿಕೊಳ್ಳುತ್ತಾರೆ. ದಿನವೆಲ್ಲಾ ವ್ಯಾಪರ ಮಾಡಿ ಸುಸ್ತಾಗಿರುತ್ತಾರೆ. ಮದ್ಯಾಹ್ನದ ಊಟವನ್ನೂ ಮಾಡಿರುವುದಿಲ್ಲ. ನಡುರಸ್ತೆಯಲ್ಲಿ ಒಂದು ಗಿಡದ ಕೆಳಗೆ ಕುಳಿತು ಊಟ ಸೇವಿಸುತ್ತಾರೆ. ಅದೇ ಸಮಯದಲ್ಲಿ ತಮ್ಮ ಜತೆ ಇದ್ದಂತಹ ಕತ್ತೆಗಳನ್ನು ಗದ್ದೆಗಳಿಗೆ ಬಿಡುತ್ತಾರೆ. ಆ ಕತ್ತೆಗಳು ಆಹಾರ ಸೇವಿಸಲಿ, ಹುಲ್ಲು ಮೇಯಲಿ ಎನ್ನುವುದಾಗಿರುತ್ತದೆ. ಊಟ ಮುಗಿದ ಮೇಲೆ ವಿಶ್ರಾಂತಿ ಪಡೆಯುವ ಬಯಕೆಯಾಗಿ
ಇಬ್ಬರೂ ಸಹೋದರರು ಮರದ ಕೆಳಗೆ ಮಲಗುತ್ತಾರೆ.
ಅದೇ ಸಮಯದಲ್ಲಿ ಕತ್ತೆಗಳು ಹುಲ್ಲನ್ನು ಮೇಯುತ್ತಿರುತ್ತವೆ. ಹಿರಿಯ ಸಹೋದರ ನಿದ್ರೆಗೆ ಜಾರುತ್ತಾನೆ. ಕಿರಿಯ ಸಹೋದರನಿಗೆ ನಿದ್ರೆ ಬಂದಿರುವುದಿಲ್ಲ. ಕಿರಿಯ ಸಹೋದರನ ಮನದಲ್ಲಿ ಒಂದು ಯೋಚನೆ ಬರುತ್ತದೆ, ‘ನನ್ನ ಸಹೋದರ ನಿದ್ರೆಗೆ ಜಾರಿದ್ದಾನೆ,
ಇದೇ ಸೂಕ್ತ ಸಮಯ ಅವನ ಹತ್ತಿರ ಇರುವ ಹಣದ ಚೀಲದಿಂದ ಒಂದಷ್ಟು ಹಣ ಕಳ್ಳತನ ಮಾಡಬಹುದು.’ ಹೀಗೆ ಯೋಚಿಸಿ ಹಿರಿಯ ಸಹೋದರನ ಹಣದ ಚೀಲಕ್ಕೆ ನಿಧಾನವಾಗಿ ಕೈ ಹಾಕುತ್ತಾನೆ.
ಅಷ್ಟರಲ್ಲಿಯೇ ಹಿರಿಯ ಸಹೋದರನಿಗೆ ಎಚ್ಚರವಾಗುತ್ತದೆ. ‘ಏ.. ಏನೋ ಏನ್ ಮಾಡುತ್ತಿದ್ದಿಯಾ, ನನ್ನ ಹಣ
ದೋಚುತ್ತಿದ್ದೀಯಾ?’ ಹೀಗೆ ತನ್ನ ಹಣವನ್ನು ಕಳುವು ಮಾಡಲು ಯತ್ನಿಸಿದ ತಮ್ಮನ ಜತೆ ಜಗಳ ಮಾಡುತ್ತಾನೆ. ಇಬ್ಬರ ಮಧ್ಯ ಜಗಳ ಅತಿರೇಕಕ್ಕೆ ಹೋಗುತ್ತದೆ. ಒಬ್ಬರಿಗೊಬ್ಬರು ಕ್ರೂರತೆಯಿಂದ ಹೊಡೆದಾಡಿಕೊಳ್ಳುತ್ತಾರೆ. ಕೊನೆಗೆ ಕೆಲ ಸಮಯದ ನಂತರ ಇಬ್ಬರೂ ಸತ್ತು ಬೀಳುತ್ತಾರೆ.
ಆ ಮರದ ಮೇಲೆ ಒಂದು ಗಿಳಿ ಕುಳಿತಿತ್ತು. ಕತ್ತೆಗಳು ಹುಲ್ಲು ಮೇಯುತ್ತಿದ್ದವು ಅಣ್ಣತಮ್ಮಂದಿರ ಮಧ್ಯೆ ನಡೆದ ಎಲ್ಲಾ ವಿಷಯಗಳನ್ನು ಆ ಗಿಳಿ ಕೇಳುತ್ತಾ ಕುಳಿತಿತ್ತು. ಸಹೋದರರ ಜಗಳ ನೋಡಿದ ಗಿಳಿ ಗಿಡದಿಂದ ಹಾರಿ ಕತ್ತೆಗಳು ಇರುವೆಡೆಗೆ ಹೋಗುತ್ತದೆ. ಆ ಗಿಳಿ ಆ ಕತ್ತೆಗಳಿಗೆ ಒಂದು ಪ್ರಶ್ನೆ ಕೇಳುತ್ತದೆ, ‘ಈ ಜಗತ್ತಿನಲ್ಲಿ ನೀವು ಅತೀ ದಡ್ಡರಲ್ಲವೇ?’ ಕತ್ತೆಗಳ ಉತ್ತರ, ‘ಹೌದು ನಮ್ಮದು ದುರಾದೃಷ್ಟ, ನಾವು ಹೀಗೇ ಬದುಕಬೇಕೆಂದು ಆ ವಿಧಿನಿಯಮ ಇದೆ’ ಗಿಳಿ ಮುಂದುವರೆದು, ‘ಅಲ್ಲಾ ನಿಮ್ಮ ಮಾಲೀಕರು ಊಟ ಮಾಡಿ ಮಲಗಿದಾಗ ನೀವು ಎಲ್ಲಾದರೂ ಓಡಿ ಹೋಗಿ ಸ್ವತಂತ್ರವಾಗಿ ಬದುಕಬಹುದಿತ್ತಲ್ಲವೇ?’ ಕತ್ತೆಗಳ ಉತ್ತರ, ‘ನಾವು ಅಷ್ಟೊಂದು ಜಾಣರಲ್ಲ’ ಗಿಳಿ ಮುಂದುವರೆದು ‘ಹೋಗಲಿ ಬಿಡಿ, ನಿಮ್ಮ ಮಾಲೀಕರಾದ ಆ ಮನುಷ್ಯರು ತಮ್ಮ-ತಮ್ಮಲ್ಲಿ ಹಣಕ್ಕಾಗಿ ಜಗಳ ಮಾಡಿಕೊಂಡು ಹೊಡೆದಾಡಿ ಸತ್ತು ಬಿದ್ದಿದ್ದಾರೆ ಅದು ನಿಮಗೆ ಕಾಣಿಸುತ್ತಿಲ್ಲವೇ? ಕತ್ತೆಗಳ ಉತ್ತರ ‘ಹೌದು ಕಾಣಿಸುತ್ತಿದೆ, ನಾವೇನು ಮಾಡಲು ಸಾಧ್ಯ ಹೇಳಿ?’ ‘ಅಲ್ಲಾ ಅವರು ನಿಮ್ಮ ಮಾಲೀಕರು, ನೀವು ಏನಾದರೂ ಮಾಡ
ಬೇಕಲ್ಲವೇ” ಈ ಪ್ರಶ್ನೆಯನ್ನು ಗಿಳಿ ಕೇಳಿದಾಗ, ಕತ್ತೆಗಳು ಹೇಳುತ್ತವೆ ‘ನಾವು ದಡ್ಡರು, ಅವರು ಅತೀ ಬುದ್ದಿವಂತರು’.
ಯೋಚನೆ ಮಾಡಿ ಯಾರು ದಡ್ಡರು? ಕತ್ತೆಗಳಾ ಅಥವಾ ಮನುಷ್ಯರಾ? ಮನುಷ್ಯ ಇಂತಹ ಬಿಕ್ಕಟ್ಟುಗಳನ್ನು ಸೃಷ್ಟಿಸಿಕೊಳ್ಳು ತ್ತಿದ್ದಾನೆ. ಇದಕ್ಕೆಲ್ಲ ಕಾರಣ ‘ಹಣ ಮತ್ತು ಅಧಿಕಾರ’. ‘ಹಣ ಮತ್ತು ಅಧಿಕಾರಗೋಸ್ಕರ ಜನ ಹೊಡೆದಾಡಿಕೊಳ್ಳುತ್ತಿದ್ದಾರೆ, ಸಾಯುತ್ತಿದ್ದಾರೆ. ಅದೂ ಒಂದು ಧರ್ಮ ಆಗಿಬಿಟ್ಟಿದೆ. ‘ಅವರವರು ಮಾಡಿದ ಕಾರ್ಯದ ಪ್ರತಿ-ಲ ಅವರವರಿಗೆ ಇರುತ್ತದೆ’
ಇದನ್ನು ನೆನಪಿಸುತ್ತಿದ್ದೇನೆ. ಪ್ರಾಣಿಗಳಿಗಿರುವ ನೈತಿಕತೆ ಈ ಮನುಷ್ಯರಿಗೆ ಇಲ್ಲ. ಸಕಲ ಜೀವರಾಶಿಗಳು ಕೂಡಿ ಬಾಳುತ್ತಿವೆ. ಅಂದರೆ ಒಂದೇ ಜಾತಿಯ ಪ್ರಾಣಿಗಳು ಒಂದಕ್ಕೊಂದು ಸಹಾಯ ಮಾಡುತ್ತಾ ಕೂಡಿ ಬಾಳುತ್ತವೆ. ಇದರಿಂದ ಹೊರಬರಲು ನಮಗೆ ಇರುವುದು ಒಂದೇ ದಾರಿ, ಅದೇ ‘ಆಧ್ಯಾತ್ಮದ ಮಾರ್ಗ’. ಮನಸ್ಸು, ದೇಹ, ಪ್ರಾಣಶಕ್ತಿ, ಭಾವನೆ ಈ ನಾಲ್ಕು ಆಯಾಮಗಳನ್ನು ಬ್ಯಾಲೆನ್ಸ್ ಮಾಡಿ ನಮ್ಮನ್ನು ನಾವು ಅರೆತುಕೊಂಡು ಬದುಕಬೇಕಾಗಿದೆ.
ಹೀಗೆ ಬದುಕಿದರೆ ನಮ್ಮಲ್ಲಿ ದುರಾಶೆ ಹುಟ್ಟುವುದಿಲ್ಲ. ದುಃಖ ನಮ್ಮನ್ನು ಆವರಿಸುವುದಿಲ್ಲ. ದುರಾಶೆ, ದುಃಖ, ಆತಂಕ, ಭಯ,
ಚಿಂತೆ ನಮ್ಮಿಂದ ದೂರ ಹೋದರೆ ನಾವು ಜ್ಞಾನಿಗಳಾಗುತ್ತೇವೆ. ಇದಕ್ಕಾಗಿ ನಾವು ಧ್ಯಾನ, ಯೋಗ, ಆಧ್ಯಾತ್ಮದ ಸಿದ್ಧಾಂತಗಳನ್ನು ಅಪ್ಪಿಕೊಳ್ಳಬೇಕು. ಈ ನಿರ್ಧಾರ ನಿಮ್ಮಿಂದ ಆಗದೇ ಬೇರೆಯವರಿಂದ ಆಗಲು ಸಾಧ್ಯವೆ? ಕತ್ತೆಗಳಿಗಿರುವಷ್ಟು ಜ್ಞಾನ ಈ ಮನುಷ್ಯ ನಿಗೆ ಇದ್ದಿದ್ದರೆ ಈ ಜಗತ್ತು ಒಂದು ಆಶ್ರಮ ಆಗುತ್ತಿತ್ತು. ಭಗವದ್ಗೀತೆ, ಬೈಬಲ್, ಕುರಾನ್ ಗ್ರಂಥಗಳಲ್ಲಿರುವ ಒಳ್ಳೆಯವುಗಳು ಈ ಮನುಷ್ಯನಿಗೆ ಕಾಣಿಸುತ್ತಿಲ್ಲ.
ತನ್ನನ್ನು ತಾನು ಅರಿತರೆ ಬದಲಾವಣೆ ಸಾಧ್ಯ! ಕೈಯಿಂದ ಅಥವಾ ಮನಸ್ಸಿನಿಂದ ಮಾಡಿದ ಕೃತಿಗಳು ಎಷ್ಟು ಮಹತ್ವದ್ದಾಗಿವೆ ಯೆಂದರೆ, ಅವುಗಳ ಕಾರಣದಿಂದಾಗಿಯೇ ಅಂದು ಒಬ್ಬರನ್ನೊಬ್ಬರು ಹತ್ಯೆ ಮಾಡಿದ್ದಾರೆ. ಇನ್ನೂ ಕೆಲ ಭಾಗಗಳಲ್ಲಿ ಆ ನಂಬಿಕೆಗಳೇ ಜನರನ್ನು ಕೊಲ್ಲುತ್ತಿವೆ, ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಇಂದೂ ಸಹ ಕೆಲ ಭಾಗಗಳಲ್ಲಿ
ಮುಂದುವರೆದಿದೆ. ಆ ರೀತಿ ಆಗಬಾರದೆಂದರೆ ‘ಮಾನವ ಜಾತಿ ಒಂದು’ ಎಂದು ಸಾಬೀತು ಪಡಿಸುವ ಪಠ್ಯಕ್ರಮ ಈ ಜಗತ್ತಿನಲ್ಲಿ ಜಾರಿಗೆ ಬರಬೇಕು. ನಾವು ಇಂದು ಪ್ರಪಾತದ ಅಂಚಿನಲ್ಲಿ ಇದ್ದೇವೆ, ಪ್ರತಿಯೊಂದು ಪ್ರಕ್ರಿಯೆ ನಮ್ಮನ್ನು ಅಲ್ಲಿಗೆ ಕರೆದೊ
ಯ್ಯುತ್ತಿದೆ, ಪ್ರತಿ ರಾಜಕೀಯ, ಪ್ರತಿ ಆರ್ಥಿಕ ಕ್ರಮವು ನಮ್ಮನ್ನು ಅನಿವಾರ್ಯವಾಗಿ ಪ್ರಪಾತಕ್ಕೆ ತಳ್ಳುತ್ತ್ತಿದೆ, ಗೊಂದಲಮಯ ಪ್ರಪಾತಕ್ಕೆ ನಮ್ಮನ್ನು ಎಳೆಯುತ್ತಿರುವ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಆಗಬೇಕು.
ಜ್ಞಾನದ ಆಧಾರದ ಮೇಲೆ, ವಿಜ್ಞಾನದ ಆಧಾರದ ಮೇಲೆ ಜಗತ್ತು ನಡೆಯಬೇಕಿದೆ. ಇಲ್ಲದೇ ಹೋದರೆ ಮುಂದೆ ಮತ್ಯಾವುದೋ ಸಿದ್ಧಾಂತ ನಮ್ಮನ್ನು ಆಳಿ ಬಿಡುತ್ತದೆ. ಮುಂದೆ ಮುಂದೆ ಸಾಗಿದಂತೆ ಮಾನವೀಯತೆಗೆ ಬೆಲೆ ಸಿಗದೇ ಇರಬಹುದು. ಕಲ್ಪನೆಯ ಆಧಾರದ ಮೇಲೆ ಬದುಕನ್ನು ಕಟ್ಟಿಕೊಳ್ಳಬಾರದು. ವಾಸ್ತವಿಕತೆಯ ಆಧಾರದ ಮೇಲೆ ಬದುಕನ್ನು ಕಟ್ಟಿಕೊಳ್ಳಬೇಕು. ಒಂದು ವ್ಯವಸ್ಥೆಯನ್ನು ಆಧರಿಸಿದ ಯಾವುದೇ ಕ್ರಿಯೆ ಅದು ಒಂದು ಕಲ್ಪನೆಯನ್ನು ಆಧರಿಸಿದ ಕ್ರಿಯೆಯಾಗಿದೆ. ನಮ್ಮನ್ನು ಅನಿವಾರ್ಯ ವಾಗಿ ಅದು ಅಳಿವಿನ ಅಂಚೆಗೆ ಕರೆದೊಯ್ಯುತ್ತದೆ. ಈ ಕ್ರಮವು ನಮ್ಮನ್ನು ಮತ್ತೆ ಮತ್ತೆ ಬೇರೆ ಬೇರೆ ಮಾರ್ಗಗಳಿಂದ ಮತ್ತೆ ಮತ್ತೆ ಪ್ರಪಾತಕ್ಕೆ ತಳ್ಳುತ್ತದೆ.
ಬಿಕ್ಕಟ್ಟು ಅಭೂತ ಪೂರ್ವವಾಗಿರುವುದರಿಂದಲೇ ಮಾನವೀಯತೆಯ ಸಿದ್ಧಾಂತಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿಲ್ಲ. ವಾಸ್ತವದ ಆಧಾರದ ಮೇಲೆ ಜರಗುವ ಕಾರ್ಯಗಳು ನಾಳೆ ಜರುಗಬಾರದು ಇಂದೇ ಮತ್ತು ಈಗಲೇ ಜರುಗಬೇಕು; ನಾಳೆ ಎನ್ನುವುದು ವಿಘಟನೆಯ ಪ್ರಕ್ರಿಯೆ. ನಾಳೆ ಅಂದರೆ ಅದು ಹಾಳು. ನಾಳೆ ನನ್ನನ್ನು ನಾನು ಪರಿವರ್ತಿಸಿಕೊಳ್ಳಲು ಬಯಸುತ್ತೇನೆ ಎಂದರೆ ಖಂಡಿತ ನಾವು ಗೊಂದಲಗಳನ್ನೇ ಆಹ್ವಾನಿಸುತ್ತಿದ್ದೇವೆ.
ಪ್ರಸ್ತುತವಾಗಿ ಲಭ್ಯವಿರುವ ಮಾಹಿತಿ ತಂತ್ರಜ್ಞಾನದಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಅಸ್ಥಿತ್ವದಲ್ಲಿ ಬರಬೇಕಾಗಿದೆ. ನಾವೆಲ್ಲಾ ಬದಲಾವಣೆ ಹೊಂದಲು ಸಾಕಷ್ಟು ಅವಕಾಶಗಳಿವೆ. ತಕ್ಷಣದಲ್ಲಿ ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳಲು ಸಿದ್ಧರಿ ದ್ದೀರಾ? ಈ ಪ್ರಶ್ನೆಗೆ ಉತ್ತರ ಹುಡುಕಿ ಮುಂದೆ ಹೆಜ್ಜೆ ಇಡಬೇಕಾಗಿದೆ. ನನ್ನ ಬಯಕೆ ತಕ್ಷಣಕ್ಕೆ ಜಾರಿಗೆ ಬರಬೇಕು ಹೀಗೆ ಚಿಂತಿಸು ವವರಿಗೆ ನನ್ನದೊಂದು ಮಾತು, ಅದೇನೆಂದರೆ ನಮಗೆ ಇರುವುದೊಂದೇ ಜನ್ಮ. ಈಗ ಇರುವ ಜನ್ಮ ಹಾಳಾದರೆ ಅದು ಮತ್ತೆ ಬರುವುದಿಲ್ಲ. ಜೀವಿತಾವದಿಯ ಪ್ರತಿ ಕ್ಷಣವನ್ನು ಆನಂದಿಸುವುದೇ ನಮ್ಮ ಗುರಿಯಾಗಬೇಕು.
ಆ ನಿಟ್ಟಿನಲ್ಲಿ ನಾವೆಲ್ಲಾ ಇಂದೇ ಬದಲಾವಣೆಯತ್ತ ಹೆಜ್ಜೆ ಇಡಬೇಕು. ಬಿಕ್ಕಟ್ಟು ಸರಿಪಡಿಸಲು ಅಸಾಧಾರಣ ಚಿಂತನೆಯನ್ನು
ಹೊಂದಿರುವ ಆಲೋಚನೆಯಲ್ಲಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಹೊಸದೊಂದು ಕ್ರಾಂತಿ ಮಾಡುವಂತಹ ಜ್ಞಾನ ನಮ್ಮಲ್ಲಿ ವೃದ್ಧಿಸಿಕೊಳ್ಳಬೇಕು. ಅಂತಹ ಜ್ಞಾನವನ್ನು ಇನ್ನೊಬ್ಬರ ಮೂಲಕ, ಯಾವುದೇ ಪುಸ್ತಕದ ಮೂಲಕ, ಯಾವುದೇ ಸಂಸ್ಥೆಯ ಮೂಲಕ ಪಡೆಯಲು ಸದಾ ಪ್ರಯತ್ನಿಸುತ್ತಲೇ ಇರಬೇಕು. ಸಾಕ್ಷಾತ್ಕಾರದ ಮೂಲಕ, ತಪಸ್ಸಿನ ಮೂಲಕ ಅಥವಾ ಧ್ಯಾನದ ಮೂಲಕ ಸೂಕ್ತ ಮಾರ್ಗ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆ ಮೂಲಕ ನಾವು ನಮ್ಮ ವಾರಸುದಾರರನ್ನೂ ಬದಲಾಯಿಸಬಹುದು.
ಅಂದಾಗ ಮಾತ್ರ ಹೊಸ ಸಮಾಜವನ್ನು ರಚಿಸಬಹುದು, ಈಗಿರುವ ಭಯಾನ ಕತೆಯಿಂದ ಹೊರಬರಬಹುದು. ಸಂಗ್ರಹವಾಗು ತ್ತಿರುವ, ರಾಶಿಯಾಗಿರುವ ನಮ್ಮ ಅಸಾಧಾರಣ ಶಕ್ತಿಯನ್ನು ಉಪಯೋಗಿಸಿಕೊಂಡು “ಮಾನವ ಧರ್ಮ” ಮರುಸ್ಥಾಪಿಸಬೇಕು. ವಿನಾಶಕಾರಿ ಶಕ್ತಿಗಳಿಂದ ದೂರವಿರಲು ಪ್ರಯತ್ನಿಸಬೇಕು ಅಥವಾ ಅವರನ್ನು ಪ್ರೀತಿಯಿಂದ ಪರಿವರ್ತಿಸಲು ಪ್ರಯತ್ನಿಸಬೇಕು.
ಪ್ರತಿಯೊಬ್ಬ ವ್ಯಕ್ತಿ ತನ್ನ ಆಲೋಚನೆ, ಕ್ರಿಯೆ ಮತ್ತು ಭಾವನೆಗಳಲ್ಲಿ ಜಾಗೃತರಾಗಲು ಪ್ರಾರಂಭಿಸಿದಾಗ ಮಾತ್ರ ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಸಿಗುತ್ತದೆ.