ಪಾವಗಡ: ಇತಿಹಾಸವುಳ್ಳ ಹೆಸರಾಂತ ಕಣಿವೆ ಲಕ್ನೀನರಸಿಂಹ ಸ್ವಾಮಿಯ ರಥೋತ್ಸವ ಅದ್ದೂರಿಯಾಗಿ ನಡೆಯಬೇಕಾದ
ರಥೋತ್ಸವ ಕೋವಿಡ್ ಎರಡನೇ ಅಲೆ ಪ್ರಾರಂಭದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಪ್ರಕಾರ ಸರಳವಾಗಿ ಆಚರಿಸಲು ತಾಲ್ಲೂಕು ಆಡಳಿತ ಮತ್ತು ಕಣಿವೆ ಶ್ರೀ ಲಕ್ಮೀನರಸಿಂಹ ಸ್ವಾಮಿ ಸೇವಾ ಸಮಿತಿ ನಿಶ್ಚಯಿಸಿದ್ದು, ಅದೇ ರೀತಿ ಸರಳವಾಗಿ ನಡೆಸ ಲಾಯಿತು ಎಂದು ದೇವಸ್ಥಾನದ ಅಧ್ಯಕ್ಷ ಸುಬ್ಬಣ್ಣ ಸ್ವಾಮಿ ವಿಶ್ವಾವಾಣಿಯೊಂದಿಗೆ ಹೇಳಿದರು.
ಪ್ರತಿವರ್ಷದಂತೆ ಧ್ವಜಾರೋಹಣ, ಕಲ್ಯಣೋತ್ಸವ, ಬ್ರಹ್ಮರಥೋತ್ಸವ, ಶೇಷವಾಹನೋತ್ಸವ, ಶಯನೋತ್ಸವ ಎಲ್ಲಾ ರೀತಿಯ ದೇವರ ಕಾರ್ಯಕ್ರಮ ಗಳು ಮಾಡಲಾಯಿತು.
ಈ ವೇಳೆ, ದೇವರ ಪ್ರತಿಷ್ಟಾಪನೆ ವೇಳೆ ತಹಸೀಲ್ದಾರರ ಕೆ.ಆರ್.ನಾಗರಾಜ್, ಉಪ ತಹಸೀಲ್ದಾರರ ಮೂರ್ತಿ, ಕಣಿವೆ ಶ್ರೀ ಲಕ್ಮೀನರಸಿಂಹ ಸ್ವಾಮಿ ದೇವಾಲಯ ಸೇವಾ ಟ್ರಸ್ಟ್ ನ ಗೌರವ ಅಧ್ಯಕ್ಷ ಕೆ.ಜ್ಞಾನೇಶ್ ಬಾಬು, ಕಾರ್ಯದರ್ಶಿ ಎನ್.ಮಾಧವನ್, ಉಪಾಧ್ಯಕ್ಷರುಗಳಾದ ಕಟ್ಟಪೆರುಮಾಳ್, ನಾಗೇಶ್, ಮುತ್ತುರಾಜ್, ಜಂಟಿ ಕಾರ್ಯದರ್ಶಿ ರಘುನಾಥ, ಖಜಾಂಚಿ ಯು.ನರಸಿಂಹ ನಾಯ್ಕ್, ನಾಗರಾಜ್.ಎ. ಎನ್.ಲೋಕೇಶ್ ರಾವ್ ಉಪಸ್ಥಿತರಿದ್ದರು.