ಮುಂಬೈ: ಲೀಗ್ ಪಂದ್ಯಗಳಲ್ಲಿ ಭಾರತ ಬ್ಯಾಟಿಂಗ್ನಲ್ಲಿ ನೀಡಿದ್ದ ಉತ್ತಮ ಪ್ರದರ್ಶನವನ್ನು ಸೆಮೀಸ್ನಲ್ಲೂ ಮುಂದುವರೆಸಿದೆ. ಟೀಂ ಇಂಡಿಯಾ ತನ್ನ ಇನ್ನಿಂಗ್ಸ್ ನಲ್ಲಿ ಒಂದು ಅರ್ಧಶತಕ ಹಾಗೂ ಎರಡು ಶತಕ ಬಾರಿಸಿ, ಕಿವೀಸ್ ದಾಳಿಯನ್ನು ಪುಡಿಗಟ್ಟಿತು. ಈ ಮೂಲಕ ಕಿವೀಸ್ ಗೆ ಗೆಲ್ಲಲು 398 ರನ್ನುಗಳ ಅಸಾಧ್ಯ ಗುರಿ ನೀಡಿದೆ.
ನಾಯಕ ರೋಹಿತ್ ಶರ್ಮಾ 3 ರನ್ಗಳಿಂದ ಅರ್ಧಶತಕ ತಪ್ಪಿಸಿಕೊಂಡರೆ, 79 ರನ್ಗಳಿಸಿ ಆಡುತ್ತಿದ್ದ ಗಿಲ್ ಗಾಯಕ್ಕೆ ತುತ್ತಾಗಿ ನಿವೃತ್ತಿ ತೆಗೆದುಕೊಂಡರು.
ನಂತರ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಜೊತೆಯಾಟ ಮಾಡಿದ್ದು, ವಿರಾಟ್ ಏಕದಿನ ಕ್ರಿಕೆಟ್ನ 50ನೇ ಶತಕ ಮಾಡಿದರೆ, ಶ್ರೇಯಸ್ ವಿಶ್ವಕಪ್ನ ದ್ವಿತೀಯ ಶತಕ ಬಾರಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ಟೀಮ್ ಇಂಡಿಯಾ 71 ರನ್ಗಳ ಆರಂಭಿಕ ಬಿರುಸಿನ ಜೊತೆಯಾಟ ಪಡೆದುಕೊಂಡಿತು. ನಾಯಕ ರೋಹಿತ್ ಶರ್ಮಾ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಓವರ್ಗೆ 10 ರನ್ ಕಲೆ ಹಾಕುವ ಉದ್ದೇಶದಿಂದ ಬ್ಯಾಟಿಂಗ್ ಮಾಡಿದರು. ಆರಂಭದ ಓವರ್ನಲ್ಲೇ ಅಬ್ಬರಿಸಿದ ರೋಹಿತ್ ಶರ್ಮಾ 29 ಬಾಲ್ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ನಿಂದ 47 ರನ್ಗಳಿಸಿ ಔಟ್ ಆದರು.
ಎರಡನೇ ವಿಕೆಟ್ಗೆ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಮತ್ತೊಂದು 70ಕ್ಕೂ ಹೆಚ್ಚು ರನ್ಗಳ ಪಾಲುದಾರಿಕೆ ಹಂಚಿಕೊಂಡರು. 79 ರನ್ಗಳಿಸಿ ಆಡುತ್ತಿದ್ದ ಶುಭಮನ್ ಗಿಲ್ ಗಾಯಕ್ಕೆ ತುತ್ತಾದ ಕಾರಣ ಪಂದ್ಯದಿಂದ ಹೊರನಡೆದರು. ಅವರು ಇನ್ನಿಂಗ್ಸ್ನಲ್ಲಿ 65 ಬಾಲ್ ಆಡಿ 8 ಬೌಂಡರಿ, 3 ಸಿಕ್ಸ್ನಿಂದ 79 ರನ್ ಗಳಿಸಿದ್ದರು.
ಅತಿ ಹೆಚ್ಚು ರನ್ ಗಳಿಸಿರುವ ವಿರಾಟ್ ಕೊಹ್ಲಿ, ಮತ್ತೊಂದು ಶತಕ(50) ಗಳಿಸಿ ಫಾರ್ಮ್ನ್ನು ಮುಂದುವರೆಸಿದರು. ಈ ಶತಕದಿಂದ ಸಚಿನ್ ತೆಂಡೂಲ್ಕರ್ ಅವರ ಎರಡು ದಾಖಲೆಗಳು ಮುರಿದವು.