Sunday, 15th December 2024

ಸೆಲೆಬ್ರಿಟಿಗಳ ಟ್ವಿಟರ್‌ ಖಾತೆಗಳ ’ಬ್ಲೂ ಟಿಕ್’ ಮಾಯ

ನವದೆಹಲಿ: ಟ್ವಿಟರ್ ತನ್ನ ಪ್ರೀಮಿಯಮ್ ಸಬ್ಸ್ಕ್ರಿಪ್ಶನ್ ಸೇವೆಯಾದ ಟ್ವಿಟರ್ ಬ್ಲ್ಯೂಟಿಕ್ ಅನ್ನು ಭಾರತದ ಟ್ವಿಟರ್ ಬಳಕೆದಾರರಿಗೆ ಈಗಾಗಲೇ ಬಿಡುಗಡೆ ಮಾಡಿದ್ದು, ಪಾವತಿ ಮಾಡದ ಟ್ವಿಟ್ಟರ್ ಖಾತೆಯಿಂದ ಬ್ಲ್ಯೂ ಟಿಕ್ ತೆಗೆದು ಹಾಕಲಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲ್, ಕ್ರಿಕೆಟಿಗ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ನಟ ಶಾರುಖ್ ಖಾನ್ ಸೇರಿ ದಂತೆ ಹಲವು ಪ್ರಮುಖರ ಬ್ಲ್ಯೂಟಿಕ್​ ಮಾರ್ಕ್ ಗಳು ಮಾಯವಾಗಿರುವುದು ಕಂಡು ಬಂದಿದೆ. ಭಾರತದ ಹಿರಿಯ ಬಿಲಿಯನೇರ್ ರತನ್ ಟಾಟಾ, ಮಹೀಂದ್ರಾ ಮತ್ತು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ ಮತ್ತು ಗೌತಮ್ ಅದಾನಿ ಅವರ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿದೆ.

ಐಓಎಸ್ ಹಾಗೂ ಆಯಂಡ್ರಾಯ್ಡ್ ಬಳಕೆದಾರರಿಗೆ ಬ್ಲ್ಯೂ ಟಿಕ್ಮಾರ್ಕ್ ಮಾಸಿಕ ಸಬ್ಸ್ಕ್ರಿಪ್ಶನ್ ಶುಲ್ಕ ರೂ 900 ಆಗಿದ್ದರೆ ವೆಬ್ ಬಳಕೆದಾರರಿಗೆ ಈ ಶುಲ್ಕ ರೂ 650 ಇರಲಿದೆ.

ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಂಪನಿಗಳು ಮತ್ತು ಬ್ರ್ಯಾಂಡ್ಗಳು, ಸುದ್ದಿ ಸಂಸ್ಥೆಗಳು ಮತ್ತು ಇತರ ‘ಸಾರ್ವಜನಿಕ ಹಿತಾಸಕ್ತಿ’ ಖಾತೆಗಳು ನಿಜವಾವೋ ಅಥವಾ ನಕಲಿಯೋ ಅಥವಾ ವಿಡಂಬನಾತ್ಮಕ ಖಾತೆಗಳಲ್ಲ ಎಂದು ಗುರುತಿಸಲು ಈ ವರೆಗೂ ಬ್ಲ್ಯೂ ಟಿಕ್ ಗಳು ಬಳಕೆದಾರರಿಗೆ ಸಹಾಯ ಮಾಡುತ್ತಿತ್ತು.

ಆದರೆ, ಹೊಸ ನಿಯಮದ ಪ್ರಕಾರ, ನೀಲಿ ಚೆಕ್ಮಾರ್ಕ್ ಅನ್ನು ಯಾರು ಬೇಕಾದರೂ ಪಡೆಯಬಹುದು. ಅವರು ಮಾಡಬೇಕಾಗಿರುವುದು ಟ್ವಿಟರ್ ಬ್ಲ್ಯೂ ಸೇವೆಗೆ ಚಂದಾದಾರರಾಗುವುದು ಮತ್ತು ನಿಗದಿತ ಶುಲ್ಕವನ್ನು ಪಾವತಿಸುವುದಾಗಿದೆ. ಹೀಗಾಗಿ ಇದೀಗ ನಕಲಿ ಖಾತೆಗಳೂ ಕೂಡ ಬ್ಲ್ಯೂ ಟಿಕ್ ಮಾರ್ಕ್ ಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಪಡೆದುಕೊಂಡಂತಾಗಿದೆ.