Thursday, 19th September 2024

ಮುತ್ತೂಟ್ ಫಿನ್‌ಕಾರ್ಪ್‌ನ ಆತ್ಮನಿರ್ಭರ್ ಮಹಿಳಾ ಸ್ವರ್ಣಸಾಲಕ್ಕೆ ನಟಿ ವಿದ್ಯಾಬಾಲನ್ ಚಾಲನೆ

ಭಾರತ : ಭಾರತದ ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ನಿಜವಾದ ಅರ್ಥದಲ್ಲಿ ಅವರು ಸ್ವಾವಲಂಬಿಗಳಾಗು ವಂತೆ ಮಾಡುವ ಗುರಿಯೊಂದಿಗೆ ಮುತ್ತೂಟ್ ಫಿನ್‌ಕಾರ್ಪ್, ‘‘ಆತ್ಮನಿರ್ಭರ್ ಮಹಿಳಾ ಸ್ವರ್ಣ ಸಾಲ( Aatmanirbhar Mahila Gold Loan)ಎಂಬ ಮಹಿಳೆಯರಿಗಾಗಿಯೇ ವಿಶಿಷ್ಟವಾದ ಮತ್ತು ವಿಶೇಷವಾದ ಬಂಗಾರ ಸಾಲಯೋಜನೆ ಆರಂಭಿಸಿತು.

ಇದು ಮುತ್ತೂಟ್ ಫಿನ್‌ಕಾರ್ಪ್‌ನ #RestartIndia ಯೋಜನೆಯ ವಿಸ್ತರಣೆಯಾಗಿದೆ. ಮಾರ್ಚ್ 15ರಂದು ವಿರ್ಚುವಲ್ ಕಾರ್ಯಕ್ರಮವೊಂದರಲ್ಲಿ ಭಾರತದ ಮುಂಚೂಣಿ ಹಾಗು ವಿಭಿನ್ನ ನಟಿಯಾದ ವಿದ್ಯಾಬಾಲನ್ ಆತ್ಮನಿರ್ಭರ್ ಮಹಿಳಾ ಗೋಲ್ಡ್‌ ಲೋನ್ ಯೋಜನೆ ಉದ್ಘಾಟಿಸಿದರು.

ಎಎಮ್‌ಜಿಎಲ್, ಬಂಗಾರದ ಮೌಲ್ಯಕ್ಕೆೆ ಮತ್ತು ಅತಿಕಡಿಮೆ ಬಡ್ಡಿದರದಲ್ಲಿ ಗರಿಷ್ಟ ಸಾಲ ನೀಡುತ್ತದೆ. ಮಹಿಳೆಯರನ್ನೇ ಗುರಿ ಯಿರಿಸಿಕೊಂಡು ಆರಂಭಿಸಲಾಗಿರುವ ಈ ಯೋಜನೆಯು, ತಮ್ಮ ಹಣಕಾಸು ಅಗತ್ಯಗಳಿಗಾಗಿ ಸ್ಥಳೀಯ ಸಾಲಿಗರ ಮೇಲೆ ಅವಲಂಬಿತರಾಗಿರುವ ದೊಡ್ಡ ಸಂಖ್ಯೆೆಯ ಮಹಿಳೆಯರಿಗೆ ಉಪಯುಕ್ತವಾಗಲಿದೆ.

ಈ ಧ್ಯೇಯಕ್ಕೆೆ ತಮ್ಮ ಬೆಂಬಲ ಸೂಚಿಸಿದ ವಿದ್ಯಾಬಾಲನ್, ‘‘ಮಹಿಳೆಯರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವುದಕ್ಕೆ ಮಾತ್ರವಲ್ಲದೆ ಅವರ ಉದ್ಯಮಶೀಲತಾ ಚೈತನ್ಯವನ್ನು ಪರಿವರ್ತಿಸುವುದಕ್ಕೆ ಮತ್ತು ವರ್ಧಿಸುವುದಕ್ಕೆ ಅವರನ್ನು ಸಬಲೀಕರಣ ಗೊಳಿಸುವುದು ನಮ್ಮೆಲ್ಲರ ಮೂಲಭೂತ ಗುರಿಯಾಗಿರಬೇಕು. ಮಹಿಳೆಯರು ಕೇವಲ ಮನೆಯ ಜವಾಬ್ದಾರಿಯನ್ನು ಮಾತ್ರ ಹೊರುವುದಿಲ್ಲ ಬದಲಿಗೆ ಅವರು ಆರ್ಥಿಕತೆ ಮತ್ತು ಸಮಾಜದಲ್ಲೂ ದೊಡ್ಡ ಪಾತ್ರ ವಹಿಸುತ್ತಾರೆ.

ಮಹಿಳೆಯರ ಭವಿಷ್ಯತ್ತಿನ ಮೇಲೆ ಧನಾತ್ಮಕ ಪ್ರಭಾವ ಬೀರುವಲ್ಲಿ ಹಣಕಾಸು ಒಳಗೊಳ್ಳುವಿಕೆಯ ವರ್ಧನೆಯ ಹರಿಕಾರನಾಗಿ ರುವ ಮುತ್ತೂಟ್ ಫಿನ್‌ಕಾರ್ಪ್‌ಗೆ ಬೆಂಬಲ ಒದಗಿಸುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ.

#RestartIndia ದಂತಹ ಉಪಕ್ರಮದ ಭಾಗವಾಗಿರುವುದಕ್ಕೆ ನನಗೆ ಅತೀವ ಸಂತೋಷವಾಗುತ್ತಿದೆ ಮತ್ತು ಮಹಿಳೆಯರ ಅಭಿವೃದ್ಧಿಯನ್ನು ವರ್ಧಿಸುವುದು ಮಾತ್ರವಲ್ಲದೆ, ಅವರುಗಳು ತಮ್ಮದೇ ರೀತಿಯಲ್ಲಿ ಸೂಪರ್‌ಸ್ಟಾರ್‌ಗಳಾಗಬಲ್ಲ ಸಾಮರ್ಥ್ಯ ವನ್ನು ವರ್ಧಿಸುವಂತಹ ಉತ್ಪನ್ನವನ್ನು ಪರಿಚಯಿಸುತ್ತಿರುವುದಕ್ಕೆ ಹೆಮ್ಮೆಯೂ ಆಗುತ್ತಿದೆ.’’ ಎಂದರು.

ಮುತ್ತೂಟ್ ಫಿನ್‌ಕಾರ್ಪ್ ಗ್ರಾಹಕರ ನಿಜವಾದ ಕಥೆಗಳ ಮೇಲೆ ಆಧಾರಿತವಾದ ‘‘ಕಹಾನಿ ಬ್ಲೂ ಸೋಚ್ ವಾಲಿ’’ ಎಂಬ ಕಿರುಚಿತ್ರ ಗಳ ಸರಣಿಯ ಮನಮುದಗೊಳಿಸುವ ಪರಿವರ್ತನಾತ್ಮಕ ಕಿರುಗತೆಗಳೂ ಕೂಡ ಕಾರ್ಯಕ್ರಮದ ಭಾಗವಾಗಿತ್ತು. ಈ ಸರಣಿಯ ಮೊದಲ ಚಿತ್ರವನ್ನು ಬಿಡುಗಡೆ ಮಾಡಿದ ವಿದ್ಯಾಬಾಲನ್, ಹೆಚ್ಚು ಹೆಚ್ಚು ಮಹಿಳೆಯರು ಮುಂದೆ ಬಂದು ಸ್ವಾವಲಂಬಿಗಳಾಗು ವುದಕ್ಕೆ ಇದು ಪ್ರೇರಣೆ ಒದಗಿಸಬಲ್ಲದು ಎಂದು ಆಶಿಸಿದರು.

ಅತಿದೊಡ್ಡ ಸಂಖ್ಯೆಯ ಮಹಿಳೆಯರನ್ನು ಉದ್ಯೋಗಕ್ಕಿರಿಸಿಕೊಂಡ ದೊಡ್ಡ ಸಂಸ್ಥೆಗಳ ಪೈಕಿ ಮುತ್ತೂಟ್ ಫಿನ್‌ಕಾರ್ಪ್ ಒಂದಾಗಿದ್ದು, ದೇಶಾದ್ಯಂತ ಇರುವ 3600+ ಶಾಖೆಗಳಲ್ಲಿ 9000ಕ್ಕಿಂತ ಹೆಚ್ಚಿನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಆದ್ದರಿಂದಲೇ ಮಹಿಳಾ ಮುತ್ತೂಟ್‌ಗಳು, ಮಹಿಳೆಯರ ಸಮಸ್ಯೆಗಳನ್ನು ತಾವು ಸ್ವತಃ ಉತ್ತಮವಾಗಿ ಅರ್ಥಮಾಡಿಕೊಂಡಿರುವು ದರಿಂದ, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ದೇಶದ ಮಹಿಳೆಯರಿಗಾಗಿಯೇ ಒಂದು ವಿಶೇಷ ಯೋಜನೆಯ ಅಗತ್ಯ ವನ್ನು ಮನಗಂಡರು. 66 ಲಕ್ಷಕ್ಕಿಂತ ಹೆಚ್ಚಿನ ಮಹಿಳಾ ಗ್ರಾಹಕರನ್ನು ಧನಾತ್ಮಕವಾಗಿ ಪರಿವರ್ತಿಸಿರುವ ಸಂಸ್ಥೆಯಲ್ಲಿ ಪ್ರತಿಯೊಬ್ಬ ಗ್ರಾಹಕಿಯ ಬಳಿಯೂ ಹಂಚಿಕೊಳ್ಳುವುದಕ್ಕೆ ಒಂದು ಪರಿವರ್ತನಾ ಕಥೆಯಿದೆ.

ಮುತ್ತೂಟ್ ಫಿನ್‌ಕಾರ್ಪ್‌ನ ವಿಪಿ ಮತ್ತು #RestartIndiaದ ಪ್ರಭಾವ ನಿರ್ದೇಶಕಿಯಾದ ಟೀನಾ ಮುತ್ತೂಟ್, ಈ ಉತ್ಪನ್ನವನ್ನು ವಿನ್ಯಾಾಸಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇಂತಹ ಉತ್ಪನ್ನದ ಅಗತ್ಯವನ್ನು ಒತ್ತಿ ಹೇಳಿದ ಅವರು, ‘‘ಭಾರತದ ಮಹಿಳೆಯರು ಉದಯಿಸಿದರೆ ಭಾರತವೂ ಉದಯಿಸುತ್ತದೆ. ಈ ದೇಶದ ಮಹಿಳೆಯರನ್ನು ಉಗಮವಾಗುತ್ತಿರುವ ನಮ್ಮ ದೇಶದ ಬೆನ್ನೆಲುಬೆಂದೇ ಸದಾ ಪರಿಗಣಿಸಲಾಗಿದೆ. ಆದ್ದರಿಂದಲೇ ದೊಡ್ಡ ಪ್ರಮಾಣದಲ್ಲಿ ಸಮಾಜದಲ್ಲಿ ಧನಾತ್ಮಕ ಪ್ರಭಾವ ಬೀರುವು ದಕ್ಕೆ ಮತ್ತು ತಮ್ಮ ಕೌಶಲಗಳು ಹಾಗು ಉದ್ಯಮಶೀಲತಾ ಸಾಮರ್ಥ್ಯಗಳಿಂದ ಹೆಚ್ಚಿನ ಸಾಧನೆ ಮಾಡಲು ಅವರನ್ನು ಬೆಂಬಲಿ ಸುವುದು ಅತಿಮುಖ್ಯವಾದ ವಿಷಯವಾಗಿದೆ.

#RestartIndia ಉಪಕ್ರಮವು ಸಣ್ಣ ವ್ಯಾಪಾರ ಮಾಲೀಕರಿಗೆ ಒಂದು ಚಾಲನಾಶಕ್ತಿಯಾಗಿರುವುದು ಮಾತ್ರವಲ್ಲದೆ, ವಿಶೇಷವಾಗಿ ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವುದರ ಜೊತೆಗೆ ಸಾಂಕ್ರಾಮಿಕದಿಂದ ಉಂಟಾದ ನಷ್ಟಗಳನ್ನು ಎದುರಿಸಿ ತಮ್ಮ ವ್ಯಾಪಾರಗಳನ್ನು ಸ್ಥಳೀಯ ವ್ಯಾಪಾರಪಟ್ಟಿಗಳಲ್ಲಿ ಹೆಸರುವಾಸಿಯಾಗುವಂತೆ ನವೀಕರಿಸಿಕೊಳ್ಳುವುದಕ್ಕೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ.’’ ಎಂದರು.

ಯಾವುದೋ ಒಂದು ರೂಪದಲ್ಲಿ ಮಹಿಳೆಯರು ಕಾರ್ಯಪಡೆಯನ್ನು ಸೇರಿಕೊಂಡರೆ ಅಥವಾ ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ರಾಷ್ಟ್ರದುದ್ದಕ್ಕೂ ಇರುವ ಆತ್ಮನಿರ್ಭರ ಚಳುವಳಿಯಲ್ಲಿ ಅವರನ್ನು ಸಬಲೀಕರಿಸಿದರೆ, ಭಾರತದ ಜಿಡಿಪಿ ಹೆಚ್ಚಾಾಗುತ್ತದೆ ಎಂದು ದೃಢವಾಗಿ ನಂಬಲಾಗಿದೆ. ಮಹಿಳಾ ಉದ್ಯಮಿಗಳಿಗೆ ಬೆಂಬಲ ಹಾಗು ಮಾರ್ಗಗಳನ್ನು ಒದಗಿಸುವಲ್ಲಿ ಮುತ್ತೂಟ್ ಫಿನ್‌ಕಾರ್ಪ್‌ನ ಸುಲಭವಾದ ಮತ್ತು ತೊಂದರೆರಹಿತ ಟೂಲ್‌ಕಿಟ್, ಅವರು ತಮ್ಮ ವ್ಯಾಪಾರಗಳನ್ನು ನಡೆಸುವುದಕ್ಕೆ ನೆರವಾಗುವುದು ಮಾತ್ರವಲ್ಲದೆ, ಸ್ಥಳೀಯ ಹಾಗು ರಾಷ್ಟ್ರ ಮಟ್ಟದಲ್ಲಿ ಮಹಿಳಾ ಸಬಲೀ ಕರಣವನ್ನೂ ವರ್ಧಿಸುತ್ತದೆ.

ಹೆಚ್ಚುವರಿಯಾಗಿ, ತನ್ನ ಉದ್ಯೋಗಿಗಳಲ್ಲಿ ಉಳಿತಾಯದ ಅಭ್ಯಾಸ ಮೂಡಿಸುವುದಕ್ಕಾಗಿ ಮುತ್ತೂಟ್ ಫಿನ್‌ಕಾರ್ಪ್, ತನ್ನ ಇ-ಸ್ವರ್ಣ ಉತ್ಪನ್ನದ ಮೂಲಕ ಬಂಗಾರದಲ್ಲಿ ಉಳಿತಾಯವನ್ನು ಉತ್ಪಾದಿಸಲು, 30,000 ಉದ್ಯೋಗಿಗಳಿಗಾಗಿ ಮೊದಲ ಕಂತಿನಲ್ಲಿ ಹೂಡಿಕೆ ಮಾಡಿದೆ. ಈ ಉತ್ಪನ್ನ ಯೋಜನೆಯಲ್ಲಿ ಯಾರು ಯಾವ ಸಮಯದಲ್ಲಿ ಬೇಕಾದರೂ ಬಂಗಾರದಲ್ಲಿ ಹೂಡಿಕೆ ಮಾಡಬಹುದು.

#RestartIndia ಕುರಿತು:

#RestartIndia ಯೋಜನೆಯು, ತಜ್ಞರು ಹಾಗು ಮಾರ್ಗದರ್ಶಕರ ನಿರ್ದೇಶನದಿಂದ ನಡೆಯುವ ಸಮುದಾಯವಾದರೂ ಇದನ್ನು ಮುನ್ನಡೆಸುವವರು ಜನರೇ ಆಗಿದ್ದಾಾರೆ. ಗ್ರಾಹಕರು ತಮ್ಮ ಪ್ರಶ್ನೆಗಳನ್ನು ಕೇಳಬಹುದು, ಚಿಂತೆ/ಸಂದೇಹಗಳನ್ನು ಹಂಚಿಕೊಳ್ಳಬಹುದು, ಸವಾಲುಗಳ ಬಗ್ಗೆ ಮಾತನಾಡಬಹುದು ಮತ್ತು ಮುತ್ತೂಟ್ ಫಿನ್‌ಕಾರ್ಪ್ ಅವರ ಪಯಣದಲ್ಲಿ ಜೊತೆಗೂಡಿ ಈ ಸಣ್ಣ ವ್ಯಾಪಾರ ಮಾಲೀಕರಿಗೆ ಪ್ರತಿಹೆಜ್ಜೆಯಲ್ಲೂ ಮಾರ್ಗದರ್ಶನ ಒದಗಿಸುತ್ತದೆ. ತಮ್ಮ ಪ್ರಶ್ನೆಗಳ ಮೂಲಕ ಸಂವಾದಗಳಲ್ಲಿ ತೊಡಗಿಕೊಳ್ಳುವ ಅವರು ಸಣ್ಣ ಸ್ಥಳೀಯ ವ್ಯಾಪಾರಗಳು, ಅಂಗಡಿಗಳು, ಶಿಕ್ಷಣ, ಕೃಷಿ, ವೃತ್ತಿ, ಹಣಕಾಸು ಮತ್ತು ಇನ್ನೂ ಅನೇಕ ವಿಷಯಗಳನ್ನು ಪುನರಾರಂಭಿಸಲು ನೆರವಾಗುತ್ತಾರೆ.

ಸಾಂಕ್ರಾಮಿಕ ನಂತರದ ಜಗತ್ತಿನಲ್ಲಿ ಡಿಜಿಟಲ್ ವಿಧಾನ ಅನುಸರಿಸಲು ಮತ್ತು ಕೇವಲ ಡಿಜಿಟಲ್ ಮಾತ್ರ ಭವಿಷ್ಯತ್ತಿಗೆ ಸಜ್ಜಾಗಲು ಸ್ಥಳೀಯ ಮಳಿಗೆಗಳು ಹಾಗು ವ್ಯಾಪಾರಗಳಿಗೆ ನೆರವು ಮತ್ತು ಪ್ರಯೋಜನ ಒದಗಿಸುವುದು ಈ ಚಳುವಳಿಯ ಗುರಿಯಾಗಿದೆ. ಫೇಸ್ ‌ಬುಕ್ ಮತ್ತು ವಾಟ್ಸಪ್‌ನಂತಹ ನಿತ್ಯಬಳಕೆಯ ಸರಳ ಡಿಜಿಟಲ್ ಸಾಧನಗಳನ್ನು, ಈ ವ್ಯಾಪಾರಗಳನ್ನು ಒಂದು ವೃತ್ತಿಪರ, ಪರಸ್ಪರ ಸಂವಾದದ ಮತ್ತು ಗ್ರಾಹಕ ಬೇಡಿಕೆಯ ಮೇಲೆ ಗಮನ ಕೇಂದ್ರೀಕರಿಸಿದಂತಹ ನವೀಕೃತ ಸೇವೆಯನ್ನಾಗಿ ಮಾಡುವುದಕ್ಕೆ ವರ್ಧಿಸಿ ಎಲ್ಲಾ ಸ್ಥಳೀಯ ಭಾಗೀದಾರರಿಗೂ ಸುಲಭ ಪರಿಹಾರ ಒದಗಿಸುತ್ತದೆ.

ಮುತ್ತೂಟ್ ಪಪ್ಪಚ್ಚನ್ ಗ್ರೂಪ್ ಕುರಿತು: 

ಮುತ್ತೂಟ್ ಬ್ಲೂ ಎಂದು ಕೂಡ ಕರೆಯಲ್ಪಡುವ ಮುತ್ತೂಟ್ ಪಪ್ಪಚ್ಚನ್ ಗ್ರೂಪ್(ಎಮ್‌ಪಿಜಿ), ವೈವಿಧ್ಯಮಯವಾದ ವ್ಯಾಪಾರ ಒಕ್ಕೂಟವಾಗಿದ್ದು, ಅನೇಕ ಎನ್‌ಬಿಎಫ್‌ಸಿನಂತಹ ಹಲವಾರು ಕ್ಷೇತ್ರಗಳಲ್ಲಿ ದೇಶಾದ್ಯಂತ ಕೋಟ್ಯಂತರ ಗ್ರಾಹಕರಿಗೆ ಪರಿಹಾರ ಗಳು, ಸೇವೆಗಳು ಮತ್ತು ನೈಪುಣ್ಯತೆಯನ್ನು ಒದಗಿಸುತ್ತಾ ಬಂದಿದೆ.

ಇದರ ಅನೇಕ ಉತ್ಪನ್ನಗಳು, ರೀಟೇಲ್ ಹಣಕಾಸು ಸೇವೆಗಳು, ವಿಶಾಲಸ್ತರದ ಕ್ರೀಡಾ ಉಪಕ್ರಮಗಳು, ಶಕ್ತಿಶಾಲಿಯಾದ ಸಿಎಸ್‌ಆರ್ ಉಪಕ್ರಮಗಳು, ಆಟೋಮೋಟಿವ್, ರಿಯಲ್ಟಿ, ಹಾಸ್ಪಿಟಾಲಿಟಿ, ಐಟಿ ಹಾಗು ಪರ್ಯಾಯ ಶಕ್ತಿ(ವಿದ್ಯುತ್)ಅನ್ನು ಒಳಗೊಂಡಿದೆ. ಹಲವಾರು ವರ್ಷಗಳಿಂದ ಮುತ್ತೂಟ್ ಪಪ್ಪಚ್ಚನ್ ಗ್ರೂಪ್ ಭಾರತೀಯ ವ್ಯಾಪಾರ ಕ್ಷೇತ್ರದಲ್ಲಿ ಮಹತ್ತರವಾದ ಸಂಸ್ಥೆಯಾಗಿ ಬೆಳೆದುಬಂದಿದೆ. ಮುತ್ತೂಟ್ ಪಪ್ಪಚ್ಚನ್ ಗ್ರೂಪ್, ವಿವಿಧ ಉದ್ದಿಮೆಗಳಾದ್ಯಂತ ದೇಶದ ಅತಿದೊಡ್ಡ ಉದ್ಯೋಗ ದಾತ ಸಂಸ್ಥೆಗಳ ಪೈಕಿ ಒಂದಾಗಿದ್ದು, ಸುಮಾರು 27,000 ಜನರಿಗೆ ಉದ್ಯೋಗ ಒದಗಿಸಿ ಅವರಿಗೆ ಕುಟುಂಬ-ರೀತಿಯ ಕಾರ್ಯಪರಿಸರವನ್ನು ಒದಗಿಸಿಕೊಟ್ಟಿದೆ.

ಗ್ರೂಪ್‌ನ ಗ್ರಾಹಕ-ಕೇಂದ್ರಿತ ದೃಷ್ಟಿಕೋನ ಮತ್ತು ಬದಲಾಗುತ್ತಿರುವ ಗ್ರಾಹಕ ಅಗತ್ಯಗಳನ್ನು ಪೂರೈಸಲು ಹೊಸ ಉತ್ಪನ್ನಗಳ ವಿಷಯದಲ್ಲಿ ಅದರ ಆವಿಷ್ಕಾರ, ಅಸಂಖ್ಯ ಗ್ರಾಹಕರ ವಿಶ್ವಾಸವನ್ನು ಗೆಲ್ಲುವುದು ಮಾತ್ರವಲ್ಲದೆ, ಹೊಸ ಹೊಸ ಗ್ರಾಹಕರನ್ನೂ ಆಕರ್ಷಿಸುತ್ತಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಗ್ರೂಪ್ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಹೊಸ ವಿಧಾನಗಳನ್ನು ಕಂಡುಕೊಳ್ಳುವುದರ ಜೊತೆಗೇ, ಮೌಲ್ಯಗಳು, ನೀತಿ ಹಾಗು ನೈತಿಕತೆ ವಿಷಯದಲ್ಲಿ ರಾಜಿ ರಹಿತ ನಿಲುವು ತಳೆದಿದೆ.

ಮುತ್ತೂಟ್ ಫಿನ್‌ಕಾರ್ಪ್ ಕುರಿತು:

ಮುತ್ತೂಟ್ ಪಪ್ಪಚ್ಚನ್ ಗ್ರೂಪ್, ಮುತ್ತೂಟ್ ಬ್ಲೂದ ಪ್ರಧಾನ ಸಂಸ್ಥೆಯಾದ ಮುತ್ತೂಟ್ ಫಿನ್‌ಕಾರ್ಪ್ ಲಿ., ಭಾರತದ ಅತಿದೊಡ್ಡ ಎನ್‌ಬಿಎಫ್‌ಸಿ ಸಂಸ್ಥೆಗಳ ಪೈಕಿ ಒಂದಾಗಿದ್ದು, ಭಾರತದಾದ್ಯಂತ ಸುಮಾರು 3600 ಶಾಖೆಗಳನ್ನು ಹೊಂದಿದೆ. ಮುತ್ತೂಟ್ ಫಿನ್‌ಕಾರ್ಪ್, ಮುಖ್ಯವಾಗಿ, ಮಧ್ಯದಿಂದ ಕಡಿಮೆ ಆದಾಯದ ಗ್ರಾಹಕರಿಗೆ ಭದ್ರತೆಯ ಜೊತೆಗೆ ಹಾಗು ಭದ್ರತೆ ಇಲ್ಲದ ಸಾಲಗಳ ರೂಪದಲ್ಲಿ ರೀಟೇಲ್ ಹಣಕಾಸು ಒದಗಿಸುತ್ತದೆ. ದಶಕಗಳ ಗ್ರಾಹಕ-ಕೇಂದ್ರೀಕರಣ, ನಿಬದ್ಧ ಸಂಶೋಧನೆ ಹಾಗು ಗ್ರಾಹಕರು ಮತ್ತು ಅವರ ಕುಟುಂಬದೊಂದಿಗಿನ ಅನುಭವ ಸಂಸ್ಥೆಯು ಲಕ್ಷಾಂತರ ಗ್ರಾಹಕರಿಗೆ ಶೀಘ್ರವಾದ ಮತ್ತು ಗ್ರಾಹಕ ಅಗತ್ಯಕ್ಕೆ ತಕ್ಕ ಹಣಕಾಸು ಆಯ್ಕೆಗಳು ಮತ್ತು ಹೂಡಿಕೆ ಯೋಜನೆಗಳನ್ನು ಒದಗಿಸುವುದಕ್ಕೆ ನೆರವಾಗಿದೆ. ಪ್ರಸ್ತುತ ಸಂಸ್ಥೆಯು ಸುಮಾರು ಎರಡು ದಶಲಕ್ಷ ಸಂತುಷ್ಟ ಗ್ರಾಹಕರ ಸಕ್ರಿಯ ಗ್ರಾಹಕ ಬೇಸ್ ಹೊಂದಿದೆ.

ಮುತ್ತೂಟ್ ಫಿನ್‌ಕಾರ್ಪ್ ಲಿ., ಭಾರತದ ಅತಿದೊಡ್ಡ ಬಂಗಾರ ಸಾಲ ಸಂಸ್ಥೆಗಳ ಪಕಿ ಒಂದಾಗಿದೆ. ಅದೇ ವೇಳೆಗೆ ಮುತ್ತೂಟ್ ಫಿನ್‌ಕಾರ್ಪ್ ಶಾಖೆಗಳು, ಸಾಮಾನ್ಯ ಮನುಷ್ಯನ ಸಕಲ ಜೀವನಚಕ್ರ ಮತ್ತು ಜೀವನಹಂತದ ಅಗತ್ಯಗಳನ್ನು ಪೂರೈಸುವುದಕ್ಕಗಿ ಮುತ್ತೂಟ್ ಬ್ಲೂ ಸಂಸ್ಥೆಯ ಕೊಡುಗೆಗಳು ಮತ್ತು/ಅಥವಾ ಸೇವೆಯ ಉತ್ಪನ್ನಗಳನ್ನು ಒದಗಿಸುವುದರಿಂದ, ಸಾಮಾನ್ಯ ಮನುಷ್ಯನ ಹಣಕಾಸು ಅಗತ್ಯಗಳಿಗೆ ಏಕನಿಲುಗಡೆ ಮಳಿಗೆಯಾಗಿದೆ. ರೀಟೇಲ್ ಕೊಡುಗೆಗಳ ವೈವಿಧ್ಯಮಯ ಮಿಶ್ರಣವು, ಬಂಗಾರ ಸಾಲ, ಸಣ್ಣ ವ್ಯಾಪಾರ ಸಾಲ ಉತ್ಪನ್ನಗಳು, ಕೈಗೆಟುಕುವ ಗೃಹ ಸಾಲ, ದ್ವಿಚಕ್ರ ವಾಹನ ಸಾಲ, ಬಳಸಿದ ಕಾರುಗಳಿಗೆ ಸಾಲ, ದೇಶೀಯ ಹಾಗು ಅಂತರರಾಷ್ಟ್ರೀಯ ಹಣ ವರ್ಗಾವಣೆ, ಚಿಟ್‌ಗಳು, ವಿದೇಶೀ ವಿನಿಮಯ, ವಿಮಾ ಉತ್ಪನ್ನಗಳು ಹಾಗು ಸೇವೆಗಳು, ಆಸ್ತಿ ನಿರ್ವಹಣೆ ಸೇವೆಗಳು, ಕೈಗೆಟುಕುವ ಸ್ವರ್ಣಾಭರಣ ಮುಂತಾದವುಗಳನ್ನು ಒಳಗೊಂಡಿದೆ. ದಿನಂಪ್ರತಿ ಸರಿಸುಮಾರು 1,50,000 ಮಂದಿ ಈ ಶಾಖೆಗಳಿಗೆ ಭೇಟಿ ನೀಡಿ ಸಾಲಗಳು, ಉಳಿತಾಯಗಳು, ರಕ್ಷಣಾ ಅಗತ್ಯಗಳು ಹಾಗು ಇತರ ಹಣಕಾಸು/ದಿನನಿತ್ಯದ ವ್ಯವಹಾರಗಳನ್ನು ನಡೆಸುತ್ತಾರೆ.

ನಮ್ಮನ್ನು ಇಲ್ಲಿ ಭೇಟಿಯಾಗಿ www.muthoot.comwww.muthootblue.com